BBK12: ಸ್ನೇಹದಲ್ಲಿ ಬಿರುಕು, ರಾಶಿಕಾ- ಸೂರಜ್ ಮಧ್ಯೆ ವಾಗ್ಯುದ್ಧ; ಪ್ರೋಮೊ ವೈರಲ್
ಬಿಗ್‌ಬಾಸ್ ಮನೆಯಲ್ಲಿ ಸ್ನೇಹಿತರಾಗಿದ್ದವರು ಎದುರಾಳಿಗಳಾವುದು, ಪರಸ್ಪರ ಕೂಗಾಡುತ್ತಿದ್ದವರು ಸ್ನೇಹಿತರಾಗಿಬಿಡುವುದು ಹೊಸದೇನು ಅಲ್ಲ. ಕೆಲವೊಮ್ಮೆ ಈ ಭಿನ್ನಾಭಿಪ್ರಾಯ ಬಹಳ ಬೇಗ ಶಮನವಾಗಿಬಿಡುತ್ತದೆ. ಆದರೆ ಕೆಲವೊಮ್ಮೆ ಬಹಳ ದಿನ ಮುಂದುವರೆಯುತ್ತದೆ. ಇದೀಗ ರಾಶಿಕಾ ಹಾಗೂ ಸೂರಜ್ ಸ್ನೇಹದಲ್ಲಿ ಬಿರುಕು ಮೂಡಿದಂತೆ ಕಾಣುತ್ತದೆ.
ಸ್ನೇಹಿತರಾಗಿದ್ದವರು ಎಲ್ಲವನ್ನು ಸಹಿಸಿಕೊಂಡರೆ ಚೆನ್ನಾಗಿರುತ್ತದೆ. ಆದರೆ ತಿರುಗಿ ಮಾತನಾಡಿದರೆ ಪ್ರಶ್ನಿಸಿದರೆ ಕಿರಿಕ್ ಸಹಜ. ಸದ್ಯ ರಾಶಿಕಾ ಹಾಗೂ ಸೂರಜ್ ನಡುವೆ ಇದೇ ಆಗಿದೆ. ಸೂರಜ್ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಮನೆಗೆ ಬಂದಿದ್ದರು. ಆರಂಭದಿಂದಲೂ ರಾಶಿಕಾ ಜೊತೆ ಬಹಳ ಕ್ಲೋಸ್ ಆಗಿದ್ದಾರೆ. ಸ್ನೇಹಕ್ಕಿಂತ ಹೆಚ್ಚು ಎನ್ನುವಂತೆ ಇಬ್ಬರ ಬಾಂಧವ್ಯ ಇದೆ. ರಾಶಿಕಾ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ಇದರ ಬೆನ್ನಲ್ಲೇ ಆಕೆಯ ವಿರುದ್ಧ ಸೂರಜ್ ಕೂಗಾಡಿದ್ದಾರೆ. ಶನಿವಾರದ ಪ್ರೋಮೊದಲ್ಲಿ ಅದು ಗೊತ್ತಾಗ್ತಿದೆ.

ಸೂರಜ್ ವಿಚಾರದಲ್ಲಿ ಎಲ್ಲರ ಮುಖವಾಡ ಹೊರಗಡೆ ಬರಲಿ ಎಂದು ರಾಶಿಕಾ ಕೂಗಾಡಿದ್ದಾರೆ. ಅದಕ್ಕೆ ಸೂರಜ್ ಪ್ರತಿಕ್ರಿಯಿಸಿದ್ದಾರೆ. ಇದು ಇಬ್ಬರ ನಡುವೆ ವಾಗ್ಯುದ್ದಕ್ಕೆ ಕಾರಣವಾಗಿದೆ. ನಾನು ಕ್ಯಾಪ್ಟನ್ ಆಗಿದ್ದು ಇಷ್ಟ ಆಗ್ಲಿಲ್ಲ ಅಂದೆ ಅಲ್ವಾ? ಹಾಗಿದ್ದರೆ ಯಾಕೆ ಬಂದು ಕಂಗ್ರಾಟ್ಸ್ ಹೇಳ್ದೆ ಎಂದು ರಾಶಿಕಾ ಕೇಳಿದ್ದಾರೆ. "ಅವ್ಳು ಹೇಗೆ ಕ್ಯಾಪ್ಟನ್ ಆದ್ಲು ಅಂತ ಅಂದೆ.. ಕ್ಯಾಪ್ಟನ್ ಆದ್ರೆ ಸ್ವಂತ ಬುದ್ಧಿ ಬೇಕು.. ಮುಂಚೆ ಒಂದು ತರ ಈಗ ಒಂದು ತರ ಆಡೋದಲ್ಲ, ಎಲ್ಲರೂ ನೋಡ್ತಿದ್ದಾರೆ" ಎಂದು ಸೂರಜ್ ತಿರುಗೇಟು ಕೊಟ್ಟಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಈಗ 'ವಿಲನ್' ಥೀಮ್‌ನಲ್ಲಿ ಆಟ ನಡೀತಿದೆ. ಇದೆಲ್ಲದರ ನಡುವೆ ವೀಕೆಂಡ್ ಬಂದಿದೆ. ಭಾನುವಾರಕ್ಕೆ ಈ ಆಟ ಮುಕ್ತಾಯವಾಗುವ ನಿರೀಕ್ಷೆಯಿದೆ. ಮನೆಯಲ್ಲಿ ಗಿಲ್ಲಿ ಹಾಗೂ ಕಾವ್ಯಾ ನಡುವೆ ಸ್ನೇಹ ಇದೆ. ಆದರೆ ಅತಿಯಾಗಿ ತಮ್ಮನ್ನು ಗಿಲ್ಲಿ ರೇಗಿಸುವುದು, ಕಾಮಿಡಿ ಮಾಡುವುದು ಕಾವ್ಯಾಗೆ ಇಷ್ಟವಿಲ್ಲ. ಇತ್ತೀಚೆಗೆ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಸ್ವತಃ ಗಿಲ್ಲಿಯನ್ನು ಕಾವ್ಯಾ ನಾಮಿನೇಟ್ ಮಾಡಿದ್ದರು. ಬಳಿಕ ಆಕೆಯನ್ನು ಅಳಿಸಬೇಕು ಎಂದು ಗಿಲ್ಲಿಗೆ 'ವಿಲನ್' ಸೀಕ್ರೆಟ್ ಟಾಸ್ಕ್ ಕೊಟ್ಟಿದ್ದು ಗೊತ್ತೇಯಿದೆ. ಆದರೆ ಸೂರಜ್ ಹಾಗೂ ರಾಶಿಕಾ ವಿಚಾರದಲ್ಲಿ ಆ ರೀತಿ ಇರಲಿಲ್ಲ. ಇಬ್ಬರೂ ಬಹಳ ಆತ್ಮೀಯರಾಗಿದ್ದರು.
ರಾಶಿಕಾ ಕಾರಣಕ್ಕೆ ಸೂರಜ್ ತಮ್ಮ ಅಸಲಿ ಆಟ ಆಡುತ್ತಿಲ್ಲ ಎನ್ನುವ ಚರ್ಚೆ ಶುರುವಾಗಿದೆ. ಸೂರಜ್ ಬೇಗ ಎಚ್ಚೆತ್ತುಕೊಳ್ಳಬೇಕು ಎನ್ನುತ್ತಿದ್ದಾರೆ. ಸುದೀಪ್ ಕೂಡ ವೀಕೆಂಡ್ ಪಂಚಾಯ್ತಿ ವೇಳೆ ಈ ಬಗ್ಗೆ ಕಿವಿಮಾತು ಹೇಳಿದ್ದರು. ಆದರೂ ಇಬ್ಬರ ಸ್ನೇಹಕ್ಕೆ ಭಂಗ ಬಂದಿರಲಿಲ್ಲ. ರಾಶಿಕಾ ಕ್ಯಾಪ್ಟನ್ ಆಗುತ್ತಿದ್ದಂತೆ ಚಿತ್ರಣವೇ ಬದಲಾದಂತೆ ಕಾಣುತ್ತಿದೆ. ಈಗಾಗಲೇ ಬಿಗ್‌ಬಾಸ್ ಜರ್ನಿ 70 ದಿನ ಪೂರೈಸಿದೆ. ಫಿನಾಲೆ ಹತ್ತಿರವಾಗುತ್ತಿದೆ. ಆಟದ ತೀವ್ರತೆ ಹೆಚ್ಚಾಗಿದೆ.
ಶನಿವಾರದ ಎಪಿಸೋಡ್ ತಡವಾಗಿ ಚಿತ್ರೀಕರಣವಾಗುತ್ತಿದೆ ಎನ್ನಲಾಗ್ತಿದೆ. ನಟ ಸುದೀಪ್ ಕಾಲು ನೋವಿನಿಂದ ಬಳಲುತ್ತಿದ್ದಾರೆ. ಮತ್ತೊಂದು ಕಡೆ 'ಮಾರ್ಕ್' ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಕೊಂಚ ತಡವಾಗಿ ಬಿಗ್‌ಬಾಸ್ ವೇದಿಕೆ ಏರಲಿದ್ದಾರೆ. ವೀಕೆಂಡ್ ಪಂಚಾಯ್ತಿಯಲ್ಲಿ ಸಾಕಷ್ಟು ವಿಚಾರಗಳು ಚರ್ಚೆಗೆ ಬರಲಿದೆ. ಮುಖ್ಯವಾಗಿ 'ವಿಲನ್' ಟಾಸ್ಕ್‌ಗಳ ಬಗ್ಗೆ ಚರ್ಚೆ ನಡೆಯಲಿದೆ. ಮನೆಯಲ್ಲಿ ಕಾವ್ಯಾ ಹಾಗೂ ಮಾಳು ಗೆಟಪ್ ಬದಲಾಗಿದೆ. ಟಾಸ್ಕ್ ಕಾರಣಕ್ಕೆ ಕಾವ್ಯಾ ಕೂದಲಿಗೆ ಬಣ್ಣ ಹಾಕಿಕೊಂಡಿದ್ದರೆ ಮಾಳು ಹೇರ್ ಸ್ಟೈಲ್ ಬದಲಿಸಿಕೊಳ್ಳುವಂತಾಗಿದೆ.
ಈ ವಾರ ಎಲಿಮಿನೇಷನ್ ಇರಲ್ಲ ಎನ್ನಲಾಗ್ತಿದೆ. ಕಾರಣ ವೋಟಿಂಗ್ ಲೈನ್ಸ್ ಓಪನ್ ಆಗಿಲ್ಲ. ಎಲಿಮಿನೇಷನ್ ಇಲ್ಲದೇ ಇದ್ದರೂ ಅತಿಥಿಗಳಾಗಿ ಮನೆ ಪ್ರವೇಶಿಸಿರುವ ರಜತ್ ಹಾಗೂ ಚೈತ್ರಾ ವಾಪಸ್ ಬರುವ ಸಾಧ್ಯತೆಯಿದೆ ಎಂದು ಚರ್ಚೆ ನಡೀತಿದೆ. ಮುಂದಿನ ವಾರ ಡಬಲ್ ಎಲಿಮಿನೇಷನ್ ಲೆಕ್ಕಾಚಾರ ಶುರುವಾಗಿದೆ. ಈ ಹಿಂದೆ ಕೂಡ ಈ ರೀತಿ ನಡೆದಿದೆ. ಸದ್ಯ ಮನೆಯಲ್ಲಿ 13 ಮಂದಿ ಸ್ಪರ್ಧಿಗಳಿದ್ದು ಫಿನಾಲೆ ಸಮೀಪಿಸುತ್ತಿದ್ದಂತೆ ಎಲಿಮಿನೇಷನ್ ನಡೆಯಲೇಬೇಕಿದೆ.


Click it and Unblock the Notifications











