BBK10 Runnerup: ಡ್ರೋನ್ ಹಾರಿಸುತ್ತಲೇ ಬಿಗ್ ಬಾಸ್ ರನ್ನರ್ ಅಪ್ ಆದ ಪ್ರತಾಪ್!
ಬಿಗ್ ಬಾಸ್ ಮನೆಗೆ ಹಲವು ಬ್ಯಾಗೆಜ್‌ಗಳನ್ನು ಹೊತ್ತು ಬಂದವರು ಡ್ರೋನ್ ಪ್ರತಾಪ್. ಹೊರಗಡೆ ಅವರ ಬಗ್ಗೆ ಇದ್ದ ಆರೋಪಗಳನ್ನು ತಲೆಯ ಮೇಲೆ ಹೊತ್ತುಕೊಂಡು ಸೈಲೆಂಟ್ ಆಗಿಯೇ ದೊಡ್ಮನೆಗೆ ಕಾಲಿಟ್ಟಿದ್ದರು. ಫಿನಾಲೆಯಲ್ಲಿ ಟಾಪ್ ತ್ರಿ ಕಂಟೆಸ್ಟೆಂಟ್‌ಗಳಲ್ಲಿ ಒಬ್ಬರಾಗಿ ಜನರ ಪ್ರೀತಿ ಗಳಿಸಿದ್ದರು. ಈಗ ಸೀಸನ್‌ನ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.
ಕಳೆದ 10 ಸೀಸನ್‌ಗಳಲ್ಲಿ ಇದೇ ಮೊದಲ ಬಾರಿಗೆ 6 ಸ್ಪರ್ಧಿಗಳು ಗ್ರ್ಯಾಂಡ್ ಫಿನಾಲೆ ಹಂತ ತಲುಪಿದ್ದರು. 'ಬಿಗ್ ಬಾಸ್ ಕನ್ನಡ 10' ರ ಸ್ಪರ್ಧಿಗಳ ಪೈಕಿ ಗೆಲುವಿನ ಕಿರೀಟಕ್ಕಾಗಿ ಎಲ್ಲರು ಪೈಪೋಟಿ ನಡೆಸಿದ್ದರು. ಇನ್ನು, ಟಾಪ್ ತ್ರಿ ಸ್ಥಾನಕ್ಕೆ ತಲುಪಿದ್ದ ಡ್ರೋನ್ ಪ್ರತಾಪ್, ಹೊರಗಡೆಯೇ ಸಾಕಷ್ಟು ಕಾಂಟ್ರವರ್ಸಿ, ಟ್ರೋಲ್‌ಗೆ ಗುರಿಯಾಗಿದ್ದರು. ಬಿಗ್ ಬಾಸ್ ಮನೆಗೆ ಹೋದ ಮೇಲೆ ಅವರ ಲಕ್ ಚೇಂಜ್ ಆಗಿತು.

ಡ್ರೋನ್ ಹಾರಿಸಿ ಟ್ರೋಲ್‌ಗೆ ಗುರಿಯಾಗಿದ್ದ ಪ್ರತಾಪ್!
ಬಿಗ್ ಬಾಸ್ ಮನೆಗೆ ಬರುವ ಮುನ್ನ ಡ್ರೋನ್ ತಯಾರಿಕೆ, ಡ್ರೋನ್ ತಯಾರಿಕೆಗಾಗಿ ಪ್ರಶಸ್ತಿ ಸೇರಿದಂತೆ ಹಲವು ಸುಳ್ಳುಗಳ ಸರಮಾಲೆಯನ್ನೆ ಕಟ್ಟಿದ್ದ ಪ್ರತಾಪ್ ಜನರಿಂದ ತುಂಬಾ ಟ್ರೋಲ್ ಮತ್ತು ಟೀಕೆಗೆ ಗುರಿಯಾಗಿದ್ದರು. ಇದೇ ಕಾರಣಕ್ಕೆ ಜನರಿಂದ ಸಂಪರ್ಕ ಕಡಿದುಕೊಂಡು ತಾವಾಯಿತು ತಮ್ಮ ಕೆಲಸವಾಯಿತು ಎಂದಿದ್ದ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದರು.
ಡ್ರೋನ್ ಪ್ರತಾಪ್ ಅಸಮರ್ಥರಾಗಿ ಬಿಗ್ ಬಾಸ್
ಡ್ರೋನ್ ಪ್ರತಾಪ್ ಬಿಗ್ ಬಾಸ್‌ಗೆ ಮನೆಗೆ ಎಂಟ್ರಿ ಕೊಟ್ಟಿದ್ದು ಕೂಡ ಅಸಮರ್ಥರು ಎಂಬ ಹಣೆಪಟ್ಟಿ ಕಟ್ಟಿಕೊಂಡು. ಆದರೆ, ಇಂದು ಆ ತಂಡದವರೇ ಫೈನಲಿಸ್ಟ್ ಆಗಿದ್ದರು. ಅದರಲ್ಲಿ ಡ್ರೋನ್ ಪ್ರತಾಪ್ ಕೂಡ ಒಬ್ಬರು. ಮೊದ ಮೊದಲು ಮನೆಯಲ್ಲಿ ಯಾರೊಂದಿಗೂ ಬೆರೆಯದೆ ಇದ್ದ ಪ್ರತಾಪ್ ಬಳಿಕ ಇತರ ಸ್ಪರ್ಧಿಗಳ ಜೊತೆ ಬೆರೆಯಲು ಆರಂಭಿಸಿದ್ದರು.
ಹೊರ ಜಗತ್ತಿನಲ್ಲಿ ಕಾಂಟ್ರವರ್ಸಿ, ಟ್ರೋಲ್‌ಗೆ ಗುರಿಯಾಗಿದ್ದ ಪ್ರತಾಪ್ ಜನರಿಂದ ಸಕತ್ ಟೀಕೆಗೆ ಗುರಿಯಾಗಿದ್ದರು. ಆದರೆ, ಅವರು ಮನೆಯೊಳಗೆ ಇದ್ದ ರೀತಿಗೆ ಜನ ಮನಸೋತಿದ್ದರು. ಅವರಿಗಾಗಿ ವೋಟುಗಳ ಸಂಖ್ಯೆ ಹೆಚ್ಚಾಗುತ್ತಲೆ ಇತ್ತು. ದೊಡ್ಮನೆಯಲ್ಲಿ ಘಟಾನುಘಟಿ ನಡುವೆ ಫಿನಾಲೆಗೆ ಹೋಗಿ ಎಲ್ಲರಿಗೂ ಶಾಕ್ ನೀಡಿದ್ದರು. ಈಗ ಬಿಗ್ ಬಾಸ್ ರನ್ನರ್ ಅಪ್ ಆಗಿ ದಾಖಲೆ ಬರೆದಿದ್ದಾರೆ.


Click it and Unblock the Notifications










