BBK12: ಫಿನಾಲೆಗೆ ಕಾವ್ಯಾ ಹಾಗೂ ರಕ್ಷಿತಾ ತೊಡುವ ಕಾಸ್ಟ್ಯೂಮ್ಸ್ ಇದೇನಾ? ವಿಶೇಷತೆ ಏನು?

ಬಿಗ್‌ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ. ಭಾನುವಾರ ಸಂಜೆ 6 ಗಂಟೆಗೆ ಕಾರ್ಯಕ್ರಮ ಪ್ರಸಾರ ಆರಂಭವಾಗಲಿದೆ. ಶನಿವಾರ ಸಂಜೆಯೇ ಚಿತ್ರೀಕರಣ ಶುರುವಾಗುವ ನಿರೀಕ್ಷೆಯಿದೆ. ಇನ್ನು ಫಿನಾಲೆಗೆ ಸ್ಪರ್ಧಿಗಳೆಲ್ಲಾ ವಿಭಿನ್ನ ಕಾಸ್ಟ್ಯೂಮ್‌ಗಳಲ್ಲಿ ಮಿಂಚಲಿದ್ದಾರೆ.

ಫಿನಾಲೆಗೆ ಕಾವ್ಯಾ ಹಾಗೂ ರಕ್ಷಿತಾ ಡಿಸೈನರ್ ಗೌನ್‌ಗಳನ್ನು ತೊಟ್ಟು ಮಿಂಚಲಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋಗಳು ವೈರಲ್ ಆಗ್ತಿದೆ. ಪಿಕೆ ಡಿಸೈನರ್ ಹೌಸ್ ಬಿಗ್‌ಬಾಸ್ ಸ್ಪರ್ಧಿಗಳಿಗೆ ಕಾಸ್ಟ್ಯೂಮ್ ಡಿಸೈನ್ ಮಾಡಿ ಕೊಡುತ್ತದೆ. ಸದ್ಯ ಕಪ್ಪು ಬಣ್ಣದ ಫಿಶ್ ಕಟ್ ಗೌನ್‌ ಸಿದ್ಧಪಡಿಸಿದ್ದಾರೆ. ಇದನ್ನು ಫಿನಾಲೆಗೆ ಕಾವ್ಯಾ ಧರಿಸುತ್ತಾರೆ ಎನ್ನಲಾಗ್ತಿದೆ. ಆಕೆಯ ಸಹೋದರ ಕಾರ್ತಿಕ್ ಗೌನ್ ಮುಂದೆ ಕಾಣಿಸಿಕೊಂಡಿರುವ ವಿಡಿಯೋ ವೈರಲ್ ಆಗ್ತಿದೆ.

Bigg Boss Kannada 12 Grand Finale Kavya Rakshita Shine in Designer Wear and Gilli s Baniyan Becomes a Talking Point

ಅದೇ ರೀತಿ ಕಡು ನೀಲಿ ಬಣ್ಣದ ಗೌನ್‌ ಕೂಡ ಸಿದ್ಧವಾಗಿದ್ದು ರಕ್ಷಿತಾ ಫಿನಾಲೆಗೆ ಧರಿಸಿ ಮಿಂಚುತ್ತಾರೆ ಎನ್ನಲಾಗ್ತಿದೆ. ಇದೇ ಕಾಸ್ಟ್ಯೂಮ್‌ಗಳಲ್ಲಿ ಕಾವ್ಯಾ ಹಾಗೂ ರಕ್ಷಿತಾ ಫಿನಾಲೆಗೆ ತೊಟ್ಟು ಕಂಗೊಳಿಸುವ ಸಾಧ್ಯತೆಯಿದೆ. ಇವರಿಬ್ಬರ ಜೊತೆ ರಘು, ಧನುಷ್, ಅಶ್ವಿನಿ ಗೌಡ ಹಾಗೂ ಗಿಲ್ಲಿ ಬಿಗ್‌ಬಾಸ್ ಫಿನಾಲೆ ತಲುಪಿದ್ದಾರೆ. ಈ 6 ಮಂದಿ ಸ್ಪರ್ಧಿಗಳಲ್ಲಿ ಯಾರು ವಿನ್ನರ್ ಆಗಿ ಟ್ರೋಫಿ ಎತ್ತಿ ಹಿಡಿಯುತ್ತಾರೆ ಎನ್ನುವ ಕೂತೂಹಲ ಮೂಡಿದೆ.

ತಮ್ಮ ನೆಚ್ಚಿನ ಸ್ಪರ್ಧಿಗಳಿಗೆ ವೋಟ್ ಮಾಡಿ ಗೆಲ್ಲಿಸಲು ವೋಟಿಂಗ್ ಲೈನ್ಸ್ ಓಪನ್ ಆಗಿದೆ. ಭಾನುವಾರದವರೆಗೂ ಜನ ವೋಟ್ ಮಾಡಬಹುದು. ಜಿಯೋ ಹಾಟ್‌ಸ್ಟರ್ ಚಂದಾದಾರರು ವೋಟ್ ಮಾಡುವ ಅವಕಾಶ ಸಿಕ್ಕಿದೆ. ಈ ಬಾರಿ ದಾಖಲೆ ಮಟ್ಟದಲ್ಲಿ ವೋಟ್ ಪಡೆದು ಗಿಲ್ಲಿ ಗೆಲ್ಲುತ್ತಾರೆ ಎಂದು ಚರ್ಚೆ ನಡೀತಿದೆ. ಬನಿಯನ್ ಹಾಕಿಕೊಂಡು ಗಿಲ್ಲಿ ಬಿಗ್‌ಬಾಸ್ ಮನೆಯಲ್ಲಿ ಹೆಚ್ಚು ಕಾಣಿಸಿಕೊಂಡಿದ್ದರು. ಬನಿಯನ್ ಹಾಕಿಕೊಂಡಿದ್ರು ಗಿಲ್ಲಿ ರಾಜನ ರೀತಿ ಮೆರೆಯುತ್ತಿದ್ದಾರೆ ಎಂದು ಸ್ವತಃ ಕಿಚ್ಚ ಸುದೀಪ್ ಹೇಳಿದ್ದರು.

Bigg Boss Kannada 12 Grand Finale Kavya Rakshita Shine in Designer Wear and Gilli s Baniyan Becomes a Talking Point

ಗಿಲ್ಲಿ ಯಾವಾಗಲೂ ಬನಿಯನ್ ಹಾಕಿಕೊಂಡಿರ್ತಾನೆ ಎಂದು ಅಶ್ವಿನಿ ಮೂದಲಿಸಿದ್ದು ಇದೆ. ಬಿಗ್‌ಬಾಸ್ ಫಿನಾಲೆ ದಿನ ಗಿಲ್ಲಿ ಬನಿಯನ್ ಧರಿಸಿ ಬರ್ತಾರಾ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಇತ್ತೀವೆಗೆ ಬಿಗ್‌ಬಾಸ್ ಮನೆಗೆ ಒಂದಷ್ಟು ಅಭಿಮಾನಿಗಳು ಹೋಗಿದ್ದರು. ಅವರನ್ನು ನೋಡಿ ಸ್ಪರ್ಧಿಗಳು ಖುಷಿಯಾಗಿದ್ದರು. ಈ ವೇಳೆ ಅಭಿಮಾನಿಯೊಬ್ಬರು ಗಿಲ್ಲಿ ಬನಿಯನ್ ಹಾಕೊಂಡು ಫಿನಾಲೆಗೆ ಬನ್ನಿ ಎಂದು ಕೂಗಿ ಹೇಳಿದ್ದರು. ಖಂಡಿಯ ಅಣ್ಣ ಬನಿಯನ್ ಹಾಕ್ಕೊಂಡು ಬರ್ತೀನಿ ಎಂದು ಗಿಲ್ಲಿ ಪ್ರತಿಕ್ರಿಯಿಸಿದ್ದರು.

ಕಲರ್‌ಫುಲ್ ಡ್ಯಾನ್ಸ್ ಪರ್ಫಾರ್ಮನ್ಸ್‌ಗಳ ಜೊತೆಗೆ ಗ್ರ್ಯಾಂಡ್ ಫಿನಾಲೆ ಕಳೆಕಟ್ಟಲಿದೆ. ಈಗಾಗಲೇ ಎಲಿಮಿನೇಟ್ ಆಗಿ ಹೊರಬಂದಿರುವ ಸ್ಪರ್ಧಿಗಳು ಅಂದು ವೇದಿಕೆಗೆ ಬರಲಿದ್ದಾರೆ. ಪರ್ಫಾರ್ಮನ್ಸ್ ಮಾಡಿ ರಂಜಿಸಲಿದ್ದಾರೆ. ಇನ್ನು ಫಿನಾಲೆ ವೇದಿಕೆ ಏರಲು ಸುದೀಪ್ ಯಾವ ಕಾಸ್ಟ್ಯೂಮ್ ಧರಿಸುತ್ತಾರೆ ಎನ್ನುವ ಕೂತುಹಲ ಅಭಿಮಾನಿಗಳಲ್ಲಿದೆ. ಕಳೆದ ಬಾರಿ ಫಿನಾಲೆ ವೇದಿಕೆಗೆ ಲುಂಗಿ ಉಟ್ಟು ಹನುಮಂತ ಬಂದಿದ್ದರು. ಈ ಬಾರಿ ಗಿಲ್ಲಿ ಬನಿಯನ್ ಧರಿಸಿ ಬಂದರೂ ಅಚ್ಚರಿ ಪಡಬೇಕಿಲ್ಲ.

ಗಿಲ್ಲಿ ಗೆಲ್ಲಬೇಕು ಎಂದು ಅಭಿಮಾನಿಗಳು ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇನ್ನು ವಿಜೇತರಿಗೆ 50 ಲಕ್ಷ ರೂ. ನಗದು ಬಹುಮಾನ ಸಿಗಲಿದೆ. ಇನ್ನುಳಿದಂತೆ ರನ್ನರ್‌ ಅಪ್ ಆಗುವವರಿಗೂ ನಗದು ಜೊತೆಗೆ ಉಡುಗೊರೆಗಳು ಸಿಗುವ ನಿರೀಕ್ಷೆಯಿದೆ. ಒಟ್ಟು 19 ಮಂದಿ ಸ್ಪರ್ಧಿಗಳು ಗ್ರ್ಯಾಂಡ್ ಓಪನಿಂಗ್ ವೇದಿಕೆಯಿಂದ ಮನೆ ಪ್ರವೇಶಿಸಿದ್ದರು. ಬಳಿಕ ಮೂವರು ವೈಲ್ಡ್‌ಕಾರ್ಡ್ ಎಂಟ್ರಿ ಪಡೆದಿದ್ದರು. 22 ಮಂದಿ ಸ್ಪರ್ಧಿಗಳಲ್ಲಿ ಅಂತಿಮವಾಗಿ 6 ಮಂದಿ ಫಿನಾಲೆ ತಲುಪಿದ್ದಾರೆ.

More from Filmibeat

English summary
Bigg Boss Kannada Season 12 grand finale airs Sunday at 6 pm. Kavya and Rakshita to dazzle in designer gowns, Gilli emerges as strong winner contender, and fans await a colorful finale with surprises.
Read more about: bigg boss 12 bigg boss gilli
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X