BBK12: ನಾವಿಬ್ರು ಒಂದೇ ದೋಣಿಲ್ಲಿದ್ದೀವಿ; ಗಿಲ್ಲಿ ಬಗ್ಗೆ ರಘು, ಕಾವ್ಯಾ ಮಾತುಗಳಿಗೆ ಫ್ಯಾನ್ಸ್ ಬೇಸರ
ಬಿಗ್‌ಬಾಸ್ ಮನೆಯೇ ಹಾಗೆ. ಶತ್ರುಗಳನ್ನು ಒಂದು ಮಾಡಿಬಿಡುತ್ತದೆ. ಸ್ನೇಹಿರನ್ನು ದೂರಾಗಿಬಿಡುತ್ತದೆ. ಇಷ್ಟು ದಿನ ಗಿಲ್ಲಿ ಕಾಮಿಡಿ ನೋಡಿ ಎಂಜಾಯ್ ಮಾಡುತ್ತಿದ್ದವರು ಈಗ ಉಲ್ಟಾ ಹೊಡೆಯುತ್ತಿದ್ದಾರೆ. ನಾವೆಲ್ಲಾ ಗಿಲ್ಲಿ ಪ್ರಭಾವಳಿಯಲ್ಲಿ ಸಿಲುಕಿದ್ದೀವಿ ಹೊರಗೆ ಬಂದು ಆಟಬೇಕು ಎನ್ನುವ ಹಠಕ್ಕೆ ಬಿದ್ದಿದ್ದಾರೆ.
ಗಿಲ್ಲಿ ಹಾಗೂ ಕಾವ್ಯ ಸ್ನೇಹ ಗೊತ್ತೇಯಿದೆ. ಇನ್ನು ವೈಲ್ಡ್ ಕಾರ್ಡ್ ಎಂಟ್ರಿ ರಘು ಜೊತೆ ಕೂಡ ಗಿಲ್ಲಿ ಆತ್ಮೀಯ ಒಡನಾಟ ಬೆಳೆದಿತ್ತು. ಆದರೆ ಈಗ ಇಬ್ಬರು ತಿರುಗಿ ಬಿದ್ದಿದ್ದಾರೆ. ಈ ವಾರ ಗಿಲ್ಲಿಯನ್ನು ಕಾವ್ಯಾ ನಾಮಿನೇಟ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಆದರೆ ಗಿಲ್ಲಿ ಆ ತಪ್ಪು ಮಾಡಲಿಲ್ಲ. ಮತ್ತೊಂದು ಕಡೆ ರಘು ಕೂಡ ಈಗ ಗಿಲ್ಲಿ ಮಾತುಗಳಿಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಗಿಲ್ಲಿ ಬಗ್ಗೆ ಕಾವ್ಯಾ ಹಾಗೂ ರಘು ಇಬ್ಬರೂ ಸೂರಜ್ ಬಳಿ ಮಾತನಾಡುತ್ತಿರುವ ವೀಡಿಯೋವೊಂದು ವೈರಲ್ ಆಗ್ತಿದೆ. ಇದನ್ನು ನೋಡಿ ಅಭಿಮಾನಿಗಳು ಗಿಲ್ಲಿ ನಿನಗೆ ಮೋಸ ಮಾಡುತ್ತಿದ್ದಾರೆ. ಇಷ್ಟು ದಿನ ನೀನು ಇವರಿಬ್ಬರಿಗೋಸ್ಕರ ಆಟ ಆಡುತ್ತಿದ್ದೆ. ಆದರೆ ಅವರಿಬ್ಬರು ಈಗ ಏಕಾಂಗಿ ಆಡಲು ನಿನ್ನನ್ನು ದೂರು ಮಾಡುತ್ತಿದ್ದಾರೆ. ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಗಾರ್ಡನ್ ಏರಿಯಾದಲ್ಲಿ ಸೂರಜ್ ಜೊತೆ ಕಾವ್ಯಾ ಹಾಗೂ ರಘು ಮಾತನಾಡುತ್ತಾ ಕೂತಿದ್ದಾರೆ. ಈ ವೇಳೆ ಕಾವ್ಯಾ ಮಾತನಾಡಿ "ಇಷ್ಟು ದಿನ ಸಮಾಧಾನದಿಂದ ಹೇಳಿದ್ದಾಯ್ತು.. ಹೇಳೊರೀತಿ ಹೇಳಿದ್ದು ಆಯ್ತು.. ಇದರ ಮೇಲೆ ನೀವು ನಿಮ್ಮ ನಿರ್ಧಾರ ಕೈಗೊಳ್ಳಿ.. ನಾವಿಬ್ಬರೂ ಒಂದೇ ದೋಣಿಯಲ್ಲಿದ್ದೀವಿ. ನನ್ನ ವಿಷಯಕ್ಕೂ ಹಂಗೆ ಆಗಿರೋದು. ಇದು ಬೇರೆ ರೀತಿ ಕಾಣುತ್ತದೆ ಅಂದಾಗ ಕೇಳ್ಲಿಲ್ಲ.. ನಂಗೆ ಹರ್ಟ್ ಆಗ್ತಿದೆ ಅಂದ್ರು ಕೇಳಲಿಲ್ಲ. ಬೇರೆ ಏನು ಮಾಡೋದು" ಎಂದು ಕಾವ್ಯಾ ಹೇಳಿದ್ದಾರೆ.
ರಘು ಮಾತನಾಡಿ "ಹಿಂಗೂ ಹೇಳಬಹುದಿತ್ತು. ಇಷ್ಟೆಲ್ಲಾ ಮಾಡ್ಕೊಂಡು ಕುಕ್ಕಿಂಗ್ ಮಾಡ್ತಾರೆ ಅಂತ..ಆಗ ಖುಷಿ ಆಗುತ್ತಿತ್ತು. ಗಿಲ್ಲಿಗೆ ತಲೆನೆ ಇಲ್ಲ ಅನ್ಸತ್ತೆ" ಎಂದಿದ್ದಾರೆ. ವೀಕೆಂಡ್‌ನಲ್ಲಿ ಸುದೀಪ್ ಮಾತನಾಡುತ್ತಾ "ರಘು ಸರ್ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬಂದಾಗ ಏನೋ ಮಾಡಿಬಿಡ್ತಾರೆ ಅಂದುಕೊಂಡೆ. ಆದ್ರೆ ಅಡುಗೆ ಮನೆಗೆ ಸೀಮಿತ ಆಗಿಬಿಟ್ರು" ಎಂದು ಗಿಲ್ಲಿ ಹೇಳಿದ್ದರು. ಇದೇ ಈಗ ರಘು ಬೇಸರಕ್ಕೆ ಕಾರಣವಾಗಿದೆ.
ಬಿಗ್‌ಬಾಸ್ ಮನೆ ಈಗ ಭೂತ ಬಂಗಲೆಯಂತಾಗಿದೆ. ಸ್ಪರ್ಧಿಗಳೆಲ್ಲಾ ಚಿತ್ರ ವಿಚಿತ್ರ ವೇಷಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕ್ಯಾಪ್ಟೆನ್ಸಿ ಟಾಸ್ಕ್ ಮುಗಿದಿದ್ದು ಚೈತ್ರಾ ಕುಂದಾಪುರ ಈ ವಾರ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ಮನೆಯ ಚಿತ್ರಣವೇ ಬದಲಾಗಿ ಹೋಗಿದೆ. ದೆವ್ವ ಭೂತದ ರೀತಿ ಮನೆ ಮಂದಿ ವೇಷ ಬದಲಿಸಿಕೊಂಡಿದ್ದಾರೆ. ಈ ವಾರವಿಡೀ ಇದೇ ರೀತಿ ಮನೆ ಇರುವ ಸಾಧ್ಯತೆಯಿದೆ.
ಹೊಸ ಪ್ರೋಮೊದಲ್ಲಿ ಈ ವಾರದ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ತಾವು ಯಾರನ್ನು ನಾಮಿಮೇಟ್ ಮಾಡಬೇಕು ಎಂದುಕೊಳ್ಳುತ್ತಾರೋ ಆ ಸ್ಪರ್ಧಿಯನ್ನು ಸ್ವಿಮ್ಮಿಂಗ್ ಪೂಲ್‌ಗೆ ತಳ್ಳಿ ತಕ್ಕ ಕಾರಣ ಕಾರಣ ಕೊಡುವಂತೆ ಹೇಳಲಾಗಿದೆ. ಗಿಲ್ಲಿ ಹಾಗೂ ರಜತ್ ಅವರನ್ನು ಕಾವ್ಯಾ ನೀರಿಗೆ ತಳ್ಳಿ ನಾಮಿನೇಟ್ ಮಾಡಿದ್ದಾರೆ. ಗಿಲ್ಲಿ ಪ್ರತಿಕ್ರಿಯಿಸಿದಂತೆ ಕಾಣ್ತಿಲ್ಲ. ಆದರೆ ರಜತ್ ಮಾತ್ರ ಕಾವ್ಯಾ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇನ್ನು ವೇಳೆ ರಜತ್ ಹಾಗೂ ಧ್ರುವಂತ್ ನಡುವೆ ಮಾತಿಗೆ ಮಾತು ಬೆಳೆದಿದೆ. ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಉಳಿದ ಸ್ಪರ್ಧಿಗಳು ಅವರಿಬ್ಬರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದಾರೆ.


Click it and Unblock the Notifications











