BBK12: ಫ್ಯಾಮಿಲಿ ರೌಂಡ್ ಶುರು; ಗಿಲ್ಲಿ ಪರ ಯಾರ ಕುಟುಂಬ ಸದಸ್ಯರು ಪಾಸಿಟಿವ್ ಮಾತಾಡಲ್ವಾ?

ಬಿಗ್‌ಬಾಸ್ ಸೀಸನ್ 12 ಅಂತಿಮ ಘಟ್ಟಕ್ಕೆ ತಲುಪುತ್ತಿದೆ. ಇನ್ನು ಎರಡ್ಮೂರು ವಾರಗಳಲ್ಲಿ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಅದಕ್ಕೂ ಮುನ್ನ ಫ್ಯಾಮಿಲಿ ರೌಂಡ್ ಶುರುವಾಗಿದೆ. ಈ ವೀಕೆಂಡ್ ಕಿಚ್ಚಿನ ಪಂಚಾಯ್ತಿ ಕೂಡ ಇರಲ್ಲ. ಕಾರಣ 'ಮಾರ್ಕ್' ಸಿನಿಮಾ ಪ್ರಚಾರ. ಈ ಬಗ್ಗೆ ಭಾನುವಾರದ ಎಪಿಸೋಡ್‌ನಲ್ಲಿ ಸುದೀಪ್ ಮಾಹಿತಿ ನೀಡಿದ್ದಾರೆ.

ಸದ್ಯ ಬಿಗ್‌ಬಾಸ್ ಮನೆಯಲ್ಲಿ ಫ್ಯಾಮಿಲಿ ರೌಂಡ್ ಶುರುವಾಗಿದೆ. ಸ್ಪರ್ಧಿಗಳ ಮನೆಮಂದಿ ಒಬ್ಬೊಬ್ಬರಾಗಿ ಮನೆ ಒಳಗೆ ಎಂಟ್ರಿ ಕೊಡಲು ಆರಂಭಿಸಿದ್ದಾರೆ. ಬಹಳ ವಿಭಿನ್ನವಾಗಿ ಸ್ಪರ್ಧಿಗಳ ಮನೆ ಮಂದಿಯನ್ನು ದೊಡ್ಮನೆ ಒಳಗೆ ಕಳುಹಿಸಲಾಗುತ್ತಿದೆ. ಅದಕ್ಕೆ ಸಂಬಂಧಿಸಿದ ಮೊದಲ ಪ್ರೋಮೊ ಸಹ ಬಂದಿದೆ. ರಾಶಿಕಾ ಸಹೋದರ ಹಾಗೂ ತಾಯಿ ಮನೆಯೊಳಗೆ ಸರ್ಪ್ರೈಸ್ ಎಂಟ್ರಿ ಕೊಟ್ಟಿದ್ದಾರೆ. ಸೂರಜ್‌ಗೂ ಕೂಡ ಭಾರೀ ಸರ್ಪ್ರೈಸ್ ಎದುರಾಗಿದೆ.

Bigg Boss 12 Family Round Begins Gilli Gets Shocked Suraj s Emotional Surprise Steals the Show

ಗಿಲ್ಲಿ, ಕಾವ್ಯಾ ಹಾಗೂ ರಕ್ಷಿತಾ ಫ್ಯಾಮಿಲಿ ಸದಸ್ಯರನ್ನು ದೊಡ್ಮನೆ ಒಳಗೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಇನ್ನು ರಾಶಿಕಾ ತಾಯಿ ಮಾತಿಗೆ ಗಿಲ್ಲಿ ಶಾಕ್ ಆಗಿದ್ದಾರೆ. ಅದನ್ನು ಪ್ರೋಮೊದಲ್ಲಿ ನೋಡಬಹುದು. ಗಿಲ್ಲಿ ಎಲ್ಲರ ಬಗ್ಗೆ ಕಾಮಿಡಿ ಮಾಡುತ್ತಾರೆ. ಆದರೆ ಕೆಲವೊಮ್ಮೆ ಅದು ಅತಿರೇಕಕ್ಕೆ ಹೋಗಿರುವ ಸಂದರ್ಭಗಳು ಇವೆ. ಈ ಬಗ್ಗೆ ಕೆಲವರು ನೇರವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಇತ್ತಚೆಗೆ ಕಾವ್ಯಾಗೆ ಮತ್ತೊಮ್ಮೆ ಕಿರಿಕಿರಿ ಮಾಡಿದ ಗಿಲ್ಲಿ ವರ್ತನೆ ವೀಕ್ಷಕರಿಗೆ ಇಷ್ಟವಾಗಿಲ್ಲ. ಇದೇ ವಿಚಾರದ ಬಗ್ಗೆ ರಾಶಿಕಾ ತಾಯಿ ಮಾತನಾಡಿರುವುದು ವೈರಲ್ ಆಗುತ್ತಿದೆ.

ಸ್ಪರ್ಧಿಗಳ ಮನೆ ಮಂದಿ ಜೊತೆ ಗಿಲ್ಲಿ ಮಾತುಕತೆ ಹೇಗಿರುತ್ತದೆ ಎಂದು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ತಮ್ಮದೇ ಶೈಲಿಯಲ್ಲಿ ಗಿಲ್ಲಿ ಮಾತನಾಡಿ ಕಾಮಿಡಿ ಮಾಡುವುದು ಗೊತ್ತೇಯಿದೆ. ಅದೇ ರೀತಿ ರಾಶಿಕಾ ತಾಯಿಗೆ ಗಿಲ್ಲಿ ಒಂದು ಪ್ರಶ್ನೆ ಕೇಳಿದ್ದಾರೆ. "ಇವ್ರು 5 ಜನ ಹುಡುಗ್ರು ಬಿಟ್ರೆ ನಿಮಗೆ ಇಷ್ಟ ಆಗಿರುವವರು ಯಾರು?" ಎಂದು ಗಿಲ್ಲಿ ಕೇಳಿದ್ದಾರೆ. "ಎಲ್ಲರ ಫ್ಯಾಮಿಲಿಗೂ ಕೇಳಿದ್ರು, ಎಲ್ಲರಿಗೂ ಬೇಜಾರ್ ಮಾಡಿರುವುದು ನಮ್ಮ ಮಕ್ಕಳಿಗೆ ಅಂದ್ರೆ, ಯಾರು ಹೇಳಲ್ಲ" ಎಂದಿದ್ದಾರೆ. ಈ ಮಾತಿಗೆ ಗಿಲ್ಲಿ ಒಂದು ಕ್ಷಣ ಶಾಕ್ ಆಗಿದ್ದಾರೆ. ಕಾವ್ಯಾ ಸೇರಿ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ.

ಸೂರಜ್‌ಗೆ ಬಿಗ್‌ಬಾಸ್ ಸ್ವೀಟ್ ಶಾಕ್ ಕೊಟ್ಟಿದ್ದಾರೆ. ಅವರ ಮನೆಯಿಂದ ಒಂದು ಪತ್ರ ಮಾತ್ರ ಬಂದಿದೆ. ಅವರ ತಾಯಿ ಏನಾದರೂ ಅಡುಗೆ ಮಾಡಿ ಬಾಕ್ಸ್‌ಗೆ ಹಾಕಿ ಕಳುಹಿಸುವಂತೆ ಕೇಳಿದ್ದಾರೆ. ಸೂರಜ್ ಬೇರಸದಿಂದಲೇ ಅಡುಗೆ ಮಾಡಿ ಬಾಕ್ಸ್‌ಗೆ ಹಾಕಿ ಕನ್ಫೆಷನ್ ರೂಮ್‌ಗೆ ತೆಗೆದುಕೊಂಡು ಹೋಗಿ ಇಡಲು ಮುಂದಾಗಿದ್ದಾರೆ. ಅಚ್ಚರಿ ಅಂದ್ರೆ ಅವರ ತಾಯಿ ಅಲ್ಲೇ ಕೂತಿದ್ದು ನೋಡಿ ಸೂರಜ್ ಆನಂದಬಾಷ್ಪ ಸುರಿಸಿದ್ದಾರೆ.

ಗಿಲ್ಲಿ ಬಗ್ಗೆ ಬೇರೆ ಸ್ಪರ್ಧಿಗಳ ಕುಟುಂಬ ಸದಸ್ಯರು ಏನು ಬೇಕಾದರೂ ಮಾತನಾಡಬಹುದು. ಆದರೆ ಧನುಷ್ ಪೋಷಕರು ಮಾತ್ರ ಪಾಸಿಟಿವ್ ಮಾತನಾಡುತ್ತಾರೆ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ಕಾರಣ ಮೊದಲಿನಿಂದಲೂ ಗಿಲ್ಲಿ ಪರ ಧನುಷ್ ನಿಂತಿದ್ದಾರೆ. ಧನುಷ್ ವಿಚಾರದಲ್ಲಿ ಗಿಲ್ಲಿ ಕೂಡ ಕಾಮಿಡಿ ಮಾಡುವ ಗೋಜಿಗೆ ಹೋಗಲಿಲ್ಲ. ಹಾಗಾಗಿ ಅವರ ಕುಟುಂಬ ಸದಸ್ಯರು ಗಿಲ್ಲಿ ಬಗ್ಗೆ ಮೆಚ್ಚುಗೆ ಸೂಚಿಸುವುದು ಗ್ಯಾರಂಟಿ ಎಂದು ಕೆಲವರು ಊಹಿಸುತ್ತಿದ್ದಾರೆ.

ಈ ಬಾರಿ ಸೀಸನ್ 80 ದಿನ ಪೂರೈಸಿದೆ. ಫಿನಾಲೆಗೆ 3 ದಿನ ಬಾಕಿಯಿದೆ. ಕಳೆದ ವಾರ ಎಲಿಮಿನೇಷನ್ ಇರಲಿಲ್ಲ. ಆದರೆ ಅತಿಥಿಗಳಾಗಿ ಮನೆ ಒಳಗೆ ಹೋಗಿದ್ದ ರಜತ್, ಚೈತ್ರಾ ಹೊರಗೆ ಬಂದಿದ್ದಾರೆ. ಈ ವಾರ ಫ್ಯಾಮಿಲಿ ರೌಂಡ್ ಆಗಿರುವುದರಿಂದ ಎಲಿಮಿನೇಷನ್ ಅನುಮಾನ ಎನ್ನುವಂತಾಗಿದೆ. ಮುಂದಿನ ವಾರ ಡಬಲ್ ಎಲಿಮಿನೇಷನ್ ಶಾಕ್ ಪಕ್ಕಾ ಎನ್ನುವ ಲೆಕ್ಕಾಚಾರ ಶುರುವಾಗಿದೆ. ಸದ್ಯ ಮನೆಯಲ್ಲಿ 11 ಮಂದಿ ಉಳಿದುಕೊಂಡಿದ್ದಾರೆ.

More from Filmibeat

Read more about: bigg boss 12 gilli bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X