twitter
    For Quick Alerts
    ALLOW NOTIFICATIONS  
    For Daily Alerts

    ಔಟ್ ಆಗದ ಅನೂಪ್ ಜಲೋಟ: ಸೀಕ್ರೆಟ್ ರೂಮ್ ಸೇರಿದ 'ಭಜನೆಗಳ ಸಾಮ್ರಾಟ'.!

    |

    'ವಿಚಿತ್ರ' ಪ್ರೇಮ ಕಥೆಯನ್ನು ಹೊತ್ತು 'ಬಿಗ್ ಬಾಸ್' ಮನೆಗೆ ಕಾಲಿಟ್ಟ 65 ವರ್ಷದ ಅನೂಪ್ ಜಲೋಟ ಹಾಗೂ 28 ವರ್ಷದ ಜಸ್ಲೀನ್ ಮಥಾರು ಲವ್ ಸ್ಟೋರಿಗೆ 'ಬಿಗ್ ಬಾಸ್' ಮನೆಯಲ್ಲೇ ಒಂದು ಗತಿ ಕಾಣುವ ಸಾಧ್ಯತೆ ಹೆಚ್ಚಾಗಿದೆ.

    ಅದಾಗಲೇ, ಒಮ್ಮೆ ನಾಮಿನೇಷನ್ ಟಾಸ್ಕ್ ನಲ್ಲಿ ಅನೂಪ್ ಹಾಗೂ ಜಸ್ಲೀನ್ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿತ್ತು. ಬಟ್ಟೆ ಹಾಗೂ ಮೇಕಪ್ ಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟ ಜಸ್ಲೀನ್ ವಿರುದ್ಧ ಅನೂಪ್ ಬೇಸರ ಮಾಡಿಕೊಂಡರು. 'ಇನ್ಮುಂದೆ ಈ ಸಂಬಂಧ ಮುಂದುವರೆಸುವುದಿಲ್ಲ' ಎಂದು ಅನೂಪ್ ಎಲ್ಲರ ಮುಂದೆ ಹೇಳಿದ್ದರು.

    'ಬಿಗ್ ಬಾಸ್' ಮನೆಯಲ್ಲಿ ಮುರಿದು ಬಿತ್ತು 'ವಿಚಿತ್ರ ಜೋಡಿ'ಯ ಪ್ರೇಮ.!'ಬಿಗ್ ಬಾಸ್' ಮನೆಯಲ್ಲಿ ಮುರಿದು ಬಿತ್ತು 'ವಿಚಿತ್ರ ಜೋಡಿ'ಯ ಪ್ರೇಮ.!

    ಪದೇ ಪದೇ ಜಸ್ಲೀನ್ ಕ್ಷಮೆ ಕೇಳಿದ್ಮೇಲೆ, ಅನೂಪ್ ಕೋಪ ಕಮ್ಮಿ ಆಯಿತು. ಅನೂಪ್ ಹಾಗೂ ಜಸ್ಲೀನ್ ಪ್ಯಾಚಪ್ ಆದರು. ಈ ಜೋಡಿಗೆ 'ಬಿಗ್ ಬಾಸ್' ಮನೆಯಲ್ಲಿಯೇ ರೋಮ್ಯಾಂಟಿಕ್ ಡೇಟ್ ಕೂಡ ಅರೇಂಜ್ ಮಾಡಲಾಯಿತು. ಇದೀಗ ನೋಡಿದ್ರೆ, ಅನೂಪ್ ರನ್ನ 'ಬಿಗ್ ಬಾಸ್' ಸೀಕ್ರೆಟ್ ರೂಮ್ ಗೆ ಕಳುಹಿಸಿದ್ದಾರೆ. ಮುಂದೆ ಓದಿರಿ...

    ಎಲಿಮಿನೇಷನ್ ವೇಳೆ ನಡೆದಿದ್ದೇನು.?

    ಎಲಿಮಿನೇಷನ್ ವೇಳೆ ನಡೆದಿದ್ದೇನು.?

    ಕಳೆದ ವಾರ ಅನೂಪ್-ಜಸ್ಲೀನ್, ಕರಣ್ವೀರ್ ಬೋಹ್ರಾ, ಸೃಷ್ಟಿ ಹಾಗೂ ಶ್ರೀಶಾಂತ್ ಡೇಂಜರ್ ಝೋನ್ ನಲ್ಲಿದ್ದರು. ಈ ನಾಲ್ವರ ಪೈಕಿ ವೀಕ್ಷಕರಿಂದ ಕಡಿಮೆ ಎಸ್.ಎಂ.ಎಸ್ ಪಡೆದುಕೊಂಡವರು ಅನೂಪ್-ಜಸ್ಲೀನ್ ಜೋಡಿ ಎಂದು ಸಲ್ಮಾನ್ ಖಾನ್ ಘೋಷಿಸಿದರು. ಅಲ್ಲದೇ, ಅನೂಪ್-ಜಸ್ಲೀನ್ ಪೈಕಿ ಒಬ್ಬರು ಮಾತ್ರ ಹೊರಬರಲು ಸಲ್ಮಾನ್ ಸೂಚಿಸಿದರು.

    'ಬಿಗ್ ಬಾಸ್' ಮನೆಯಲ್ಲಿ ಅನೂಪ್-ಜಸ್ಲೀನ್ ರೋಮ್ಯಾಂಟಿಕ್ ಡೇಟ್.!'ಬಿಗ್ ಬಾಸ್' ಮನೆಯಲ್ಲಿ ಅನೂಪ್-ಜಸ್ಲೀನ್ ರೋಮ್ಯಾಂಟಿಕ್ ಡೇಟ್.!

    ಔಟ್ ಆಗಲು ಮುಂದಾದ ಅನೂಪ್

    ಔಟ್ ಆಗಲು ಮುಂದಾದ ಅನೂಪ್

    ''ನಾನೇ ಹೊರಗೆ ಬರುವೆ. ಜಸ್ಲೀನ್ ಆಟ ಮುಂದುವರೆಸಲಿ'' ಎಂದರು ಅನೂಪ್. ಎಲಿಮಿನೇಷನ್ ಪ್ರಕ್ರಿಯೆಯಂತೆ 'ಬಿಗ್ ಬಾಸ್' ಮನೆಯಿಂದ ಹೊರಬಂದ ಅನೂಪ್ ನೇರವಾಗಿ ತೆರಳಿದ್ದು ಸೀಕ್ರೆಟ್ ರೂಮ್ ಗೆ.

    'ಬಿಗ್ ಬಾಸ್' ಮನೆಯಲ್ಲಿ ಅನೂಪ್-ಜಸ್ಲೀನ್ ಬ್ರೇಕಪ್ ಆಗಿಲ್ಲ.!'ಬಿಗ್ ಬಾಸ್' ಮನೆಯಲ್ಲಿ ಅನೂಪ್-ಜಸ್ಲೀನ್ ಬ್ರೇಕಪ್ ಆಗಿಲ್ಲ.!

    ಸೀಕ್ರೆಟ್ ರೂಮ್ ನಲ್ಲಿ ಶಾಕ್ ಮೇಲೆ ಶಾಕ್

    ಸೀಕ್ರೆಟ್ ರೂಮ್ ನಲ್ಲಿ ಶಾಕ್ ಮೇಲೆ ಶಾಕ್

    ಸೀಕ್ರೆಟ್ ರೂಮ್ ಗೆ ತೆರಳಿದ ಅನೂಪ್ ಜಲೋಟಗೆ ಶಾಕ್ ಮೇಲೆ ಶಾಕ್ ಸಿಕ್ಕಿದೆ. ತಮ್ಮ ಪ್ರೇಯಸಿ ಜಸ್ಲೀನ್ ಬದಲಾದ ರೂಪವನ್ನ ಅನೂಪ್ ಸೀಕ್ರೆಟ್ ರೂಮ್ ನಲ್ಲಿ ಕಣ್ಣಾರೆ ಕಂಡಿದ್ದಾರೆ.

    65'ರ ಹಿರಿ ಜೀವಕ್ಕೆ 28 ವರ್ಷದ ಪ್ರೇಯಸಿ, 'ವಿಚಿತ್ರ ಜೋಡಿ' ಕಂಡು ವೀಕ್ಷಕರು ಕಕ್ಕಾಬಿಕ್ಕಿ.!65'ರ ಹಿರಿ ಜೀವಕ್ಕೆ 28 ವರ್ಷದ ಪ್ರೇಯಸಿ, 'ವಿಚಿತ್ರ ಜೋಡಿ' ಕಂಡು ವೀಕ್ಷಕರು ಕಕ್ಕಾಬಿಕ್ಕಿ.!

    ಜಸ್ಲೀನ್ ವರ್ತನೆ ಬಗ್ಗೆ ಸ್ಪರ್ಧಿಗಳಿಗೆ ಬೇಸರ

    ಜಸ್ಲೀನ್ ವರ್ತನೆ ಬಗ್ಗೆ ಸ್ಪರ್ಧಿಗಳಿಗೆ ಬೇಸರ

    ''ಒಬ್ಬರಿಗೆ ಮಾತ್ರ ಎಲಿಮಿನೇಟ್ ಆಗುವ ಅವಕಾಶ ಇದ್ದಾಗ, ಬಾಯ್ಮಾತಿಗಾದರೂ ನಾನು ಹೋಗುವೆ ಅಂತ ಜಸ್ಲೀನ್ ಹೇಳಲಿಲ್ಲ. ಹಾಗೇ, ಅನೂಪ್ ಗಾಗಿ ಬಟ್ಟೆ ಹಾಗೂ ಮೇಕಪ್ ನೂ ಜಸ್ಲೀನ್ ಬಿಟ್ಟುಕೊಡಲಿಲ್ಲ. ಜಸ್ಲೀನ್ ರದ್ದು ನಿಜವಾದ ಪ್ರೀತಿ ಅಲ್ಲ'' ಎಂಬ ಗುಸುಗುಸು ಇತರೆ ಸ್ಪರ್ಧಿಗಳಲ್ಲಿ ಶುರುವಾಗಿದೆ.

    ಮುಂದೇನಾಗುತ್ತೋ.?

    ಮುಂದೇನಾಗುತ್ತೋ.?

    ಅದಾಗಲೇ ಒಂದು ಬಾರಿ 'ಬಿಗ್ ಬಾಸ್' ಮನೆಯಲ್ಲೇ ಅನೂಪ್ ಹಾಗೂ ಜಸ್ಲೀನ್ ನಡುವೆ ಬಿರುಕು ಮೂಡಿತ್ತು. ಇದೀಗ ಸೀಕ್ರೆಟ್ ರೂಮ್ ನಲ್ಲಿರುವ ಅನೂಪ್, ಜಸ್ಲೀನ್ ನಿಜ ರೂಪವನ್ನ ನೋಡಿ 'ಕಠಿಣ ನಿರ್ಧಾರ' ಕೈಗೊಳ್ಳುತ್ತಾರಾ.? ನೋಡಬೇಕು.

    English summary
    Bigg Boss 12: Anup Jalota has been sent to secret room.
    Monday, October 8, 2018, 12:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X