ಧಾರಾವಾಹಿಯಲ್ಲಿ ಕಾವ್ಯಾ ಶೈವ ಜೊತೆ ನಟನೆ ಯಾವಾಗ? ಗಿಲ್ಲಿ ಪ್ರತಿಕ್ರಿಯೆ

ಬಿಗ್‌ಬಾಸ್ ಮನೆಯಲ್ಲಿ ಕೆಲ ಜೋಡಿಗಳು ಮೋಡಿ ಮಾಡಿ ಗಮನ ಸೆಳೆದಿದ್ದು ಗೊತ್ತೇಯಿದೆ. ಆದರೆ ಬಿಗ್‌ಬಾಸ್ ಸೀಸನ್ 12ರಲ್ಲಿ ಗಿಲ್ಲಿ, ಕಾವ್ಯಾ ಮೋಡಿ ಮರೆಯೋಕೆ ಸಾಧ್ಯವಿಲ್ಲ. ಇಬ್ಬರೂ ಮದುವೆ ಆಗಬೇಕು ಎಂದು ಕೆಲ ಅಭಿಮಾನಿಗಳು ಹೇಳುವ ಮಟ್ಟಿಗೆ ಈ ಜೋಡಿ ಹಿಟ್ ಆಗಿದೆ.

ಗಿಲ್ಲಿ ಹಾಗೂ ಕಾವ್ಯಾ ಒಟ್ಟಿಗೆ ಸಿನಿಮಾ ಅಥವಾ ಧಾರಾವಾಹಿಯಲ್ಲಿ ನಟಿಸುತ್ತಾರೆ ಎಂದು ಗುಲ್ಲಾಗಿದೆ. ಈ ಬಗ್ಗೆ ಇದೀಗ ಸ್ವತಃ ಗಿಲ್ಲಿ ನಟ ಪ್ರತಿಕ್ರಿಯಿಸಿದ್ದಾರೆ. ಫಿಲ್ಮಿಬೀಟ್ ಕನ್ನಡ ಸಂದರ್ಶನದಲ್ಲಿ ಈ ಬಗ್ಗೆ ಮಂಡ್ಯ ಹೈದ ಮಾತನಾಡಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಸ್ನೇಹಿತರಾಗಿದ್ದ ಜೋಡಿಗೆ ಹೊರಗಡೆ ಭರ್ಜರಿ ಸ್ವಾಗತ ಸಿಕ್ಕಿದೆ. ಬಿಗ್‌ಬಾಸ್ ಮನೆ ಮುಂದೆ ಅಭಿಮಾನಿಗಳು ಇಬ್ಬರ ಕಟೌಟ್ ಹಾಕಿ ಸಂಭ್ರಮಿಸಿದ್ದರು.

Bigg Boss 12 Fame Gilli Responds to Acting with Kavya Hints at Possible Directorial Venture

ಬಿಗ್‌ಬಾಸ್ ಶೋ ಬಗ್ಗೆ ಗಿಲ್ಲಿ ಮುಂದೇನು ಮಾಡುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಗಿಲ್ಲಿ ಸಿನಿಮಾ ನಿರ್ದೇಶನ ಮಾಡುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಗಿಲ್ಲಿ ನಿರ್ದೇಶನದ ಚಿತ್ರದಲ್ಲಿ ಅವಕಾಶ ಸಿಕ್ಕರೆ ನಟಿಸೋಕೆ ಸಿದ್ಧ ಎಂದು ಸಾಕಷ್ಟು ಬಾರಿ ಕಾವ್ಯಾ ಕೂಡ ಹೇಳಿದ್ದಾರೆ. ಒಂದು ಕಥೆ ಐಡಿಯಾ ಇದೆ. ಅದನ್ನು ಡೆವಲಪ್ ಮಾಡಬೇಕು. ಮುಂದಿನ ದಿನಗಳಲ್ಲಿ ಸಿನಿಮಾ ನಿರ್ದೇಶನ ನೋಡೋಣ ಎಂದು ಗಿಲ್ಲಿ ಹೇಳಿದ್ದಾರೆ.

ಧಾರಾವಾಹಿ ಅಥವಾ ಸಿನಿಮಾದಲ್ಲಿ ಕಾವ್ಯಾ ಜೊತೆ ನಟಿಸೋ ಬಗ್ಗೆ ಕೇಳಿದ ಪ್ರಶ್ನೆಗೆ ಗಿಲ್ಲಿ ಮಾತನಾಡಿ "ಸಮಯ ಕೂಡಿ ಬರಬೇಕು. ಇಬ್ಬರಿಗೂ ಕಥೆ ಇಷ್ಟವಾಗಿ ಎಲ್ಲವೂ ಕೂಡಿ ಬಂದರೆ ನಟಿಸೋಕೆ ಸಿದ್ಧ, ಗೊತ್ತಿಲ್ಲ ಆಗಬಹುದು.. ನೋಡೋಣ" ಎಂದು ಗಿಲ್ಲಿ ಹೇಳಿದ್ದಾರೆ.

'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಶೋನಲ್ಲಿ ಗಿಲ್ಲಿ ಹಾಗೂ ಕಾವ್ಯಾ ಸ್ಪರ್ಧಿಗಳಾಗಿ ಭಾಗವಹಿಸಿದ್ದರು. ಆಗ ಅಷ್ಟೇನು ಆತ್ಮೀಯ ಸ್ನೇಹಿತರಾಗಿರಲಿಲ್ಲ. ಆದರೆ ಬಿಗ್‌ಬಾಸ್ ಮನೆಗೆ ಜಂಟಿ ಸ್ಪರ್ಧೀಗಳಾಗಿ ಹೋಗಿದ್ದರು. ಆಗ ಇಬ್ಬರ ನಡುವೆ ಸ್ನೇಹ ಶುರುವಾಯಿತು. ಗಿಲ್ಲಿ ತಮ್ಮದೇ ಶೈಲಿಯಲ್ಲಿ ಕಾವ್ಯಾ ಅವರನ್ನು ರೇಗಿಸುತ್ತಿದ್ದರು. ಕಾವು, ಕಾವು ಎಂದು ಹಿಂದೆ ಸುತ್ತುತ್ತಿದ್ದರು. ಇಬ್ಬರೂ ತಮಾಷೆಯಾಗಿ ಕಿತ್ತಾಡುತ್ತಿದ್ದರು. ಅದು ವೀಕ್ಷಕರ ಮನಗೆದ್ದಿತ್ತು.

ಗಿಲ್ಲಿ ಒಂದು ಹಂತಕ್ಕೆ ಕಾವ್ಯಾ ಅವರನ್ನು ಪ್ರೀತಿಸುತ್ತಿರುವಂತೆ ಮಾತನಾಡಿ ರೇಗಿಸುತ್ತಿದ್ದರು. ಗಿಲ್ಲಿ ಕೈಗೆ ಕಾವ್ಯಾ ರಾಖಿ ಕೂಡ ಕಟ್ಟಿದ್ದರು. ಆದರೂ ಸುಮ್ಮನಾಗಲಿಲ್ಲ. ಗಿಲ್ಲಿ ರೇಗಿಸುವುದು ಬಿಡಲಿಲ್ಲ. ಕೊನೆಯವರೆಗೂ ಆಕೆಯನ್ನು ಬಿಟ್ಟುಕೊಡಲಿಲ್ಲ. ಒಂದು ಹಂತದಲ್ಲಿ ಗಿಲ್ಲಿಯಿಂದ ದೂರಾಗಿ ಕಾವ್ಯಾ ಆಟ ಆಡಲು ಪ್ರಯತ್ನಿಸಿದ್ದರು. ಬಳಿಕ ಇಬ್ಬರ ಸ್ನೇಹ ಮತ್ತೆ ಮುಂದುವರೆಯಿತು. ಗಿಲ್ಲಿ ಇಲ್ಲದಿದ್ದರೆ ಕಾವ್ಯಾ ಜೀರೊ ಎಂದು ಬೇರೆ ಸ್ಪರ್ಧಿಗಳು, ಕೆಲ ವೀಕ್ಷಕರು ಹೇಳಿದ್ದು ಇದೆ.

ಕಾವ್ಯಾ ಕೂಡ ಗಿಲ್ಲಿ ಜೊತೆ ಫಿನಾಲೆ ಹಂತಕ್ಕೆ ಹೋಗಿದ್ದರು. ಅಂತಿಮವಾಗಿ 3ನೇ ರನ್ನರ್ ಅಪ್ ಆಗಿದ್ದರು. ನಾನು ರನ್ನರ್ ಅಪ್‌ ಆಗಿ ಗಿಲ್ಲಿ ಜೊತೆ ನಿಲ್ಲಬೇಕಿತ್ತು ಎಂದು ಆಕೆ ಹೇಳಿದ್ದು ಇದೆ. ಕಾವ್ಯಾ ಈಗಾಗಲೇ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಯಶ್ ತಾಯಿ ಪುಷ್ಪಾ ನಿರ್ಮಾಣದ 'ಕೊತ್ತಲವಾಡಿ' ಚಿತ್ರದಲ್ಲಿ ಕಾವ್ಯಾ ನಾಯಕಿಯಾಗಿ ಮಿಂಚಿದ್ದರು.

ಇತ್ತೀಚೆಗೆ ನಟಿ ಭವ್ಯಾ ಗೌಡ ಬರ್ತ್‌ಡೇ ಪಾರ್ಟಿಯಲ್ಲಿ ಕಾವ್ಯಾ, ಸ್ಪಂದನಾ, ಧನುಷ್ ಭಾಗಿ ಆಗಿ ಸಂಭ್ರಮಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕಾವ್ಯಾ, ಸ್ಪಂದನಾ ಒಂದೇ ಕಾರಿನಲ್ಲಿ ಕೂತು ರೀಲ್ಸ್ ಮಾಡಿ ವೈರಲ್ ಮಾಡಿದ್ದಾರೆ. ಮತ್ತೊಂದು ಕಡೆ ಗಿಲ್ಲಿ ನಟನೆಯ 'ಸೂಪರ್ ಹಿಟ್' ಹಾಗೂ 'ಹಯಗ್ರೀವ' ಚಿತ್ರಗಳು ಈ ವಾರ ಒಟ್ಟಿಗೆ ಬಿಡುಗಡೆ ಆಗುತ್ತಿವೆ.

More from Filmibeat

Read more about: bigg boss bigg boss 12 gilli
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X