BBK 12: ದೊಡ್ಮನೆ ಒಳಗಿನ ನಾಗವಲ್ಲಿ.. ದೆವ್ವ ಓಡಿಸೋಕೆ ಬಂದ್ರು ಸುದೀಪ್ ಆಚಾರ್ಯರು!
3 ದಿನಗಳ ಹಿಂದೆ ಬಿಗ್‌ಬಾಸ್ ಮನೆಯಲ್ಲಿ ನಿಗೂಢವಾದ ಶಬ್ಧ ಬಂದಿದ್ದು ಪ್ರೋಮೊದಲ್ಲಿ ಕೇಳಿಸಲಾಗಿತ್ತು. ದೊಡ್ಮನೆಯಲ್ಲಿ ದೆವ್ವ ಭೂತ ಇದ್ಯಾ? ಎನ್ನುವಂತೆ ಬಿಂಬಿಸಲಾಗಿತ್ತು. ಬಳಿಕ ಆ ಶಬ್ಧದ ಹಿಂದೆ ಯಾರ ಕೈವಾಡ ಇದೆ ಎನ್ನುವುದು ರಿವೀಲ್ ಆಗಿತ್ತು. ಅಶ್ವಿನಿ ಗೌಡ ಹಾಗೂ ಜಾಹ್ನವಿ ಕಳ್ಳಾಟ ಬಯಲಾಗಿತ್ತು.
ಸ್ಪರ್ಧಿಗಳೆಲ್ಲಾ ಮಂಚದ ಮೇಲೆ ಮಲಗಿದ್ದಾಗ ದಿಢೀರನೆ ಗೆಜ್ಜೆ ಶಬ್ಧ ಬಂದಿದ್ದು ಕೆಲವರು ಗಾಬರಿ ಆಗಿದ್ದರು. ನಮಗೆ ಭಯವಾಗುತ್ತಿದೆ ಬಾಗಿಲು ಮುಚ್ಚಿ ಎಂದು ಜಾಹ್ನವಿ ಕೇಳಿಕೊಂಡಿದ್ದರು. "ರಾತ್ರಿ ಶೌಚಾಲಯದಲ್ಲಿ ರಕ್ಷಿತಾ ಆಪ್ತಮಿತ್ರ ಚಿತ್ರದ ರಾರಾ ಸಾಂಗ್ ಹಾಡ್ತಾ ಡ್ಯಾನ್ಸ್ ಮಾಡುತ್ತಿದ್ದಳು" ಅಂತೆಲ್ಲಾ ಇಬ್ಬರೂ ಸೇರಿ ಸುಳ್ಳು ಸುದ್ದಿ ಹರಡಿದ್ದರು. ನಾನು ಆ ರೀತಿ ಮಾಡಲಿಲ್ಲ, ನನಗೆ ಆ ಹಾಡು ಗೊತ್ತಿಲ್ಲ. ನನ್ನ ಮೇಲೆ ಭೂತ ಬರುತ್ತಾ, ಜನ ತಪ್ಪು ತಿಳಿದುಕೊಳ್ಳಲ್ವಾ ಅಂತೆಲ್ಲಾ ರಕ್ಷಿತಾ ಮನೆ ಮಂದಿ ಮುಂದೆ ಅತ್ತಿದ್ದರು.

ಅಶ್ವಿನಿ ಗೆಜ್ಜೆ ಸದ್ದು ಮಾಡಿ ಅದನ್ನು ರಕ್ಷಿತಾ ಮೇಲೆ ಹಾಕಲು ಯತ್ನಿಸಿದ್ದು ಗೊತ್ತಾಗಿತ್ತು. ಇದೆಲ್ಲದರ ಬಗ್ಗೆ ವಾರಂತ್ಯದ ಪಂಚಾಯ್ತಿಯಲ್ಲಿ ಸುದೀಪ್ ಮಾತನಾಡಲು ಬರ್ತಿದ್ದಾರೆ. ಬಿಗ್‌ಬಾಸ್ 12 ಮೊದಲ ಗ್ರ್ಯಾಂಡ್ ಫಿನಾಲೆ ಪ್ರೋಮೊ ಬಂದಿದೆ. ಬಿಗ್‌ಬಾಸ್ ಮನೆಯಲ್ಲಿ ದೆವ್ವ ಯಾರು? ದೆವ್ವ ಹಿಡಿಸಿದ್ದು ಯಾರು ? ಹಿಡಿದಿರೋ ದೆವ್ವ ಬಿಡಿಸಲು ಬರ್ತಿದ್ದಾರೆ ಕಿಚ್ಚ ಸುದೀಪ ಎಂದು ಪ್ರೋಮೊ ರಿಲೀಸ್ ಮಾಡಿದ್ದಾರೆ.
ಹಾಸಿಗೆ ಮೇಲೆ ಮಲಗಿ ಅಶ್ವಿನಿ ಹಾಗೂ ಜಾಹ್ನವಿ ಗೆಜ್ಜೆ ಸದ್ದು ಮಾಡಿ ಅದನ್ನು ರಕ್ಷಿತಾ ಮೇಲೆ ಹಾಕೋಣ ಎಂದು ಗುಸುಗುಸು ಪಿಸು ಪಿಸು ಮಾತನಾಡಿದನ್ನು ತೋರಿಸಲಾಗಿದೆ. ಗ್ರ್ಯಾಂಡ್ ಫಿನಾಲೆಗೂ ಮುನ್ನ ನಡೆಯುವ ಕಿಚ್ಚನ ಪಂಚಾಯ್ತು ಕುತೂಹಲ ಮೂಡಿಸಿದೆ. ಮುಖ್ಯವಾಗಿ ಅಶ್ವಿನಿ ಗೌಡ ಹಾಗೂ ಜಾಹ್ನವಿ ಇಬ್ಬರೂ ರಕ್ಷಿತಾಳನ್ನು ಟಾರ್ಗೆಟ್ ಮಾಡುತ್ತಿರುವ ಬಗ್ಗೆ ಏನು ಮಾತನಾಡ್ತಾರೆ ಎಂದು ನೋಡಲು ವೀಕ್ಷಕರು ಕಾಯುತ್ತಿದ್ದಾರೆ.
ಅಶ್ವಿನಿ ಗೌಡ ಹಾಗೂ ಜಾಹ್ನವಿ ನಡೆ ನುಡಿ ಬಗ್ಗೆ ಇತರೆ ಸ್ಪರ್ಧಿಗಳು ಮಾತ್ರವಲ್ಲ ವೀಕ್ಷಕರ ಬೇಸರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಚಿಕ್ಕ ಹುಡುಗಿ ರಕ್ಷಿತಾ ಮೇಲೆ ಬಹಳ ಪ್ರಬುದ್ಧರು ಎನ್ನುವಂತೆ ಆಡುವ ಇಬ್ಬರು ಯಾಕೆ ಮುಗಿಬೀಳ್ತಾರೆ ಎಂದು ಪ್ರಶ್ನಿಸುತ್ತಿದ್ದಾರೆ. ಗಿಲ್ಲಿ ನಟ ಅಂತೂ ನೇರವಾಗಿಯೇ ಇಬ್ಬರಿಗೂ ತಿರುಗೇಟು ಕೊಡುತ್ತಿದ್ದಾರೆ. ರಕ್ಷಿತಾ ಕೂಡ ಯಾವುದಕ್ಕೂ ಜಗ್ಗದೇ ಆಡುತ್ತಿದ್ದಾರೆ. ಆಕೆ ಮೇಲೆ ಅಶ್ವಿನಿ ಗೌಡ ಹಾಗೂ ಜಾಹ್ನವಿ ಮುಗಿಬಿದ್ದು ಸಣ್ಣವರು ಎನಿಸಿಕೊಳ್ತಿದ್ದಾರೆ.
ಸುದ್ದಿ ವಾಹಿನಿ ನಿರೂಪಕಿ ವಿದ್ಯಾ ಮಲ್ನಾಡ್ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಮಾಡಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಶ್ವಿನಿ ಗೌಡ ಹಾಗೂ ಜಾಹ್ನವಿ ವರ್ತನೆ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. ಆ ವೀಡಿಯೋ ಕೂಡ ವೈರಲ್ ಆಗ್ತಿದೆ. ಇನ್ನು ಸೋಶಿಯಲ್ ಮೀಡಿಯಾ ತುಂಬೆಲ್ಲಾ ಇದೇ ವಿಚಾರ ಚರ್ಚೆ ಆಗುತ್ತಿದೆ.
ರಕ್ಷಿತಾ ನಡೆ, ನುಡಿಯನ್ನು ಇಬ್ಬರು ಇಮಿಟೇಟ್ ಮಾಡಿ ಹಂಗಿಸುವುದು, ಆಕೆಯನ್ನು ಸ್ಲಮ್ ಎಂದು ಅಶ್ವಿನಿ ಕರೆದಿರುವುದು ಭಾರೀ ಚರ್ಚೆ ಹುಟ್ಟಾಕ್ಕಿದೆ. ಮನೆಯಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಲು ವೀಕ್ಷಕರ ಗಮನ ಸೆಳೆಯಲು ಇಬ್ಬರೂ ಈ ರೀತಿ ಆಟ ಆಡುತ್ತಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದೆಲ್ಲದಕ್ಕೂ ಶೀಘ್ರದಲ್ಲೇ ಬ್ರೇಕ್ ಬೀಳುತ್ತದೆ ಎಂದು ಭಾವಿಸುತ್ತಿದ್ದಾರೆ. ಸದ್ಯ ರಿಲೀಸ್ ಆಗಿರುವ ಹೊಸ ಪ್ರೋಮೊ ಕಾಮೆಂಟ್ ಬಾಕ್ಸ್‌ನಲ್ಲಿ ಕೂಡ ಅಶ್ವಿನಿ, ಜಾಹ್ನವಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.


Click it and Unblock the Notifications











