BBK12: ಮುಖ ನೋಡೊಕ್ಕಾಗ್ತಿಲ್ಲ.. ಹೊರಗೆ ಹೋಗು ವೇಸ್ಟ್ ಬಾಡಿ; ಕಾವು ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ ಗಿಲ್ಲಿ

ಬಿಗ್‌ಬಾಸ್ ಸೀಸನ್ 12 ಸದ್ಯ 73ನೇ ದಿನಕ್ಕೆ ಕಾಲಿಟ್ಟಿದೆ. ದಿನದಿಂದ ದಿನಕ್ಕೆ ಆಟ ಕುತೂಹಲದ ಘಟ್ಟ ತಲುಪಿದೆ. ಆಟದ ವರಸೆ ಬದಲಾಗುತ್ತಿದೆ. ಬಿಗ್‌ಬಾಸ್ ಈಗ ಸ್ಪರ್ಧಿಗಳಿಗೆ ಸೀಕ್ರೆಟ್ ಟಾಸ್ಕ್ ಕೊಟ್ಟು ತಮಾಷೆ ನೋಡುತ್ತಿದ್ದಾರೆ. ಕಾವ್ಯಳನ್ನು ಅಳಿಸಬೇಕು ಎಂದು ಗಿಲ್ಲಿಗೆ ಟಾಸ್ಕ್‌ ಕೊಟ್ಟಿದ್ದು ಅದರಲ್ಲಿ ಗಿಲ್ಲಿ ಗೆದ್ದಿದ್ದಾನೆ.

ಅಂದಹಾಗೆ ಈ ವಾರ ಬಿಗ್‌ಬಾಸ್‌ ಮನೆಯ ಚಿತ್ರಣ ಬದಲಾಗಿದೆ. ಸ್ಪರ್ಧಿಗಳೆಲ್ಲಾ ರಾಕ್ಷಸರಂತೆ ಬದಲಾಗಿದ್ದಾರೆ. ಬಿಗ್‌ಬಾಸ್ ಧ್ವನಿ ಈಗ ಕೇಳ್ತಿಲ್ಲ. ಬದಲಿಗೆ 'ವಿಲನ್' ಆರ್ಭಟ ಶುರುವಾಗಿದೆ. ವಿಲನ್ ಸೂಚನೆಗಳನ್ನು ಸ್ಪರ್ಧಿಗಳು ಪಾಲಿಸಬೇಕಿದೆ. ವಾರದ ಆರಂಭದಲ್ಲೇ ಗಿಲ್ಲಿಯನ್ನು ಕಾವ್ಯಾ ನಾಮಿನೇಟ್ ಮಾಡಿದ್ದರು. ಇದು ಸಹಜವಾಗಿಯೇ ಗಿಲ್ಲಿ ಹಾಗೂ ಅಭಿಮಾನಿಗಳಿಗೆ ಬೇಸರವಾಗಿತ್ತು.

Bigg Boss 12 Day 73 Gilli s Secret Villain Task Makes Kavya Cry

ಗಿಲ್ಲಿ ಪ್ರಭಾವಳಿಯಿಂದ ಹೊರಬಂದು ಆಡಬೇಕು ಎಂದು ಕಾವ್ಯಾ ಕೊನೆಗೂ ನಿರ್ಧರಿಸಿದ್ದಾರೆ. ಅದರ ಆರಂಭ ಎನ್ನುವಂತೆ ಗಿಲ್ಲಿಯನ್ನೇ ಟಾರ್ಗೆಟ್ ಮಾಡಲು ಶುರು ಮಾಡಿದ್ದಾರೆ. ನಾಮಿನೇಟ್ ಮಾಡಿದ ದಿನ ಈ ಬಗ್ಗೆ ಹೆಚ್ಚು ಪ್ರತಿಕ್ರಿಯಿಸದ ಗಿಲ್ಲಿ ಮರುದಿನ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಕಾವ್ಯಾಳನ್ನು ನಿಂದಿಸಿ ಕಣ್ಣೀರು ಹಾಕುವಂತೆ ಮಾಡಿದ್ದಾರೆ.

ಕಾವ್ಯಾ ಬಗ್ಗೆ ಗಿಲ್ಲಿ ಹೀಗೆ ಮಾತನಾಡುವುದಕ್ಕೆ ಕಾರಣ ಕೂಡ ಇದೆ. ಅದು ಸೀಕ್ರೆಟ್ ಟಾಸ್ಕ್. ಹೌದು ಕಾವ್ಯಾ ಅಳುವಂತೆ ಮಾಡಬೇಕು ಎಂದು ಗಿಲ್ಲಿಗೆ ವಿಲನ್ ಟಾಸ್ಕ್ ಕೊಟ್ಟಿದ್ದಾರೆ. ಅದು ಅಶ್ವಿನಿಗೆ ಬಿಟ್ಟರೆ ಮನೆಯಲ್ಲಿ ಬೇರೆ ಯಾರಿಗೂ ಗೊತ್ತಿಲ್ಲ. ಇದೇ ಕಾರಣಕ್ಕೆ ಕಾವ್ಯಾಳ ಬಗ್ಗೆ ಗಿಲ್ಲಿ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ನೀನು ವೇಸ್ಟ್ ಬಾಡಿ.. ಪ್ರೀ ಪ್ರಾಡೆಕ್ಟ್ ಅಂತೆಲ್ಲಾ ಹಂಗಿಸಿದ್ದಾರೆ. ಕಾವ್ಯಾ ನಿಜಕ್ಕೂ ಕಣ್ಣೀರಾಗಿದ್ದಾರೆ.

ಗಿಲ್ಲಿ ಯಾವತ್ತೂ ನನ್ನ ಬಗ್ಗೆ ಹೀಗೆ ಮಾತನಾಡಲ್ಲ.. ನಾನು ನಾಮಿನೇಟ್ ಮಾಡಿದ್ದನ್ನು ಗಂಭೀರವಾಗಿ ಪರಿಗಣಿಸದ ಗಿಲ್ಲಿ ಈಗ ಯಾಕೆ ಹೀಗೆ ಮಾತನಾಡುತ್ತಿದ್ದಾನೆ ಎಂದು ಕಾವ್ಯಾ ಅಚ್ಚರಿಗೊಂಡಿದ್ದಾರೆ. ಸೀಕ್ರೆಟ್ ಟಾಸ್ಕ್‌ ಇರಬಹುದು ಎಂದು ಅನುಮಾನ ಬಂದರೂ ಅದು ಖಚಿತವಾಗಲಿಲ್ಲ. ಪದೇ ಪದೇ ಬಂದು ಗಿಲ್ಲಿ ಹೀಯ್ಯಾಳಿಸಿ ಮಾತನಾಡಿದ್ದು ನೋವು ತಂದಿದ್ದು ಎರಡ್ಮೂರು ಬಾರಿ ಕಣ್ಣೀರಾಗಿದ್ದಾರೆ.

ಅಶ್ವಿನಿ ಜೊತೆ ಗಿಲ್ಲಿ ಅಡುಗೆ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಕಾವ್ಯಾಳನ್ನು ನೋಡಿ "ಸ್ನೇಹ ಅಂತ ಒಳಗೊಳಗೆ ಸ್ಕೆಚ್ಚು ಹಾಕ್ತಾರೋ, ಒಂದೇ ತಟ್ಟೆಲಿ ಅನ್ನ ತಿಂದು ಮೂರ್ತ ಇಡ್ತಾರೋ" ಅಂತ ಹಾಡು ಹಾಡಿದ್ದಾರೆ. ಬಳಿಕ ನೇರವಾಗಿ ಮಾತನಾಡಲು ಆರಂಭಿಸಿದ್ದಾರೆ. "ಜೊತೆಗಿದ್ದವರನ್ನು ಹಾಳು ಬಾವಿಗೆ ತಳ್ಳೋದಲ್ಲ. ಜಂಟಿಯಾಗಿ ನಿಮ್ಮ ಜೊತೆ ಬರಬಾರದಿತ್ತು. ಬೆನ್ನಿಗೆ ಚೂರಿ ಹಾಕಿಬಿಟ್ರಿ. ನಿಮ್ಮ ಮುಖ ನೋಡೋಕೆ ಆಗ್ತಿಲ್ಲ. ಮೇಕಪ್ ಹಾಕಿಕೊಂಡು ಸುತ್ತಾಡುವುದು ಬಿಟ್ಟರೆ ನೀವು ಆಟ ಆಡ್ತಿಲ್ಲ. ವೇಸ್ಟ್ ಬಾಡಿ.. ಫ್ರೀ ಪ್ರಾಡೆಕ್ಟ್.. ಲಕ್ಕಿ ಸ್ಪಂದನಾ ಅಲ್ಲ.. ನೀನು ನಿಜವಾದ ಲಕ್ಕಿ.. ಮೊದಲು ಮನೆಯಿಂದ ಹೊರಗಡೆ ಹೋಗು" ಎಂದು ಮನಸೋಇಚ್ಛೆ ಗಿಲ್ಲಿ ಮಾತನಾಡಿದ್ದಾರೆ.

ಆರಂಭದಲ್ಲಿ ಇದೆಲ್ಲಾ ತಮಾಷೆ ಎಂದುಕೊಂಡಿದ್ದ ಕಾವ್ಯಾ ಬಳಿಕ ಬೇಸರಗೊಂಡಿದ್ದಾರೆ. ಇಷ್ಟೆಲ್ಲಾ ಮನಸ್ಸಿನಲ್ಲಿದೆ ಎಂದು ಮೊದಲೇ ಹೇಳಬೇಕಿತ್ತು. ಸೀರಿಯಸ್ ಆಗಿ ಮಾತನಾಡ್ತಿದ್ದೀಯಾ, ಸೀಕ್ರೆಟ್ ಟಾಸ್ಕ್ ಕೊಟ್ಟಿದ್ದಾರಾ? ನನ್ನ ಮೇಲೆ ಆಣೆ ಮಾಡಿ ಹೇಳು ಎಂದು ಕೇಳಿದ್ದಾರೆ. ಸ್ಪಂದನಾ ಬಳಿ ಮಾತನಾಡುತ್ತಾ ಕಾವ್ಯಾ ನೋವು ತೋಡಿಸಿಕೊಂಡು ಅತ್ತಿದ್ದಾರೆ. ಮತ್ತೊಮ್ಮೆ ಹಾಸಿಗೆ ಮೇಲೆ ಮಲಗಿ ಕಣ್ಣೀರಾಗಿದ್ದಾರೆ.

ಬಳಿಕ ಸೋಫಾದಲ್ಲಿ ಕೂತು ಮಾತನಾಡುತ್ತಾ ರಕ್ಷಿತಾ ಜೊತೆ ಗಿಲ್ಲಿ ತಮಾಷೆ ಮಾಡಿದ್ದಾರೆ. "ಒಂದು ಕೊಂಬು ಮುರಿದು ಹೋಗಿದೆ. ಫೈಟಿಂಗ್ ಹೋಗಿದ್ದಾ? ಏನಾದರೂ ಕಿತಾಪತಿ ಮಾಡ್ತೀಯಾ.. ನನ್ನ ಲವ್ ಮಾಡ್ತಿದ್ದೀಯಾ?" ಎಂದು ಗಿಲ್ಲಿ ಹೇಳಿದ್ದಾರೆ. ಅದನ್ನು ಕೇಳಿ ಮನೆ ಮಂದಿ ನಕ್ಕಿದ್ದು ಪಕ್ಕದಲ್ಲೇ ಕೂತಿದ್ದ ಕಾವ್ಯಾ ಕೂಡ ಗೊಳ್ಳೆಂದು ನಕ್ಕಿದ್ದಾರೆ. ಇದನ್ನು ನೋಡಿ ನಮ್ಮ ಗಿಲ್ಲಿಗೆ ಕಾವ್ಯಾನ ಅಳಿಸೋದು ಗೊತ್ತು, ನಗಿಸೋದು ಗೊತ್ತು ಎಂದು ಅಭಿಮಾನಿಗಳು ಕಾಮೆಂಟ್ ಮಾಡ್ತಿದ್ದಾರೆ.

More from Filmibeat

Read more about: bigg boss 12 bigg boss gilli
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X