BBK 10: ಬಿಗ್ ಬಾಸ್ ಮನೆಯಲ್ಲಿ ಟಾರ್ಗೆಟ್ ಪ್ರತಾಪ್: ಮನೆ ಮಂದಿಯಿಂದ ಸೋತ ಡ್ರೋನ್ ವೀಕ್ಷಕರಿಂದ ಸೇವ್ ಆಗ್ತಾರಾ..?

By ಎಸ್ ಸುಮಂತ್

ಒಂದು ಮಾತು ಇದೆ. ಒಬ್ಬ ವ್ಯಕ್ತಿ ಬೇಡ ಎಂದು ನಿರ್ಧರಿಸಿದಾಗ ಆ ವ್ಯಕ್ತಿಯ ಒಳ್ಳೆ ಗುಣಗಳು ಕಾಣುವುದಿಲ್ಲವಂತೆ. ಒಬ್ಬ ವ್ಯಕ್ತಿಯನ್ನು ಪ್ರೀತಿಸುವುದಕ್ಕೆ ಶುರು ಮಾಡಿದರೆ ಆ ವ್ಯಕ್ತಿ ಕೆಟ್ಟ ಗುಣಗಳು ಕಾಣಿಸುವುದಿಲ್ಲವಂತೆ. ಈ ಮಾತು‌ ಪಕ್ಕಾ ಮ್ಯಾಚ್ ಆಗುವುದು ಬಿಗ್ ಬಾಸ್ ಸೀಸನ್ 10ಕ್ಕೆ. ಅದರಲ್ಲೂ ಡ್ರೋನ್ ಪ್ರತಾಪ್‌ಗೆ.

ಬಿಗ್ ಬಾಸ್ ಮನೆಯಲ್ಲಿ ಆರಂಭದಿಂದಲೂ ಡ್ರೋನ್ ಪ್ರತಾಪ್ ಟಾರ್ಗೆಟ್ ಆಗಿದ್ದಾರೆ. ಕಿಚ್ಚ ಸುದೀಪ್ ಈಗಾಗಲೇ ತಿಳಿಸಿ ಹೇಳಿದ್ದಾರೆ. ಅದಾದ ಮೇಲೆ ಪ್ರತಾಪ್ ಬಗ್ಗೆ ಮಾತನಾಡುವುದನ್ನು ಕೆಲವರು ನಿಲ್ಲಿಸಿದ್ದಾರೆ. ಬಿಟ್ಟರೆ, ಉಳಿದಂತೆ ಟಾರ್ಗೆಟ್ ಮಾತ್ರ ತಪ್ಪಿಲ್ಲ. ಹೊಸ ಸಂಚಿಕೆಯಲ್ಲೂ ಅದು ಎದ್ದು ಕಂಡಿದೆ.

Bigboss Written Update on new Bigboss season 10 October 24th show

ಬಿಗ್ ಬಾಸ್ ಕಡೆಯಿಂದ ಹೊಸ ಟಾಸ್ಕ್

ಈ ವಾರ ನಾಮಿನೇಟ್ ಆಗಿರುವವರಲ್ಲಿ ಒಬ್ಬರು ಸೇವ್ ಆಗುವುದಕ್ಕೆ ಬಿಗ್ ಬಾಸ್ ಅವಕಾಶ ಕೊಟ್ಟಿದೆ. ನಾಮಿನೇಟ್ ಆಗಿರುವವರು ಯಾರೆಲ್ಲಾ ನಾಮಿನೇಟ್ ಮಾಡಿದರು ಎಂಬುದನ್ನು ಕಂಡು ಹಿಡಿಯಬೇಕು. ಅದರಲ್ಲಿ ವಿನಯ್ ಹಾಗೂ ಪ್ರತಾಪ್ ಸರಿಯಾಗಿ ಅಂದಾಜಿಸಿದ್ದಾರೆ. ಯಾರೆಲ್ಲಾ ನಾಮಿನೇಟ್ ಮಾಡಿದರು ಎಂಬುದರಲ್ಲಿ ಒಬ್ಬರ ಹೆಸರನ್ನಷ್ಟೇ ರಾಂಗ್ ಹೇಳಿದ್ದಾರೆ. ಹೀಗಾಗಿ ಅವರಿಬ್ಬರಿಗೆ ಬಿಗ್ ಬಾಸ್ ಮತ್ತೊಂದು ಟಾಸ್ಕ್ ನೀಡಿದೆ.

ಮನವಿ‌ ಮಾಡಿಕೊಳ್ಳಲು ಬಿಗ್ ಬಾಸ್ ಅವಕಾಶ

ಈ ಟಾಸ್ಕ್‌ನಲ್ಲಿ ವಿನಯ್ ಹಾಗೂ ಪ್ರತಾಪ್ ಗೆದ್ದಿದ್ದಾರೆ. ಈಗ ಮತ್ತೊಂದು ಟಾಸ್ಕ್ ಕೊಟ್ಟ ಬಿಗ್ ಬಾಸ್ ಇಬ್ಬರಿಗೂ ಡಿಬೇಟ್ ಅರೆಂಜ್ ಮಾಡಿದ್ದಾರೆ. ಡಿಬೇಟ್ ಬಳಿಕ ಮನೆಯವರ ಬಳಿಯೂ ಮನವಿ ಮಾಡಿಕೊಳ್ಳಬೇಕು. ಮನೆಯವರು ಯಾರಿಗೆ ಹೆಚ್ಚು ವೋಟ್ ಹಾಕುತ್ತಾರೋ ಅವರು ಈ ವಾರದ ನಾಮಿನೇಷನ್‌ನಿಂದ ಬಚಾವ್ ಆಗುತ್ತಾರೆ. ಹೀಗಾಗಿ ಇಬ್ಬರ ನಡುವೆ ಡಿಬೇಟ್ ಕೂಡ ಶುರುವಾಗಿದೆ. ಅದಕ್ಕೂ ಮೊದಲು ವಿನಯ್ ಹಾಗೂ ಪ್ರತಾಪ್ ನಾನು ಏನು ಎಂಬುದನ್ನು ಮನೆಯವರ ಮುಂದೆ ಹೇಳಿಕೊಂಡಿದ್ದಾರೆ.

ಡಿಬೇಟ್‌ನಲ್ಲೂ ಪ್ರತಾಪ್ ಟಾರ್ಗೆಟ್

ಸಾಮಾನ್ಯವಾಗಿ ಡಿಬೇಟ್ ಅಂದರೆ ಹೇಗಿರಬೇಕು ಎದುರಿರುವ ವ್ಯಕ್ತಿಯ ತಪ್ಪನ್ನು ತಿದ್ದಿ ಹೇಳುವಂತೆ ಇರಬೇಕು. ಆದರೆ ಇಲ್ಲಿ ಹೇಗಾಯ್ತು ಅಂದ್ರೆ ಡ್ರೋನ್ ಪ್ರತಾಪ್ ಮಾತ್ರ ಟಾರ್ಗೆಟ್ ಆದಂತೆ ಇತ್ತು. ನಾನು ಟಾಸ್ಕ್ ಆಡಿದೆ ಅಂದ್ರೆ ನಾನು ಅದನ್ನ ನೋಡಲೇ ಇಲ್ಲ ಅಂದ್ರು ವಿನಯ್. ನನಗೆ ಹೇಗೆ ಇಷ್ಟ ಬರುತ್ತೋ ಹಾಗೇ ಇರೋದು ಅಂದ್ರೆ ಇಲ್ಲ ನಿನ್ನದು ಎರಡು ರೀತಿಯ ಮನಸ್ಥಿತಿ ಅಂದ್ರು. ಪ್ರತಾಪ್ ಏನೇ ಹೇಳಿದರು ವಿನಯ್ ಒನ್ ಸೈಡ್ ಡಿಬೇಟ್ ಮಾಡಿದರು.‌ ಪ್ರತಾಪ್ ಕೂಡ ಅಲ್ಲಿ ತಪ್ಪು ಮಾಡಿದರು ಎನಿಸಿತು. ವಿನಯ್ ಒಳಗಿದ್ದ ತಪ್ಪುಗಳನ್ನು ಹೇಳಬೇಕಿತ್ತು.

ಮನೆಯವರಿಂದ ವಿನಯ್ ಬಚಾವ್

ಡಿಬೇಟ್ ಎಲ್ಲಾ ಮುಗಿದ ಮೇಲೆ ಮನೆಯವರ ಅಭಿಪ್ರಾಯ ಕೇಳುವುದು ಬಹಳ ಮುಖ್ಯವಾಗಿತ್ತು. ಅಲ್ಲಿ ನೋಡುಗರಿಗೆ ಬೇಸರ ಅನ್ನಿಸಿದ್ದು ತುಕಾಲಿ ಸಂತು ನಡೆದುಕೊಂಡ ರೀತಿ. ನಾನು ನಿಮಗೆ ಹಸಿವು ಎಂದಾಗ ಬಡಿಸಿದ್ದೀನಿ ಎಂದಾಗ ಹೌದಪ್ಪ ಅವತ್ತು ನಾನು ನಿನ್ನ ಬಗ್ಗೆ ಮಾತಾಡ್ತಾ ಇದ್ದೀನಿ ಅಂತ ಗೊತ್ತಿರಲಿಲ್ಲ ಅದಕ್ಕೆ ಮಾಡಿಕೊಟ್ಟೆ.‌ ನಿಮ್ಮ ಪರವಾಗಿ ಅವತ್ತು ಆಡುತ್ತೀನಿ ಎಂದೇ ಎಂದಾಗ ನಿನ್ನ ಮೇಲೆ ನಂಬಿಕೆ ಇರಲಿಲ್ಲ, ಅದಕ್ಕೆ ನಾನು ಒಪ್ಪಲಿಲ್ಲ ಎಂದು ಈ ರೀತಿಯ ಎಲ್ಲಾ ಉಲ್ಟಾ ಹೇಳುವ ಮಾತುಗಳಿಂದ ಬರೀ ಪ್ರತಾಪ್‌ಗೆ ಹರ್ಟ್‌ ಮಾಡಿದ್ದು ಮಾತ್ರವಲ್ಲ, ನೋಡುಗರಿಗೆ ಕೊಂಚ ಬೇಸರವಾಗಿದೆ.

More from Filmibeat

English summary
Here is the details about drone prathap target at bigg boss house;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X