Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಔಟ್ ಆಗದ ಅನೂಪ್ ಜಲೋಟ: ಸೀಕ್ರೆಟ್ ರೂಮ್ ಸೇರಿದ 'ಭಜನೆಗಳ ಸಾಮ್ರಾಟ'.!
'ವಿಚಿತ್ರ' ಪ್ರೇಮ ಕಥೆಯನ್ನು ಹೊತ್ತು 'ಬಿಗ್ ಬಾಸ್' ಮನೆಗೆ ಕಾಲಿಟ್ಟ 65 ವರ್ಷದ ಅನೂಪ್ ಜಲೋಟ ಹಾಗೂ 28 ವರ್ಷದ ಜಸ್ಲೀನ್ ಮಥಾರು ಲವ್ ಸ್ಟೋರಿಗೆ 'ಬಿಗ್ ಬಾಸ್' ಮನೆಯಲ್ಲೇ ಒಂದು ಗತಿ ಕಾಣುವ ಸಾಧ್ಯತೆ ಹೆಚ್ಚಾಗಿದೆ.
ಅದಾಗಲೇ, ಒಮ್ಮೆ ನಾಮಿನೇಷನ್ ಟಾಸ್ಕ್ ನಲ್ಲಿ ಅನೂಪ್ ಹಾಗೂ ಜಸ್ಲೀನ್ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿತ್ತು. ಬಟ್ಟೆ ಹಾಗೂ ಮೇಕಪ್ ಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟ ಜಸ್ಲೀನ್ ವಿರುದ್ಧ ಅನೂಪ್ ಬೇಸರ ಮಾಡಿಕೊಂಡರು. 'ಇನ್ಮುಂದೆ ಈ ಸಂಬಂಧ ಮುಂದುವರೆಸುವುದಿಲ್ಲ' ಎಂದು ಅನೂಪ್ ಎಲ್ಲರ ಮುಂದೆ ಹೇಳಿದ್ದರು.
'ಬಿಗ್ ಬಾಸ್' ಮನೆಯಲ್ಲಿ ಮುರಿದು ಬಿತ್ತು 'ವಿಚಿತ್ರ ಜೋಡಿ'ಯ ಪ್ರೇಮ.!
ಪದೇ ಪದೇ ಜಸ್ಲೀನ್ ಕ್ಷಮೆ ಕೇಳಿದ್ಮೇಲೆ, ಅನೂಪ್ ಕೋಪ ಕಮ್ಮಿ ಆಯಿತು. ಅನೂಪ್ ಹಾಗೂ ಜಸ್ಲೀನ್ ಪ್ಯಾಚಪ್ ಆದರು. ಈ ಜೋಡಿಗೆ 'ಬಿಗ್ ಬಾಸ್' ಮನೆಯಲ್ಲಿಯೇ ರೋಮ್ಯಾಂಟಿಕ್ ಡೇಟ್ ಕೂಡ ಅರೇಂಜ್ ಮಾಡಲಾಯಿತು. ಇದೀಗ ನೋಡಿದ್ರೆ, ಅನೂಪ್ ರನ್ನ 'ಬಿಗ್ ಬಾಸ್' ಸೀಕ್ರೆಟ್ ರೂಮ್ ಗೆ ಕಳುಹಿಸಿದ್ದಾರೆ. ಮುಂದೆ ಓದಿರಿ...
ಎಲಿಮಿನೇಷನ್ ವೇಳೆ ನಡೆದಿದ್ದೇನು.?
ಕಳೆದ ವಾರ ಅನೂಪ್-ಜಸ್ಲೀನ್, ಕರಣ್ವೀರ್ ಬೋಹ್ರಾ, ಸೃಷ್ಟಿ ಹಾಗೂ ಶ್ರೀಶಾಂತ್ ಡೇಂಜರ್ ಝೋನ್ ನಲ್ಲಿದ್ದರು. ಈ ನಾಲ್ವರ ಪೈಕಿ ವೀಕ್ಷಕರಿಂದ ಕಡಿಮೆ ಎಸ್.ಎಂ.ಎಸ್ ಪಡೆದುಕೊಂಡವರು ಅನೂಪ್-ಜಸ್ಲೀನ್ ಜೋಡಿ ಎಂದು ಸಲ್ಮಾನ್ ಖಾನ್ ಘೋಷಿಸಿದರು. ಅಲ್ಲದೇ, ಅನೂಪ್-ಜಸ್ಲೀನ್ ಪೈಕಿ ಒಬ್ಬರು ಮಾತ್ರ ಹೊರಬರಲು ಸಲ್ಮಾನ್ ಸೂಚಿಸಿದರು.
'ಬಿಗ್ ಬಾಸ್' ಮನೆಯಲ್ಲಿ ಅನೂಪ್-ಜಸ್ಲೀನ್ ರೋಮ್ಯಾಂಟಿಕ್ ಡೇಟ್.!
ಔಟ್ ಆಗಲು ಮುಂದಾದ ಅನೂಪ್
''ನಾನೇ ಹೊರಗೆ ಬರುವೆ. ಜಸ್ಲೀನ್ ಆಟ ಮುಂದುವರೆಸಲಿ'' ಎಂದರು ಅನೂಪ್. ಎಲಿಮಿನೇಷನ್ ಪ್ರಕ್ರಿಯೆಯಂತೆ 'ಬಿಗ್ ಬಾಸ್' ಮನೆಯಿಂದ ಹೊರಬಂದ ಅನೂಪ್ ನೇರವಾಗಿ ತೆರಳಿದ್ದು ಸೀಕ್ರೆಟ್ ರೂಮ್ ಗೆ.
'ಬಿಗ್ ಬಾಸ್' ಮನೆಯಲ್ಲಿ ಅನೂಪ್-ಜಸ್ಲೀನ್ ಬ್ರೇಕಪ್ ಆಗಿಲ್ಲ.!
ಸೀಕ್ರೆಟ್ ರೂಮ್ ನಲ್ಲಿ ಶಾಕ್ ಮೇಲೆ ಶಾಕ್
ಸೀಕ್ರೆಟ್ ರೂಮ್ ಗೆ ತೆರಳಿದ ಅನೂಪ್ ಜಲೋಟಗೆ ಶಾಕ್ ಮೇಲೆ ಶಾಕ್ ಸಿಕ್ಕಿದೆ. ತಮ್ಮ ಪ್ರೇಯಸಿ ಜಸ್ಲೀನ್ ಬದಲಾದ ರೂಪವನ್ನ ಅನೂಪ್ ಸೀಕ್ರೆಟ್ ರೂಮ್ ನಲ್ಲಿ ಕಣ್ಣಾರೆ ಕಂಡಿದ್ದಾರೆ.
65'ರ ಹಿರಿ ಜೀವಕ್ಕೆ 28 ವರ್ಷದ ಪ್ರೇಯಸಿ, 'ವಿಚಿತ್ರ ಜೋಡಿ' ಕಂಡು ವೀಕ್ಷಕರು ಕಕ್ಕಾಬಿಕ್ಕಿ.!
ಜಸ್ಲೀನ್ ವರ್ತನೆ ಬಗ್ಗೆ ಸ್ಪರ್ಧಿಗಳಿಗೆ ಬೇಸರ
''ಒಬ್ಬರಿಗೆ ಮಾತ್ರ ಎಲಿಮಿನೇಟ್ ಆಗುವ ಅವಕಾಶ ಇದ್ದಾಗ, ಬಾಯ್ಮಾತಿಗಾದರೂ ನಾನು ಹೋಗುವೆ ಅಂತ ಜಸ್ಲೀನ್ ಹೇಳಲಿಲ್ಲ. ಹಾಗೇ, ಅನೂಪ್ ಗಾಗಿ ಬಟ್ಟೆ ಹಾಗೂ ಮೇಕಪ್ ನೂ ಜಸ್ಲೀನ್ ಬಿಟ್ಟುಕೊಡಲಿಲ್ಲ. ಜಸ್ಲೀನ್ ರದ್ದು ನಿಜವಾದ ಪ್ರೀತಿ ಅಲ್ಲ'' ಎಂಬ ಗುಸುಗುಸು ಇತರೆ ಸ್ಪರ್ಧಿಗಳಲ್ಲಿ ಶುರುವಾಗಿದೆ.
ಮುಂದೇನಾಗುತ್ತೋ.?
ಅದಾಗಲೇ ಒಂದು ಬಾರಿ 'ಬಿಗ್ ಬಾಸ್' ಮನೆಯಲ್ಲೇ ಅನೂಪ್ ಹಾಗೂ ಜಸ್ಲೀನ್ ನಡುವೆ ಬಿರುಕು ಮೂಡಿತ್ತು. ಇದೀಗ ಸೀಕ್ರೆಟ್ ರೂಮ್ ನಲ್ಲಿರುವ ಅನೂಪ್, ಜಸ್ಲೀನ್ ನಿಜ ರೂಪವನ್ನ ನೋಡಿ 'ಕಠಿಣ ನಿರ್ಧಾರ' ಕೈಗೊಳ್ಳುತ್ತಾರಾ.? ನೋಡಬೇಕು.