BBK12: ಬಿಗ್‌ಬಾಸ್ 'ಸೀಕ್ರೆಟ್' ಗಿಲ್ಲಿಗೆ ಗೊತ್ತಾಗಿ ಹೋಯ್ತಾ? ಅವ್ನು ಸ್ಮಾರ್ಟ್ ಎಂದ ರಕ್ಷಿತಾ
ಬಿಗ್‌ಬಾಸ್ ಸೀಸನ್ 12 ಸಾಕಷ್ಟು ಸರ್‌ಪ್ರೈಸ್‌ಗಳಿಗೆ ಕಾರಣವಾಗಿದೆ. ಇದೀಗ ಆಟ ಬೇರೆಯದ್ದೇ ದಾರಿಗೆ ಹೊರಳಿದೆ. ಮನೆಯಲ್ಲಿ ಸದ್ಯ 11 ಮಂದಿ ಸ್ಪರ್ಧಿಗಳು ಇದ್ದಾರೆ. ಅದರಲ್ಲಿ ರಜತ್ ಹಾಗೂ ಚೈತ್ರಾ ಅತಿಥಿಗಳಾಗಿ ಬಂದಿದ್ದಾರೆ. ಇನ್ನುಳಿದಂತೆ ಧ್ರುವಂತ್ ಹಾಗೂ ರಕ್ಷಿತಾ ಸೀಕ್ರೆಟ್ ರೂಮ್ ಸೇರಿದ್ದಾರೆ.
ಗಿಲ್ಲಿ ಸಿಕ್ಕಾಪಟ್ಟೆ ಸ್ಮಾರ್ಟ್ ಎಂದು ಅಭಿಮಾನಿಗಳು, ಸಹ ಸ್ಪರ್ಧಿಗಳು ಹೇಳುತ್ತಿರುತ್ತಾರೆ. ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ಗೆಸ್ ಮಾಡುವ ಸಾಕಷ್ಟು ವಿಚಾರಗಳು ನಿಜವಾಗುತ್ತಿದೆ. ಇದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಸದ್ಯ ಸೀಕ್ರೆಟ್ ರೂಮ್ ವಿಚಾರ ಕೂಡ ಗೊತ್ತಾಗಿರುವಂತೆ ಕಾಣುತ್ತಿದೆ. ಈ ಬಗ್ಗೆ ಕಾವ್ಯಾ ಜೊತೆ ಗಿಲ್ಲಿ ಮಾತನಾಡುತ್ತಿರುವ ವೀಡಿಯೋ ವೈರಲ್ ಆಗುತ್ತಿದೆ.

ಕಳೆದ ವಾರ ಎಲಿಮಿನೇಷನ್ ಇರಲಿಲ್ಲ. ನಾಮಿನೇಷನ್ ನಡೆದರೂ ವೋಟಿಂಗ್ ಲೈನ್ಸ್ ಓಪನ್ ಆಗಿರಲಿಲ್ಲ. ಹಾಗಾಗಿ ಎಲಿಮಿನೇಷನ್ ಇರಲ್ಲ, ರಜತ್ ಹಾಗೂ ಚೈತ್ರಾ ಹೊರಗಡೆ ಬರಬಹುದು ಎಂದು ಕೆಲವರು ಭಾವಿಸಿದ್ದರು. ಆದರೆ ಮನೆ ಮಂದಿಗೆ ಸುದೀಪ್ ಡಬಲ್ ಶಾಕ್ ಕೊಟ್ಟಿದ್ದರು. ಒಬ್ಬರಲ್ಲ ಇಬ್ಬರು ಎಲಿಮಿನೇಟ್ ಆಗುತ್ತಾರೆ ಎಂದು ಹೇಳಿ ಧ್ರುವಂತ್ ಹಾಗೂ ರಕ್ಷಿತಾ ಇಬ್ಬರನ್ನು ಹೊರಗೆ ಕರೆಸಿದ್ದರು. ಬಳಿಕ ಅವರು ಸೀಕ್ರೆಟ್ ರೂಮ್‌ಗೆ ಹೋಗಿರುವುದು ಗೊತ್ತೇಯಿದೆ.
ವೀಕ್ಷಕರಿಗೆ ಧ್ರುವಂತ್ ಹಾಗೂ ರಕ್ಷಿತಾ ಸೀಕ್ರೆಟ್ ರೂಮ್‌ನಲ್ಲಿರುವುದು ಗೊತ್ತು. ಆದರೆ ಮನೆ ಮಂದಿಯ ಪ್ರಕಾರ ಇಬ್ಬರೂ ಬಿಗ್‌ಬಾಸ್ ಜರ್ನಿ ಮುಗಿಸಿ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಆದರೂ ಮನೆಯಲ್ಲಿರುವ ಕೆಲವರಿಗೆ ಅನುಮಾನ ಮೂಡಿದೆ. ಫಿನಾಲೆ ಸ್ಪರ್ಧಿಗಳು ಎಂದುಕೊಂಡಿದ್ದ ಇಬ್ಬರೂ ಇಷ್ಟು ಬೇಗ ಹೊರಗೆ ಹೋಗಲು ಸಾಧ್ಯವಿಲ್ಲ ಎನ್ನುವ ಅನುಮಾನ ಮೂಡಿದೆ. ಸಾಲದ್ದಕ್ಕೆ ಒಂದಷ್ಟು ಲಕ್ಷಣಗಳನ್ನು ಮನಗಂಡಿದ್ದಾರೆ. ಎಲ್ಲರಿಗಿಂತ ಮೊದಲು ರಘು ಈ ವಿಚಾರವನ್ನು ಪ್ರಸ್ತಾಪಿಸಿದ್ದರು.
ಅಂದು ಧ್ರುವಂತ್ ಹಾಗೂ ರಕ್ಷಿತಾ ಹೊರಬಂದ ಮೇಲೆ ಗಿಲ್ಲಿ ಜೊತೆ ಮಾತನಾಡುತ್ತಾ ರಘು "ಇನ್ನೂ ಸೌಂಡ್ ಬಂದಿಲ್ಲ. ಏನೋ ಟ್ವಿಸ್ಟ್ ಇದೆ. ಇಷ್ಟು ಹೊತ್ತಿಗೆ ಜೋರಾಗಿ ಸದ್ದು ಬರಬೇಕು, ಬ್ಯಾಕ್ ಸ್ಟೇಜ್‌ಗೆ ಹೋಗಿ ಮಾತನಾಡುತ್ತಾರೆ. ವಿಟಿ ಹಾಕುತ್ತಾರೆ, ಜನ ಕೂಗಾಡುತ್ತಾರೆ. ಅದು ಕೇಳಿಸುತ್ತಿಲ್ಲ" ಎಂದಿದ್ದರು. ಗಿಲ್ಲಿ ಕೂಡ ಹೌದು ಎಂದಿದ್ದರು.
ಎರಡು ದಿನದ ಹಿಂದೆ ಕಾವ್ಯಾ ಕೂಡ ಮಾತನಾಡುತ್ತಾ ಅವರಿಬ್ಬರು ಸೀಕ್ರೆಟ್ ರೂಮ್‌ಗೆ ಹೋಗಿರಬಹುದಾ? ಎಂದು ಅನುಮಾನ ವ್ಯಕ್ತಪಡಿಸಿದ್ದರು. ಇದನ್ನೇ ಈಗ ಗಿಲ್ಲಿ ಕೂಡ ಊಹಿಸುತ್ತಿದ್ದಾರೆ. ಕಾವ್ಯಾ ಜೊತೆ ಈ ಬಗ್ಗೆ ಮಾತನಾಡಿರುವ ವೀಡಿಯೋ ಗಮನ ಸೆಳೆಯುತ್ತಿದೆ.
"ಅವರಿಬ್ಬರನ್ನು ಪಕ್ಕದಲ್ಲಿ ಮತ್ತೊಂದು ಶೆಡ್ ಹಾಕಿ ಬಿಗ್‌ಬಾಸ್ ನಡೆಸ್ತಿದ್ದಾರೆ, ಅವ್ರು ಮಾತನಾಡೋದು ನಾವು ಅವರ ಬಗ್ಗೆ ಮಾತಾಡೋದು ಕೇಳೋತರ, ನಮ್ಮನ್ನು ನೋಡೋತರ ಮಾಡಿದ್ದಾರಾ?" ಎಂದು ಗಿಲ್ಲಿ ಕಾವ್ಯ ಬಳಿ ಹೇಳಿದ್ದಾರೆ. ನಾನು ಅದೇ ಅಂದುಕೊಂಡೆ, ಎಕ್ಸ್‌ಪೆಕ್ಟೆಡ್ ದೆನ್ ಅನ್ ಎಕ್ಸ್‌ಪೆಕ್ಟೆಡ್ ಅಲ್ವಾ? ಎಂದಿದ್ದಾರೆ. ಇದನ್ನು ಕೇಳಿ "ಗಿಲ್ಲಿ ನಿಜಕ್ಕೂ ಸ್ಮಾರ್ಟ್" ಎಂದು ಸೀಕ್ರೆಟ್ ರೂಮ್‌ನಲ್ಲಿರುವ ರಕ್ಷಿತಾ ಪ್ರತಿಕ್ರಿಯಿಸಿದ್ದಾರೆ.
ವೀಕ್ಷಕರಲ್ಲಿ ಕೆಲವರು ಈ ಬಗ್ಗೆ ಚರ್ಚೆ ಆರಂಭಿಸಿದ್ದಾರೆ. ಧ್ರುವಂತ್ ಹಾಗೂ ರಕ್ಷಿತಾ ರೀ-ಎಂಟ್ರಿ ಮನೆ ಮಂದಿಗೆ ನಿಜಕ್ಕೂ ಶಾಕಿಂಗ್ ಆಗಿರಬೇಕು. ಆ ರೀತಿ ಬಿಗ್‌ಬಾಸ್ ಏನಾದರೂ ಪ್ಲ್ಯಾನ್ ಮಾಡಬೇಕು. ಆಗ ಮಾತ್ರ ಮಜಾ. ಕಾರಣ ಕೆಲವರಿಗೆ ಸೀಕ್ರೆಟ್ ರೂಮ್ ಬಗ್ಗೆ ಅನುಮಾನ ಬಂದಿದೆ. ಹಾಗಾಗಿ ಬಿಗ್‌ಬಾಸ್ ಸರಿಯಾದ ಶಾಕ್ ಕೊಡಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಅಂದಹಾಗೆ ಕ್ರೇಜಿಸ್ಟಾರ್ ರವಿಚಂದ್ರನ್ ಬಿಗ್‌ಬಾಸ್ ಮನೆಗೆ ಅತಿಥಿಯಾಗಿ ಹೋಗಿದ್ದಾರೆ. ರಾಶಿಕಾ ನಟನೆಯ 'ಪ್ಯಾರ್' ಚಿತ್ರದ ರವಿಮಾಮ ನಟಿಸಿದ್ದಾರೆ. ಚಿತ್ರದ ಆಡಿಯೋ ಲಾಂಚ್ ಮಾಡಲು ದೊಡ್ಮನೆ ಒಳಗೆ ಹೋಗಿದ್ದಾರೆ. ಕೆಲ ಸಮಯ ಸ್ಪರ್ಧಿಗಳ ಜೊತೆ ಕಳೆದು ಬಂದಿದ್ದಾರೆ.


Click it and Unblock the Notifications











