BBK12: ಗಿಲ್ಲಿಗೆ ಸವಾಲು ಹಾಕಿದ್ದ ರಜತ್ ಸೇಫ್; ಬಿಗ್‌ಬಾಸ್ ಮನೆಯಿಂದ ಹೊರಬಂದ ಧ್ರುವಂತ್, ರಕ್ಷಿತಾ

ಬಿಗ್‌ಬಾಸ್ ವೀಕೆಂಡ್ ಎಪಿಸೋಡ್ ಹೊಸ ಪ್ರೋಮೊ ಬಂದಿದೆ. ಈ ವಾರ ಇಬ್ಬರು ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಮನೆಮಂದಿಯ ಆಕ್ರೋಶಕ್ಕೆ ಗುರಿಯಾಗಿದ್ದ ರಜತ್ ಸೇಫ್ ಆಗಿದ್ದಾರೆ. ಧ್ರುವಂತ್ ಹಾಗೂ ರಕ್ಷಿತಾ ಅಚ್ಚರಿ ಎನ್ನುವಂತೆ ಬಿಗ್‌ಬಾಸ್ ಜರ್ನಿ ಮುಗಿಸಿ ಹೊರ ಬಂದಿದ್ದಾರೆ.

ಈ ವಾರ ಡಬಲ್ ಎಲಿಮಿನೇಷನ್ ಇರುತ್ತದೆ ಎನ್ನುವ ಊಹಾಪೋಹ ಶುರುವಾಗಿತ್ತು. ಆದರೆ ವೋಟಿಂಗ್ ಲೈನ್ಸ್ ಓಪನ್ ಆಗದೇ ಇರುವುದು ನೋಡಿ ಎಲಿಮಿನೇಷನ್ ಇರಲ್ಲ ಎಂದು ವೀಕ್ಷಕರು ಭಾವಿಸಿದ್ದಾರೆ. ಎಲಿಮಿನೇಷನ್ ಬದಲು ಅತಿಥಿಗಳಾಗಿ ಮನೆಯೊಳಗೆ ಹೋಗಿರುವ ರಜತ್ ಹಾಗೂ ಚೈತ್ರಾ ಹೊರಗಡೆ ಬರುತ್ತಾರೆ ಎಂದು ಕೆಲವರು ಭಾವಿಸಿದ್ದರು. ಆದರೆ ಅದು ಸುಳ್ಳಾಗಿದೆ. ಡಬಲ್ ಎಲಿಮಿನೇಷನ್ ನಡೆದಿದೆ. ಅಚ್ಚರಿ ಅಂದರೆ ಪ್ರೋಮೊದಲ್ಲೇ ಅದನ್ನು ರಿವೀಲ್ ಮಾಡಿದ್ದಾರೆ.

Bigg Boss 12 Promo Sparks Buzz Double Elimination Twist or Secret Room Shock

ಪ್ರೋಮೊ ನೋಡಿದ ಮೇಲೆ ವೀಕ್ಷಕರ ಅನುಮಾನ ಹೆಚ್ಚಿದೆ. ಸಾಮಾನ್ಯವಾಗಿ ಭಾನುವಾರದ ಎಪಿಸೋಡ್ ಕೊನೆ ಹಂತದವರೆಗೆ ಎಲಿಮಿನೇಟ್ ಆಗುವುದು ಯಾರು ಎನ್ನುವುದು ಗೊತ್ತಾಗಲ್ಲ. ಆದರೆ ಈ ವಾರ ಪ್ರೋಮೊದಲ್ಲೇ ಬಹಿರಂಗಪಡಿಸಿದ್ದಾರೆ. ನಿಜಕ್ಕೂ ಧ್ರುವಂತ್ ಹಾಗೂ ರಕ್ಷಿತಾ ಬಿಗ್‌ಬಾಸ್ ಜರ್ನಿ ಮುಗೀತಾ? ಅಥವಾ ಇನ್ನು ಏನಾದರೂ ಟ್ವಿಸ್ಟ್ ಇದ್ಯಾ? ಎನ್ನುವ ಅನುಮಾನ ಮೂಡಿದೆ. ಅಂದಹಾಗೆ ಇವರಿಬ್ಬರು ಪ್ರಬಲ ಸ್ಪರ್ಧಿಗಳು. ಫಿನಾಲೆ ಹೋಗುತ್ತಾರೆ ಎಂದು ಕೆಲವರು ಭಾವಿಸಿದ್ದಾರೆ. ಹಾಗಿರುವಾಗ ಎಲಿಮಿನೇಷನ್‌ ಹೇಗೆ ಸಾಧ್ಯ? ಎಂದು ಹುಬ್ಬೇರಿಸಿದ್ದಾರೆ.

ಧ್ರುವಂತ್ ಹಾಗೂ ರಕ್ಷಿತಾ ಬಿಗ್‌ಬಾಸ್ ಮನೆ ಜರ್ನಿ ಮುಗಿಸಿಲ್ಲ. ಆದರೆ ದೊಡ್ಮನೆ ಬಿಟ್ಟು ಚಿಕ್ಕ ಮನೆಗೆ ಅಂದರೆ ಸೀಕ್ರೆಟ್ ರೂಮ್‌ಗೆ ಹೋಗುತ್ತಾರೆ ಎನ್ನುವ ಚರ್ಚೆ ನಡೀತಿದೆ. ಅದೇ ಕಾರಣಕ್ಕೆ ಪ್ರೋಮೊದಲ್ಲಿ ಈ ರೀತಿ ಟ್ವಿಸ್ಟ್ ಕೊಟ್ಟಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ಬಿಗ್‌ಬಾಸ್ ಮನೆಯಲ್ಲಿ ಸೀಕ್ರೆಟ್ ರೂಮ್ ಹೊಸದೇನು ಅಲ್ಲ. ಸೀಸನ್ 12 ಶುರುವಾದ ಮೊದಲ ದಿನವೇ ರಕ್ಷಿತಾ ಎಲಿಮಿನೇಟ್ ಎಂದು ಹೇಳಲಾಗಿತ್ತು. ಬಳಿಕ ಆಕೆ ವಾಪಸ್ ಬಂದಿದ್ದರು. ಇಂತಹ ಟ್ವಿಸ್ಟ್, ಟರ್ನ್, ಶಾಕ್ ಬಿಗ್‌ಬಾಸ್ ಶೋನಲ್ಲಿ ಹೊಸದೇನು ಅಲ್ಲ.

ಇದಕ್ಕು ಮುನ್ನ ಸುದೀಪ್ ಮನೆಮಂದಿಗೆ ಒಂದು ಟಾಸ್ಕ್ ಕೊಟ್ಟಿದ್ದರು. ಯಾರ ಪಾಪದ ಕೊಡ ತುಂಬಿದೆ ಎಂದು ಹೇಳಿ ಕೇಳಿದ್ದರು. ಅದರಲ್ಲಿ ಒಬ್ಬೊಬ್ಬರು ಒಬ್ಬೊಬ್ಬರ ಹೆಸರು ತೆಗೆದುಕೊಂಡಿದ್ದರು. ಗಿಲ್ಲಿ ಹಾಗೂ ಅಶ್ವಿನಿ ಇಬ್ಬರು ಕೂಡ ರಜತ್ ಹೆಸರು ತೆಗೆದುಕೊಂಡಂತೆ ಕಾಣುತ್ತಿದೆ. ಗಿಲ್ಲಿ ಕೊಟ್ಟ ಕಾರಣ ರಜತ್ ಆಕ್ರೋಶಕ್ಕೆ ಕಾರಣವಾಗಿದೆ.

ಗಿಲ್ಲಿ: ನಾನು ರಜತ್ ಅಣ್ಣನ ಹೆಸ್ರು ತೆಗೆದುಕೊಳ್ತಿನಿ. ಮಾತು ಮಾತಿಗೆ ಮನೆಯಲ್ಲಿ ಕೆಲವರಿಗೆ ಟಾಸ್ಕ್ ಅರ್ಥ ಆಗಲ್ಲ ಅಂತಾರೆ.

ರಜತ್: ನಾನು ಗಿಲ್ಲಿನ ಲೆಕ್ಕ ಹಾಕಿಕೊಂಡಿರಲಿಲ್ಲ. ಕಾರಣ ನಾನು ಟಾಸ್ಕ್ ಆಡುವವರ ಬಗ್ಗೆ ಹೇಳ್ದೆ. ಗಿಲ್ಲಿ ಟಾಸ್ಕ್ ಆಡಲ್ಲ.

ಗಿಲ್ಲಿ: ನಾನು 10 ಟಾಸ್ಕ್ ಆಡಿದ್ರೆ 8 ಟಾಸ್ಕ್ ಅಲ್ಲಿ ಗೆದ್ದಿದ್ದೀನಿ ಸುದೀಪ್ ಅಣ್ಣ. ಮೊದಲ ಟಾಸ್ಕ್‌ನಲ್ಲೇ ಒಂದು ಬಾಲ್ ಹಾಕದೇ ಸೈಡ್‌ನಲ್ಲಿ ಕುಂತವರು ಇವ್ರು.

ರಜತ್: ನಾನು ಒಬ್ಬನೇ ಬಂದಿರೋದು ಒಬ್ಬನೇ ಆಡ್ತೀನಿ. ನನ್ನ ಪಾಪದ ಕೊಡ ತುಂಬಿದೆ ಎಂದು ಯಾರೆಲ್ಲಾ ಹೇಳಿದ್ರೋ ಅವರನ್ನೆಲ್ಲಾ ಹೊರಗಡೆ ಕಳಿಸಿ ನಾನು ಹೊರಗಡೆ ಕಾಲಿಡ್ತೀನಿ.

ಗಿಲ್ಲಿ: ನಾನು ಹೇಳ್ತೀನಿ, ರಜತ್ ಅಣ್ಣನ್ನು ಮನೆಯಿಂದ ಹೊರಗಡೆ ಕಳಿಸಿದ ಮೇಲೆ ನಾನು ಕೊರಗೆ ಬರ್ತೀನಿ.

ಹೀಗೆ ಗಿಲ್ಲಿ ಹಾಗೂ ರಜತ್ ಸವಾಲು ಪ್ರತಿಸವಾಲು ಹಾಕಿಕೊಂಡಿದ್ದಾರೆ. ಗಿಲ್ಲಿ ಮಾತಿಗೆ ಅಶ್ವಿನಿ ಕೈ ತಟ್ಟಿ ಸಂಭ್ರಮಿಸಿದ್ದಾರೆ. ಪ್ರೋಮೊ ಸಖತ್ ವೈರಲ್ ಆಗ್ತಿದೆ.

More from Filmibeat

Read more about: bigg boss 12 bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X