BBK 12: 'ದರ್ಶನ್' ಜೊತೆ ಸೆಕೆಂಡ್ ಹೀರೋ ಆಗಿ ಬಿಗ್‌ಬಾಸ್ ಸತೀಶ್? ಎಲ್ಲಾ ಬರೀ ಓಳು?
ಈ ಬಾರಿ ಬಿಗ್‌ಬಾಸ್ ಮನೆಗೆ ಬೇರೆ ಬೇರೆ ಕ್ಷೇತ್ರಗಳಿಂದ 19 ಮಂದಿ ಸ್ಪರ್ಧಿಗಳು ಹೋಗಿದ್ದರು. ಅದರಲ್ಲಿ ಡಾಗ್ ಸತೀಶ್ ತಮ್ಮ ಮಾತುಗಳಿಂದ ಗಮನ ಸೆಳೆದಿದ್ದರು. ಮಿನಿ ಫಿನಾಲೆಗೂ ಮುನ್ನ ಮಿಡ್ ವೀಡ್ ಎಲಿಮಿನೇಷನ್‌ನಲ್ಲಿ ಅವರು ಹೊರಗೆ ಬಂದಿದ್ದಾರೆ.
ಗ್ರ್ಯಾಂಡ್ ಓಪನಿಂಗ್ ವೇದಿಕೆಯಲ್ಲಿ ಡಾಗ್ ಸತೀಶ್ ಮಾತುಗಳಿಂದ ಸ್ವತಃ ಕಿಚ್ಚ ಸುದೀಪ್ ಕೂಡ ಶಾಕ್ ಆಗಿದ್ದರು. "ನಾನು ಇಂಟರ್‌ನ್ಯಾಷನಲ್ ಸೆಲೆಬ್ರೆಟಿ ಡಾಗ್ ಬ್ರೀಡರ್, ವರ್ಲ್ಡ್‌ಗೆ ನಾನು ನಂಬರ್ 1 ಡಾಗ್ ಬ್ರೀಡರ್, ಎಸ್‌ಎಸ್‌ಎಲ್‌ಸಿ ಓದುವಾಗಲೇ ದಿನಕ್ಕೆ 10 ಸಾವಿರ ದುಡಿಯುತ್ತಿದ್ದೆ, ಇವತ್ತು ನನ್ನ ಬಳಿ 100 ಕೋಟಿ ರೂ. ಬೆಲೆಯ ಡಾಗ್ ಇದೆ, ಬಿಗ್‌ಬಾಸ್‌ಗೋಸ್ಕರ 25 ಲಕ್ಷ ರೂ. ಬಟ್ಟೆ ತಗೊಂಡು ಬಂದಿದ್ದೀನಿ. ಇವತ್ತು ಹೈದರಾಬಾದ್‌ನಲ್ಲಿ 7 ಸ್ಟಾರ್ ಹೋಟೆಲ್ ಬುಕ್ ಆಗಿತ್ತು, 65 ಲಕ್ಷ ರೂ. ಆದಾಯ ಇವತ್ತು ಒಂದು ದಿನ ಬರ್ತಿತ್ತು. ಅದನ್ನೆಲ್ಲಾ ಬಿಟ್ಟು ಬಂದಿದ್ದೀನಿ" ಎಂದಿದ್ದರು.

ಸತೀಶ್ ಮಾತುಗಳನ್ನು ನಂಬಬೇಕೋ ಬೇಡವೋ ಎಂದು ಕೆಲವರು ತಲೆ ಕೆಡಿಸಿಕೊಂಡಿದ್ದರು. ಬಿಗ್‌ಬಾಸ್ ಮನೆಯಿಂದ ಹೊರ ಬಂದಮೇಲೆ ಕೂಡ ಸಾಕಷ್ಟು ಸಂದರ್ಶನಗಳಲ್ಲಿ ಸತೀಶ್ ಮಾತನಾಡುತ್ತಿದ್ದಾರೆ. ಅವರು ಹೇಳುತ್ತಿರುವುದೆಲ್ಲಾ ಓಳು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಸತೀಶ್ ಮಾತನಾಡಿರುವ ವೀಡಿಯೋಗಳೆಲ್ಲಾ ಈಗ ವೈರಲ್ ಆಗ್ತಿದೆ. ಕೆಲ ಸಿನಿಮಾಗಳಲ್ಲಿ ಕೂಡ ಅವರು ಬಣ್ಣ ಹಚ್ಚಿದ್ದಾರೆ. ಆದರೆ ದರ್ಶನ್ ಜೊತೆ ನಾನು ಸೆಕೆಂಡ್ ಹೀರೊ ಆಗಿ ಸಿನಿಮಾದಲ್ಲಿ ನಟಿಸಿದ್ದೆ ಎನ್ನುವುದು ಈಗ ಭಾರೀ ಚರ್ಚೆ ಹುಟ್ಟಾಕ್ಕಿದೆ.
ನಾನು ಸಿನಿಮಾ ಶೂಟಿಂಗ್‌ಗೆ ಕೂಡ ನನ್ನದೇ ವಾಹನದಲ್ಲಿ ಹೋಗ್ತಿದ್ದೆ. ನನ್ನದೇ ಕಾಸ್ಟ್ಯೂಮ್ಸ್ ಧರಿಸುತ್ತಿದ್ದೆ. ಬರುತ್ತಿದ್ದ ಸಂಭಾವನೆಯನ್ನು ಕೂಡ ಅಲ್ಲಿ ಕೆಲಸ ಮಾಡುವವರಿಗೆ ಹಂಚಿಬಿಡುತ್ತಿದ್ದೆ ಎಂದು 'ವಿಶ್ವವಾಣಿ ಟಿವಿ' ಯುಟ್ಯೂಬ್ ಸಂದರ್ಶನದಲ್ಲಿ ಸತೀಶ್ ಹೇಳಿದ್ದಾರೆ. ದರ್ಶನ್ ಚಿತ್ರದಲ್ಲಿ ಸೆಕೆಂಡ್ ಹೀರೊ ಆಗಿ ನಟಿಸಿದ್ದೆ. ನನ್ನನ್ನು ಬೇಕು ಎಂದೇ ಡಲ್ ಆಗಿ ತೋರಿಸುವ ಪ್ರಯತ್ನ ಮಾಡಿದ್ರು. ಬೇಸರದಿಂದ ಅತ್ತಿದ್ದೆ. ಅವತ್ತೇ ಸಿನಿಮಾ ಸಹವಾಸ ಸಾಕು ಎಂದು ಬಿಟ್ಟುಬಿಟ್ಟೆ ಎಂದಿದ್ದಾರೆ.
21 ವರ್ಷಗಳ ಹಿಂದೆ 'ದರ್ಶನ್' ಹೆಸರಿನ ಚಿತ್ರದಲ್ಲಿ ನಟ ದರ್ಶನ್ ಹೀರೊ ಆಗಿ ನಟಿಸಿದ್ದರು. ರಮೇಶ್ ಕಿಟ್ಟಿ ಆಕ್ಷನ್ ಕಟ್ ಹೇಳಿದ್ದ ಚಿತ್ರವನ್ನು ಆರ್. ಬಿ. ಎಸ್ ಪ್ರಸಾದ್ ನಿರ್ಮಿಸಿದ್ದರು. ನವನೀತ್ ನಾಯಕಿಯಾಗಿ ಬಣ್ಣ ಹಚ್ಚಿದ್ದರು. ಪ್ರಣಯ ರಾಜ ಶ್ರೀನಾಥ್, ಸೃಜಲ್ ಲೋಕೇಶ್, ಚಿತ್ರಾ ಶೆಣೈ, ಸತ್ಯಜಿತ್ ಚಿತ್ರದ ತಾರಾಗಣದಲ್ಲಿದ್ದರು.
ಸದ್ಯ ಸತೀಶ್ ಮಾತುಗಳು ಕೇಳಿ ನೆಟ್ಟಿಗರು ಯೂಟ್ಯೂಬ್‌ನಲ್ಲಿರುವ 'ದರ್ಶನ್' ಚಿತ್ರವನ್ನು ವೀಕ್ಷಿಸಲು ಮುಗಿಬಿದ್ದಿದ್ದಾರೆ. ಸೆಕೆಂಡ್ ಹೀರೊ ಆಗಿ ನಟಿಸಿರುವುದು ನಿಜವೇ ಎಂದು ಹುಡುಕಾಡುತ್ತಿದ್ದಾರೆ. ಚಿತ್ರದ ಒಂದೆರಡು ದೃಶ್ಯಗಳಲ್ಲಿ ಮಾತ್ರ ಸತೀಶ್ ಕಾಣಿಸಿಕೊಂಡಿದ್ದಾರೆ. ನಾಯಕಿ ನಂದಿನಿಯ ಸಹೋದರಿ(ಸುರಭಿ)ಯನ್ನು ಮದುವೆಯಾಗಲು ಬರಲು ಯುವಕ(ಸತೀಶ್)ನ ಪಾತ್ರದಲ್ಲಿ ಮಿಂಚಿದ್ದಾರೆ. ಮದುವೆ ಸಂದರ್ಭದ ಒಂದು ಹಾಡಿನಲ್ಲಿ ಕಾಣಿಸಿಕೊಂಡು ಬಳಿಕ ವಿಮಾನ ನಿಲ್ದಾಣದಲ್ಲಿ ಇಳಿದು ತೆರೆಳುವ ಸನ್ನಿವೇಶಗಳಲ್ಲಿ ಮಾತ್ರ ಸತೀಶ್ ಕಾಣಿಸಿಕೊಂಡಿದ್ದರು.
ಪೋಷಕ ಪಾತ್ರದಲ್ಲಿ ನಟಿಸಿರುವ ಸತೀಶ್ ಸುಖಾ ಸುಮ್ಮನೆ ಸೆಕೆಂಡ್ ಹೀರೊ ಎಂದು ಬಿಲ್ಡಪ್ ತಗೊತ್ತಿದ್ದಾರೆ. ಅವ್ರು ಹೇಳೋದೆಲ್ಲಾ ಓಳು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಸಂದರ್ಶನದಲ್ಲಿ ಮಾತನಾಡಿರುವ ಸತೀಶ್, "ನಾನು ಕಾಲೇಜು ದಿನಗಳಲ್ಲೇ 4 ಸಿನಿಮಾಗಳಲ್ಲಿ ನಟಿಸಿದ್ದೆ. 'ಮಹಾನಗರ' ನನ್ನ ಮೊದಲ ಸಿನಿಮಾ. ಅದಕ್ಕೂ ಮುನ್ನ ಯೋಗೇಶ್ವರ್ ನಟನೆಯ 'ಬದ್ರಿ' ಚಿತ್ರದಲ್ಲಿ ನಟಿಸಿದ್ದೆ. 'ರಾಮಸ್ವಾಮಿ ಕೃಷ್ಣಸ್ವಾಮಿ' ಎಂದು ಕಾಮಿಡಿ ಚಿತ್ರದಲ್ಲಿ ಆಂಟಿ ಹೀರೊ ಆಗಿ ನಟಿಸಿದ್ದೆ. ದರ್ಶನ್ ಸರ್ ಜೊತೆ ಹೀರೊ ಆಗಿ ನಟಿಸಿದ್ದೆ. ಸಿನಿಮಾ ಹೆಸರು 'ದರ್ಶನ್'. ಅದೇ ನನ್ನ ಕೊನೆಯ ಸಿನಿಮಾ" ಎಂದಿದ್ದರು.


Click it and Unblock the Notifications











