BBK12: ಛೀ ಥೂ ಎಂದು ಸ್ಪರ್ಧಿಗಳ ನಡುವೆ ಕಿತ್ತಾಟ; ಗಿಲ್ಲಿ- ರಾಶಿಕಾ ಮಧ್ಯೆ ಕಿರಿಕ್

ಬಿಗ್‌ಬಾಸ್ ಮನೆಯಲ್ಲಿ ಕಳೆದ ವಾರ ಯಾವುದೇ ಟಾಸ್ಕ್ ಇಲ್ಲದೇ ಸ್ಪರ್ಧಿಗಳು ಆರಾಮಾಗಿ ಇದ್ದರು. ಈ ವಾರ ಮತ್ತೆ ಟಾಸ್ಕ್‌ಗಳು ಶುರುವಾಗಿದೆ. ನಾಮಿನೇಷನ್ ಪ್ರಕ್ರಿಯೆ ಜೋರಾಗಿದೆ. ಮಾಳು ವಾರದ ಕ್ಯಾಪ್ಟನ್ ಜವಾಬ್ದಾರಿ ತೆಗೆದುಕೊಂಡಿರುವುದು ಗೊತ್ತೇಯಿದೆ.

ಮನೆಯ ಸದಸ್ಯರಲ್ಲಿ ಯಾರ ತಲೆಯಲ್ಲಿ ಸಗಣಿ ತುಂಬಿದೆ, ಯಾರು ಮನೆಯ ಕಸ ಎಂದು ಮಾಳು ಹೇಳಬೇಕಿತ್ತು. ಅದಕ್ಕೆ ತಕ್ಕಂತೆ ಅವರ ಮೇಲೆ ಕಸ, ಸಗಣಿ ನೀರು ಸುರಿಯುವ ಶಿಕ್ಷೆ ಇತ್ತು. ದೃವಂತ್ ಮೇಲೆ ಮಾಳು ಸಗಣಿ ನೀರು ಸುರಿದಿದ್ದಾರೆ. ಅದಕ್ಕೆ ಕಾಕ್ರೋಚ್ ಸುಧಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಿಮ್ಮನ್ನು ಕ್ಯಾಪ್ಟನ್ ಮಾಡಿದ್ನಲ್ಲ ಅದಕ್ಕೆ ಅವನ ತಲೆಯಲ್ಲಿ ಸಗಣಿ ತುಂಬಿದೆ ಎಂದು ಸುಧಿ ಬೇಸರ ಹೊರ ಹಾಕಿದ್ದಾರೆ.

Bigg Boss 12 Promo Malu Sudhi Rashika and Gilli Clash Over Thoo Comment Drama Heats Up in the House

ಯಾರಿಗೆ ಯಾವುದು ಕೊಡಬೇಕು ಎನ್ನುವುದು ನನಗೆ ಗೊತ್ತು ಎಂದು ಮಾಳು ಪ್ರತಿಕ್ರಿಯಿಸಿದ್ದಾರೆ. ನಿನಗೆ ಆಟನೇ ಅರ್ಥವಾಗಿಲ್ಲ, ನಿನಗೆ ಮೆದುಳು ಇಲ್ಲ ಎಂದು ಸುಧಿ ತಿರುಗೇಟು ಕೊಟ್ಟಿದ್ದಾರೆ. ರಾಶಿಕಾ ಬಿಗ್‌ಬಾಸ್ ಮನೆ ಕಸ ಎಂದು ಮಾಳು ಹೇಳಿದ್ದಾರೆ. ಅದಕ್ಕೆ ಆಕ್ರೋಶಗೊಂಡ ಆಕೆ ಕಾರಣ ಕೇಳಿ ಕೂಗಾಡಿದ್ದಾರೆ. ಈ ವೇಳೆ ಥೂ ಎಂದು ರಾಶಿಕಾ ಹೇಳಿದ್ದು ಮಾಳು ಬೇಸರಕ್ಕೆ ಕಾರಣವಾಗಿದೆ.

'ಥೂ' ಎನ್ನಬೇಡ ಎಂದು ರಾಶಿಕಾಗೆ ಮಾಳು ಹೇಳಿದ್ದಾರೆ. ಆಗ ಗಿಲ್ಲಿ ಕೂಡ ಥೂ ಎಂದು ಕ್ಯಾತೆ ತೆಗಿದ್ದಾರೆ. ಅದಕ್ಕೆ ರಾಶಿಕಾ ಕೆಂಡಾಮಂಡಲವಾಗಿ ಛೀ ಥೂ ಎಂದು ಗಿಲ್ಲಿ ಮೇಲೆ ಕಿಡಿ ಕಾರಿದ್ದಾರೆ. ಅದಕ್ಕೆ ಸಂಬಂಧಿಸಿದ ಪ್ರೋಮೊ ರಿಲೀಸ್ ಆಗಿ ವೈರಲ್ ಆಗ್ತಿದೆ. ದೃವಂತ್ ವಿಚಾರದಲ್ಲಿ ಮಾಳು ನಡೆ ಸರಿಯಿಲ್ಲ ಎಂದು ಕೆಲ ವೀಕ್ಷಕರು ಹೇಳುತ್ತಿದ್ದಾರೆ. ಗಿಲ್ಲಿ ಸುಮ್ಮನಿರದೇ ಸದಾ ಯಾಕೆ ಕ್ಯಾತೆ ತೆಗೆಯುವುದು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

ಗಿಲ್ಲಿ ಮಾಡಿದ್ದರಲ್ಲಿ ತಪ್ಪೇನಿಲ್ಲ. ಆತನಿಂದಲೇ ಬಿಗ್‌ಬಾಸ್ -12 ಶೋ ಎಲ್ಲರೂ ನೋಡುತ್ತಿರುವುದು. ಇಲ್ಲದೇ ಇದ್ದರೆ ಶೋ ಪ್ಲಾಫ್ ಆಗ್ತಿತ್ತು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಗಿಲ್ಲಿ ಮಾತು, ಆಟ ಕೆಲವೊಮ್ಮೆ ಅತಿಯಾಯಿತು ಎನ್ನುವವರು ಇದ್ದಾರೆ. ಇತ್ತೀಚೆಗೆ ಪಂಚಾಯ್ತಿಯಲ್ಲಿ ಈ ಬಗ್ಗೆ ಸುದೀಪ್ ಕೂಡ ಬೇಸರ ವ್ಯಕ್ತಪಡಿಸಿ ಎಚ್ಚರಿಕೆ ಕೊಟ್ಟಿದ್ದರು.

ತಮ್ಮ ಬಟ್ಟೆಯನ್ನು ಬಾತ್‌ರೂಮ್ ಏರಿಯಾದಲ್ಲಿ ಗಿಲ್ಲಿ ಹಾಕಿದ್ದಕ್ಕೆ ರಿಷಾ ಗೌಡ ಆಕ್ರೋಶ ವ್ಯಕ್ತಪಡಿಸಿದ್ದರು. ಕೋಪದಲ್ಲಿ ಒಂದು ಏಟು ಹಾಕಿದ್ದರು. ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಸಹ ಸ್ಪರ್ಧಿಯ ಮೇಲೆ ಹಲ್ಲೆ ಮಾಡುವುದು ಬಿಗ್‌ಬಾಸ್ ನಿಯಮಕ್ಕೆ ವಿರುದ್ಧ. ಹಾಗಾಗಿ ರಿಷಾಗೆ ಎಲಿಮಿನೇಟ್ ಶಿಕ್ಷೆ ಕೊಡಬೇಕು ಎಂದು ಕೆಲವರು ಆಗ್ರಹಿಸಿದ್ದರು. ಮನೆಮಂದಿಗೆ ಆಯ್ಕೆ ಬಿಟ್ಟಾಗ ಎಲ್ಲರೂ ಸೇರಿ ಆಕೆಯನ್ನು ಉಳಿಸಿಕೊಂಡಿದ್ದರು. ಚಂದ್ರಪ್ರಭ ಎಲಿಮಿನೇಟ್ ಆಗಿದ್ದರು.

ರಿಷಾ ಗೌಡ ಮಾಡಿದ್ದು ತಪ್ಪೇ, ಆದರೆ ಗಿಲ್ಲಿ ಮಾಡಿದ್ದು ಕೂಡ ಸರಿಯಲ್ಲ ಎಂದು ಸುದೀಪ್ ತಿವಿದಿದ್ದರು. ನಾನು ಕೂಡ ನಮ್ಮ ಮನೆ ಹೆಣ್ಣು ಮಕ್ಕಳ ಬಟ್ಟೆ ಮುಟ್ಟಲು ಮುಜುಗರ ಪಡ್ತೀನಿ. ಹಾಗಿರುವಾಗ ನೀವು ಮಾಡಿದ್ದು ಸರಿಯಲ್ಲ ಎಂದು ಮಾತಿನ ಏಟು ಕೊಟ್ಟರು. ತಮಾಷೆ, ಫನ್ ಮಾಡುವ ವೇಳೆ ಆಟದ ನಿಯಮಗಳನ್ನು ಮೀರಬಾರದು. ಇದು ಮುಂದುವರೆದರೆ ಆದಷ್ಟು ಬೇಗ ಎಲಿಮಿನೇಟ್ ಆಗಿ ಬಂದು ವೇದಿಕೆಯಲ್ಲಿ ನಿಲ್ತೀರಾ ಎಂದು ಗಿಲ್ಲಿಗೆ ಸುದೀಪ್ ಎಚ್ಚರಿಕೆ ಕೊಟ್ಟಿದ್ದರು.

More from Filmibeat

Read more about: bigg boss 12 kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X