'ಬಿಗ್ ಬಾಸ್' ಮನೆಯೊಳಗೆ ಕಾಲಿಡಲಿರುವ ಟೀಂ ಇಂಡಿಯಾ ಕ್ರಿಕೆಟರ್ ಯಾರು.?

ಹಿಂದಿ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್-12' ಆರಂಭಕ್ಕೆ ಇನ್ನೊಂದೇ ದಿನ ಬಾಕಿ. ಸೆಪ್ಟೆಂಬರ್ 16, ಅಂದ್ರೆ ನಾಳೆ ಸಂಜೆ 'ಬಿಗ್ ಬಾಸ್-12' ಪ್ರೀಮಿಯರ್ ಆಗಲಿದೆ. ಸ್ಪರ್ಧಿಗಳೆಲ್ಲಾ 'ಬಿಗ್ ಬಾಸ್' ಮನೆಯೊಳಗೆ ಕಾಲಿಡುತ್ತಾರೆ.

ಈ ಬಾರಿ 'ಬಿಗ್ ಬಾಸ್' ಮನೆಯೊಳಗೆ ಯಾರೆಲ್ಲಾ ಹೋಗಬಹುದು ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. ವೀಕ್ಷಕರ ಕುತೂಹಲವನ್ನ ಇಮ್ಮಡಿಗೊಳಿಸಲು ಕಲರ್ಸ್ ವಾಹಿನಿ ಎರಡು ಪ್ರೋಮೋಗಳನ್ನ ಬಿಡುಗಡೆ ಮಾಡಿದೆ.

ಒಂದು ಪ್ರೋಮೋದಲ್ಲಿ ಕ್ರಿಕೆಟರ್ ಒಬ್ಬರು 'ಬಿಗ್ ಬಾಸ್' ಮನೆ ಕದ ತಟ್ಟಲು ರೆಡಿ ಆಗಿರುವಂತಿದೆ. ಇನ್ನೊಂದು ಪ್ರೋಮೋದಲ್ಲಿ ಕಿರುತೆರೆ ನಟಿ ಇರುವ ಹಾಗಿದೆ. ಬಹಳ ನಾಜೂಕಾಗಿ ಎಡಿಟ್ ಮಾಡಲಾಗಿರುವ ಈ ಪ್ರೋಮೋದಲ್ಲಿ ಇರುವ ಕ್ರಿಕೆಟರ್ ಯಾರು, ಕಿರುತೆರೆ ನಟಿ ಯಾರು ಅನ್ನೋದನ್ನ ಕಲರ್ಸ್ ವಾಹಿನಿ ಬಹಿರಂಗ ಪಡಿಸಿಲ್ಲ.

ಆದರೆ, ಈ ಪ್ರೋಮೋ ನೋಡುತ್ತಿದ್ದಂತೆಯೇ, ಎಲ್ಲರೂ ಊಹಿಸಲು ಶುರು ಮಾಡಿದ್ದಾರೆ. ವರದಿಗಳ ಪ್ರಕಾರ, ಟೀಂ ಇಂಡಿಯಾದ 'ಈ' ಕ್ರಿಕೆಟರ್ 'ಬಿಗ್ ಬಾಸ್' ಮನೆಯೊಳಗೆ ಹೋಗ್ತಾರಂತೆ.! ಯಾರವರು.? ನೀವೇ ನೋಡಿ...

ಕಲರ್ಸ್ ವಾಹಿನಿ ಬಿಡುಗಡೆ ಮಾಡಿರುವ ಮೊದಲ ಪ್ರೋಮೋ...

''ಬಿಗ್ ಬಾಸ್-12' ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ ಕ್ರಿಕೆಟ್ ನ ಸೂಪರ್ ಸ್ಟಾರ್'' ಎಂಬ ಕ್ಯಾಪ್ಷನ್ ಜೊತೆಗೆ ಕಲರ್ಸ್ ವಾಹಿನಿ ಈ ಪ್ರೋಮೋ ಬಿಡುಗಡೆ ಮಾಡಿದೆ. ಮೋಲ್ನೋಟಕ್ಕೆ ಟೀಂ ಇಂಡಿಯಾದ ಬೌಲರ್ ಒಬ್ಬರು 'ಬಿಗ್ ಬಾಸ್' ಮನೆಗೆ ಬರುತ್ತಿರುವುದು ಪಕ್ಕಾ.

'ಆ' ಕ್ರಿಕೆಟರ್ ಇವರೇನಾ.?

'ಆ' ಕ್ರಿಕೆಟರ್ ಇವರೇನಾ.?

ಕಲರ್ಸ್ ವಾಹಿನಿಯ ಈ ಪ್ರೋಮೋ ನೋಡುತ್ತಿದ್ದಂತೆಯೇ, ಎಲ್ಲರೂ 'ಶ್ರೀಶಾಂತ್' ಹೆಸರನ್ನ ಜಪ ಮಾಡುತ್ತಿದ್ದಾರೆ. ಈಗಾಗಲೇ ಕಿರುತೆರೆಯ ಡ್ಯಾನ್ಸ್ ಶೋನಲ್ಲಿ ಭಾಗವಹಿಸಿ, ಸಿನಿಮಾಗಳಲ್ಲೂ ಅಭಿನಯಿಸಿರುವ ಶ್ರೀಶಾಂತ್ 'ಬಿಗ್ ಬಾಸ್' ಕದ ತಟ್ಟುತ್ತಾರಾ.? ಕಾದು ನೋಡಬೇಕು.

ಕಲರ್ಸ್ ವಾಹಿನಿ ಬಿಡುಗಡೆ ಮಾಡಿರುವ ಎರಡನೇ ಪ್ರೋಮೋ...

ಕಲರ್ಸ್ ವಾಹಿನಿ ಬಿಡುಗಡೆ ಮಾಡಿರುವ ಈ ಎರಡನೇ ಪ್ರೋಮೋದಲ್ಲಿ ನಟಿಯೊಬ್ಬರು ಡ್ಯಾನ್ಸ್ ಮಾಡಿದ್ದಾರೆ. ಆದ್ರೆ, ಆ ನಟಿಯ ಮುಖವನ್ನ ಬಹಿರಂಗ ಪಡಿಸಿಲ್ಲ.

ಇವರೇನಾ 'ಆ' ನಟಿ.?

ಇವರೇನಾ 'ಆ' ನಟಿ.?

ವರದಿಗಳ ಪ್ರಕಾರ, 'ಬಿಗ್ ಬಾಸ್-12' ಕಾರ್ಯಕ್ರಮದಲ್ಲಿ ಕಿರುತೆರೆ ನಟಿ ನೇಹಾ ಸ್ಪರ್ಧಿಯಾಗಿ ಭಾಗವಹಿಸುತ್ತಿದ್ದಾರೆ.

'ರೋಡೀಸ್'ನ ಬಾಯ್ಬಡಿಕಿಯರು.!

'ರೋಡೀಸ್'ನ ಬಾಯ್ಬಡಿಕಿಯರು.!

ಎಂಟಿವಿ ರೋಡೀಸ್ ನಲ್ಲಿ ವಿವಾದ ಹಾಗೂ ಜಗಳಗಳ ಕೇಂದ್ರಬಿಂದು ಆಗಿದ್ದ ಸುರಭಿ ರಾಣಾ ಹಾಗೂ ಕ್ರಿತಿ ವರ್ಮಾ ಕೂಡ 'ಬಿಗ್ ಬಾಸ್-12' ನಲ್ಲಿ ವಿಚಿತ್ರ ಜೋಡಿ ಆಗಿ ಸ್ಪರ್ಧಿಸುತ್ತಿದ್ದಾರಂತೆ. ಅಲ್ಲಿಗೆ, ಇಲ್ಲೂ ಜಗಳ ಸಿಕ್ಕಾಪಟ್ಟೆ ಇರುತ್ತೆ ಅನ್ನೋದು ಕನ್ಫರ್ಮ್.

ನಾಳೆ ಪ್ರೀಮಿಯರ್

ನಾಳೆ ಪ್ರೀಮಿಯರ್

ನಾಳೆ (ಸೆಪ್ಟೆಂಬರ್ 16) ರಾತ್ರಿ 9 ಗಂಟೆಗೆ ಕಲರ್ಸ್ ವಾಹಿನಿಯಲ್ಲಿ 'ಬಿಗ್ ಬಾಸ್-12' ಪ್ರೀಮಿಯರ್ ಆಗಲಿದೆ. ಇಂದು ಸಂಜೆ 9 ಗಂಟೆಗೆ ಸ್ಪರ್ಧಿಗಳ ಅನಾವರಣ ಆಗಲಿದೆ.

More from Filmibeat

English summary
Salman Khan's Bigg Boss 12: Latest promo reveals confirmed contestants.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X