'ಸಂಗೀತಾ' ಅಭಿಮಾನಿಗಳಿಗೆ 'ಶೂಟ್ ಮಾಡ್ಲಾ' ಅಂದ್ರಾ ತನಿಷಾ ? 'ಬೆಂಕಿ' ಮಾತಿಗೆ ಅಲ್ಲೋಲ..ಕಲ್ಲೋಲ..!

ಬಿಗ್ ಬಾಸ್ ಮನೆಯಲ್ಲಿ ಕಿತ್ತಾಡಿಕೊಂಡು, ಬಡೆದಾಡಿಕೊಂಡು ವೈರತ್ವದ ಬಾವುಟ ಹಾರಿಸಿದವರೆಲ್ಲ, ಮನೆಯಾಚೆ ಬಂದ ನಂತರ ಆರಾಮಾಗಿ ಇದ್ದಾರೆ. ಮನೆಯ ಘಟನಾವಳಿಗಳನ್ನ ಮರೆತು, ದಿನಪ್ರಂತಿ ಭೇಟಿಯಾಗ್ತಿದ್ದಾರೆ. ನೆನಪಿಗೆ ಇರಲಿ ಎಂದು ಫೋಟೋಗಳನ್ನ ತೆಗೆಸಿಕೊಳ್ತಿದ್ದಾರೆ.

ನಿಜಾ.. ಕೆಲವರಲ್ಲಿ ಇನ್ನೂ ಅಸಮಾಧಾನ ಇದೆ. ಅಸಹನೆ ಇದೆ. ಸಿಟ್ಟಿದೆ. ಆದರೆ ಅದರಿಂದ ಯಾವ ಪ್ರಯೋಜನವೂ ಆಗಲ್ಲ. ಯಾರಿಂದನೂ ಯಾರ ಅವಕಾಶ ಕಿತ್ತುಕೊಳ್ಳಲು ಸಾಧ್ಯ ಇಲ್ಲ. ಆದರೂ ಅದೆಲ್ಲವನ್ನೂ ಪಕ್ಕಕ್ಕೆ ಇಟ್ಟು ಕೆಲವರು ನಿರಂತರ ಸಂಪರ್ಕದಲ್ಲಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಜೊತೆಯಾಗಿ ಕ್ಲಿಕಿಸಿಕೊಂಡ ಫೋಟೋಗಳನ್ನ ಹಂಚಿಕೊಳ್ತಿದ್ದಾರೆ.

Bigg Boss 10 Kannada ; Tanisha And Karthik Slams Fans Of Actress Sangeetha ?

ಆದರೆ, ಇದಕ್ಕೆ ತದ್ವಿರುದ್ದ ಎಂಬಂತೆ ಬಿಗ್ ಬಾಸ್ ಮನೆಯಲ್ಲಿದ್ದ ಸ್ಫರ್ಧಿಗಳ ಅಭಿಮಾನಿಗಳೂ ಮಾತ್ರ ಇವತ್ತಿಗೂ ಕೂಡ ಕೆಸರೆರಚಾಟದ ಕಾರ್ಯಕ್ರಮ ಮುಂದುವರೆಸಿದ್ದಾರೆ. ಅಭಿಮಾನದ ಪ್ರದರ್ಶನ ಮಾಡುವ ಉದ್ವೇಗದಲ್ಲಿ ಬಿಗ್ ಬಾಸ್ ಮನೆಯಲ್ಲಿದ್ದ ಬೇರೆಯವರ ಕಾಲನ್ನೆಳೆಯುತ್ತಿದ್ದಾರೆ. ಕೆಟ್ಟಾ ಕೊಳಕಾಗಿ ತಮ್ಮ ಅಭಿಪ್ರಾಯವನ್ನ ಸಾಮಾಜಿಕ ಜಾಲತಾಣದ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ಇವರೆಲ್ಲರ ಮೇಲೆ ಈಗ ಬಿಗ್ ಬಾಸ್ ತನಿಷಾ ಬೆಂಕಿಯುಂಡೆ ಉಗುಳಿದ್ದಾರೆ. ಹುಷಾರ್ ಎಂದು ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.

ಹೌದು, ಸಜ್ಜನರಿಗೆ ಬೆಂಕಿ ಉರಿಯೋ ದೀಪದಂತೆ, ದುರ್ಜನರಿಗೆ ಬೆಂಕಿ ಉರಿಯೋ ಜ್ವಾಲೆಯಂತೆ ಕಾಣಿಸುವ ತನಿಷಾ ಬಿಗ್ ಬಾಸ್ ಮನೆಯ ಸದಸ್ಯ ಹಾಗೂ ವಿನ್ನರ್ ಕಾರ್ತಿಕ್ ಜೊತೆ ಅಭಿಮಾನಿಗಳಿಗಾಗಿ ಪ್ರಶ್ನೋತ್ತರ ಕಾರ್ಯಕ್ರಮವನ್ನ ಇತ್ತೀಚೆಗೆ ಹಮ್ಮಿಕೊಂಡಿದ್ದರು. ಆದರೆ ವಿಪರ್ಯಾಸ, ಈ ಕಾರ್ಯಕ್ರಮದಲ್ಲಿ ಇವರಿಬ್ಬರಕ್ಕಿಂತ ಹೆಚ್ಚು ಚರ್ಚೆ ನಡೆದಿದ್ದು ಬೇರೆ ಸ್ಫರ್ಧಿಗಳ ಬಗ್ಗೆಯೇ. ಈ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿಯೇ ಕೆಂಡಾಮಂಡಲವಾದ ತನಿಷಾ ಹಾಗೂ ಕಾರ್ತಿಕ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ನಮ್ ನಮ್ಮ ನಡುವೆ ತಂದಿಡೋ ಕಾರ್ಯಕ್ರಮವನ್ನ ಯಾರಾದರೂ ಹಮ್ಮಿಕೊಂಡಿದ್ದರೆ ಯಾರನ್ನೂ ನಾವು ಬಿಡುವ ಮಾತಿಲ್ಲ ಅಂದಿದ್ದಾರೆ.

ಇದೇ ಸಂವಾದದಲ್ಲಿ ಕೆರಳಿ ಕೆಂಡವಾದ ತನಿಷಾ, ನಿಜವಾಗಿಯೂ ನನಗೆ ಗನ್ ನಲ್ಲಿ ಶೂಟ್ ಮಾಡಲು ಬರುತ್ತೆ ಎಂದು ಕೂಡ ಹೇಳಿದ್ದಾರೆ. ತನಿಷಾ ಹೇಳಿದ ಈ ಮಾತನ್ನ ನೀವೂ ಹೇಗೆ ಅರ್ಥೈಸಿಕೊಳ್ತೀರಾ ಅನ್ನುವುದು ನಿಮಗೆ ಬಿಟ್ಟಿದ್ದಾದರೂ, ಸದ್ಯಕ್ಕೆ ತನಿಷಾ ಅವರ ಈ ಮಾತಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೀಡಾಗ್ತಿದೆ. ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಂಡತೆ, ಸಂಗೀತಾ ಅವರ ಅಭಿಮಾನಿಗಳು ತನಿಷಾ ಹೇಳಿದ ಈ ಮಾತು ನಮಗೆ ಎಂದು ಭಾವಿಸಿದ್ದಾರೆ. ತನಿಷಾ ಅವರಿಗೆ ಮರಳಿ ಪ್ರತ್ಯುತ್ತರ ಕೊಡುವ ಪ್ರಯತ್ನವನ್ನೂ ಮಾಡ್ತಿದ್ದಾರೆ.

Bigg Boss 10 Kannada ; Tanisha And Karthik Slams Fans Of Actress Sangeetha ?

ಇದೆಲ್ಲವೂ ಆಗಿ ಹೆಚ್ಚು ಕಡಿಮೆ ಒಂದು ವಾರ ಆಗಿದೆ. ಆದರೆ ಜ್ವಾಲಾಮುಖಿ ಈಗ ಸ್ಫೋಟಗೊಂಡಿದೆ. ಬೆಂಕಿ ತನಿಷಾ ಆಡಿದ ಮಾತು ಅನೇಕರನ್ನ ಕೆರಳಿಸಿದೆ. ಸಾಮಾಜಿಕ ಜಾಲತಾಣ ಮತ್ತೊಮ್ಮೆ ಮಗದೊಮ್ಮೆ ವಾದ-ವಿವಾದ ನಡೆಯುತ್ತಿದೆ. ಚರ್ಚೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಯುಟ್ಯೂಬ್ ನಲ್ಲೊಮ್ಮೆ ಇಣುಕಿ ನೋಡಬಹುದು

More from Filmibeat

English summary
During Live Social Meadi Interaction Bigg Boss 10 Kannada Fame Tanisha & Bigg Boss 10 Winner Karthik Mahesh Slams Fans Of Actress Sangeetha ?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X