ಒಂದೇ ದಿನದಲ್ಲಿ ಎಲ್ಲವೂ ಉಲ್ಟಾ-ಪಲ್ಟಾ: ವೀಕ್ಷಕರ ಮನಗೆದ್ದ ಜಸ್ಲೀನ್.!
ಕೇವಲ 24 ಗಂಟೆಗಳ ಹಿಂದಕ್ಕೆ ಹೋದರೆ... 28 ರ ಹರೆಯದ ಜಸ್ಲೀನ್ ಮಥಾರು ಕಂಡ್ರೆ 'ಬಿಗ್ ಬಾಸ್-12' ವೀಕ್ಷಕರು ಮೂತಿ ತಿರುಗಿಸುತ್ತಿದ್ದರು. ಜಸ್ಲೀನ್-ಅನೂಪ್ 'ವಿಚಿತ್ರ' ಪ್ರೇಮ ಕಥೆ ಕಂಡು ವೀಕ್ಷಕರು ಅಕ್ಷರಶಃ ಸುಸ್ತಾಗಿದ್ದರು. ಆದ್ರೀಗ, ವೀಕ್ಷಕರ ಮನದಲ್ಲಿ ಅದೇ ಅಭಿಪ್ರಾಯ ಇಲ್ಲ.!
'ಬಿಗ್ ಬಾಸ್-12' ವೀಕ್ಷಕರಿಗೆ ಒಂದೇ ದಿನಕ್ಕೆ ಜಸ್ಲೀನ್ ಮಥಾರು ಬಗ್ಗೆ ಒಳ್ಳೆ ಅಭಿಪ್ರಾಯ ಮೂಡಿದೆ. ಅದಕ್ಕೆ ಸಾಕ್ಷಿ ನಿನ್ನೆ ಪ್ರಸಾರವಾದ ಸಂಚಿಕೆ.
'ಬಿಗ್ ಬಾಸ್-12' ಕಾರ್ಯಕ್ರಮದ ಮೊದಲ ಚಟುವಟಿಕೆಯಲ್ಲಿ ಎಲ್ಲರ ಮುಂದೆ 65 ವರ್ಷದ ಅನೂಪ್ ಜಲೋಟ ಜೊತೆಗಿನ ತಮ್ಮ ಸಂಬಂಧದ ಬಗ್ಗೆ ಜಸ್ಲೀನ್ ಮಾತನಾಡಿದ ರೀತಿಗೆ ವೀಕ್ಷಕರು ಕ್ಲೀನ್ ಬೌಲ್ಡ್ ಆಗಿದ್ದಾರೆ. ಎದುರಾದ ಪ್ರಶ್ನೆಗಳನ್ನು ಜಸ್ಲೀನ್ ಹ್ಯಾಂಡಲ್ ಮಾಡಿದ ರೀತಿಗೆ ವಿಶೇಷ ಅತಿಥಿಗಳಾದ ಹೀನಾ ಖಾನ್ ಹಾಗೂ ಹಿತೇನ್ ತೇಜ್ವಾನಿ ಕೂಡ ಇಂಪ್ರೆಸ್ ಆದರು.
ಒಂದು ದಿನದ ಹಿಂದೆಯಷ್ಟೇ ಜಸ್ಲೀನ್ ಮಥಾರು ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಈಗ ಅದೇ ಜಸ್ಲೀನ್ ರನ್ನ ವೀಕ್ಷಕರೇ ಹೊಗಳುತ್ತಿದ್ದಾರೆ. ಬೇಕಾದ್ರೆ, ನೀವೇ ಕೆಲ ಟ್ವೀಟ್ ಗಳನ್ನ ನೋಡಿ....

'ಬಿಗ್ ಬಾಸ್' ಶೋನಲ್ಲಿ ಜಸ್ಲೀನ್ ಹೇಳಿದ್ದೇನು.?
''ನಾವು ಜೋಡಿಯಾಗಿ 'ಬಿಗ್ ಬಾಸ್' ಮನೆಗೆ ಬಂದಿದ್ದೀವಿ ನಿಜ. ಹಾಗಂದ ಮಾತ್ರಕ್ಕೆ ನಾವು ಯಾವಾಗಲೂ ಒಟ್ಟಿಗೆ ಇರಬೇಕು, ಒಟ್ಟಿಗೆ ಕೂರಬೇಕು, ಕೈಕೈ ಹಿಡಿದುಕೊಳ್ಳಬೇಕು ಅಂತೇನಿಲ್ಲ. ನಮ್ಮಿಬ್ಬರ ಮಧ್ಯೆ ಇರುವ ಸಂಬಂಧ ನಮಗೆ ಬಿಟ್ಟಿದ್ದು. ಇದು ಡೇಟಿಂಗ್ ಶೋ ಅಲ್ಲ. ಇದು ಮಕ್ಕಳ ಸಂಬಂಧ ಅಲ್ಲ. ಅದಕ್ಕೂ ಮೀರಿದ್ದು'' - ಎಂದು ಜಸ್ಲೀನ್ ಹೇಳಿದರು.
ಜಸ್ಲೀನ್ ನ ಹೊಗಳುತ್ತಿರುವ ವೀಕ್ಷಕರು
''ಜಸ್ಲೀನ್ ಮಥಾರು ತುಂಬಾ ಮೆಚ್ಯೂರ್ ಆಗಿರುವ ಯುವತಿ. ಯಾವುದೇ ಸನ್ನಿವೇಶವನ್ನು ಎದುರಿಸುವ ಶಕ್ತಿ ಹಾಗೂ ಜಾಣ್ಮೆ ಆಕೆಯಲ್ಲಿ ಇದೆ. ಅನೂಪ್ ಹಾಗೂ ಜಸ್ಲೀನ್ ನಡುವೆ ಉತ್ತಮ ಅನುಬಂಧ ಹಾಗೂ ಹೊಂದಾಣಿಕೆ ಇರುವ ಹಾಗೆ ಕಾಣುತ್ತದೆ'' ಅಂತ ವೀಕ್ಷಕರೊಬ್ಬರು ಟ್ವೀಟ್ ಮಾಡಿದ್ದಾರೆ.
ಇಷ್ಟವಾಗುತ್ತಿರುವ ಜಸ್ಲೀನ್
''ಜಸ್ಲೀನ್ ಮಥಾರು ಯಾರಿಗೂ ಹೆದರುವ ಹಾಗೆ ಕಾಣುತ್ತಿಲ್ಲ. ಆಕೆ ಈಗೀಗ ಇಷ್ಟವಾಗುತ್ತಿದ್ದಾಳೆ. ಆದ್ರೆ, ಇಷ್ಟು ಬೇಗ ಒಬ್ಬರ ಬಗ್ಗೆ ತೀರ್ಮಾನಕ್ಕೆ ಬರಲು ಆಗಲ್ಲ'' ಅಂತಿದ್ದಾರೆ ವೀಕ್ಷಕರು.
ನ್ಯಾಯ ಇದೆ
''ಜಸ್ಲೀನ್ ಆಡಿರುವ ಮಾತುಗಳಲ್ಲಿ ನ್ಯಾಯ ಇದೆ'' ಅಂತ ವೀಕ್ಷಕರು ಟ್ವೀಟ್ ಮಾಡಿದ್ದಾರೆ.

ಬ್ಯೂಟಿ ವಿತ್ ಬ್ರೇನ್
''ಜಸ್ಲೀನ್ ಮಥಾರು ಬ್ಯೂಟಿ ವಿತ್ ಬ್ರೇನ್. ನಾನು ಇವರನ್ನೇ ಸಪೋರ್ಟ್ ಮಾಡುವೆ'' ಎನ್ನುತ್ತಿದ್ದಾರೆ ವೀಕ್ಷಕರು.

ನೇರವಾಗಿ ಮಾತಾಡುವ ಹುಡುಗಿ
''ನೇರವಾಗಿ ಮಾತಾಡುವ ಹುಡುಗಿ ಜಸ್ಲೀನ್ ಕಂಡ್ರೆ ನನಗೆ ಇಷ್ಟ. 'ಬಿಗ್ ಬಾಸ್' ಪ್ರೀಮಿಯರ್ ನಲ್ಲಿಯೇ ಆಕೆಯ ಇಮೇಜ್ ಡ್ಯಾಮೇಜ್ ಆಯ್ತು. ಆದರೂ, ಈಕೆ ಶೋನಲ್ಲಿ ತುಂಬಾ ದಿನ ಇರುತ್ತಾರೆ'' ಎಂದು ವೀಕ್ಷಕರು ಭಾವಿಸಿದ್ದಾರೆ.


Click it and Unblock the Notifications











