ಶಾಕಿಂಗ್ ವಿಡಿಯೋ: ಎಲ್ಲರಿಗೂ ಕಾಗೆ ಹಾರಿಸಿ 'ಬಿಗ್ ಬಾಸ್' ಮನೆಗೆ ಬಂದ್ರಾ ಜಸ್ಲೀನ್.?

ಭಾರತದ ಅತ್ಯಂತ ವಿವಾದಾತ್ಮಕ ರಿಯಾಲಿಟಿ ಶೋ 'ಬಿಗ್ ಬಾಸ್-12' ಈ ಬಾರಿಯೂ ಹಲವು ವಿವಾದಗಳಿಂದ ಸದ್ದು-ಸುದ್ದಿ ಮಾಡುತ್ತಿದೆ. 'ಬಿಗ್ ಬಾಸ್-12' ಕಾರ್ಯಕ್ರಮ ಶುರುವಾಗಿ ಇನ್ನೂ ಒಂದು ವಾರ ಕಳೆದಿಲ್ಲ. ಅಷ್ಟು ಬೇಗ ಕಾರ್ಯಕ್ರಮದ ಸ್ಪರ್ಧಿಗಳ ಬಗ್ಗೆ ವೀಕ್ಷಕರಲ್ಲಿ ಅನುಮಾನ ಹುಟ್ಟುಹಾಕಿದೆ.

ತಮ್ಮ ನಿಜವಾದ ಹೆಸರನ್ನು ಮುಚ್ಚಿಟ್ಟು, ವೃತ್ತಿ ಬಗ್ಗೆ ಸುಳ್ಳು ಹೇಳಿ ಸೌರಭ್ ಪಟೇಲ್ 'ಬಿಗ್ ಬಾಸ್' ಮನೆಗೆ ಬಂದಿದ್ದಾರೆ ಎಂದು ನಿನ್ನೆಯಷ್ಟೇ ವರದಿ ಆಗಿತ್ತು. ಇವತ್ತು ವಿವಾದದ ಕೇಂದ್ರಬಿಂದು ಆಗಿರುವವರು 28 ವರ್ಷದ ಗಾಯಕಿ ಜಸ್ಲೀನ್ ಮಥಾರು.!

''65 ವರ್ಷದ ತಮ್ಮ ಗುರು ಅನೂಪ್ ಜಲೋಟ ಜೊತೆಗೆ ಮೂರು ವರ್ಷಗಳಿಂದ ರೋಮ್ಯಾಂಟಿಕ್ ಸಂಬಂಧ ಇದೆ'' ಎಂದು 'ಬಿಗ್ ಬಾಸ್' ವೇದಿಕೆ ಮೇಲೆ ಬಾಯ್ಬಿಟ್ಟು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದವರು ಜಸ್ಲೀನ್ ಮಥಾರು.

ಇದೀಗ ಇದೇ ಜಸ್ಲೀನ್ ಬಗ್ಗೆ ಜನರ ತಲೆಯಲ್ಲಿ ಡೌಟ್ ಮೂಡಿದೆ. ಅದಕ್ಕೆ ಕಾರಣ ವರ್ಷದ ಹಿಂದೆ ಜಸ್ಲೀನ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಒಂದು ವಿಡಿಯೋ.! ಯಾವುದು ಆ ವಿಡಿಯೋ, ಅದರಲ್ಲಿ ಏನಿದೆ.? ಮುಂದೆ ಓದಿರಿ, ನಿಮಗೆ ಗೊತ್ತಾಗುತ್ತೆ....

ವಿಡಿಯೋದಲ್ಲಿ ಜಸ್ಲೀನ್ ಹೇಳಿದ್ದೇನು.?

ವಿಡಿಯೋದಲ್ಲಿ ಜಸ್ಲೀನ್ ಹೇಳಿದ್ದೇನು.?

''ನಾನು ಸಿಂಗಲ್ ಆಗಿದ್ದೀನಾ, ಇಲ್ವಾ ಅಂತ ತಿಳಿದುಕೊಳ್ಳಲು ಎಷ್ಟೋ ಜನಕ್ಕೆ ಆಸಕ್ತಿ ಇದೆ. ಹೌದು, ನಾನು ಸಿಂಗಲ್.... ರೆಡಿ ಟು ಮಿಂಗಲ್. ನನಗೆ ತುಂಬಾ ಸ್ವೀಟ್, ತುಂಬಾ ಕೇರ್ ಮಾಡುವ ಹಾಗೂ ಅರ್ಥ ಮಾಡಿಕೊಳ್ಳುವ ಬಾಯ್ ಫ್ರೆಂಡ್ ಬೇಕಾಗಿದ್ದಾನೆ. ನಿಮ್ಮಲ್ಲಿ ಯಾರಾದರೂ ಅಂಥವರು ಇದ್ದರೆ, ದಯವಿಟ್ಟು ತಿಳಿಸಿ..'' ಎನ್ನುತ್ತಾ ವಿಡಿಯೋವೊಂದನ್ನ ಜಸ್ಲೀನ್ ಮಥಾರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅದೇ ವಿಡಿಯೋ ಇದೀಗ ವೈರಲ್ ಆಗಿದೆ.

ವರ್ಷದ ಹಿಂದಿನ ವಿಡಿಯೋ ಇದು

ವರ್ಷದ ಹಿಂದಿನ ವಿಡಿಯೋ ಇದು

''ನಾನು ಸಿಂಗಲ್ ಆಗಿದ್ದೀನಿ... ನನಗೆ ಬಾಯ್ ಫ್ರೆಂಡ್ ಬೇಕಾಗಿದ್ದಾನೆ'' ಅಂತ ಜಸ್ಲೀನ್ ವಿಡಿಯೋ ಮಾಡಿರುವುದು ಒಂದು ವರ್ಷದ ಹಿಂದೆ ಎಂದು ವರದಿ ಆಗಿದೆ. ಹೀಗಾಗಿ ಜಸ್ಲೀನ್ ಸುತ್ತ ಅನುಮಾನ ಹುತ್ತ ಹುಟ್ಟಿಕೊಂಡಿದೆ.

ಕಾಗೆ ಹಾರಿಸಿದ್ರಾ ಜಸ್ಲೀನ್.?

ಕಾಗೆ ಹಾರಿಸಿದ್ರಾ ಜಸ್ಲೀನ್.?

'ಬಿಗ್ ಬಾಸ್' ವೇದಿಕೆ ಮೇಲೆ, ''ಮೂರುವರೆ ವರ್ಷಗಳಿಂದ ಅನೂಪ್ ಹಾಗೂ ನನ್ನ ನಡುವೆ ಸಂಬಂಧ ಇದೆ'' ಎಂದು ಜಸ್ಲೀನಾ ಮಥಾರು ಹೇಳಿದ್ದರು. ಮೂರುವರೆ ವರ್ಷಗಳಿಂದ ಅನೂಪ್ ಜೊತೆ ಪ್ರೀತಿಯಲ್ಲಿ ಮುಳುಗಿದ್ದರೆ, ವರ್ಷದ ಹಿಂದೆ ''ನಾನು ಸಿಂಗಲ್, ರೆಡಿ ಟು ಮಿಂಗಲ್'' ಅಂತ ಜಸ್ಲೀನ್ ವಿಡಿಯೋ ಮಾಡಿದ್ದಾದರೂ ಯಾಕೆ.? ಅಂತ ಪ್ರಶ್ನಿಸುತ್ತಿದ್ದಾರೆ ನೆಟ್ಟಿಗರು.

ಜಸ್ಲೀನ್ ಸ್ಪಷ್ಟನೆ ಕೊಡಬೇಕು

ಜಸ್ಲೀನ್ ಸ್ಪಷ್ಟನೆ ಕೊಡಬೇಕು

'ಬಿಗ್ ಬಾಸ್' ಮನೆ ಪ್ರವೇಶಿಸಲು ತಮ್ಮ ಸಂಬಂಧದ ಬಗ್ಗೆ ಸುಳ್ಳು ಹೇಳಿ ಬಿಟ್ಟಿ ಪ್ರಚಾರ ಪಡೆದ್ರಾ ಜಸ್ಲೀನ್ ಮಥಾರು.? ವಿವಾದಕ್ಕೆ ಒಳಗಾದರೆ ಮಾತ್ರ 'ಬಿಗ್ ಬಾಸ್' ಮನೆಯಲ್ಲಿ ಜಾಗ ಎಂದುಕೊಂಡು ಜಸ್ಲೀನ್ ಸುಳ್ಳು ಪ್ರೇಮ ಕಥೆ ಸೃಷ್ಟಿಸಿದ್ರಾ.? ಈ ಬಗ್ಗೆ ಸ್ವತಃ ಜಸ್ಲೀನ್ ಸ್ಪಷ್ಟನೆ ಕೊಡಬೇಕು.

More from Filmibeat

English summary
Bigg Boss 12 Contestant Jasleen Matharu was single and looking for Boyfriend last year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X