ವಿವಾದಾತ್ಮಕ ಸ್ಪರ್ಧಿ ಅನೂಪ್ ಗೆ 'ಬಿಗ್ ಬಾಸ್' ಕೊಡುತ್ತಿರುವ ಸಂಭಾವನೆ ಎಷ್ಟು?
'ಬಿಗ್ ಬಾಸ್-12' ರಿಯಾಲಿಟಿ ಶೋ ಶುರುವಾಗಿ ಮೂರು ವಾರಗಳು ಉರುಳಿವೆ. ಈ ಬಾರಿ 'ಬಿಗ್ ಬಾಸ್' ಮನೆಗೆ ಕಾಲಿಟ್ಟಿರುವ ಸ್ಪರ್ಧಿಗಳ ಪೈಕಿ ಸ್ವಲ್ಪ ಇಂಟ್ರೆಸ್ಟಿಂಗ್ ಅಂತ ಅನಿಸೋದು ಅನೂಪ್ ಜಲೋಟ ಹಾಗೂ ಜಸ್ಲೀನ್ ಮಥಾರು ಜೋಡಿ.
65 ವರ್ಷದ ಅನೂಪ್ ಜಲೋಟ ಹಾಗೂ 28 ವರ್ಷದ ಜಸ್ಲೀನ್ ನಡುವೆ ಪ್ರೀತಿ ಇದೆ ಎಂಬ ಸಂಗತಿ ಬಟಾ ಬಯಲಾಗಿದ್ದೇ 'ಬಿಗ್ ಬಾಸ್' ವೇದಿಕೆ ಮೇಲೆ.! 'ಭಜನೆಗಳ ಸಾಮ್ರಾಟ' ಅಂತ ಕರೆಯಿಸಿಕೊಳ್ಳುತ್ತಿದ್ದ ಅನೂಪ್ ಜಲೋಟ ಯದ್ವಾತದ್ವಾ ಟ್ರೋಲ್ ಆಗಿದ್ದು 'ಬಿಗ್ ಬಾಸ್' ಮನೆಗೆ ಕಾಲಿಟ್ಟ ಮೇಲೆಯೇ.!
ಅಷ್ಟಕ್ಕೂ, ಅನೂಪ್ ಹಾಗೂ ಜಸ್ಲೀನ್ ನಡುವೆ ನಿಜವಾಗಿಯೂ ಲವ್, ರೋಮ್ಯಾನ್ಸ್ ಇದ್ಯಾ.? ಅಥವಾ ಇದೆಲ್ಲ 'ಬಿಗ್ ಬಾಸ್' ಸೃಷ್ಟಿಸಿರುವ ಕಥೆಯೇ.? ಎಂಬ ಚರ್ಚೆ ಇದೀಗ ಶುರುವಾಗಿದೆ.
ಅಲ್ಲದೇ, ಅನೂಪ್-ಜಸ್ಲೀನ್ ಲವ್ ಸ್ಟೋರಿ ಸ್ಕ್ರಿಪ್ಟೆಡ್ ಆಗಿರುವ ಕಾರಣಕ್ಕೆ ಅವರಿಗೆ ಭಾರಿ ಸಂಭಾವನೆ ನೀಡಲಾಗುತ್ತಿದ್ಯಂತೆ. ಮುಂದೆ ಓದಿರಿ...

ಅನೂಪ್ ಗೆ ಸಿಗುವ ಸಂಭಾವನೆ ಎಷ್ಟು.?
ವರದಿಗಳ ಪ್ರಕಾರ, ಅನೂಪ್ ಜಲೋಟ ಅವರಿಗೆ ವಾರಕ್ಕೆ 'ಬಿಗ್ ಬಾಸ್' 40 ಲಕ್ಷ ರೂಪಾಯಿ ಸಂಭಾವನೆ ಫಿಕ್ಸ್ ಮಾಡಿದ್ದಾರಂತೆ. ಇಷ್ಟೊಂದು ದುಡ್ಡು ಕೊಡುತ್ತಿರುವುದಕ್ಕೆ 'ಬಿಗ್ ಬಾಸ್' ಮನೆಯಲ್ಲಿ ಪ್ರೇಮ 'ಕಥೆ' ನಡೆಯುತ್ತಿದೆ ಅಂತ ಜನ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ.

ಮೊನ್ನೆ ಬ್ರೇಕಪ್ ಡ್ರಾಮಾ.!
ಮೊನ್ನೆಯಷ್ಟೇ ನಡೆದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಅನೂಪ್ ಜಲೋಟ ಬೇಸರಗೊಂಡು ಜಸ್ಲೀನ್ ನಿಂದ ದೂರ ಇರುವುದಾಗಿ ಘೋಷಿಸಿದರು. ಇದು ಮನಸ್ಸಿನಿಂದ ಮಾಡಿದ್ದೋ.? ಅಥವಾ 'ಬಿಗ್ ಬಾಸ್' ಸ್ಕ್ರಿಪ್ಟ್ ನಲ್ಲಿ ಇರುವುದೋ.? ಎಂಬ ಅನುಮಾನ ವೀಕ್ಷಕರಿಗೆ ಕಾಡುತ್ತಿದೆ.

ಸದ್ಯದಲ್ಲೇ ಅನೂಪ್ ಔಟ್ ಆಗಬಹುದು.!
ಕೆಲ ವರದಿಗಳ ಪ್ರಕಾರ, ಅಕ್ಟೋಬರ್ 27 ರಂದು ಅನೂಪ್ ಒಂದು ಕಾನ್ಸರ್ಟ್ ನಡೆಸಿಕೊಡಬೇಕಾಗಿದೆ. ಹೀಗಾಗಿ, ಅಷ್ಟರೊಳಗೆ ಅನೂಪ್ 'ಬಿಗ್ ಬಾಸ್' ಕಾರ್ಯಕ್ರಮದಿಂದ ಎಲಿಮಿನೇಟ್ ಆಗ್ತಾರೆ ಎನ್ನಲಾಗಿದೆ.

ಬೇರೆಯವರ ಸಂಭಾವನೆ ಎಷ್ಟು.?
ವಾರಕ್ಕೆ ಕರಣ್ ವೀರ್ ಬೋಹ್ರಾ ಹಾಗೂ ನೇಹಾ ಗೆ ತಲಾ 20 ಲಕ್ಷ ಹಾಗೂ ದೀಪಿಕಾಗೆ 15 ಲಕ್ಷವನ್ನ 'ಬಿಗ್ ಬಾಸ್' ನಿಗದಿ ಮಾಡಿದ್ದಾರಂತೆ. ಇನ್ನೂ ಶ್ರೀಶಾಂತ್ ಗೆ ಮಾತ್ರ ವಾರಕ್ಕೆ ಕೇವಲ 5 ಲಕ್ಷ ಸಿಗುತ್ತಿದ್ಯಂತೆ.


Click it and Unblock the Notifications











