ಗುರು ಅನೂಪ್ ಜೊತೆಗೆ ಶಿಷ್ಯೆ ಪ್ರೇಮ ಪುರಾಣ: ಆಘಾತಗೊಂಡ ಜಸ್ಲೀನ್ ತಂದೆ.!

'ಬಿಗ್ ಬಾಸ್-12' ಕಾರ್ಯಕ್ರಮದಲ್ಲಿ 'ವಿಚಿತ್ರ ಜೋಡಿ'ಗಳು ಸ್ಪರ್ಧಿಗಳಾಗಿ ಭಾಗವಹಿಸುವ ಸಂಗತಿ ಎಲ್ಲರಿಗೂ ಗೊತ್ತಿತ್ತು. ಅದರಂತೆ ಗುರು-ಶಿಷ್ಯೆ ಆಗಿ ಅನೂಪ್ ಜಲೋಟ ಹಾಗೂ ಜಸ್ಲೀನ್ 'ಬಿಗ್ ಬಾಸ್' ಹೊಸ್ತಿಲು ತುಳಿಯುತ್ತಾರೆ ಎಂದುಕೊಳ್ಳುವಾಗಲೇ, ನ್ಯಾಷನಲ್ ಟಿವಿ ಮುಂದೆ ಜಸ್ಲೀನ್ ಒಂದು ಸ್ಫೋಟಕ ವಿಚಾರವನ್ನ ಬಾಯ್ಬಿಟ್ಟರು.

''ನಾನು ಮತ್ತು ಅನೂಪ್ ಜಲೋಟ ಕೇವಲ ಗುರು-ಶಿಷ್ಯೆ ಮಾತ್ರ ಅಲ್ಲ. ನಮ್ಮಿಬ್ಬರ ನಡುವೆ ಮೂರು ವರ್ಷಗಳಿಂದ ಸಂಬಂಧ ಇದೆ. ಈ ಗುಟ್ಟನ್ನ ನಾನು ಇಲ್ಲಿಯವರೆಗೂ ಯಾರೊಂದಿಗೂ ಹಂಚಿಕೊಂಡಿಲ್ಲ. ಈ ಸಂಗತಿ ಬಹಿರಂಗವಾದಾಗ, ನನ್ನ ಕುಟುಂಬದವರಿಗೂ ಶಾಕ್ ಆಗುತ್ತೆ. ಎಲ್ಲವನ್ನ ಫೇಸ್ ಮಾಡಲು ನಾನು ರೆಡಿ ಇದ್ದೇನೆ. 'ಬಿಗ್ ಬಾಸ್' ಗೆಲ್ಲುವುದೇ ನನ್ನ ಗುರಿ'' ಎಂದು ತಮ್ಮ ಪರಿಚಯದ ವಿಡಿಯೋದಲ್ಲಿ ಜಸ್ಲೀನ್ ಹೇಳಿದರು.

65 ವರ್ಷದ ಅನೂಪ್ ಜಲೋಟ ಹಾಗೂ 28 ವರ್ಷದ ಜಸ್ಲೀನ್ ಮಥಾರು ಪ್ರೇಮ ಕಹಾನಿ ಬಹಿರಂಗವಾಗುತ್ತಿದ್ದಂತೆಯೇ, ಸೋಷಿಯಲ್ ಮೀಡಿಯಾದಲ್ಲಿ ಟ್ರೋಲಿಂಗ್ ಶುರುವಾಯ್ತು.

ಒಂದೇ ದಿನದಲ್ಲಿ ಅನೂಪ್ ಹಾಗೂ ಜಸ್ಲೀನ್ ಭಾರತದಾದ್ಯಂತ ಸದ್ದು ಮಾಡಿದ್ದಾರೆ. ಜಸ್ಲೀನ್ ಬಹಿರಂಗ ಪಡಿಸಿದ ಈ ವಿಚಾರ ಆಕೆಯ ಕುಟುಂಬಕ್ಕೂ ಆಘಾತ ನೀಡಿದೆ. ಹಿಂದಿಯ ನ್ಯೂಸ್ ಚಾನೆಲ್ ವೊಂದಕ್ಕೆ ಜಸ್ಲೀನ್ ತಂದೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಮುಂದೆ ಓದಿರಿ...

ಶಾಕಿಂಗ್ ಸಂಗತಿ

ಶಾಕಿಂಗ್ ಸಂಗತಿ

''ನನ್ನ ಹಾಗೂ ನನ್ನ ಕುಟುಂಬಕ್ಕೆ ಇದು ಶಾಕಿಂಗ್ ಸಂಗತಿ. ಈ ವಿಚಾರದ ಬಗ್ಗೆ ನಾನು ಹೆಚ್ಚು ಕಾಮೆಂಟ್ ಮಾಡುವುದಿಲ್ಲ. ಮೊದಲು ನಾನು ನನ್ನ ಪುತ್ರಿಯ ಜೊತೆಗೆ ಮಾತನಾಡಬೇಕು. ಆಕೆ 'ಬಿಗ್ ಬಾಸ್' ಗೆದ್ದು ಬರಲಿ'' ಎಂದು ಸುದ್ದಿ ವಾಹಿನಿಯೊಂದಕ್ಕೆ ಜಸ್ಲೀನ್ ಮಥಾರು ತಂದೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಚೀಪ್ ಪಬ್ಲಿಸಿಟ ಬೇಕಾಗಿಲ್ಲ

ಚೀಪ್ ಪಬ್ಲಿಸಿಟ ಬೇಕಾಗಿಲ್ಲ

''ಸೋಷಿಯಲ್ ಮೀಡಿಯಾದಲ್ಲಿ ಜನ ಮಾಡುತ್ತಿರುವ ಕಾಮೆಂಟ್ಸ್ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಪುತ್ರಿ ಈಗಾಗಲೇ ಹಲವು ಬಾಲಿವುಡ್ ಗಾಯಕರ ಜೊತೆಗೆ ಸ್ಟೇಜ್ ಶೋ ಮಾಡಿದ್ದಾಳೆ. ಆಕೆಗೆ ಬಾಲಿವುಡ್ ಪರಿಚಯ ಇದೆ. ಚೀಪ್ ಪಬ್ಲಿಸಿಟಿ ಗಿಟ್ಟಿಸಿಕೊಳ್ಳುವ ಉದ್ದೇಶ ಇಲ್ಲ'' ಎಂದಿದ್ದಾರೆ ಜಸ್ಲೀನ್ ತಂದೆ.

ಹಲವರಿಗೆ ವಿವಾದಾತ್ಮಕ ಹಿನ್ನಲೆ ಇದೆ

ಹಲವರಿಗೆ ವಿವಾದಾತ್ಮಕ ಹಿನ್ನಲೆ ಇದೆ

'ಬಿಗ್ ಬಾಸ್' ಮನೆಗೆ ಕಾಲಿಟ್ಟಿರುವ ಹಲವು ಸ್ಪರ್ಧಿಗಳಿಗೆ ವಿವಾದಾತ್ಮಕ ಹಿನ್ನಲೆ ಇದೆ. ಜಸ್ಲೀನ್ ಯಾವುದರ ಬಗ್ಗೆಯೂ ಬೇಸರ ಮಾಡಿಕೊಳ್ಳದೇ, ಗೇಮ್ ಬಗ್ಗೆ ಗಮನ ಹರಿಸಲಿ'' ಅಂತಾರೆ ಆಕೆಯ ತಂದೆ.

ಧೈರ್ಯವಾಗಿ ಎದುರಿಸಬೇಕು

ಧೈರ್ಯವಾಗಿ ಎದುರಿಸಬೇಕು

''ಎಲ್ಲದರ ಬಗ್ಗೆಯೂ ಜನ ಚೀಪ್ ಆಗಿ ಕಾಮೆಂಟ್ ಮಾಡುತ್ತಾರೆ. ಆದ್ರೆ, ಪ್ರತಿಯೊಂದು ಸನ್ನಿವೇಶವನ್ನೂ ಧೈರ್ಯವಾಗಿ ಎದುರಿಸಬೇಕು. ಜಸ್ಲೀನ್ 'ಬಿಗ್ ಬಾಸ್' ಗೆದ್ದು ಬರಲಿ ಎಂದು ಆಶಿಸುವೆ'' ಎಂದರು ಜಸ್ಲೀನ್ ತಂದೆ.

More from Filmibeat

English summary
Bigg Boss 12 Contestant Jasleen's Father's reaction to her relationship with Anup Jalota is shocking.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X