'ಬಿಗ್ ಬಾಸ್'ನಲ್ಲಿ ಎರಡನೇ ಲವ್: ಅವರಿಗಿಂತ ಇವರು ಮಾಡಿದ್ದು ಬೇರೆ.!
ಹಿಂದಿಯ 'ಬಿಗ್ ಬಾಸ್-11' ಸ್ಪರ್ಧಿಗಳಿಗೆ ಅದೇನ್ ಆಗಿದೆಯೋ ಗೊತ್ತಿಲ್ಲ. ಒಂದು ಕಡೆ ಪುನೀಶ್ ಶರ್ಮಾ ಮತ್ತು ಬಂದಗಿ ಕಲ್ರಾ ಅವರ ಲವ್, ರೊಮ್ಯಾನ್ಸ್ ಎಲ್ಲೆ ಮೀರಿದೆ. ಎಲ್ಲರೂ ಮಲಗಿದ ಮೇಲೆ ಕ್ಯಾಮರಾ ಇಲ್ಲದ ಬಾತ್ ರೂಂನಲ್ಲಿ ಒಟ್ಟಿಗೆ ಸೇರಿಕೊಂಡ ಇವರಿಬ್ಬರು 'ಟಾಕ್ ಆಫ್ ದಿ ಶೋ' ಆಗಿದ್ದಾರೆ.
ಹೀಗಿರುವಾಗಲೇ, ಮತ್ತೊಂದು ಲವ್ ಸ್ಟೋರಿ ಹಿಂದಿಯ ಬಿಗ್ ಬಾಸ್ ನಲ್ಲಿ ಗದ್ದಲ ಮಾಡುತ್ತಿದೆ. ರಾತ್ರಿ ಎಲ್ಲರೂ ಮಲಗಿದ ಮೇಲೆ, ಯಾರಿಗೂ ಗೊತ್ತಿಲ್ಲದ ಹಾಗೆ ಒಂದೇ ಬೆಡ್ ಮೇಲೆ ಮಲಗುವ ಮೂಲಕ ಪ್ರಿಯಾಂಕ್ ಶರ್ಮ ಹಾಗೂ ಬೆನಾಫ್ಶಾ, ಪ್ರೇಮ ಪಕ್ಷಿಗಳಾದ ಪುನೀಶ್ ಮತ್ತು ಬಂದಗಿಯನ್ನ ಓವರ್ ಟೇಕ್ ಮಾಡಿದ್ದಾರೆ.
ಹಿಂದಿ ಬಿಗ್ ಬಾಸ್ ಮನೆಯಲ್ಲಿ ನಡೆಯುತ್ತಿರುವ ಎರಡನೇ ಲವ್ ಸ್ಟೋರಿಯ ಅಸಲಿ ಮುಖ ಇಲ್ಲಿದೆ ಓದಿ.....

ಪ್ರಿಯಾಂಕ್ ಮತ್ತು ಬೆನಾಫ್ಶಾ ಹೊಸ ಲವ್
ಪುನೀಶ್ ಶರ್ಮಾ ಮತ್ತು ಬಂದಗಿ ಕಲ್ರಾ ನಂತರ ಪ್ರಿಯಾಂಕ್ ಮತ್ತು ಬೆನಾಫ್ಶಾ ಜೋಡಿ ಸುದ್ದಿಯಾಗಿದ್ದಾರೆ. ಇವರಿಬ್ಬರ ಮಧ್ಯೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಒಂದೇ ಬೆಡ್ ನಲ್ಲಿ ಮಲಗಿದ ಜೋಡಿ.!
'ಬಿಗ್ ಬಾಸ್' ಮನೆಯಲ್ಲಿ ಪ್ರತಿಯೊಬ್ಬರಿಗೂ ಪ್ರತ್ಯೇಕ ಬೆಡ್ ನೀಡಲಾಗಿರುತ್ತೆ. ಮತ್ತು ಮಹಿಳೆಯರಿಗೆ ಬೇರೆ ಮತ್ತು ಗಂಡಸರಿಗೆ ಬೇರೆ ಬೆಡ್ ವ್ಯವಸ್ಥೆ ಮಾಡಲಾಗಿರುತ್ತೆ. ಹೀಗಿದ್ದರೂ, ಎಲ್ಲರ ಕಣ್ಣು ತಪ್ಪಿಸಿ ಪ್ರಿಯಾಂಕ್ ಮತ್ತು ಬೆನಾಫ್ಶಾ ಒಂದೆ ಬೆಡ್ ಮೇಲೆ ಮಲಗಿದ್ದರು. ಇದು ಬಿಗ್ ಮನೆಯಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ.

ಪ್ರಿಯಾಂಕ್ ಜೋಡಿಯನ್ನ ನೋಡಿದ ಪುನೀಶ್
ರಾತ್ರಿ ಒಂದೇ ಬೆಡ್ ಮೇಲೆ ಮಲಗಿದ್ದ ಪ್ರಿಯಾಂಕ್ ಮತ್ತು ಬೆನಾಫ್ಶಾ ಜೋಡಿಯನ್ನ ಪುನೀಶ್ ಶರ್ಮಾ ಮತ್ತು ಬಂದಗಿ ನೋಡಿಬಿಟ್ಟರು. ಅವರು ನೋಡಿದ್ದು ಮಾತ್ರವಲ್ಲದೇ ಮತ್ತೊಬ್ಬ ಸ್ಪರ್ಧಿಯನ್ನ ಎಬ್ಬಿಸಿ ತೋರಿಸಿದರು. ಇದು ಬೆಳಿಗ್ಗೆ ದೊಡ್ಡ ಚರ್ಚೆಯಾಯಿತು.

ಅತಿಯಾದ ಆತ್ಮೀಯತೆ
ಅಂದ್ಹಾಗೆ, ಪ್ರಿಯಾಂಕ್ ಗೆ ಈಗಾಗಲೇ ಗರ್ಲ್ ಫ್ರೆಂಡ್ ಇದ್ದಾರೆ. ಅದೇ ರೀತಿ ಬೆನಾಫ್ಶಾಗೂ ಬಾಯ್ ಫ್ರೆಂಡ್ ಇದ್ದಾರೆ. ಹೀಗಿದ್ದರೂ, ಇವರಿಬ್ಬರೂ ಬಿಗ್ ಬಾಸ್ ಮನೆಯಲ್ಲಿ ಲವರ್ಸ್ ಗಿಂತ ಹೆಚ್ಚು ಆತ್ಮೀಯತೆ ಹೊಂದಿದ್ದಾರೆ. ಇದು ಇತರೆ ಸದಸ್ಯರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಅಷ್ಟಕ್ಕೂ, 'ರೋಡೀಸ್' ರಿಯಾಲಿಟಿ ಶೋ ಬಳಿಕ ಪ್ರಿಯಾಂಕ್ ಹಾಗೂ ಬೆನಾಫ್ಶಾ ಕ್ಲೋಸ್ ಫ್ರೆಂಡ್ಸ್ ಆಗಿದ್ದರು. ಆದ್ರೆ, 'ಬಿಗ್ ಬಾಸ್' ಮನೆಯಲ್ಲಿ ಇವರಿಬ್ಬರ ಫ್ರೆಂಡ್ ಶಿಪ್ ಎಕ್ಸ್ ಟ್ರಾ ಸ್ಪೆಷಲ್ ಆಗಿದೆ.

ರಾತ್ರಿ ಕ್ಯಾಮೆರಾದಲ್ಲಿ ಎಲ್ಲವೂ ಸೆರೆ
'ಬಿಗ್ ಬಾಸ್' ಮನೆಯಲ್ಲಿ ರಾತ್ರಿ ಲೈಟ್ ಆಫ್ ಆದ್ಮೇಲೆ ಲವ್ ಬರ್ಡ್ಸ್ ಗಳ ಚಟುವಟಿಕೆ ಹೆಚ್ಚಾಗಿದೆ. 'ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳಲು ಸ್ಪರ್ಧಿಗಳು ಹೀಗೆಲ್ಲ ಗಿಮಿಕ್ ಮಾಡ್ತಿದ್ದಾರಾ.? ನಮಗಂತೂ ಗೊತ್ತಿಲ್ಲ. ಒಂದ್ಕಡೆ, ಪುನೀಶ್ ಹಾಗೂ ಬಂದಗಿ ಪ್ರೇಮದ ಅಮಲಿನಲ್ಲಿ ತೇಲುತ್ತಾ ಸೇಫ್ ಗೇಮ್ ಆಡುತ್ತಿದ್ದರೆ, ಇತ್ತ ಪ್ರಿಯಾಂಕ್ ಗಾಗಿ ಎರಡು ವಾರ ತಮ್ಮನ್ನ ತಾವೇ ನಾಮಿನೇಟ್ ಮಾಡಿಕೊಂಡ ಬೆನಾಫ್ಶಾ ಈಗ ಹೊಸ ರಾಗ ಹಾಡುತ್ತಿದ್ದಾರೆ. ಇದೆಲ್ಲವೂ 'ಬಿಗ್ ಬಾಸ್' ಮನೆಯ ಉಳಿವಿಗಾಗಿ ಆಗಿದ್ದರೆ, ಅಚ್ಚರಿ ಏನಿಲ್ಲ.

ಸಲ್ಮಾನ್ ಪ್ರತಿಕ್ರಿಯೆ ಹೇಗಿರುತ್ತೋ.?
'ಬಿಗ್ ಬಾಸ್' ಮನೆಯೊಳಗೆ ಬೆನಾಫ್ಶಾ ಜೊತೆ ಪ್ರಿಯಾಂಕ್ ಕ್ಲೋಸ್ ಆಗಿರುವುದು ಪ್ರಿಯಾಂಕ್ ಪ್ರೇಯಸಿ ದಿವ್ಯಗೆ ಇಷ್ಟ ಆಗುತ್ತಿಲ್ಲ. ಇತ್ತ ಪುನೀಶ್ ಜೊತೆ ಬಂದಗಿ ಪ್ರೇಮ ಕೂಡ ಎಲ್ಲೆ ಮೀರಿದೆ. ಒಬ್ಬರು ಬಾತ್ ರೂಂನಲ್ಲಿ ಲಾಕ್ ಆದರೆ ಇನ್ನೊಬ್ಬರು ಒಂದೇ ಬೆಡ್ ಮೇಲೆ ನಿದ್ದೆ ಮಾಡಿದ್ದಾರೆ. ಇದನ್ನೆಲ್ಲ ನೋಡಿದ್ಮೇಲೆ, ವಾರಾಂತ್ಯದಲ್ಲಿ ಸಲ್ಮಾನ್ ಪ್ರತಿಕ್ರಿಯೆ ಹೇಗಿರುತ್ತೋ, ಕಾದು ನೋಡಬೇಕು.


Click it and Unblock the Notifications











