BBK12: ಸಿಂಪತಿ ವರ್ಕ್ ಆಗಲಿಲ್ಲ, ಗಿಲ್ಲಿ ಬದಲು ಅಶ್ವಿನಿಗೆ ಖಡಕ್ ಕ್ಲಾಸ್ ತಗೊಂಡ ಕಿಚ್ಚ
ಬಿಗ್‌ಬಾಸ್ ಸೀಸನ್ 12ರ ಮತ್ತೊಂದು ವೀಕೆಂಡ್ ಪಂಚಾಯ್ತಿಗೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಪ್ರೋಮೊ ಬಂದು ಕೂತೂಹಲ ಮೂಡಿಸಿದೆ. ಅಶ್ವಿನಿ ಗೌಡಗೆ ಕಿಚ್ಚ ಸುದೀಪ್ ಖಡಕ್ಕಾಗಿ ಕ್ಲಾಸ್ ತಗೊಂಡಿದ್ದಾರೆ. ಮನೆಯಲ್ಲಿ 'ವುಮೆನ್ ಕಾರ್ಡ್' ಬೇಡ ಎಂದು ನೇರವಾಗಿಯೇ ಹೇಳಿದ್ದಾರೆ.
ಗಿಲ್ಲಿ ಹಾಗೂ ರಘು ತಮ್ಮನ್ನು ಏಕವಚನದಲ್ಲಿ ಮಾತನಾಡಿಸಿದ ಬಗ್ಗೆ ಅಶ್ವಿನಿ ಗೌಡ ಖಂಡಿಸುತ್ತಾ ಬಂದಿದ್ದಾರೆ. ಇದೇ ವಿಚಾರದ ಬಗ್ಗೆ ಪಂಚಾಯ್ತಿಯಲ್ಲಿ ಚರ್ಚೆ ನಡೆದಿದೆ. ಅಶ್ವಿನಿ ಗೌಡ ತಮ್ಮ ಪರ ಸುದೀಪ್ ಮಾತನಾಡುತ್ತಾರೆ ಎಂದುಕೊಂಡಿದ್ದರು. ಆದರೆ ಎಲ್ಲವೂ ಉಲ್ಟಾ ಆಗಿದೆ. ಗೌರವ ಕೊಡುವ ಬಗ್ಗೆ ಅಶ್ವಿನಿ ಗೌಡಗೆ ಸುದೀಪ್ ಪಾಠ ಹೇಳಿದ್ದಾರೆ. ಮರು ಮಾತನಾಡದೇ ಅಶ್ವಿನಿ ಸುಮ್ಮನಾಗುವಂತಾಗಿದೆ.

ಎಷ್ಟು ತೇಜೊವಧೆ ಮಾಡುವುದಕ್ಕೆ ಆಗುತ್ತೋ ಅಷ್ಟು ತೇಜೊವಧೆ ಮಾಡಿದ್ರು ಎಂದು ಸುದೀಪ್ ಎದುರು ಅಶ್ವಿನಿ ಗೌಡ ಅಳಲು ತೋಡಿಕೊಂಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಸುದೀಪ್ "ನಿಮಗೆ ಹೋಗಿ ಬನ್ನಿ ಅಂತ ಅನ್ನಿಸಿಕೊಳ್ಳಬೇಕಂದ್ರೆ, ಪ್ರತಿ ಚಿಕ್ಕ ಮಗುವಿಗೆ ಹೋಗಿ ಬನ್ನಿ ಅಂತ ನೀವು ಹೇಳುವುದು ಕಲೀರಿ. ಮಾತೆತ್ತಿದ್ರೆ ಯಾವ ಹುಡುಗಿಗೂ ಹೀಗೆ ಮಾತಾಡ್ಬೇಡಿ ಅಂತೀರಾ. ಯಾರು ಏನು ಮಾತಾಡಿದ್ರು ಹೇಳಿ, ಹೆಣ್ಣು ಮಕ್ಕಳಲ್ಲಿ ಯಾರು ಯಾರು ಅಶ್ವಿನಿ ಅವ್ರ ಕೈಗೆ ನಿಮ್ಮ ಗೌರವ ಮರ್ಯಾದೆ ಕೊಟ್ಟು ಕೂತಿದ್ದೀರಾ ಕೈಎತ್ತಿ ಎಂದು ಸುದೀಪ್ ಕೇಳಿದ್ದಾರೆ. ಯಾರು ಕೈ ಎತ್ತದೇ ಇದ್ದಾಗ, ಓಹ್ ಇಷ್ಟೊಂದು ಕೈಗಳು ಎಂದು ಸುದೀಪ್ ವ್ಯಂಗ್ಯವಾಡಿದ್ದಾರೆ.
ಕೊನೆಯದಾಗಿ ಸುದೀಪ್ ಮಾತನಾಡಿ "ಅಶ್ವಿನಿಯವರೇ ಈ ಮನೆಯಲ್ಲಿ ವುಮೆನ್ ಕಾರ್ಡ್ ಬೇಡ" ಎಂದು ನೇರವಾಗಿಯೇ ಹೇಳಿದ್ದಾರೆ. ಪ್ರೋಮೊ ಸಖತ್ ವೈರಲ್ ಆಗ್ತಿದ್ದು ಕಿಚ್ಚನ ಪಂಚಾಯ್ತಿ ಎಪಿಸೋಡ್ ಕುತೂಹಲ ಮೂಡಿಸಿದೆ. ಸಾಕಷ್ಟು ಜನ ಸುದೀಪ್ ಅವರು ಸರಿಯಾಗಿ ಕ್ಲಾಸ್ ತಗೊಂಡಿದ್ದಾರೆ. ಅಶ್ವಿನಿಗೆ ಹೀಗೆ ಆಗಬೇಕು ಅಂತ ಕಾಮೆಂಟ್ ಮಾಡುತ್ತಿದ್ದಾರೆ.
ಇತ್ತೀಚೆಗೆ ಅಶ್ವಿನಿ ಅವರಿಗೆ 'ಹೋಗಮ್ಮ ಹೋಗ್ ಹೋಗ್' ಎಂದು ಗಿಲ್ಲಿ ಹೇಳಿದ್ದರು. ಇದಕ್ಕೆ ಅಶ್ವಿನಿ ಗೌಡ ಕೆಂಡಾಮಂಡಲವಾಗಿದ್ದು ಗೊತ್ತೇಯಿದೆ. ಮೇಡಂ ಅನ್ನಬೇಕು, ಹೋಗಲೆ, ಯಾವನೋ ನೀನು ಎಂದು ಗರಂ ಆಗಿದ್ದರು. ಕನ್ಫೆಷನ್ ರೂಮ್‌ನಲ್ಲಿ ಕೂಡ ಅಶ್ವಿನಿ ಗೌಡ ತಮ್ಮ ಅಳಲು ತೋಡಿಕೊಂಡಿದ್ದರು. "ನಿನ್ನೆ ನಡೆದ ಘಟನೆಯಿಂದ ನನಗೆ ಮನಸ್ಸಿಗೆ ನೋವಾಗಿದೆ. ಅದಕ್ಕೆ ಪರಿಹಾರ ಸಿಗಬೇಕು. ತೇಜೊವಧೆ ಆಗಿದೆ. ಗಿಲ್ಲಿಯಿಂದ ಮನೆಯ ವಾತಾವರಣ ಕೆಟ್ಟಿದೆ. ನನಗೆ ಹಲವು ಹೆಸರುಗಳನ್ನು ಇಟ್ಟಿದ್ದಾರೆ. ಅದು ಚೀಪ್ ಎನಿಸುತ್ತದೆ. ರಘು ಕೂಡ ಏಕವಚನ ಬಳಸಿದ್ದಾರೆ. ಅದು ಸರಿ ಎನಿಸುತ್ತಿಲ್ಲ" ಎಂದಿದ್ದರು.
ಇನ್ನು ಕ್ಯಾಪ್ಟೆನ್ಸಿ ಟಾಸ್ಕ್‌ನಲ್ಲಿ ಅಭಿಷೇಕ್ ಗೆದ್ದು ಈ ವಾರ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ಅಶ್ವಿನಿ ಹಾಗೂ ಅಭಿಷೇಕ್ ಈ ವಾರ ಕ್ಯಾಪ್ಟೆನ್ಸಿ ಟಾಸ್ಕ್ ಆಡಿದ್ದಾರೆ. 12 ನಿಮಿಷಗಳನ್ನು ಮನಸ್ಸಿನಲ್ಲಿ ಎಣಿಸಿಕೊಳ್ಳುವ ಟಾಸ್ಕ್ ನೀಡಲಾಗಿತ್ತು. ಇನ್ನುಳಿದ ಸ್ಪರ್ಧಿಗಳು ಅವರ ಗಮನ ಬೇರೆಡೆ ಸೆಳೆಯಬೇಕಿತ್ತು. ಗಿಲ್ಲಿ ಏಕವಚನದಲ್ಲಿ ಮಾತನಾಡಿಸಿ ಆಕೆಯನ್ನು ಪ್ರಚೋದಿಸಿದ್ದರು. ಲೆಕ್ಕ ತಪ್ಪಿದ ಅಶ್ವಿನಿ ಕ್ಯಾಪ್ಟನ್ ಆಗುವ ಅವಕಾಶ ಕಳೆದುಕೊಂಡಿದ್ದರು.
ಏಕವಚನ ಬಳಸುವ ಕಾರಣಕ್ಕೆ ಮನೆಯಲ್ಲಿ ಸಾಕಷ್ಟು ಕಿರಿಕ್ ಆಗಿತ್ತು. ಅಶ್ವಿನಿ ಅವರನ್ನು ಸೋಲಿಸಲು ಇದೇ ಸರಿಯಾದ ಅಸ್ತ್ರ ಎಂದು ಏಕವಚನದಲ್ಲಿ ಮಾತನಾಡಿಸಿ ಗಿಲ್ಲಿ ಗೆದ್ದಿದ್ದರು. ಕೊನೆಗೆ ಗಿಲ್ಲಿ ಹೋಗಿ ಅಶ್ವಿನಿ ಬಳಿ ಕ್ಷಮೆ ಕೇಳಿದ್ದರು. "ನನ್ನ ಮಾತುಗಳಿಂದ ನೋವಾಗಿದ್ದರೆ ಕ್ಷಮಿಸಿ. ಗೇಮ್ ಅನ್ನು ಗೇಮ್ ಆಗಿ ತೆಗೆದುಕೊಳ್ಳಿ. ಇದು ರಘು ಅವರಿಗೆ ಅಚ್ಚರಿ ತಂದಿದ್ದು ಸುಳ್ಳಲ್ಲ.


Click it and Unblock the Notifications











