'ಬಿಗ್ ಬಾಸ್' ಮನೆಯಲ್ಲಿ ಅನೂಪ್-ಜಸ್ಲೀನ್ ಬ್ರೇಕಪ್ ಆಗಿಲ್ಲ.!
65 ವರ್ಷದ ಅನೂಪ್ ಹಾಗೂ 28 ವರ್ಷದ ಜಸ್ಲೀನ್ 'ಬಿಗ್ ಬಾಸ್-12' ಕಾರ್ಯಕ್ರಮದ 'ವಿಚಿತ್ರ ಜೋಡಿ'. ಈ ಜೋಡಿಯ ಪ್ರೇಮದಲ್ಲಿ ಮೊನ್ನೆಯಷ್ಟೇ ಬಿರುಕು ಮೂಡಿತ್ತು.
ಮೂರನೇ ವಾರದ ನಾಮಿನೇಷನ್ ಟಾಸ್ಕ್ ಮುಗಿದ್ಮೇಲೆ, ಜಸ್ಲೀನ್ ಮೇಲೆ ಅನೂಪ್ ಗೆ ಬೇಸರ ಮೂಡಿತು. ''ಇನ್ಮುಂದೆ ನಾನು ಈ ಸಂಬಂಧ ಮುಂದುವರೆಸುವುದಿಲ್ಲ. 'ಬಿಗ್ ಬಾಸ್' ಮನೆಯಲ್ಲೂ ನಾನು ಜೋಡಿಯಾಗಿ ಆಟ ಆಡುವುದಿಲ್ಲ'' ಎಂದು ಎಲ್ಲರ ಮುಂದೆ ಅನೂಪ್ ಘೋಷಿಸಿದರು.
ಎಷ್ಟೇ ಬಾರಿ ಜಸ್ಲೀನ್ ಕ್ಷಮೆ ಕೇಳಿದರೂ, ಅನೂಪ್ ಕೇಳಲಿಲ್ಲ. ಅಲ್ಲಿಗೆ, ಈ ಜೋಡಿಯ ಪ್ರೇಮ ಮುರಿದು ಬಿತ್ತು ಅಂತಲೇ ಎಲ್ಲರೂ ಭಾವಿಸಿದ್ದರು. ಆದ್ರೆ, ಅನೂಪ್ ಹಾಗೂ ಜಸ್ಲೀನ್ ಬ್ರೇಕಪ್ ಆಗಿಲ್ಲ. ಎಲ್ಲವನ್ನೂ ಮರೆತು ಪ್ಯಾಚಪ್ ಆಗಿದ್ದಾರೆ. ಮುಂದೆ ಓದಿರಿ...

ಅನೂಪ್-ಜಸ್ಲೀನ್ ಪ್ಯಾಚಪ್.!
ಮೊನ್ನೆಯಷ್ಟೇ ಬ್ರೇಕಪ್ ಆದಂತೆ ಕಂಡುಬಂದ ಅನೂಪ್-ಜಸ್ಲೀನ್ ಜೋಡಿ ನಿನ್ನೆಯಷ್ಟೇ ಪ್ಯಾಚಪ್ ಆಗಿದ್ದಾರೆ. ಹಿಂದಿನಂತೆ ಜಸ್ಲೀನ್ ಜೊತೆ ಅನೂಪ್ ಮಾತುಕತೆ ಮುಂದುವರೆಸಿದ್ದಾರೆ. ''ಎಲ್ಲವನ್ನೂ ಮರೆತು ನೀವು ಮೊದಲಿನಂತೆ ಆಗಿದ್ದು ನನಗೆ ಖುಷಿ ಕೊಟ್ಟಿದೆ'' ಎಂದು ಅನೂಪ್ ಗೆ ಜಸ್ಲೀನ್ ಹೇಳಿದ್ದಾರೆ.

ಜಸ್ಲೀನ್ ಕಾಲೆಳೆಯುತ್ತಿರುವ ಅನೂಪ್
''ಬಟ್ಟೆ ಹಾಗೂ ಮೇಕಪ್ ಮೇಲಿರುವ ಮೋಹವನ್ನು ಬಿಟ್ಟು ಬಿಡು. ನನ್ನ ಮೇಲೆ ಹೆಚ್ಚಿನ ಪ್ರೀತಿ ಇಡು'' ಎಂದು ಎಲ್ಲರ ಮುಂದೆ ಜಸ್ಲೀನ್ ಕಾಲೆಳೆಯುತ್ತಿದ್ದರು ಅನೂಪ್ ಜಲೋಟ.

ನಾಮಿನೇಟ್ ಆಗಿದ್ದಾರೆ ಅನೂಪ್-ಜಸ್ಲೀನ್
ಈ ವಾರ ನಾಮಿನೇಷನ್ ಲಿಸ್ಟ್ ನಲ್ಲಿ ಅನೂಪ್-ಜಸ್ಲೀನ್ ಕೂಡ ಇದ್ದಾರೆ. ಅನೂಪ್-ಜಸ್ಲೀನ್ ಜೋಡಿಗೆ ವೀಕ್ಷಕರು ವೋಟ್ ಹಾಕುತ್ತಾರಾ.? ಈ ವಾರ ಅನೂಪ್-ಜಸ್ಲೀನ್ ಸೇಫ್ ಆಗುತ್ತಾರಾ, ನೋಡಬೇಕು.

ಅನೂಪ್ ಸುತ್ತ ಗಾಸಿಪ್
'ಭಜನೆಗಳ ಸಾಮ್ರಾಟ' ಅನೂಪ್ ಗೆ ವಾರವೊಂದಕ್ಕೆ 'ಬಿಗ್ ಬಾಸ್' 40 ಲಕ್ಷ ಸಂಭಾವನೆ ಫಿಕ್ಸ್ ಮಾಡಿದ್ದಾರೆ ಎಂಬ ಗಾಸಿಪ್ ಎಲ್ಲೆಡೆ ಹರಿದಾಡುತ್ತಿದೆ. ಅಲ್ಲದೇ, ಇನ್ನೆರಡು ವಾರಗಳಲ್ಲಿ ಅನೂಪ್ ಔಟ್ ಆಗಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.


Click it and Unblock the Notifications











