ಬಿಗ್ ಬಾಸ್ ಸ್ಫರ್ಧಿಯ ಮನೆಯಲ್ಲಿ ಕಳ್ಳತನ, ಸಹೋದರಿಯ ಮದ್ವೆಗೆ ಕೂಡಿಟ್ಟಿದ್ದ ಹಣವನ್ನೆಲ್ಲ ದೋಚಿದ ಕಳ್ಳರು !
ಕಳ್ಳತನ, ವಂಚನೆ ಪ್ರಕರಣಗಳು ಈಗೀಗ ಹೆಚ್ಚಾಗುತ್ತಲೇ ಇವೆ. ಶಾಕಿಂಗ್ ಸಮಾಚಾರ ಅಂದರೆ ದೊಡ್ಡ ದೊಡ್ಡವರ ಮನೆಗಳಿಗೆ ಕೂಡ ಕಳ್ಳಕಾಕರು ಯಾವ ಭಯ ಇಲ್ಲದೇ ನುಗ್ಗುತ್ತಿದ್ದಾರೆ. ಭದ್ರತೆಯ ನಡುವೆಯೇ ಸೆಲೆಬ್ರಿಟಿಗಳ ಐಶಾರಾಮಿ ಮನೆಯಲ್ಲಿರುವ ವಸ್ತುಗಳನ್ನೆಲ್ಲ ದೋಚಿಕೊಂಡು ಪರಾರಿಯಾಗುತ್ತಿದ್ದಾರೆ. ವಿಪರ್ಯಾಸ ಅಂದರೆ ಈ ಕಳ್ಳರ ಸುಳಿವು ಕೂಡ ಪೊಲೀಸರಿಗೆ ಸಿಗುವುದಿಲ್ಲ. ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ ಬಿಗ್ ಬಾಸ್
ಸ್ಫರ್ಧಿಯೊಬ್ಬರ ಮನೆಯಲ್ಲಿ ಕಳ್ಳತನವಾಗಿದೆ. ಚೆಲುವೆಯ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣ ಕಳ್ಳರ ಪಾಲಾಗಿದೆ. ಆ ಚೆಲುವೆಯ ಹೆಸರು ಬಂದಗಿ ಕರ್ಲಾ.

ಹೌದು, ಬಂದಗಿ ಕಲ್ರಾ .. ಬಿಗ್ ಬಾಸ್ ಸೀಸನ್ 11ರ ಸ್ಫರ್ಧಿ. 2017ರಲ್ಲಿ ಪ್ರಸಾರವಾದ ಹಿಂದಿ ಬಿಗ್ ಬಾಸ್‌ನಲ್ಲಿ 63 ದಿನ ಮನೆಯಲ್ಲಿ ಉಳಿದುಕೊಂಡಿದ್ದವರು ಬಂದಗಿ ಕರ್ಲಾ. ಇಂಥಾ ಬಂದಗಿ ಕಲ್ರಾ ಸಹೋದರಿಯ ಮದುವೆ ಕೆಲ ದಿನಗಳಲ್ಲಿ ನಡೆಯಲಿದೆ. ಈ ಹಿನ್ನೆಲೆ ಮನೆಯಲ್ಲಿ ಬಂದಗಿ ಕರ್ಲಾ ಲಕ್ಷಾಂತರ ರೂಪಾಯಿ ಹಣವನ್ನು ತಂದು ಇಟ್ಟಿದ್ದರು.ಮದುವೆಯ ಸಂಭ್ರಮದಲ್ಲಿ ಬೆಲೆ ಬಾಳುವ ವಸ್ತುಗಳನ್ನು ಕೂಡಾ ಖರೀದಿಸಿದ್ದರು.
ಈ ಸಮಯದಲ್ಲಿ ಬಾಗಿಲು ಒಡೆದು ಮನೆಗೆ ನುಗ್ಗಿರುವ ಕಳ್ಳರು ಮನೆಯಲ್ಲಿದ್ದ ಹಣ ಮತ್ತು ವಸ್ತುಗಳನ್ನೆಲ್ಲ ದೋಚಿದ್ದಾರೆ. ಪರಾರಿಯಾಗಿದ್ದಾರೆ. ಇಷ್ಟೇ ಅಲ್ಲ ಮನೆಯ ಸಿಸಿಟಿವಿ ಕ್ಯಾಮರಾವನ್ನು SD ಕಾರ್ಡ್ ಸಮೇತ ಕಿತ್ತುಕೊಂಡು ಹೋಗಿರುವ ಕಳ್ಳರು ಮನೆಯ ಎರಡು ಗೇಟ್‌ಗಳನ್ನು ಕೂಡ ಮುರಿದು ಹಾಕಿದ್ದಾರೆ. ಇಷ್ಟೆಲ್ಲ ಆದರೂ ಕೂಡ ಅಕ್ಕ-ಪಕ್ಕದವರು ಯಾರು ಗಮನಿಸಿಲ್ಲ ಎನ್ನುವುದೇ ನಟಿಯ ದೌರ್ಭಾಗ್ಯ.
ತನ್ನ ಮನೆಯಲ್ಲಿ ಕಳ್ಳತನ ನಡೆದಿರುವುದನ್ನು ಕಂಡು ಸದ್ಯ ಆಘಾತಕ್ಕೆ ಒಳಗಾಗಿರುವ ಬಂದಗಿ ತಮ್ಮ ನೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ಧಾರೆ.'ನಾನು ಇಷ್ಟೊಂದು ಅಸಹಾಯಕಳಾಗುತ್ತೇನೆ ಎಂದು ಯಾವತ್ತು ಅಂದುಕೊಂಡಿರಲಿಲ್ಲ. ಈ ವ್ಯವಸ್ಥೆಯಿಂದ ನನಗೆ ತುಂಬಾ ನಿರಾಸೆಯಾಗಿದೆ. ಹಲವರಿಂದ ಇಂತಹದ್ದೊಂದು ಪರಿಸ್ಥಿತಿಯ ಕುರಿತು ಕೇಳಿದ್ದೇ, ಇವತ್ತಿ ನಾನು ಅದನ್ನು ಎದುರಿಸುತ್ತಿದ್ದೇನೆ' ಎಂದು ಹೇಳಿದ್ದಾರೆ. ಈಗಲೂ ಕೂಡ ಜನ ಭಾರತ ಬಿಟ್ಟು ಹೊರದೇಶಕ್ಕೆ ಹೋಗಬೇಕಿತ್ತು ಎಂದು ನನಗೆ ಕೇಳುತ್ತಾರೆ ಎಂದು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
ಇನ್ನು, ಕಳ್ಳತನ ನಡೆದ ವಿಚಾರ ಗೊತ್ತಾದ ನಂತರ ಬಂದಗಿ ಕರ್ಲಾ ದೂರು ಸಲ್ಲಿಸಿದ್ದಾರೆ. ಆದರೆ 30 ಗಂಟೆ ಕಳೆದರು ಕೂಡ ಪೊಲೀಸರಿಂದ ಯಾವ ಮಾಹಿತಿ ಕೂಡ ಬಂದಲಾಗೆ ಸಿಕ್ಕಿಲ್ಲ. ತನಿಖೆಯನ್ನು ಕೂಡ ಪೊಲೀಸರು ಶುರು ಮಾಡಿಲ್ಲ. ಇದರಿಂದ ಬಂದಗಿ ಇನ್ನು ಹತಾಶರಾಗಿದ್ದಾರೆ. ತಮ್ಮ ಆಕ್ರೋಶವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೊರ ಹಾಕಿದ್ದಾರೆ. ಕ್ರಮ ಯಾಕೆ ಕೈಗೊಳ್ಳುತ್ತಿಲ್ಲ, ಯಾರ ದಾರಿಯನ್ನು ಕಾಯುತ್ತಿದ್ದೀರಾ ? ನನ್ನ ವ್ಯೆಯಕ್ತಿಕ ಮಾಹಿತಿಗಳೆಲ್ಲ ಲೀಕ್ ಆದ ನಂತರ ಕ್ರಮ ಕೈಗೊಳ್ಳಬೇಕು ಎಂದುಕೊಂಡಿದ್ದೀರಾ ಎಂದು ಕಿಡಿ ಕಾರಿದ್ಧಾರೆ. ನನಗೆ ನಿಮ್ಮ ಸಹಾಯ ಬೇಕಿದೆ ಎಂದು ಹೇಳಿದ್ಧಾರೆ.
ಸದ್ಯ ಬಂದಗಿ ಕರ್ಲಾ ಅವರಿಗೆ ಅವರ 1.1 ಮಿಲಿಯನ್ ಫಾಲೋವರ್ಸ್‌ಗಳು ಸಮಾಧಾನ ಹೇಳುತ್ತಿದ್ದಾರೆ. ಧೈರ್ಯವನ್ನು ತುಂಬುತ್ತಿದ್ದಾರೆ. ಸಹೋದರಿಯ ಮದುವೆಗೆ ಕೂಡಿಟ್ಟಿದ ಹಣವನ್ನು ದೋಚಿದ ಕಳ್ಳರಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಅಂದ್ಹಾಗೇ ಇತ್ತೀಚೆಗೆ ಸೆಲೆಬ್ರಿಟಿಗಳ ಮನೆಯಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲ ದಿನಗಳ ಹಿಂದೆಯಷ್ಟೇ ನಟಿ ನೇಹಾ ಮಲ್ಲಿಕ್ ಅವರ ಮನೆಯಲ್ಲಿ ಅವರ ಮನೆಯ ಸಹಾಯಕನೇ ಕಳ್ಳತನ ಮಾಡಿದ್ದ ಆ ನಂತರ ಸಿಕ್ಕಿ ಬಿದ್ದಿದ್ದ.
ಮೊನ್ನೆ ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ವಾಕಿಂಗ್ ಹೋದಾಗ ನಟಿಯಾಗಿ, ಡ್ಯಾನ್ಸರ್ ಆಗಿ ಗುರುತಿಸಿಕೊಂಡಿರುವ ಭಜರಂಗಿ ಖ್ಯಾತಿಯ ರುಕ್ಮಿಣಿ ವಿಜಯ್ ಕುಮಾರ್ ಅವರ ಕಾರಿನಲ್ಲಿ ಇಟ್ಟಿದ್ದ ಬ್ಯಾಗ್‌ನ ಕಳ್ಳನೊಬ್ಬ ಎಗರಿಸಿದ್ದ. ಆ ಬ್ಯಾಗ್‌ನಲ್ಲಿ ರೋಲೆಕ್ಸ್ ವಾಚ್, ಡೈಮಂಡ್ ರಿಂಗ್ ಮುಂತಾದ ವಸ್ತುಗಳು ಇದ್ದವು. ರುಕ್ಮಿಣಿ ಅದೃಷ್ಟ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಈಗ ಬಂದಗಿ ಕರ್ಲಾ ಮನೆಯಲ್ಲಿ ಕಳ್ಳತನವಾಗಿದೆ. ಕಳ್ಳರು ಸಿಕ್ಕಿ ಬೀಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











