»   » 'ಬಿಗ್ ಬಾಸ್'ನಿಂದ ಹೊರ ಬಂದ ಸ್ಪರ್ಧಿಯ ಲವ್-ಅಫೇರ್ ಬಗ್ಗೆ ಸ್ಪಷ್ಟನೆ.!

'ಬಿಗ್ ಬಾಸ್'ನಿಂದ ಹೊರ ಬಂದ ಸ್ಪರ್ಧಿಯ ಲವ್-ಅಫೇರ್ ಬಗ್ಗೆ ಸ್ಪಷ್ಟನೆ.!

Posted By:
Subscribe to Filmibeat Kannada

ಹಿಂದಿಯ 'ಬಿಗ್ ಬಾಸ್' ಕಾರ್ಯಕ್ರಮ ಲವ್, ರೊಮ್ಯಾನ್ಸ್ ನಿಂದ ಹೆಚ್ಚು ಹೆಚ್ಚು ಸುದ್ದಿಯಾಗಿತ್ತು. ಒಂದು ಜೋಡಿಗೆ ಗೊತ್ತಿಲ್ಲದ ಹಾಗೆ, ಮತ್ತೊಂದು ಜೋಡಿಯ ಸರಸ, ಸಲ್ಲಾಪ ಬಿಗ್ ಮನೆಯಲ್ಲಿ ಗಮನ ಸೆಳೆಯುತ್ತಿತ್ತು.

ಇದೀಗ, 'ಬಿಗ್ ಬಾಸ್' ಮನೆಯ ಒಂದು ಲವ್ ಸ್ಟೋರಿಗೆ ಬ್ರೇಕ್ ಬಿದ್ದಿದೆ. ಯಾಕಂದ್ರೆ, ಪ್ರಿಯಾಂಕ್ ಶರ್ಮಾ ಮತ್ತು ಬೆನಾಫ್ಶಾ ಜೋಡಿ ದೂರವಾಗಿದೆ. ಈ ವಾರದ ಎಲಿಮಿನೇಷನ್ ನಲ್ಲಿ ಬೆನಾಫ್ಶಾ ಹೊರಬಿದ್ದಿದ್ದಾರೆ. ಬಿಗ್ ಮನೆಯಿಂದ ಔಟ್ ಆದ ಬೆನಾಫ್ಶಾ , ಪ್ರಿಯಾಂಕ್ ಜೊತೆಗಿನ ಸಂಬಂಧದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಹಾಗಿದ್ರೆ, ಪ್ರಿಯಾಂಕ್ ಜೊತೆಗಿನ ಸಂಬಂಧದ ಬಗ್ಗೆ ಬೆನಾಫ್ಶಾ ಏನಂದ್ರು? ಎಂದು ತಿಳಿಯಲು ಮುಂದೆ ಓದಿ......

ನಮ್ಮದು ಶುದ್ಧವಾದ ಸ್ನೇಹ

''ನನ್ನ ಮತ್ತು ಪ್ರಿಯಾಂಕ್ ನಡುವೆ ಇರುವುದು ಶುದ್ಧವಾದ ಸ್ನೇಹ. ಇದರ ಬಗ್ಗೆ ಗಾಸಿಪ್, ರೂಮರ್ಸ್ ಹುಟ್ಟಿಸಿರುವವರ ಬಗ್ಗೆ ನಾನು ತಲೆಕಡೆಸಿಕೊಳ್ಳಲ್ಲ. ಇದು ಇಲ್ಲಿಗೆ ಅಂತ್ಯವಾಗಬೇಕು. ಪ್ರಿಯಾಂಕ್ ಹೊರ ಬಂದ ಮೇಲೆ ಗೊತ್ತಾಗುತ್ತೆ. ನನ್ನ ಮತ್ತು ಅವರ ಸ್ನೇಹ ಎಂತಹದ್ದು ಅಂತ'' - ಬೆನಾಫ್ಶಾ

ಲಿಪ್ ಲಾಕ್ ನಂತರ 'ಬಾತ್ ರೂಂ'ನಲ್ಲಿ ಲಾಕ್ ಆದ ಬಿಗ್ ಬಾಸ್ ಜೋಡಿ

ಆ ರಾತ್ರಿ ನಡೆದಿದ್ದೇನು?

''ನಾನು ಪ್ರಿಯಾಂಕ್ ಅವರ ಬೆಡ್ ನಲ್ಲಿ ಮಲಗಿದ್ದು ನಿಜ. ಆದ್ರೆ, ಬರಿ ಸ್ನೇಹ ಪೂರ್ವಕವಾಗಿ ಮಾತ್ರ. ಪ್ರಾಮಾಣಿಕವಾಗಿ ಹೇಳುತ್ತೇನೆ ನಾವು ಫ್ರೆಂಡ್ಸ್ ಅಷ್ಟೆ. ಜನರು ಸುಮ್ಮನೆ ಅದರ ಬಗ್ಗೆ ವದಂತಿ ಹರಡಿಸುತ್ತಿದ್ದಾರೆ. ನನಗೆ ಭಾವನಾತ್ಮಕವಾಗಿ ಸಪೋರ್ಟ್ ಬೇಕಿತ್ತು. ಅದಕ್ಕೆ ಪ್ರಿಯಾಂಕ್ ಬಳಿ ಹೋದೆ. ಆದ್ರೆ, ನಾನು ಇಡಿ ರಾತ್ರಿ ಅಲ್ಲಿ ಮಲಗಿಲಿಲ್ಲ'' - ಬೆನಾಫ್ಶಾ

ದಿವ್ಯ ಬಗ್ಗೆ ಹೇಳಿದ್ದೇನೆ?

ಬಿಗ್ ಬಾಸ್ ಮನೆಯಲ್ಲಿ ಪ್ರಿಯಾಂಕ್ ಜೊತೆಗಿನ ಆತ್ಮೀಯತೆಯಿಂದ ಪ್ರಿಯಾಂಕ್ ಅವರ ಪ್ರೇಯಸಿ ದಿವ್ಯ ಅವರಿಗೆ ಬೇಸರವಾಗಿದೆ. ಈ ಬಗ್ಗೆ ಮಾತನಾಡಿದ ಬೆನಿಫ್ಶಾ ''ಈ ಬೆಳವಣಿಗೆಯಿಂದ ವರುಣ್ (ಬೆನಿಫ್ಶಾ ಬಾಯ್ ಫ್ರೆಂಡ್) ಗೂ ಬೇಸರವಾಗಿದೆ. ಅದೇ ರೀತಿ ದಿವ್ಯಗೂ (ಪ್ರಿಯಾಂಕ್ ಗರ್ಲ್ ಫ್ರೆಂಡ್) ಬೇಸರ ಆಗಿರುತ್ತೆ. ನಮ್ಮ ಮೇಲೆ ಅವರಿಗೆ ನಂಬಿಕೆ ಇದೆ. ನಂಬಬೇಕು'' ಎಂದಿದ್ದಾರೆ.

'ಬಿಗ್ ಬಾಸ್'ನಲ್ಲಿ ಎರಡನೇ ಲವ್: ಅವರಿಗಿಂತ ಇವರು ಮಾಡಿದ್ದು ಬೇರೆ.!

ಬೆನಾಫ್ಶಾ ಪ್ರಕಾರ ಕೊನೆವರೆಗೂ ಯಾರು ಇರ್ತಾರೆ?

ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬಂದ ಬೆನಿಫ್ಶಾ ಪ್ರಕಾರ ವಿಕಾಸ್ ಗುಪ್ತಾ ಅವರು ಕಾರ್ಯಕ್ರಮದ ಕೊನೆಯ ದಿನದವರೆಗೂ ಬಿಗ್ ಬಾಸ್ ಶೋ ನಲ್ಲಿ ಇರ್ತಾರೆ ಎಂದಿದ್ದಾರೆ.

English summary
Bigg Boss 11 Eliminated Contestant Benafsha Soonawalla: I Will Speak To Divya Agarwal And Clear All Her Doubts About Me And Priyank Sharma says Benafsha.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada