ಜಸ್ಲೀನ್-ಅನೂಪ್ ಪ್ರೇಮ ಪುರಾಣ: ಕುಟುಂಬದವರಿಗೆ ಅವಮಾನ.!
''ನಾನು ಮತ್ತು ಅನೂಪ್ ಜಲೋಟ ಕೇವಲ ಗುರು-ಶಿಷ್ಯೆ ಮಾತ್ರ ಅಲ್ಲ. ನಮ್ಮಿಬ್ಬರ ನಡುವೆ ಮೂರು ವರ್ಷಗಳಿಂದ ಸಂಬಂಧ ಇದೆ. ಈ ಗುಟ್ಟನ್ನ ನಾನು ಇಲ್ಲಿಯವರೆಗೂ ಯಾರೊಂದಿಗೂ ಹಂಚಿಕೊಂಡಿಲ್ಲ. ಈ ಸಂಗತಿ ಬಹಿರಂಗವಾದಾಗ, ನನ್ನ ಕುಟುಂಬದವರಿಗೂ ಶಾಕ್ ಆಗುತ್ತೆ. ಎಲ್ಲವನ್ನೂ ಫೇಸ್ ಮಾಡೋಕೆ ನಾನು ರೆಡಿ ಇದ್ದೇನೆ'' ಎಂದು 'ಬಿಗ್ ಬಾಸ್' ವೇದಿಕೆ ಮೇಲೆ ಜಸ್ಲೀನ್ ಮಥಾರು ನುಡಿದಿದ್ದರು.
ಜಸ್ಲೀನ್ ಮಾತಿನಂತೆ ಆಕೆಯ ಲವ್ ಅಫೇರ್ ಕುಟುಂಬಕ್ಕೆ ದೊಡ್ಡ ಆಘಾತ ನೀಡಿದೆ. 65 ವರ್ಷದ ಅನೂಪ್ ಜಲೋಟ ಹಾಗೂ 28 ವರ್ಷದ ಜಸ್ಲೀನ್ ಮಥಾರು ಪ್ರೇಮ ಕಹಾನಿಯಿಂದಾಗಿ ಕುಟುಂಬದವರು ಅವಮಾನ ಎದುರಿಸುವಂತಾಗಿದೆ.
ಗುರುವಿನ ಜೊತೆಗೆ ಯುವತಿ ಜಸ್ಲೀನ್ ಮಥಾರು ರೋಮ್ಯಾಂಟಿಕ್ ಸಂಬಂಧ ಹೊಂದಿರುವುದು ನ್ಯಾಷನಲ್ ಟಿವಿಯಲ್ಲಿ ಬಹಿರಂಗ ಆದ್ಮೇಲೆ, ಜಸ್ಲೀನ್ ತಂದೆ-ತಾಯಿ ತಲೆ ಎತ್ತಿಕೊಂಡು ಮನೆಯಿಂದ ಹೊರಗೆ ಹೋಗಲು ಆಗುತ್ತಿಲ್ಲವಂತೆ. ಹಾಗಂತ ಸ್ವತಃ ಜಸ್ಲೀನ್ ತಂದೆ ಕೇಸರ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಮುಂದೆ ಓದಿರಿ...

ಜಸ್ಲೀನ್ ಮಾಡಿರುವುದು ತಪ್ಪು
''ಇದು ನಿಜವೇ ಅಂತ ನನ್ನ ಸಂಬಂಧಿಕರು ಫೋನ್ ಮಾಡಿ ಕೇಳುತ್ತಿದ್ದಾರೆ. ಇಂತಹ ಸಂಬಂಧಕ್ಕೆ ಒಪ್ಪಿಗೆ ಕೊಡಬೇಡಿ ಅಂತ ನನಗೆ ಎಲ್ಲರೂ ಹೇಳುತ್ತಿದ್ದಾರೆ. ಜಸ್ಲೀನ್ ತಪ್ಪು ಮಾಡಿದ್ದಾಳೆ. ಆ ತಪ್ಪಿನ ಅರಿವು ಆಕೆಗಾಗಲಿ, 'ಬಿಗ್ ಬಾಸ್' ಮನೆಯಿಂದ ಆಕೆ ಹೊರಗೆ ಬರುವ ಹೊತ್ತಿಗೆ ನಿರ್ಧಾರ ಬದಲಾಗಿರಲಿ ಎಂದು ಆಶಿಸುವೆ'' ಅಂತ ಸಂದರ್ಶನವೊಂದರಲ್ಲಿ ಜಸ್ಲೀನ್ ಮಥಾರು ತಂದೆ ಕೇಸರ್ ತಿಳಿಸಿದ್ದಾರೆ.

ಸ್ವಾತಂತ್ರ್ಯ ಕೊಟ್ಟಿದ್ದೇ ಮುಳುವಾಗಿದೆ
''ತಂದೆಯಾಗಿ ನಾನು ಜಸ್ಲೀನ್ ಗೆ ಯಾವಾಗಲೂ ಸಪೋರ್ಟ್ ಮಾಡಿರುವೆ. ಅವಳಿಗೆ ಕಿಕ್ ಬಾಕ್ಸಿಂಗ್ ಕಲಿಸಿದೆ. ಸಂಗೀತ ಕಲಿಯಲು ಮುಂದಾದಾಗಲೂ, ನಾನು ಅಡ್ಡಿಯಾಗಲಿಲ್ಲ. ಸಂಪೂರ್ಣವಾಗಿ ಸ್ವಾತಂತ್ರ ನೀಡಿದ್ದೆ. ಆ ಸ್ವಾತಂತ್ರ್ಯವೇ ಈಗ ಮುಳುವಾಗಿದೆ ಎಂದು ಸಂಬಂಧಿಗಳು ಆಡಿಕೊಳ್ಳುತ್ತಿದ್ದಾರೆ'' - ಕೇಸರ್, ಜಸ್ಲೀನ್ ತಂದೆ

ಮನೆಯಿಂದ ಹೊರಗೆ ಹೋಗಲು ಸಾಧ್ಯ ಆಗುತ್ತಿಲ್ಲ
''ಜಸ್ಲೀನ್-ಅನೂಪ್ ಸಂಬಂಧವನ್ನ ನಾನು ಒಪ್ಪಿಕೊಳ್ಳುವುದಿಲ್ಲ. ಜಸ್ಲೀನ್ ತಾಯಿ ಆಘಾತಗೊಂಡಿದ್ದಾರೆ. 'ಬಿಗ್ ಬಾಸ್' ಶುರುವಾದಾಗಿನಿಂದಲೂ, ಜಸ್ಲೀನ್ ತಾಯಿ ಮಾತನಾಡುತ್ತಿಲ್ಲ. ತಲೆ ಎತ್ತಿಕೊಂಡು ಮನೆಯಿಂದ ಹೊರಗೆ ಹೋಗಲು ನಮಗೆ ಆಗುತ್ತಿಲ್ಲ'' - ಕೇಸರ್, ಜಸ್ಲೀನ್ ತಂದೆ

ದೂರ ಇರುತ್ತೇವೆ
''ಬಿಗ್ ಬಾಸ್' ಮನೆಯಿಂದ ಹೊರಗೆ ಬಂದ ಕೂಡಲೆ ಜಸ್ಲೀನ್ ಜೊತೆಗೆ ನಾನು ಮಾತನಾಡಬೇಕು. ಅವಳು ಸಂಬಂಧವನ್ನ ಮುಂದುವರೆಸುವ ಹಾಗಿದ್ದರೆ, ನಾನೇನೂ ಮಾತನಾಡುವುದಿಲ್ಲ. ಅವಳಿಂದ ನಾವು ದೂರ ಇರುತ್ತೇವೆ'' ಅಂತಾರೆ ಜಸ್ಲೀನ್ ತಂದೆ ಕೇಸರ್.


Click it and Unblock the Notifications











