ಏನು.. 'ಬಿಗ್ ಬಾಸ್' ಮನೆಯಲ್ಲಿ ಶ್ರೀಶಾಂತ್ ಮೊಬೈಲ್ ಬಳಕೆ ಮಾಡಿದ್ರಾ.?
ಹೊರ ಜಗತ್ತಿನ ಜೊತೆಗೆ ಎಲ್ಲಾ ರೀತಿಯ ಸಂಪರ್ಕವನ್ನು ಕಡಿತಗೊಳಿಸಿ 'ಬಿಗ್ ಬಾಸ್' ಮನೆಯಲ್ಲಿ ಇರುವುದೇ ದೊಡ್ಡ ಚಾಲೆಂಜ್. 'ಬಿಗ್ ಬಾಸ್' ಮನೆಯಲ್ಲಿ ಟಿವಿ ಇಲ್ಲ. ಹಾಗೇ ಮೊಬೈಲ್ ಕೂಡ ನಿಷಿದ್ಧ.
ಅಂಗೈನಲ್ಲಿ ಮೊಬೈಲ್ ಇದ್ದರೆ, ಕುಳಿತಲ್ಲೇ ಇಡೀ ವಿಶ್ವವನ್ನೇ ರೌಂಡ್ ಹಾಕ್ಬಹುದು. ಆದ್ರೆ, 'ಬಿಗ್ ಬಾಸ್' ಮನೆಯಲ್ಲಿ ಮೊಬೈಲ್ ಬಳಕೆ ಮಾಡುವ ಹಾಗಿಲ್ಲ. ಹೀಗಿದ್ದರೂ, 'ಬಿಗ್ ಬಾಸ್' ಮನೆಯಲ್ಲಿ ಸ್ಪರ್ಧಿಗಳು ಕದ್ದು-ಮುಚ್ಚಿ ಮೊಬೈಲ್ ಬಳಸುತ್ತಿದ್ದಾರಾ.?
'ಬಿಗ್ ಬಾಸ್' ಕಣ್ತಪ್ಪಿಸಿ, ಸ್ಪರ್ಧಿಗಳು 'ಬಿಗ್' ಮನೆಯೊಳಗೆ ಮೊಬೈಲ್ ತೆಗೆದುಕೊಂಡು ಹೋಗಲು ಸಾಧ್ಯವೇ.? ಇಷ್ಟೆಲ್ಲ ಅನುಮಾನ ಮೂಡಲು ಕಾರಣ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಒಂದು ವಿಡಿಯೋ...
ಆ ವಿಡಿಯೋದಲ್ಲಿ ಕ್ರಿಕೆಟರ್ ಶ್ರೀಶಾಂತ್ ಬ್ಲಾಂಕೆಟ್ ಕೆಳಗೆ ಮೊಬೈಲ್ ಬಳಸುತ್ತಿರುವ ಹಾಗೆ ಕಂಡು ಬಂದಿದೆ. ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆ ಶುರುವಾಗಿದೆ. ಮುಂದೆ ಓದಿರಿ...

ಫೋಟೋ ನೋಡಿ...
ಈ ಫೋಟೋ ನೋಡಿದ್ರೆ, ಬ್ಲಾಂಕೆಟ್ ಅಡಿಯಲ್ಲಿ ಶ್ರೀಶಾಂತ್ ಮೊಬೈಲ್ ಬಳಕೆ ಮಾಡುತ್ತಿರುವ ಹಾಗೆ ಕಾಣುತ್ತಿಲ್ವಾ.? 'ಬಿಗ್ ಬಾಸ್' ಮನೆಯೊಳಗೆ ಲೈಟ್ಸ್ ಆಫ್ ಆದ್ಮೇಲೆ, ಶ್ರೀಶಾಂತ್ ಮೊಬೈಲ್ ಬಳಕೆ ಮಾಡಿದ್ದಾರೆ ಅಂತ ನೆಟ್ಟಿಗರು ವಾದ ಮಾಡುತ್ತಿದ್ದಾರೆ.

ಇದು ಹೇಗೆ ಸಾಧ್ಯ.?
ಎಲ್ಲಾ ಸ್ಪರ್ಧಿಗಳಿಗೂ ಇರುವ ನಿಯಮಗಳು ಒಂದೇ. 'ಬಿಗ್ ಬಾಸ್' ಆಯೋಜಕರ ಕಣ್ತಪ್ಪಿಸಿ, 'ಬಿಗ್' ಮನೆಯೊಳಗೆ ಯಾರೂ ಮೊಬೈಲ್ ತೆಗೆದುಕೊಂಡು ಹೋಗಲು ಸಾಧ್ಯವೇ ಇಲ್ಲ. ಹೀಗಿರುವಾಗ, ಶ್ರೀಶಾಂತ್ ಮೊಬೈಲ್ ಬಳಕೆ ಮಾಡಿದ್ದಾರಾ.? ಇದು ಹೇಗೆ ಸಾಧ್ಯ.? ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ.

ಅಭಿಮಾನಿಗಳ ವಾದ ಬೇರೆ.!
''ಶ್ರೀಶಾಂತ್ ಮೊಬೈಲ್ ಬಳಕೆ ಮಾಡಿಲ್ಲ. ಅವರು ತಮ್ಮ ಕಾಲಿನ ಬೆರಳುಗಳನ್ನು ಸವರಿಕೊಂಡಿದ್ದಾರೆ. ಅದು ಮೊಬೈಲ್ ಸ್ವೈಪ್ ಮಾಡಿದ ಹಾಗೆ ಕಾಣುತ್ತಿದೆ. ಅಷ್ಟೇ'' ಎಂದು ಶ್ರೀಶಾಂತ್ ಅಭಿಮಾನಿಗಳು ಬ್ಯಾಟಿಂಗ್ ಮಾಡಿದ್ದಾರೆ.

'ಬಿಗ್ ಬಾಸ್' ಮನೆಯಲ್ಲಿ ಶ್ರೀಶಾಂತ್ ಕಿರಿಕ್
'ಬಿಗ್ ಬಾಸ್' ಸೂಚಿಸಿದಂತೆ ಮೊದಲ ಚಟುವಟಿಕೆಯಲ್ಲಿ ಶ್ರೀಶಾಂತ್ ಸರಿಯಾಗಿ ಪಾಲ್ಗೊಳ್ಳಲಿಲ್ಲ. ಹೀಗಾಗಿ, ಮೊದಲ ಚಟುವಟಿಕೆ ರದ್ದಾಯಿತು. ಈ ನಡುವೆ ಖಾನ್ ಸಹೋದರಿಯರ ಜೊತೆಗೆ ಶ್ರೀಶಾಂತ್ ಕಿರಿಕ್ ಮಾಡಿಕೊಂಡರು. ಇಷ್ಟೆಲ್ಲಾ ಆದರೂ, ಮೊದಲ ವಾರದ ನಾಮಿನೇಷನ್ ನಿಂದ ಶ್ರೀಶಾಂತ್ ಸೇಫ್ ಆಗಿದ್ದಾರೆ.


Click it and Unblock the Notifications











