For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಸ್ಪರ್ಧಿ ಜುಬೈರ್ ವಿರುದ್ಧ ಬಿತ್ತು ಎಫ್ಐಆರ್ !

  By ಜೇಮ್ಸ್ ಮಾರ್ಟಿನ್
  |

  ಬಿಗ್ ಬಾಸ್ 11ರ ನಿರೂಪಕ ಸಲ್ಮಾನ್ ಖಾನ್ ಅವರು ರಾಷ್ಟ್ರೀಯ ವಾಹಿನಿಯಲ್ಲಿ ನನ್ನ ಮಾನ ಕಳೆದಿದ್ದಾರೆ. ನನಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಸಲ್ಮಾನ್ ವಿರುದ್ಧ ಸ್ಪರ್ಧಿ ಜುಬೈರ್ ಅವರು ದೂರು ನೀಡಿದ್ದಾರೆ ಎಂಬ ವರದಿ ಬಂದಿರುವ ಬೆನ್ನಲ್ಲೇ ಜುಬೈರ್ ವಿರುದ್ಧ ಎಫ್ಐಆರ್ ದಾಖಲಾಗಿರುವ ಸುದ್ದಿ ಬಂದಿದೆ.

  ಬಿಗ್ ಬಾಸ್: ಎಲಿಮಿನೇಟ್ ಆಗಿದ್ದಕ್ಕೆ ಸಲ್ಮಾನ್ ವಿರುದ್ಧ ದೂರಿತ್ತ ಸ್ಪರ್ಧಿಬಿಗ್ ಬಾಸ್: ಎಲಿಮಿನೇಟ್ ಆಗಿದ್ದಕ್ಕೆ ಸಲ್ಮಾನ್ ವಿರುದ್ಧ ದೂರಿತ್ತ ಸ್ಪರ್ಧಿ

  ಅಕ್ಟೋಬರ್ 01ರಿಂದ ಆರಂಭವಾದ ಬಿಗ್ ಬಾಸ್ 11ನೇ ಆವೃತ್ತಿಯಲ್ಲಿ 18 ಮಂದಿ ಸ್ಪರ್ಧಿಗಳು ಬಿಗ್ ಬಾಸ್ ಮನೆ ಪ್ರವೇಶಿಸಿದ್ದರು. 18 ಮಂದಿ ಪೈಕಿ 12 ಮಂದಿ ಜನ ಸಾಮಾನ್ಯರು ಹಾಗೂ 6 ಸೆಲೆಬ್ರಿಟಿಗಳು ಕಣಕ್ಕಿಳಿದಿದ್ದಾರೆ. ಈಗ ಅಧಿಕೃತವಾಗಿ ಮನೆಯ ಮೊದಲ ಎಲಿಮಿನೇಷನ್ ರೂಪದಲ್ಲಿ ಜುಬೈರ್ ಖಾನ್ ಬಿಗ್ ಬಾಸ್ ಮನೆಯಿಂದ ಅಲ್ಲಲ್ಲ ಆಸ್ಪತ್ರೆಯಿಂದ ತಮ್ಮ ಮನೆಗೆ ತೆರಳಿದ್ದಾರೆ.

  ನಿಂದನೆ ತಾಳಲಾರದೆ ಮಾತ್ರೆ ನುಂಗಿದ್ನೆ ಜುಬೈರ್ನಿಂದನೆ ತಾಳಲಾರದೆ ಮಾತ್ರೆ ನುಂಗಿದ್ನೆ ಜುಬೈರ್

  ಸ್ಪರ್ಧಿಗಳಾದ ಶಿಲ್ಪಾ ಶಿಂಧೆ, ಅರ್ಶಿ ಖಾನ್, ಜ್ಯೋತಿ ಕುಮಾರ್, ಬಂದ್ಗಿ ಕರ್ಲಾ ಮತ್ತು ಜುಬೈರ್ ಖಾನ್ ಪೈಕಿ ಯಾರು ಮನೆಯಿಂದ ಹೊರಕ್ಕೆ ಹೋಗುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಶಿಲ್ಪಾ ಶಿಂಧೆ ಎಲಿಮಿನೇಟ್ ಆಗುತ್ತಾಳೆ ಎಂಬ ನಿರೀಕ್ಷೆ ಎಲ್ಲರಲ್ಲೂ ಇತ್ತು.

  ಆದರೆ, ವಾರಾಂತ್ಯಕ್ಕೂ ಮೊದಲೇ ಜುಬೈರ್ ಎಲಿಮಿನೇಟ್ ಆಗಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿತು. ನಂತರದ ಬೆಳವಣಿಗೆಯಲ್ಲಿ ಜುಬೈರ್ ಅವರು ಸಲ್ಮಾನ್ ವಿರುದ್ಧ ದೂರು ದಾಖಲಿಸಿದರು. ಆದರೆ, ಜುಬೈರ್ ವಿರುದ್ದ ಕೂಡಾ ದೂರು ದಾಖಲಾಗಿದೆಯಂತೆ.. ವಿವರ ಮುಂದಿದೆ..

  ಜುಬೈರ್ ಆಸ್ಪತ್ರೆಯಿಂದ ತನ್ನ ಮನೆಗೆ

  ಜುಬೈರ್ ಆಸ್ಪತ್ರೆಯಿಂದ ತನ್ನ ಮನೆಗೆ

  ಬಿಗ್ ಬಾಸ್ 11ರ'ಡೌವ್ ರಾಜ' ಜುಬೈರ್ ನಿದ್ದೆ ಮಾತ್ರೆ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿ, ನಂತರ ಮತ್ತೆ ಮನೆಗೆ ಬರುತ್ತಾನೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ, ಕಡಿಮೆ ವೋಟ್ಸ್ ಮತ್ತು ಕಳಪೆ ವರ್ತನೆ ಹೊಂದಿರುವ ಕಾರಣಕ್ಕೆ ಜುಬೈರ್ ಮತ್ತೆ ಮನೆಗೆ ಪ್ರವೇಶಿಸುವಂತಿಲ್ಲ ಎಂದು ಸಲ್ಮಾನ್ ಸ್ಪಷ್ಟಪಡಿಸಿದರು. ಜುಬೈರ್ ಜತೆಗೆ ಪ್ರಿಯಾಂಕ್ ಶರ್ಮಾ ಕೂಡಾ ಎಲಿಮಿನೇಟ್ ಆಗಿದ್ದಾರೆ.

  ಜುಬೈರ್ ನೀಡಿದ ದೂರು

  ಜುಬೈರ್ ನೀಡಿದ ದೂರು

  ನಿರೂಪಕ ಸಲ್ಮಾನ್ ಖಾನ್ ಅವರು ರಾಷ್ಟ್ರೀಯ ವಾಹಿನಿಯಲ್ಲಿ ನನ್ನ ಮಾನ ಕಳೆದಿದ್ದಾರೆ. ನನಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಸಲ್ಮಾನ್ ವಿರುದ್ಧ ಜುಬೈರ್ ಅವರು ದೂರು ನೀಡಿದ್ದಾರೆ. ಆದರೆ, ಪೊಲೀಸರು ಎಫ್ ಐಆರ್ ದಾಖಲಿಸಲಿ ನಿರಾಕರಿಸಿದ್ದು, ಸರಿಯಾದ ಸಾಕ್ಷಿ ಇಲ್ಲ ಎಂದಿದ್ದಾರೆ.

  ಸಲ್ಮಾನ್ ವಿರುದ್ಧದ ದೂರಿನ ಪ್ರತಿ

  ಸಲ್ಮಾನ್ ವಿರುದ್ಧದ ದೂರಿನ ಪ್ರತಿ

  ನಂತರ ಎನ್ ಜಿಒವೊಂದರ ನೆರವು ಪಡೆದುಕೊಂಡು ಮತ್ತೊಮ್ಮೆ ಸಲ್ಮಾನ್ ವಿರುದ್ಧ ದೂರು ದಾಖಲಿಸಿದ್ದಾರೆ. ನನಗೆ ಜೀವ ಬೆದರಿಕೆ ಇದೆ ಎಂದು ಜುಬೈರ್ ಹೇಳಿಕೊಂಡಿದ್ದಾರೆ. Image Source: Twitter

  ಜುಬೈರ್ ವಿರುದ್ಧವೂ ದೂರು

  ಜುಬೈರ್ ವಿರುದ್ಧವೂ ದೂರು

  ಡಾನ್ ದಾವೂದ್ ಇಬ್ರಾಹಿಂ ಸೋದರಿಯ ಮಗಳ ಅಳಿಯ ಎಂದು ಕೊಚ್ಚಿಕೊಂಡಿದ್ದ ಜುಬೈರ್ ವಿರುದ್ಧ ವಿರುದ್ಧ ಅಕ್ಟೋಬರ್ 07ರ ಎಪಿಸೋಡಿನಲ್ಲಿ ನಿರೂಪಕ ಸಲ್ಮಾನ್ ಭಾರಿ ಜೋರಾಗಿ ಅವಾಜ್ ಹಾಕಿದ್ದರು. ಇದರಿಂದ ಬೇಸತ್ತು ಸಲ್ಮಾನ್ ವಿರುದ್ಧ ಜುಬೈರ್ ದೂರು ನೀಡಿದ್ದರು. ಆದರೆ, ದಾವೂದ್ ಅವರ ಕುಟುಂಬಸ್ಥರಲ್ಲಿ ಒಬ್ಬರಾದ ನಿರ್ಮಾಪಕ (ಹಸೀನಾ ಪಾರ್ಕರ್ ಚಿತ್ರ) ಸಮೀರ್ ಅಂತುಳೆ ಅವರು ಜುಬೈರ್ ವಿರುದ್ಧ ದೂರು ದಾಖಲಿಸಿದ್ದು ಎಫ್ ಐಆರ್ ಹಾಕಿರುವ ಸುದ್ದಿ ಬಂದಿದೆ.

  ಬಿಗ್ ಬಾಸ್ ಸ್ಕ್ರಿಪ್ಟೆಡ್

  ಬಿಗ್ ಬಾಸ್ ಸ್ಕ್ರಿಪ್ಟೆಡ್

  ಬಿಗ್ ಬಾಸ್ 11ರಲ್ಲಿ ಎಲ್ಲವೂ ಪೂರ್ವ ನಿಯೋಜಿತವಾಗಿರುತ್ತದೆ. ಸಲ್ಮಾನ್ ಅವರು ಬಾಡಿಗಾರ್ಡ್ ಗಳಿಲ್ಲದೆ ನನ್ನನ್ನು ಭೇಟಿ ಮಾಡಲಿ ಎಂದು ಜುಬೈರ್ ಅವರು ಮಾಧ್ಯಮವೊಂದರ ಜತೆ ಮಾತನಾಡುತ್ತಾ ಹೇಳಿದ್ದಾರೆ.

  English summary
  The viewers witnessed the first elimination inside the Bigg Boss 11 house. Zubair Khan became the first contestant to get eliminated from the Bigg Boss house.There were also reports that an FIR was lodged against Zubair.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X