BBK12 Grand Finale: ಎಲ್ಲರ ಲೆಕ್ಕಾಚಾರ ತಲೆ ಕೆಳಗಾಗಿಸಿದ ರಕ್ಷಿತಾ; ರನ್ನರ್ ಅಪ್ ಆಗಿ ಚಮತ್ಕಾರ

ಈ ಬಾರಿಯ ಬಿಗ್‌ಬಾಸ್ ಅಚ್ಚರಿ ಅಂದರೆ ರಕ್ಷಿತಾ ಫಿನಾಲೆ ತಲುಪಿದ್ದು. ಅಲ್ಲ ಅಲ್ಲ ಮೊದಲ ರನ್ನರ್ ಅಪ್ ಆಗಿದ್ದು ಅಂದ್ರೆ ತಪ್ಪಾಗಲ್ಲ. ಮೊದಲ ದಿನವೇ ಆಕೆಯನ್ನು ಮನೆ ಮಂದಿ ಹೊರಗೆ ಹಾಕಿದ್ದರು. ಆದರೆ ತಮ್ಮ ಅದ್ಭುತ ಆಟದಿಂದ ರಕ್ಷಿತಾ ಎಲ್ಲರ ಲೆಕ್ಕಾಚಾರ ತಲೆ ಕೆಳಗಾಗಿಸಿಬಿಟ್ಟರು.

ಉಡುಪಿ ಮೂಲದ ರಕ್ಷಿತಾ ಬೆಳೆದಿದ್ದು ಮುಂಬೈನಲ್ಲಿ. ಹಾಗಾಗಿ ಕನ್ನಡ ಸ್ಪಷ್ಟವಾಗಿ ಮಾತನಾಡಲು ಕಷ್ಟಪಡುತ್ತಾರೆ. ಮಾತೃಭಾಷೆ ತುಳು.. ಬೆಂಗಳೂರಿಗೆ ಬಂದ ನಂತರ ಕನ್ನಡ ಕಲಿಯುತ್ತಿದ್ದು ತುಳು ಮತ್ತು ಕನ್ನಡ ಮಿಶ್ರಣ ಮಾಡಿ ಕೆಲವೊಮ್ಮೆ ಮಾತನಾಡುತ್ತಾರೆ. ಇದೇ ಕಾರಣಕ್ಕೆ ಆಕೆ ಇತರೆ ಸ್ಪರ್ಧಿಗಳಿಗಿಂತ ಭಿನ್ನವಾಗಿ ಕಂಡಿದ್ದರು. ಬಿಗ್‌ಬಾಸ್ ಮನೆಯಲ್ಲಿ ಒಂದು ವಾರ ಇದ್ದರೆ ಹೆಚ್ಚು ಎಂದುಕೊಂಡಿದ್ದ ರಕ್ಷಿತಾ ಫಿನಾಲೆಗೆ ಬಂದಿದ್ದೇ ವೀಕ್ಷಕರಿಗೂ ಶಾಕ್ ತಂದಿತ್ತು.

Bigg Boss 12 From First-Day Eviction to Runner-Up Rakshita s Stunning Journey Shocks Viewers

ಆರಂಭದಲ್ಲಿ ಮನೆ ಒಳಗಿದ್ದ ಕೆಲವರು ರಕ್ಷಿತಾ ಅವರನ್ನು ದೂಷಿಸಿದ್ದರು. ಆಕೆಯ ಬಗ್ಗೆ ವ್ಯಂಗ್ಯವಾಡಿದ್ದರು. ಅದರಲ್ಲೂ ಅಶ್ವಿನಿ ಹಾಗೂ ಜಾನ್ವಿ ವೈಯಕ್ತಿಕವಾಗಿ ಟಾರ್ಗೆಟ್ ಮಾಡುವ ಹಂತಕ್ಕೆ ಹೋಗಿದ್ದರು. ಅದನ್ನೆಲ್ಲಾ ಮೀರಿ ರಕ್ಷಿತಾ ಬಿಗ್‌ಬಾಸ್ ಆಟ ಆಡುತ್ತಾ ಬಂದರು. ಕೊನೆಗೆ ಟಾಪ್‌-2 ಹಂತಕ್ಕೆ ಏರಿಬಿಟ್ಟರು.

ಅಶ್ವಿನಿ, ಧ್ರುವಂತ್, ಜಾನ್ವಿ ರೀತಿಯ ಪ್ರಬಲ ಸ್ಪರ್ಧಿಗಳಿಗೆ ಟಪ್ ಕಾಂಪಿಟೇಷನ್ ಕೊಟ್ಟು ರಕ್ಷಿತಾ ಸದ್ದು ಮಾಡಿದ್ದರು. ವೀಕ್ಷಕರ ಬೆಂಬಲ ಕೂಡ ಆಕೆ ಸಿಕ್ಕಿತ್ತು. ಹಾಗಾಗಿ ಸುಲಭವಾಗಿ ಫಿನಾಲೆವರೆಗೂ ಜರ್ನಿ ಮುಂದುವರೆಸಿದರು. ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿ ರಕ್ಷಿತಾ ಗುರ್ತಿಸಿಕೊಂಡಿದ್ದರು. ಬಿಗ್‌ಬಾಸ್ ಮನೆಗೆ ಬಂದು ರಾಜ್ಯಾದ್ಯಂತ ಮನೆಮಾತಾಗಿ ಬಿಟ್ಟರು. ಅಶ್ವಿನಿ ಗೌಡ ಹಿಂದಿಕ್ಕೆ ಟಾಪ್‌-2 ಹಂತಕ್ಕೆ ಏರಿದ್ದನ್ನು ಇನ್ನು ಕೆಲವರಿಗೆ ಊಹಿಸಲು ಸಾಧ್ಯವಾಗ್ತಿಲ್ಲ.

ಫಿನಾಲೆ ದಿನ ಸುದೀಪ್ ಸರ್ ಎಡ ಬಲದಲ್ಲಿ ನಾನು ಹಾಗೂ ಕಾವ್ಯಾ ನಿಲ್ಲಬೇಕು ಎಂದು ಗಿಲ್ಲಿ ಕನಸು ಕಂಡಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಕಾವ್ಯಾ ಬದಲು ಸುದೀಪ್ ಎಡಭಾಗದಲ್ಲಿ ರಕ್ಷಿತಾ ನಿಂತಿದ್ದರು. ಗಿಲ್ಲಿ ಬಲಭಾಗದಲ್ಲಿದ್ದರು. ಗಿಲ್ಲಿ ಕೈ ಮೇಲೆತ್ತಿ ವಿನ್ನರ್ ಎಂದು ಸುದೀಪ್ ಘೋಷಿಸಿದರು. ರಕ್ಷಿತಾ ಸಾಧನೆ ಅನ್ನು ಕೂಡ ಮೆಚ್ಚಿಕೊಂಡರು.

ರನ್ನರ್ ಅಪ್ ಆಗಿ ಕಮಾಲ್ ಮಾಡಿದ ರಕ್ಷಿತಾಗೆ 25 ಲಕ್ಷ ರೂ. ನಗದು ಬಹುಮಾನ ಲಭಿಸಿತು. ಶ್ರೀಸಾಯಿ ಪ್ಯಾಲೇಸ್ ಇಂದ 20 ಲಕ್ಷ ರೂ. ಹಾಗೂ ಜಾರ್ ಆಪ್ ಕಡೆಯಿಂದ 5 ಲಕ್ಷ ರೂ. ಹಣ ಸಿಕ್ಕಿದೆ.

More from Filmibeat

Read more about: bigg boss 12 bigg boss gilli
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X