BBK12: ಕಾವ್ಯಾ ಪೋಷಕರಿಗೆ ಹೆದರಿದ ಗಿಲ್ಲಿ; ಅಶ್ವಿನಿ, ಮಾಳು ಜೊತೆ ಚರ್ಚೆ- ವಿಡಿಯೋ ವೈರಲ್

ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ನಟ ಹಾಗೂ ಕಾವ್ಯಾ ಶೈವ ಸ್ನೇಹ, ಒಡನಾಟ ಗೊತ್ತೇಯಿದೆ. ಮೊದಲ ದಿನವೇ ಜಂಟಿಯಾಗಿ ಇಬ್ಬರೂ ಮನೆ ಒಳಗೆ ಹೋಗಿದ್ದರು. ಬಳಿಕ ಕೈಗೆ ಕಟ್ಟಿದ್ದ ದಾರ ತೆಗೆದರೂ ಆಕೆಯ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಗಿಲ್ಲಿ. ಆದರೆ ಈಗ ಆಕೆಯ ಪೋಷಕರ ಬಗ್ಗೆ ಆತಂಖ ಶುರುವಾಗಿದೆ.

ಸೀಸನ್ 12 ಈಗ 80ನೇ ದಿನಕ್ಕೆ ಕಾಲಿಟ್ಟಿದೆ. ಕಳೆದ ವಾರ ಎಲಿಮಿನೇಷನ್ ಇರಲಿಲ್ಲ. ಬದಲಿಗೆ ಧ್ರುವಂತ್ ಹಾಗೂ ರಕ್ಷಿತಾ ಸೀಕ್ರೆಟ್ ರೂಮ್‌ಗೆ ಬಂದಿದ್ದಾರೆ. ಆದರೆ ಈ ವಿಚಾರ ಮನೆಮಂದಿಗೆ ಗೊತ್ತಿಲ್ಲ. ಅವರ ಪ್ರಕಾರ ಇಬ್ಬರೂ ಔಟ್ ಆಗಿದ್ದಾರೆ. ಇದೆಲ್ಲದರ ನಡುವೆ ಶೀಘ್ರದಲ್ಲೇ ಫ್ಯಾಮಿಲಿ ರೌಂಡ್ ಬರುವ ನಿರೀಕ್ಷೆಯಿದೆ. ಇದೇ ಸಮಯದಲ್ಲಿ ಕಾವ್ಯಾ ಪೋಷಕರು ಬಂದ್ರೆ ನಾನು ನಾನು ಓಡಿ ಹೋಗ್ತೀನಿ ಎಂದು ಗಿಲ್ಲಿ ಹೇಳಿದ್ದಾರೆ.

Bigg Boss 12 Gilli nata Jokes About Hiding If Kavya s Parents Enter the House Video Viral

ಅಶ್ವಿನಿ ಗೌಡ ಹಾಗೂ ಮಾಳು ಜೊತೆ ಚರ್ಚಿಸುತ್ತಾ ತಮಾಷೆಯಾಗಿ ಈ ವಿಚಾರದ ಬಗ್ಗೆ ಗಿಲ್ಲಿ ಮಾತನಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಾವ್ಯಾ ಬದಲಾಗಿದ್ದಾರೆ. ಗಿಲ್ಲಿಯಿಂದ ದೂರಾಗಿ ಆಟ ಆಡಲು ಮುಂದಾಗಿದ್ದಾರೆ. ಅಚ್ಚರಿ ಎನ್ನುವಂತೆ ಕಳೆದ ವಾರ ನಾಮಿನೇಟ್ ಕೂಡ ಮಾಡಿದ್ದರು. ಇದರ ಬೆನ್ನಲ್ಲೇ 'ವಿಲನ್' ಸೀಕ್ರೆಟ್ ಟಾಸ್ಕ್ ಕೊಟ್ಟು ಇಬ್ಬರಿಗೂ ಶಾಕ್ ಕೊಟ್ಟಿದ್ದರು.

ಕಾವ್ಯಾ ಅಳುವಂತೆ ಮಾಡಬೇಕು ಎಂದು ಗಿಲ್ಲಿಗೆ ಸೀಕ್ರೆಟ್ ಟಾಸ್ಕ್ ಕೊಟ್ಟಿದ್ದರು. ಅದರಂತೆ ಗಿಲ್ಲಿ ಬಾಯಿಗೆ ಬಂದಂತೆ ಮಾಡಿ ಆಕೆಯ ಮನಸ್ಸು ನೋಯಿಸಿದ್ದರು. ಸ್ಪಂದನಾ ಜೊತೆ ಮಾತನಾಡುತ್ತಾ ಕಾವ್ಯಾ ಕಣ್ಣೀರು ಹಾಕಿದ್ದರು. ಇದು ಸೀಕ್ರೆಟ್ ಟಾಸ್ಕ್ ಎನ್ನುವುದು ಕಾವ್ಯಾ ಗಮನಕ್ಕೂ ಬಂದಿತ್ತು. ವೀಕೆಂಡ್ ಕಿಚ್ಚನ ಪಂಚಾಯ್ತಿ ವೇಳೆ ಈ ವಿಷಯ ಚರ್ಚೆ ಆಗಿತ್ತು. ಮೊದಲಿನಿಂದಲೂ ಕಾವ್ಯಾ ಪರ ಗಿಲ್ಲಿ ನಿಂತಿದ್ದಾರೆ.

ಕಾವ್ಯಾಳನ್ನು ಪದೇ ಪದೆ ರೇಗಿಸುತ್ತಿರುತ್ತಾರೆ. ಕಾವು ಕಾವು ಎಂದು ತಮಾಷೆ ಮಾಡುತ್ತಿರುತ್ತಿದ್ದಾರೆ. ಇದು ಕೆಲವೊಮ್ಮೆ ಅತಿರೇಕಕ್ಕೆ ಹೋಗಿರುವುದು ಇದೆ. ಪರಿ ಪರಿಯಾಗಿ ಹೇಳಿ ಗಿಲ್ಲಿಗೆ ತಿಳಿ ಹೇಳುವ ಪ್ರಯತ್ನ ಮಾಡಿದ್ದಾರೆ. ಆದರೆ ಆತ ಮಾತ್ರ ತಮಾಷೆ ಮಾಡುವುದು ಬಿಟ್ಟಿಲ್ಲ. ಹೇಗಾದರೂ ಮಾಡಿ ಗಿಲ್ಲಿಯಿಂದ ದೂರಾಗಿ ತಮ್ಮ ವೈಯಕ್ತಿಕ ಸಾಮರ್ಥ್ಯ ಪ್ರದರ್ಶಿಶಿಸಿ ಆಡಬೇಕು ಎಂದು ಕಾವ್ಯಾ ನಿರ್ಧರಿಸಿದ್ದಾರೆ. ತಾನು ಕಾವ್ಯಾಳನ್ನು ಇಷ್ಟೆಲ್ಲಾ ರೇಗಿಸುವ ವಿಚಾರದ ಬಗ್ಗೆ ಆಕೆಯ ಪೋಷಕರ ಪ್ರತಿಕ್ರಿಯೆ ಏನಿರಬಹುದು ಎಂದು ಗಿಲ್ಲಿ ಕೂತುಹಲದಿಂದ ಇದ್ದಾರೆ.

ಫ್ಯಾಮಿಲಿ ರೌಂಡ್ ವಿಚಾರದ ಬಗ್ಗೆ ಅಶ್ವಿನಿ ಹಾಗೂ ಮಾಳು ಬಳಿ ಚರ್ಚಿಸಿದ್ದಾರೆ. "ಕಾವ್ಯಾ ಪೋಷಕರು ಬಂದ್ರೆ ನಾನು ಒಳಕ್ಕೆ ಓಡಿಹೋಗ್ತೀನಿ. ಬಂದು ಹೊಡೆದುಬಿಟ್ರೆ ಯಾಕ್ ಬೇಕು. ಮೊದ್ಲು ಹೋಗಿ ಮುಚ್ಚಿಟ್ಟುಕೊಂಡಿರ್ತೀನಿ. ಅವರ ರಿಯಾಕ್ಷನ್ ನೋಡ್ತೀನಿ. ನನ್ನ ಹುಡುಕುತ್ತಿದ್ದರೆ ಅಲ್ಲೇ ಬಚ್ಚಿಟ್ಟಿಕೊಳ್ತೀನಿ. ಗಿಲ್ಲಿ ಎಲ್ಲೋದ್ರು ಎಂದು ಕೇಳಿದ್ರೆ ಆಗ ಸ್ಟೈಲ್ ಆಗಿ ಬರ್ತೀನಿ. ಅದಕ್ಕಂತ್ಲೆ ಒಂದು ಸೂಟ್ ಎತ್ತಿಟ್ಟುಕೊಂಡಿರ್ತೀನಿ" ಎಂದು ಗಿಲ್ಲಿ ತಮಾಷೆ ಮಾಡಿದ್ದಾರೆ.

"ಗಿಲ್ಲಿ ಎಲ್ಲೋದ್ರು ಅಂತ ಕೇಳಿದ್ರೆ ಮಾತ್ರ ಬರ್ತೀಯಾ? ಇಲ್ಲದಿದ್ದರೆ ಬರಲ್ವಾ?" ಎಂದು ಅಶ್ವಿನಿ ತಮಾಷೆ ಮಾಡಿದ್ದಾರೆ. ಈ ವೀಡಿಯೋ ಸಖತ್ ವೈರಲ್ ಆಗ್ತಿದೆ.

ತಿಂಗಳುಗಳ ಕಾಲ ಮನೆ ಬಿಟ್ಟು ಸ್ಪರ್ಧಿಗಳು ದೊಡ್ಮನೆ ಒಳಗೆ ಸೇರಿರುತ್ತಾರೆ. ಕುಟುಂಬಸ್ಥರ ಜೊತೆ ಯಾವುದೇ ಸಂಪರ್ಕ ಇರಲ್ಲ. ಫೋನ್ ಮಾಡಿ ಮಾತನಾಡು ಅವಕಾಶ ಕೂಡ ಇರಲ್ಲ. ಫಿನಾಲೆ ಹತ್ತಿರವಾದಂತೆ ಫ್ಯಾಮಿಲಿ ರೌಂಡ್ ನಡೆಯುತ್ತದೆ. ಹಾಗಾಗಿ ಸ್ಪರ್ಧಿಗಳ ತಂದೆ, ತಾಯಿ, ಮಡದಿ ಹೀಗೆ ಕುಟುಂಬ ಸದಸ್ಯರನ್ನು ಮನೆ ಒಳಗೆ ಕಳುಹಿಸಲಾಗುತ್ತದೆ. ಸ್ಪರ್ಧೆಯನ್ನು ಇನ್ನಷ್ಟು ಭಾವನಾತ್ಮಕ ಮತ್ತು ಕುತೂಹಲಕಾರಿಯಾಗಿ ಮಾಡಲು ಇದು ಸಹಕಾರಿಯಾಗುತ್ತದೆ. ಈ ವೇಳೆ ಕುಟುಂಬಸ್ಥರು ಬಂದು ಸ್ಪರ್ಧಿಗಳಿಗೆ ಧೈರ್ಯ ತುಂಬುವುದು, ಸರಿ, ತಪ್ಪುಗಳ ಚರ್ಚೆ ಮಾಡುವುದು ನಡೆಯುತ್ತದೆ.

More from Filmibeat

Read more about: bigg boss 12 bigg boss gilli
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X