»   » 'ಬಿಗ್ ಬಾಸ್' ಕಾರ್ಯಕ್ರಮದ ಮೊದಲ ಸ್ಪರ್ಧಿಯ ಫೋಟೋ ಬಹಿರಂಗ.!

'ಬಿಗ್ ಬಾಸ್' ಕಾರ್ಯಕ್ರಮದ ಮೊದಲ ಸ್ಪರ್ಧಿಯ ಫೋಟೋ ಬಹಿರಂಗ.!

Posted By:
Subscribe to Filmibeat Kannada

'ಬಿಗ್ ಬಾಸ್' ಅನ್ನೋದು ಒಂದು ಸ್ಕ್ರಿಪ್ಟೆಡ್ ಶೋ ಅಂತ ಯಾರು ಎಷ್ಟೇ ತಲೆ ಚಚ್ಚಿಕೊಂಡರೂ, ಕಾರ್ಯಕ್ರಮದ ಜನಪ್ರಿಯತೆ ಮಾತ್ರ ಎಳ್ಳಷ್ಟೂ ಕಮ್ಮಿ ಆಗಿಲ್ಲ. ಬರೀ ಕನ್ನಡದಲ್ಲಿ ಮಾತ್ರ ಅಲ್ಲ, ಹಿಂದಿ, ತೆಲುಗು ಹಾಗೂ ತಮಿಳಿನಲ್ಲಿಯೂ 'ಬಿಗ್ ಬಾಸ್' ಸಿಕ್ಕಾಪಟ್ಟೆ ಫೇಮಸ್ ಆಗ್ಬಿಟ್ಟಿದೆ.

ಹಿಂದಿಯಲ್ಲಿ ಈಗಾಗಲೇ ಹತ್ತು ಆವೃತ್ತಿಗಳು ಮುಗಿದಿದ್ದು, 'ಬಿಗ್ ಬಾಸ್-11' ಕಾರ್ಯಕ್ರಮದ ಪ್ರಸಾರಕ್ಕೆ ಇನ್ನು ಕೆಲವೇ ದಿನಗಳಲ್ಲಿ ಚಾಲನೆ ಸಿಗಲಿದೆ. 'ಬಿಗ್ ಬಾಸ್-11' ಕಾರ್ಯಕ್ರಮವನ್ನ ಎಂದಿನಂತೆ ಸಲ್ಮಾನ್ ಖಾನ್ ಹೋಸ್ಟ್ ಮಾಡಲಿದ್ದಾರೆ. ಸಲ್ಮಾನ್ ಖಾನ್ ಭಾಗವಹಿಸಿರುವ ಪ್ರೋಮೋಗಳು ಕೂಡ ಬಿಡುಗಡೆ ಆಗಿವೆ.

ಈ ಬಾರಿಯ 'ಬಿಗ್ ಬಾಸ್'ನಲ್ಲಿ ಇವರೆಲ್ಲಾ ಇರ್ತಾರಂತೆ.!

'ಬಿಗ್ ಬಾಸ್-11' ಬಗ್ಗೆ ಎಲ್ಲೆಲ್ಲೂ ಚರ್ಚೆ ಜೋರಾಗಿರುವಾಗಲೇ, ಕಾರ್ಯಕ್ರಮದ ಮೊದಲ ಸ್ಪರ್ಧಿಯ ಫೋಟೋ ಬಹಿರಂಗ ಆಗಿದೆ. ಮುಂದೆ ಓದಿರಿ....

ಆ ಫೋಟೋ ಇದೇ ನೋಡಿ...

'ಬಿಗ್ ಬಾಸ್-11' ಕಾರ್ಯಕ್ರಮದ ಮೊದಲ ಸ್ಪರ್ಧಿ ಅಂತ ಹೇಳಲಾಗಿರುವ ಓರ್ವ ಯುವತಿಯ ಫೋಟೋವನ್ನ ಸ್ವತಃ ಕಲರ್ಸ್ ವಾಹಿನಿ ಬಿಡುಗಡೆ ಮಾಡಿದೆ.

ನೀವೇ ಊಹಿಸಿ...

ಯುವತಿಯ ಕಣ್ಣು ಮಾತ್ರ ಸೆರೆ ಆಗಿರುವ ಫೋಟೋವನ್ನ ಬಹಿರಂಗ ಮಾಡಿರುವ ಕಲರ್ಸ್ ವಾಹಿನಿ ಒಂದು ಸ್ಪರ್ಧೆಯನ್ನೂ ಆಯೋಜಿಸಿದೆ. ಫೋಟೋದಲ್ಲಿ ಇರುವ ಯುವತಿ ಯಾರು ಎಂಬುದನ್ನ ಸರಿಯಾಗಿ ಊಹಿಸಿದರೆ, ಶೂಟಿಂಗ್ ಸೆಟ್ ನಿಂದ ನೇರವಾಗಿ ಕಾರ್ಯಕ್ರಮ ವೀಕ್ಷಿಸುವ ಅವಕಾಶ ವೀಕ್ಷಕರ ಪಾಲಾಗಲಿದೆ.

ಗೆಸ್ ಲಿಸ್ಟ್ ಸ್ಪರ್ಧೆ

'ಬಿಗ್ ಬಾಸ್ ಗೆಸ್ ಲಿಸ್ಟ್' ಹೆಸರಿನಲ್ಲಿ ಈ ಸ್ಪರ್ಧೆ ನಡೆಯುತ್ತಿದ್ದು, ಈಗಾಗಲೇ... ಈ ಸ್ಪರ್ಧಿ ಯಾರು ಎನ್ನುವ ಬಗ್ಗೆ ಬಿಟೌನ್ ಮಂದಿ ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ.

ಯಾರಿರಬಹುದು.?

'ಬಿಗ್ ಬಾಸ್' ಬಿಡುಗಡೆ ಮಾಡಿರುವ ಫೋಟೋ 'Sen Benimsin' ಪುಸ್ತಕದ ಕವರ್ ಫೋಟೋದಂತೆ ಇರುವ ಕಾರಣ, ಅವರು ಟರ್ಕಿಶ್ ಸಾಹಿತಿ Betul Eldoan ಇರಬಹುದು ಎಂದು ಕೆಲವರು ಊಹಿಸಿದ್ದಾರೆ.

ಮಾಡೆಲ್ ಆಗಿರಬಹುದು.!

ಇನ್ನೂ ಕೆಲವರು ಇದು ಮಾಡೆಲ್ Muzna Butt ರವರ ಭಾವಚಿತ್ರ ಅಂತ ಹೇಳ್ತಿದ್ದಾರೆ.

ಈಕೆ ಇರಬಹುದಾ.?

'ಬಿಗ್ ಬಾಸ್' ಫ್ಯಾನ್ಸ್ ಅಂತೂ ಈಕೆ ಇಂಗ್ಲೆಂಡ್ ಮೂಲದ ಮಾಡೆಲ್ Halima Matlub ಅಂತ ಘೋಷಿಸಿಬಿಟ್ಟಿದ್ದಾರೆ.

ಯಾರು ಸರಿ.?

ಒಟ್ನಲ್ಲಿ 'ಬಿಗ್ ಬಾಸ್-11' ಕಾರ್ಯಕ್ರಮದ ಮೊದಲ ಸ್ಪರ್ಧಿಯ ಫೋಟೋದಿಂದ, ವೀಕ್ಷಕರ ತಲೆಯಲ್ಲಿ ಹೆಬ್ಬಾವು ಹರಿದಾಡಿದ ಹಾಗೆ ಆಗುತ್ತಿದೆ. ಯಾರ ಊಹೆ ಸರಿ ಅಂತ 'ಬಿಗ್ ಬಾಸ್' ಇನ್ನೂ ಹೇಳಿಲ್ಲ. ಸರಿಯಾಗಿ ಊಹೆ ಮಾಡಿದವರಿಗೆ ಮಾತ್ರ ಶೂಟಿಂಗ್ ಸೆಟ್ ನಿಂದ ನೇರವಾಗಿ ಕಾರ್ಯಕ್ರಮ ವೀಕ್ಷಿಸುವ ಅವಕಾಶ ಲಭಿಸಲಿದೆ.

English summary
Bigg Boss 11 Makers have given the glimpse of the first contestant. Take a look at the photo.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada