For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್: ಎಲಿಮಿನೇಟ್ ಆಗಿದ್ದಕ್ಕೆ ಸಲ್ಮಾನ್ ವಿರುದ್ಧ ದೂರಿತ್ತ ಸ್ಪರ್ಧಿ

  By ಜೇಮ್ಸ್ ಮಾರ್ಟಿನ್
  |

  ಅಕ್ಟೋಬರ್ 01ರಿಂದ ಆರಂಭವಾದ ಬಿಗ್ ಬಾಸ್ 11ನೇ ಆವೃತ್ತಿಯಲ್ಲಿ 18 ಮಂದಿ ಸ್ಪರ್ಧಿಗಳು ಬಿಗ್ ಬಾಸ್ ಮನೆ ಪ್ರವೇಶಿಸಿದ್ದರು. 18 ಮಂದಿ ಪೈಕಿ 12 ಮಂದಿ ಜನ ಸಾಮಾನ್ಯರು ಹಾಗೂ 6 ಸೆಲೆಬ್ರಿಟಿಗಳು ಕಣಕ್ಕಿಳಿದಿದ್ದಾರೆ. ಈಗ ಅಧಿಕೃತವಾಗಿ ಮನೆಯ ಮೊದಲ ಎಲಿಮಿನೇಷನ್ ಆಗಿದೆ.

  ಬಿಗ್ ಬಾಸ್ : ನಿಂದನೆ ತಾಳಲಾರದೆ ಮಾತ್ರೆ ನುಂಗಿದ್ನೆ ಜುಬೈರ್ಬಿಗ್ ಬಾಸ್ : ನಿಂದನೆ ತಾಳಲಾರದೆ ಮಾತ್ರೆ ನುಂಗಿದ್ನೆ ಜುಬೈರ್

  ಸ್ಪರ್ಧಿಗಳಾದ ಶಿಲ್ಪಾ ಶಿಂಧೆ, ಅರ್ಶಿ ಖಾನ್, ಜ್ಯೋತಿ ಕುಮಾರ್, ಬಂದ್ಗಿ ಕರ್ಲಾ ಮತ್ತು ಜುಬೈರ್ ಖಾನ್ ಪೈಕಿ ಯಾರು ಮನೆಯಿಂದ ಹೊರಕ್ಕೆ ಹೋಗುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು.

  ಶಿಲ್ಪಾ ಶಿಂಧೆ ಎಲಿಮಿನೇಟ್ ಆಗುತ್ತಾಳೆ ಎಂಬ ನಿರೀಕ್ಷೆ ಎಲ್ಲರಲ್ಲೂ ಇತ್ತು. ಆದರೆ, ವಾರಾಂತ್ಯಕ್ಕೂ ಮೊದಲೇ ಜುಬೈರ್ ಎಲಿಮಿನೇಟ್ ಆಗಿರುವುದು ಅಕ್ಟೋಬರ್ 08ರ ಎಪಿಸೋಡಿನಲ್ಲಿ ದೃಢಪಟ್ಟಿದೆ.

  ಬಿಗ್ ಬಾಸ್ ಅಂದಮೇಲೆ ಎಲಿಮಿನೇಷನ್ ಇರಲೇಬೇಕು, ಜಗಳ, ಕೂಗಾಟ ಕಾಮನ್ ಎನ್ನಬಹುದು. ಆದರೆ, ಈ ಬಾರಿ ಎಲಿಮಿನೇಟ್ ಆದ ಸ್ಪರ್ಧಿಯು ನಿರೂಪಕ ಸಲ್ಮಾನ್ ವಿರುದ್ಧ ದೂರು ನೀಡಿದ್ದಾನೆ.. ಮುಂದೆ ಓದಿ...

  ಸಲ್ಮಾನ್ ಕೋಪ ಮಾತ್ರ ತಗ್ಗಿರಲಿಲ್ಲ.

  ಸಲ್ಮಾನ್ ಕೋಪ ಮಾತ್ರ ತಗ್ಗಿರಲಿಲ್ಲ.

  ಡಾನ್ ದಾವೂದ್ ಇಬ್ರಾಹಿಂ ಸೋದರಿಯ ಅಳಿಯ ಎಂದು ಕೊಚ್ಚಿಕೊಂಡಿದ್ದ ಜುಬೈರ್ ವಿರುದ್ಧ ವಿರುದ್ಧ ಅಕ್ಟೋಬರ್ 07ರ ಎಪಿಸೋಡಿನಲ್ಲಿ ನಿರೂಪಕ ಸಲ್ಮಾನ್ ಭಾರಿ ಜೋರಾಗಿ ಅವಾಜ್ ಹಾಕಿದ್ದರು. ಸಲ್ಮಾನ್ ಅಬ್ಬರಕ್ಕೆ ಗಪ್ ಚುಪ್ ಆಗಿದ್ದ ಜುಬೈರ್ ತನ್ನ ತಪ್ಪಿಗೆ ಕ್ಷಮೆ ಕೂಡಾ ಯಾಚಿಸಿದ್ದರು. ಆದರೆ, ಸಲ್ಮಾನ್ ಕೋಪ ಮಾತ್ರ ತಗ್ಗಿರಲಿಲ್ಲ.

  ಬಿಗ್ ಬಾಸ್ 11ನೇ ಆವೃತ್ತಿ ವಿವಾದ

  ಬಿಗ್ ಬಾಸ್ 11ನೇ ಆವೃತ್ತಿ ವಿವಾದ

  ಸಲ್ಮಾನ್ ಖಾನ್ ಕೋಪಕ್ಕೂ ಕಾರಣವಿದೆ. ಮೊದಲ ವಾರದಲ್ಲೇ ಸಾಕಷ್ಟು ಗದ್ದಲ, ಗಲಾಟೆ ಸೃಷ್ಟಿ ಮಾಡಿದ ಜುಬೈರ್ ಗೆ ತನ್ನ ನಾಲಗೆ ಮೇಲೆ ಹಿಡಿತ ಅನೇಕ ಬಾರಿ ತಪ್ಪಿದ್ದು ಸುಳ್ಳಲ್ಲ. ಆರ್ಷಿಯನ್ನು '2 ರೂಪಾಯಿಗೂ ಬೆಲೆ ಬಾಳಲ್ಲ' ಎಂದು ಜರೆದಿದ್ದಲ್ಲದೆ ಎಲ್ಲರ ವಿರುದ್ಧ ಬೆದರಿಕೆ ಹಾಕಿದ್ದ. ನನ್ನನ್ನು ಭಾಯ್ ಎಂದು ಕರೆಯಬೇಡಿ ಎಂದು ತಾಕೀತು ಮಾಡಿದ್ದ ಇದೆಲ್ಲವೂ ಸರಿಸಲು ಸಾಧ್ಯವಾಗದೆ ಈತನ ವಿರುದ್ಧ ಸಲ್ಮಾನ್ ಕಿಡಿಕಾರಬೇಕಾಯಿತು.

  ಸಲ್ಮಾನ್ ನಿಂದನೆಗೆ ಬೇಸತ್ತ ಜುಬೈರ್

  ಸಲ್ಮಾನ್ ನಿಂದನೆಗೆ ಬೇಸತ್ತ ಜುಬೈರ್

  ನಿರೂಪಕ ಸಲ್ಮಾನ್ ಪಿತ್ತ ನೆತ್ತಿಗೇರುವಂತೆ ಮಾಡುವಲ್ಲಿ ಸ್ಪರ್ಧಿಗಳು ಯಶಸ್ವಿಯಾದರು ಎಂದರೆ ತಪ್ಪಲ್ಲ. ಕೆಟ್ಟ ಪದ ಬಳಕೆ ಮಾಡಿದ ಸ್ಪರ್ಧಿ ಕಿಕ್ ಔಟ್, ಮಹಿಳಾ ಸ್ಪರ್ಧಿಗಳ ಆಟಾಟೋಪ, ನಿಂದನೆಗೆ ನೊಂದು ನಿದ್ದೆ ಮಾತ್ರೆ ಸೇವಿಸಿದ ಸ್ಪರ್ಧಿ ಎಲ್ಲವೂ ಮೊದಲ ವಾರದ ಮುಖ್ಯಾಂಶವಾಗಿತ್ತು. ಸಲ್ಮಾನ್ ನಿಂದನೆಗೆ ಬೇಸತ್ತು ಜುಬೈರ್ ನಿದ್ದೆ ಮಾತ್ರೆ ಸೇವಿಸಿ ಆಸ್ಪತ್ರೆ ಸೇರಿದ್ದಾನೆ.

  ಜುಬೈರ್ ಆಸ್ಪತ್ರೆಯಿಂದ ಮನೆಗೆ

  ಜುಬೈರ್ ಆಸ್ಪತ್ರೆಯಿಂದ ಮನೆಗೆ

  ಈ ನಡುವೆ 'ಡೌವ್ ರಾಜ' ಜುಬೈರ್ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದ ನಂತರ ಮತ್ತೆ ಮನೆಗೆ ಬರುತ್ತಾನೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ, ಕಡಿಮೆ ವೋಟ್ಸ್ ಮತ್ತು ಕಳಪೆ ವರ್ತನೆ ಹೊಂದಿರುವ ಕಾರಣಕ್ಕೆ ಜುಬೈರ್ ಮತ್ತೆ ಮನೆಗೆ ಪ್ರವೇಶಿಸುವಂತಿಲ್ಲ ಎಂದು ಸಲ್ಮಾನ್ ಸ್ಪಷ್ಟಪಡಿಸಿದ್ದಾರೆ.

  ಸಲ್ಮಾನ್ ವಿರುದ್ಧ ದೂರು

  ಸಲ್ಮಾನ್ ವಿರುದ್ಧ ದೂರು

  ನಿರೂಪಕ ಸಲ್ಮಾನ್ ಖಾನ್ ಅವರು ರಾಷ್ಟ್ರೀಯ ವಾಹಿನಿಯಲ್ಲಿ ನನ್ನ ಮಾನ ಕಳೆದಿದ್ದಾರೆ. ನನಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಸಲ್ಮಾನ್ ವಿರುದ್ಧ ಜುಬೈರ್ ಅವರು ದೂರು ನೀಡಿದ್ದಾರೆ ಎಂದು ವರದಿಯಾಗಿದೆ.

  ಪ್ರಿಯಾಂಕ್ ಬೆಲೆ ತೆರಬೇಕಾಯಿತು

  ಪ್ರಿಯಾಂಕ್ ಬೆಲೆ ತೆರಬೇಕಾಯಿತು

  ಈ ನಡುವೆ ವಿಕಾಸ್ ಮತ್ತು ಆಕಾಶ್ ನಡುವೆ ಹೊತ್ತಿಕೊಂಡಿದ್ದ ಬೆಂಕಿಗೆ ತುಪ್ಪ ಸುರಿದ ಕಾರಣಕ್ಕೆ ಪ್ರಿಯಾಂಕ್ ಬೆಲೆ ತೆರಬೇಕಾಯಿತು. ಪ್ರಿಯಾಂಕ್ ಶರ್ಮಾ ಮೊದಲ ವಾರವೇ ಎಲಿಮಿನೇಟ್ ಆಗಿದ್ದು,ಶಿಲ್ಪಾ ಶಿಂಧೆ ಬಚಾವಾಗಿದ್ದಾಳೆ.

  English summary
  The first elimination in the Bigg Boss 11 house happened yesterday (October 8). As expected, Zubair Khan has been evicted from the Bigg Boss 11 house.According to the latest report, Zubair has filed complaint against Salman for threatening him inside the Bigg Boss house.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X