65'ರ ಹಿರಿ ಜೀವಕ್ಕೆ 28 ವರ್ಷದ ಪ್ರೇಯಸಿ, 'ವಿಚಿತ್ರ ಜೋಡಿ' ಕಂಡು ವೀಕ್ಷಕರು ಕಕ್ಕಾಬಿಕ್ಕಿ.!

ಭಾರತದ ಅತ್ಯಂತ ಜನಪ್ರಿಯ ಹಾಗೂ ವಿವಾದಾತ್ಮಕ ರಿಯಾಲಿಟಿ ಶೋ 'ಬಿಗ್ ಬಾಸ್' ಹೊಸ ಆವೃತ್ತಿ ಆರಂಭ ಆಗಿ ಇನ್ನೂ ಸರಿಯಾಗಿ 24 ಗಂಟೆಗಳು ಕಳೆದಿಲ್ಲ. 'ಬಿಗ್ ಬಾಸ್' ಮನೆಯೊಳಗೆ ಸ್ಪರ್ಧಿಗಳು ಕಾಲಿಟ್ಟು ಇನ್ನೂ ಒಂದು ದಿನ ಕೂಡ ಆಗಿಲ್ಲ. ಅಷ್ಟು ಬೇಗ ಕೆಲ ಸ್ಪರ್ಧಿಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದಾರೆ.

'ಬಿಗ್ ಬಾಸ್' ಮನೆಯೊಳಗೆ ಎಂಟ್ರಿಕೊಟ್ಟ ವಿಚಿತ್ರ ಜೋಡಿ ಅನೂಪ್ ಜಲೋಟ ಹಾಗೂ ಜಸ್ಲೀನ್ ಮಥಾರು ಪ್ರೇಮ ಕಥೆಯನ್ನ ಕೇಳಿ ವೀಕ್ಷಕರು ಕಕ್ಕಾಬಿಕ್ಕಿಯಾಗಿದ್ದಾರೆ.

'ಭಜನೆಗಳ ಸಾಮ್ರಾಟ' ಎಂದೇ ಕರೆಯಿಸಿಕೊಳ್ಳುವ ಅನೂಪ್ ಜಲೋಟ ಅವರಿಗೆ ಸದ್ಯ 65 ವರ್ಷ ವಯಸ್ಸು. ಇವರು 'ಬಿಗ್ ಬಾಸ್' ಮನೆಯೊಳಗೆ ತಮ್ಮ ಶಿಷ್ಯೆ ಜಸ್ಲೀನ್ ಮಥಾರು ಜೊತೆಗೆ ಕಾಲಿಟ್ಟಿದ್ದಾರೆ. ಇಬ್ಬರ ನಡುವೆ ಕೇವಲ ಗುರು-ಶಿಷ್ಯೆ ಸಂಬಂಧ ಇದ್ದಿದ್ದರೆ, ಈ ಜೋಡಿಯನ್ನ ಕಂಡು ವೀಕ್ಷಕರು ಆಡಿಕೊಂಡು ನಗುತ್ತಿರಲಿಲ್ಲ.

ನಿಜ ಹೇಳ್ಬೇಕಂದ್ರೆ, ಇವರಿಬ್ಬರ ನಡುವೆ ಮೂರು ವರ್ಷಗಳಿಂದ ಪ್ರೀತಿ-ಪ್ರೇಮ ಇದೆ. ಜಸ್ಲೀನ್ ಪ್ರೇಮ ಪಾಶದಲ್ಲಿ ಅನೂಪ್ ಸಿಲುಕಿದ್ದಾರೆ. ಇಬ್ಬರ ನಡುವೆ 37 ವರ್ಷಗಳ ಅಂತರ ಇರುವ ಕಾರಣ ಈ ವಿಚಿತ್ರ ಜೋಡಿಯನ್ನ ಕಂಡು ವೀಕ್ಷಕರು ಅಕ್ಷರಶಃ ಶಾಕ್ ಆಗಿದ್ದಾರೆ. ಬೇಕಾದ್ರೆ, ಕೆಲ ಟ್ವೀಟ್ ಗಳನ್ನ ನೀವೇ ನೋಡಿರಿ...

ಕೇವಲವಾಗಿ ಕಾಣಬೇಡಿ

''ಭಜನೆ ಮಾಡುವವರನ್ನ ಯಾವತ್ತೂ ಕೇವಲವಾಗಿ ಕಾಣಬೇಡಿ. ಅನೂಪ್ ಜಲೋಟ ಇನ್ನೂ 65 ವರ್ಷ ಕಿರಿಯ'' ಅಂತ ವೀಕ್ಷಕರೊಬ್ಬರು ಕಾಲೆಳೆದಿದ್ದಾರೆ.

ಇಂಥವರನ್ನ ಫಾಲೋ ಮಾಡಬಾರದು

''ಶಿಷ್ಯೆಯರ ಜೊತೆಗೆ ಸಂಬಂಧ ಇಟ್ಟುಕೊಳ್ಳುವುದರಲ್ಲಿ ಅನೂಪ್ ಜಲೋಟ ನಿಸ್ಸೀಮ. ಇಂತಹ ರೋಲ್ ಮಾಡೆಲ್ ಗಳನ್ನ ಯಾರೂ ಫಾಲೋ ಮಾಡಬಾರದು'' ಅಂತ ವೀಕ್ಷಕರು ಟ್ವೀಟ್ ಮಾಡಿದ್ದಾರೆ.

ಯಾರೋ ಅಂದುಕೊಂಡರೆ, ಇನ್ಯಾರೋ ಬಂದರು.!

'ಬಿಗ್ ಬಾಸ್' ಮನೆಯೊಳಗೆ ಜನ ಮಿಲಿಂದ್ ಸೋಮನ್ ರವರನ್ನ ನಿರೀಕ್ಷೆ ಮಾಡುತ್ತಿದ್ದರು. ಆದ್ರೀಗ, ಅವರ ಬದಲು ಅನೂಪ್ ಜಲೋಟ ಎಂಟ್ರಿಕೊಟ್ಟಿದ್ದಾರೆ ಎಂದು ಜನ ವ್ಯಂಗ್ಯವಾಡಿದ್ದಾರೆ.

ಸಿಂಗಲ್ ಆಗಿರುವ ಹುಡುಗರೇ.. ಇಲ್ನೋಡಿ...

ಇನ್ನೂ ಸಿಂಗಲ್ ಆಗಿರುವ ಹುಡುಗರಿಗೆ ಜನ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.

ಪ್ರೀತಿಗೆ ಕಣ್ಣಿಲ್ಲ.!

ಅನೂಪ್ ಜಲೋಟ ಲವ್ ಸ್ಟೋರಿ ನೋಡಿದ್ಮೇಲೆ, ಸಲ್ಮಾನ್ ಖಾನ್ ಪ್ರತಿಕ್ರಿಯೆ ಹೀಗಿತ್ತಂತೆ

ಬ್ಯಾಂಕ್ ಬ್ಯಾಲೆನ್ಸ್ ಪ್ರೀತಿ

''ಇಂತಹ ಸಂಬಂಧಗಳು ಹುಟ್ಟಲು ಬ್ಯಾಂಕ್ ಬ್ಯಾಲೆನ್ಸ್ ಕಾರಣ'' ಎಂಬ ಅಭಿಪ್ರಾಯವೂ ಟ್ವಿಟ್ಟರ್ ನಲ್ಲಿ ವ್ಯಕ್ತವಾಗಿದೆ.

ಗುರು-ಶಿಷ್ಯೆ ಪರಂಪರೆ ಹಾಳು

ಗುರು-ಶಿಷ್ಯೆ ಪರಂಪರೆಯನ್ನ ಹಾಳು ಮಾಡಿದ ಅನೂಪ್ ಇಂದು ತಮ್ಮ ಗೌರವ ಕಳೆದುಕೊಂಡಿದ್ದಾರೆ ಎಂದಿದ್ದಾರೆ ಟ್ವೀಟಿಗರು.

ಶೇಮ್ ಶೇಮ್ ಎನ್ನುತ್ತಿದ್ದಾರೆ ಜನ

''ಒಂದೇ ಒಂದು ದಿನದಲ್ಲಿ ಅನೂಪ್ ತಮ್ಮ ಗೌರವವನ್ನ ಕಳೆದುಕೊಂಡರು. ಶೇಮ್ ಅನೂಪ್ ಜಲೋಟ'' ಎಂದು ವೀಕ್ಷಕರು ಟ್ವೀಟ್ ಮಾಡಿದ್ದಾರೆ.

More from Filmibeat

English summary
Bigg Boss 12: Anup Jalota and Girlfriend Jasleen trolled for their relationship.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X