'ಬಿಗ್ ಬಾಸ್' ಮನೆಯಲ್ಲಿ ಅನೂಪ್-ಜಸ್ಲೀನ್ ರೋಮ್ಯಾಂಟಿಕ್ ಡೇಟ್.!

ಅಂತೂ ಅನೂಪ್ ಜಲೋಟ-ಜಸ್ಲೀನ್ ಮಥಾರು ಒಂದಾಗಿದ್ದಾರೆ. ಮನಸ್ತಾಪ, ಭಿನ್ನಾಭಿಪ್ರಾಯ ಮರೆತು ಒಟ್ಟಿಗೆ ಕೂತು ಊಟ ಮಾಡಿದ್ದಾರೆ. ಹಾಗೇ, ಅನೂಪ್-ಜಸ್ಲೀನ್ ಗೆ ಏಕಾಂತ ಸಮಯವನ್ನ ಕಲ್ಪಿಸಿಕೊಟ್ಟವರು ಬೇರೆ ಯಾರೂ ಅಲ್ಲ, ಸ್ವತಃ 'ಬಿಗ್ ಬಾಸ್'.

ಹೌದು, ಅನೂಪ್ ಹಾಗೂ ಜಸ್ಲೀನ್ ಗಾಗಿ 'ಬಿಗ್ ಬಾಸ್' ರೋಮ್ಯಾಂಟಿಕ್ ಡಿನ್ನರ್ ಡೇಟ್ ಅರೇಂಜ್ ಮಾಡಿದ್ದರು. ನವ ವಧುವಿನಂತೆ ಸಿಂಗರಿಸಿಕೊಂಡು ಡಿನ್ನರ್ ಡೇಟ್ ಗಾಗಿ ಜಸ್ಲೀನ್ ತಯಾರಾದರು. ಇನ್ನೂ ಸೂಟು ಬೂಟು ಧರಿಸಿ ಅನೂಪ್ ಸಿಕ್ಕಾಪಟ್ಟೆ ಯಂಗ್ ಆಗಿ ಕಾಣುತ್ತಿದ್ದರು.

ಡಿನ್ನರ್ ಡೇಟ್ ನಲ್ಲಿ ಮಧುರ ಗಾನಗಳನ್ನು ಹಾಡಿ ಜಸ್ಲೀನ್ ನ ಅನೂಪ್ ಇಂಪ್ರೆಸ್ ಮಾಡಿದರು. ಒಟ್ನಲ್ಲಿ, 'ಬಿಗ್ ಬಾಸ್' ಮನೆಯಲ್ಲಿ ಯಾರಿಗೂ ಸಿಗದ ಒಂದು ಸುವರ್ಣಾವಕಾಶ ಅನೂಪ್-ಜಸ್ಲೀನ್ ಪಾಲಾಯಿತು. ಮುಂದೆ ಓದಿರಿ...

ಒಂದಾದ ಅನೂಪ್-ಜಸ್ಲೀನ್ ಜೋಡಿ

ಒಂದಾದ ಅನೂಪ್-ಜಸ್ಲೀನ್ ಜೋಡಿ

ನಾಮಿನೇಷನ್ ವೇಳೆ ಉಂಟಾದ ಭಿನ್ನಾಭಿಪ್ರಾಯವನ್ನು ಅನೂಪ್ ಹಾಗೂ ಜಸ್ಲೀನ್ ರೋಮ್ಯಾಂಟಿಕ್ ಡಿನ್ನರ್ ಡೇಟ್ ವೇಳೆ ಸರಿ ಪಡಿಸಿಕೊಂಡರು. ಇನ್ಮೇಲೆ ಯಾವತ್ತೂ ದೂರ ಹೋಗುವ ಮಾತು ಆಡದೆ, ಒಂದಾಗಿರಲು ಜೋಡಿ ನಿರ್ಧಾರ ಮಾಡಿತು.

ನಾಮಿನೇಟ್ ಆಗಿದ್ದಾರೆ ಅನೂಪ್-ಜಸ್ಲೀನ್

ನಾಮಿನೇಟ್ ಆಗಿದ್ದಾರೆ ಅನೂಪ್-ಜಸ್ಲೀನ್

ನಾಮಿನೇಷನ್ ಟಾಸ್ಕ್ ನಲ್ಲಿ ದೀಪಿಕಾ ಕೊಟ್ಟ ಕಾರ್ಯವನ್ನ ಜಸ್ಲೀನ್ ಪೂರ್ಣಗೊಳಿಸಲಿಲ್ಲ. ಹೀಗಾಗಿ, ಅನೂಪ್ ಹಾಗೂ ಜಸ್ಲೀನ್ ನಾಮಿನೇಟ್ ಆಗಿದ್ದಾರೆ. ವೀಕ್ಷಕ ಮಹಾಪ್ರಭುಗಳು ಈ ಜೋಡಿಗೆ ವೋಟ್ ಹಾಕಿ ಸೇಫ್ ಮಾಡಿದ್ದಾರಾ.? ಇಂದು ಗೊತ್ತಾಗಲಿದೆ.

ಅನೂಪ್ ಬಗ್ಗೆ ಗಾಸಿಪ್

ಅನೂಪ್ ಬಗ್ಗೆ ಗಾಸಿಪ್

ಇನ್ನೆರಡು ವಾರದ ಒಳಗೆ 'ಬಿಗ್ ಬಾಸ್' ಮನೆಯಿಂದ ಅನೂಪ್ ಜಲೋಟ ಎಲಿಮಿನೇಟ್ ಆಗುತ್ತಾರೆ ಎಂಬ ಗಾಸಿಪ್ ಹಬ್ಬಿದೆ. ಇದು ನಿಜವೇ.? ಕಾಲವೇ ಉತ್ತರಿಸಬೇಕು.

ಸಲ್ಮಾನ್-ಗೋವಿಂದಾ ಮೋಡಿ

ಸಲ್ಮಾನ್-ಗೋವಿಂದಾ ಮೋಡಿ

ಇಂದು 'ವೀಕೆಂಡ್ ಕಾ ವಾರ್' ಸಂಚಿಕೆಯಲ್ಲಿ ವೀಕ್ಷಕರಿಗೆ ಮಸ್ತ್ ಮನರಂಜನೆ ಕೊಡಲು ಸಲ್ಮಾನ್ ಖಾನ್ ಜೊತೆಗೆ ಗೋವಿಂದಾ ಕೂಡ ಬಂದಿದ್ದಾರೆ. ಇಂದು ಯಾವ ಸ್ಪರ್ಧಿಗೆ ಸಲ್ಮಾನ್ ಬಿಸಿ ಮುಟ್ಟಿಸ್ತಾರೋ, ಯಾರನ್ನ ಹೊರಗೆ ಕರೆಯುತ್ತಾರೋ, ನೋಡಬೇಕು.

More from Filmibeat

English summary
Bigg Boss 12: Anup Jalota and Jasleen goes for a romantic dinner date.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X