Bigg boss: ಗೇಟ್ ಔಟ್ ಎಂದ ಕಿಚ್ಚ: ಪಂಚಾಯತಿಯಲ್ಲಿ ಮನೆಮಂದಿಗೆ ಕಾದಿದ್ಯಾ ಗ್ರಹಚಾರ?
ಬಿಗ್‌ಬಾಸ್ ಮನೆಯ ಮತ್ತೊಂದು ವಾರದ ಕಥೆಗೆ ವೇದಿಕೆ ಸಿದ್ಧವಾಗಿದೆ. ಸುದೀಪ್ ವೇದಿಕೆ ಏರಿದರೂ ಸ್ಪರ್ಧಿಗಳು ಇನ್ನು ಬಂದಿಲ್ಲ. ಇದಕ್ಕೆ ಸುದೀಪ್ ಗರಂ ಆಗಿದ್ದಾರೆ. ಕಿಚ್ಚ ಬರ್ತಾರೆ ಎಂದು ಗೊತ್ತಿದ್ದು ಯಾರು ಕೂಡ ಸರಿಯಾದ ಟೈಮಿಗೆ ರೆಡಿಯಾಗದೆ, ಕಾಯಿಸಿದ್ದಾರೆ. ಸ್ಪರ್ಧಿಗಳ ಈ ವರ್ತನೆ ಕಿಚ್ಚನಿಗೆ ಬೇಸರ ತಂದಿದ್ದು ಗರಂ ಆಗಿದ್ದಾರೆ.
ವಾರದ ಕಥೆಯ ಹೊಸ ಪ್ರೋಮೊ ಹೊರಬಿದ್ದಿದೆ. ಸಂಗೀತಾ, ವರ್ತೂರು ಸಂತೋಷ್, ನಮ್ರತಾ, ಸಿರಿ, ಪವಿ ಪಂಚಾಯಿತಿಗೆ ಸಿದ್ಧವಾಗಿ ಸುದೀಪ್ ಮುಂದೆ ಪ್ರತ್ಯಕ್ಷರಾಗಿದ್ದಾರೆ. ಉಳಿದವರು ತರಾತುರಿಯಲ್ಲಿ ರೆಡಿಯಾಗುತ್ತಿದ್ದಾರೆ. ಇದನ್ನೆಲ್ಲಾ ನೋಡಿದ ಕಿಚ್ಚನಿಗೆ ಸ್ಪರ್ಧಿಗಳ ವರ್ತನೆ ಸ್ವಲ್ಪ ಕೂಡ ಇಷ್ಟವಾಗಿಲ್ಲ. ಪ್ರತಿ ವಾರವು ಎಲ್ಲರೂ ರೆಡಿಯಾಗಿ ಕಿಚ್ಚ ಯಾವಾಗ ಬರುತ್ತಾರೆ ಎಂದು ಕಾಯುತ್ತಿದ್ದರೂ ಆದರೆ ಈ ವಾರ ಏನಾಯಿತೋ ಏನೋ ಒಬ್ಬರು ಕೂಡ ಸಮಯಕ್ಕೆ ಸರಿಯಾದ ರೀತಿಯಲ್ಲಿ ರೆಡಿಯಾಗಿಲ್ಲ. ಗರಂ ಆದ ಕಿಚ್ಚ ಈಗಲೇ ನಾನು ಬಾಗಿಲನ್ನು ತೆಗೆಸುತ್ತೇನೆ ಮನೆಯಿಂದ ಹೊರಡಬಹುದು ಎಂದು ಕಟುವಾಗಿಯೇ ಹೇಳಿದ್ದಾರೆ.

ಸುದೀಪ್ ತಮ್ಮ ಮುಂದೆ ಬಂದಾಗ ಸಂಗೀತಾ ಹಾಗೂ ಉಳಿದವರು ಶಾಕ್ ಆಗಿದ್ದಾರೆ. ಯಾಕೆಂದರೆ ಮನೆಯ ಉಳಿದ ಸದಸ್ಯರು ಇನ್ನೂ ಕೂಡ ಬಂದಿಲ್ಲ. ಈ ವಿಷಯಕ್ಕೆ ಕಿಚ್ಚ ಸುದೀಪ್ ಯಾವ ಶಿಕ್ಷೆ ಕೊಡುತ್ತಾರೋ ಎಂದು ಸಂಗೀತಾ ಶಾಕ್‌ನಲ್ಲಿದ್ದಾರೆ. ಇನ್ನು ಸಿರಿ ಹಾಗೂ ನಮ್ರತಾ ಯಾಕೆ ಉಳಿದವರು ಇನ್ನು ಬಂದಿಲ್ಲ ಎಂದು ಬರುವ ದಾರಿಯನ್ನೇ ಕಾದಿದ್ದಾರೆ. ಕೊನೆಗೂ ಆತುರ ಆತುರವಾಗಿ ಕಿಚ್ಚನನ್ನು ಕಾಯಿಸುತ್ತಾ ತುಕಾಲಿ ಸಂತೋಷ್, ವಿನಯ್ ಮೈಕಲ್ ಹಾಗೂ ಕಾರ್ತಿಕ್ ಬಂದಿದ್ದಾರೆ. ಪ್ರೋಮೋ ವೈರಲ್ ಆಗಿದ್ದು ವೀಕ್ಷಕರು ನಾವು ಈ ಎಪಿಸೋಡ್ ನೋಡಲು ಕಾತುರರಾಗಿದ್ದೇವೆ ಎಂದು ಹೇಳಿದ್ದಾರೆ.
ಗೇಟ್ ಔಟ್ ಎಂದ ಸುದೀಪ
ಇಷ್ಟು ದಿನ ಕಿಚ್ಚನನ್ನು ಎಲ್ಲಾ ಸ್ಪರ್ಧಿಗಳು ಸೇರಿ ಬರಮಾಡಿಕೊಳ್ಳುತ್ತಾ ಇದ್ದರು. ಕಿಚ್ಚನಿಗೆ ಚಪ್ಪಾಳೆ ತಟ್ಟಿ, ಲವ್ ಸಿಂಬಲ್ ತೋರಿಸಿ ಪ್ರೀತಿಯಿಂದ ಸ್ವಾಗತಿಸುತ್ತಿದ್ದರು. ಲವ್ ಯು ಸರ್ ಎಂದೆಲ್ಲ ಹೇಳುತ್ತಿದ್ದರು. ಆದರೆ ಈ ವಾರ ಕೆಲವರು ಕಿಚ್ಚ ಸುದೀಪ್ ಬಂದಾಗ ಇನ್ನೂ ಬಾರದೆ ಎಡವಟ್ಟು ಮಾಡಿಕೊಂಡಿದ್ದಾರೆ. ಇದಕ್ಕಾಗಿ ಕಿಚ್ಚ ಸುದೀಪ್ ಕೋಪ ಮಾಡಿಕೊಂಡಿದ್ದು ಮನೆಯ ಬಾಗಿಲನ್ನ ತೆಗೆಸುತ್ತೇನೆ ಹೋಗಬಹುದು ಎಂದಿದ್ದಾರೆ.
ಸ್ಪರ್ಧಿಗಳ ಮೇಲೆ ಕಿಚ್ಚ ಗರಂ
ಫಸ್ಟ್ ಟೈಮ್ ಬಜಾರ್ ಆದಾಗಿನಿಂದಲೂ ನಾನು ಮನೆಯನ್ನ ನೋಡುತ್ತಾ ಇದ್ದೇನೆ ಎಂದು ಕಿಚ್ಚ ಹೇಳಿದ್ದಾರೆ. ಅಬ್ಬಬ್ಬಾ ಅಂದ್ರೆ ಬರದೇ ಇದ್ರೆ ಏನಾಗುತ್ತದೆ ಎಂದು ಬರಲಿಲ್ಲ ಅಲ್ವಾ ಎಂದು ಗರಂ ಆಗಿದ್ದಾರೆ. ಪ್ರತಾಪ್ ಮೈಕನ್ನು ಧರಿಸದೆ ಬಂದಿರುವುದು ಕಿಚ್ಚನಿಗೆ ಕೋಪ ತರಿಸಿದೆ. ಪ್ರತಾಪ್ ಅವರನ್ನ ನೋಡಿದ ಕಿಚ್ಚ ಸುದೀಪ್ ನಿಮ್ಮ ಮೈಕ್ ಎಲ್ಲಿ ಎಂದು ಕೇಳಿದ ಕೂಡಲೇ ಓಡಿ ಹೋದ ಪ್ರತಾಪ್ ಮೈಕನ್ನು ಹಾಕಿಕೊಂಡು ಬಂದಿದ್ದಾರೆ. ಕಿಚ್ಚ ಸುದೀಪ್ ಅವರ ಮುಖ ನೋಡಿದ ಪ್ರತಾಪ್‌ಗೆ ಭಯವಾಗಿದ್ದು ಆ ಭಯ ಮುಖದಲ್ಲಿ ಕಾಣಿಸುತ್ತದೆ.

ಮೈಕಲ್‌ಗೆ ಕ್ಲಾಸ್ ತಗೆದುಕೊಂಡ ಕಿಚ್ಚ
ಪ್ರತಾಪ್‌ಗೆ ಬೈದ ನಂತರ ಸುದೀಪ್, ವಿನಯ್ ಮುಖ ನೋಡಿ ಸೀರಿಯಸ್‌ನೆಸ್ ಇಲ್ಲ ಎಂದು ಅನಿಸುತ್ತಿದೆ ಅಲ್ವಾ ಎಂದು ಕೇಳಿದ್ದಾರೆ. ಇದಕ್ಕೆ ವಿನಯ್ ಏನನ್ನು ಕೂಡ ಮಾತನಾಡಿಲ್ಲ. ನಂತರ ಮೈಕಲ್ ಕುರಿತು ಒಂದು ವೇದಿಕೆ ಸಿಕ್ಕಿ ಅಲ್ಲಿ ಮರ್ಯಾದೆ ಸಿಗುತ್ತಿದೆ ಎಂದಾದ ಮೇಲೆ ನೀವು ಅಲ್ಲಿನ ರೂಲ್ಸ್ ಅಂಡ್ ರೇಗ್ಯುಲೆಸನ್ಸ್‌ಗೆ ಮರ್ಯಾದೆ ತೆಗೆಯುತ್ತೀರಾ ಅಲ್ವಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಈಗಲೇ ಮುಖ್ಯ ದ್ವಾರವನ್ನು ತೆಗೆಸುತ್ತೇನೆ ಗೇಟ್ ಔಟ್, ಎಂದು ಸುದೀಪ್ ಕೆಂಡಾಮಂಡಲವಾಗಿದ್ದಾರೆ. ಜಿಯೋ ಸಿನಿಮಾದಲ್ಲಿ ದಿನದ 24 ಗಂಟೆ ಉಚಿತವಾಗಿ ಬಿಗ್‌ಬಾಸ್ ಶೋ ನೋಡುವ ಅವಕಾಶವಿದೆ.


Click it and Unblock the Notifications











