ಸುಳ್ಳು ಹೇಳಿ 'ಬಿಗ್ ಬಾಸ್' ಮನೆಗೆ ಬಂದಿದ್ದಾರಾ ಈ ಸ್ಪರ್ಧಿ.?

'ಬಿಗ್ ಬಾಸ್-12' ಕಾರ್ಯಕ್ರಮ ಶುರುವಾಗಿ ಇನ್ನೂ ಸರಿಯಾಗಿ ಒಂದು ವಾರ ಕೂಡ ಕಳೆದಿಲ್ಲ. ಅಷ್ಟು ಬೇಗ ಈ ಶೋ ಹಲವು ವಿವಾದಗಳಿಂದ ಸದ್ದು-ಸುದ್ದಿ ಮಾಡುತ್ತಿದೆ. 'ಬಿಗ್ ಬಾಸ್-12' ಕಾರ್ಯಕ್ರಮವನ್ನ ಮಿಸ್ ಮಾಡದೆ ನೋಡುತ್ತಿರುವವರಿಗೆ ಸೌರಭ್ ಪಟೇಲ್ ಪರಿಚಯ ಇದ್ದೇ ಇರುತ್ತೆ.

'ಬಿಗ್ ಬಾಸ್' ಮನೆಯಲ್ಲಿ ಯಾರ ತಂಟೆಗೂ ಹೋಗದೆ, ಸೈಲೆಂಟ್ ಆಗಿದ್ದು, ಎಲ್ಲಾ ಕೆಲಸಗಳಲ್ಲೂ ಪಾಲ್ಗೊಳ್ಳುವ ಸೌರಭ್ ಪಟೇಲ್ ಕಂಡ್ರೆ ಉಳಿದ ಸ್ಪರ್ಧಿಗಳಿಗೆ ಅಚ್ಚುಮೆಚ್ಚು. ಹಾಗೇ ವೀಕ್ಷಕರಿಗೂ ಸೌರಭ್ ದಿನದಿಂದ ದಿನಕ್ಕೆ ಇಷ್ಟವಾಗುತ್ತಲೇ ಬರುತ್ತಿದ್ದಾರೆ.

ಹೀಗಿರುವಾಗಲೇ, ಸೌರಭ್ ಪಟೇಲ್ ಬಗ್ಗೆ ಒಂದು ಬ್ರೇಕಿಂಗ್ ನ್ಯೂಸ್ ಬಾಲಿವುಡ್ ಅಂಗಳದಿಂದ ಬಂದಿದೆ. ತಮ್ಮ ಹೆಸರು ಹಾಗೂ ವೃತ್ತಿ ಬಗ್ಗೆ ಸುಳ್ಳು ಹೇಳಿ ಸೌರಭ್ ಪಟೇಲ್ 'ಬಿಗ್ ಬಾಸ್' ಮನೆಗೆ ಬಂದಿದ್ದಾರಂತೆ.

ಹಾಗ್ನೋಡಿದ್ರೆ, 'ಬಿಗ್ ಬಾಸ್' ಮನೆಗೆ ಸೌರಭ್ ಪಟೇಲ್ ಒಂಟಿಯಾಗಿ ಎಂಟ್ರಿಕೊಡಲಿಲ್ಲ. ತಮ್ಮ ಸ್ನೇಹಿತ ಶಿವಾಶೀಶ್ ಜೊತೆಗೆ 'ವಿಚಿತ್ರ ಜೋಡಿ'ಯಾಗಿ ಕಾಲಿಟ್ಟರು. ಶಿವಾಶೀಶ್ ಬಿಸಿನೆಸ್ ಮ್ಯಾನ್ ಆಗಿದ್ದರೆ, ಸೌರಭ್ ಪಟೇಲ್ ರೈತ ಎಂದು 'ಬಿಗ್ ಬಾಸ್' ವೇದಿಕೆ ಮೇಲೆ ಪರಿಚಯ ಮಾಡಲಾಗಿತ್ತು. ಆದ್ರೀಗ, ಸೌರಭ್ ಪಟೇಲ್ ರೈತ ಅಲ್ಲ ಎಂಬ ಸಂಗತಿ ಬಯಲಾಗಿದೆ. ಮುಂದೆ ಓದಿರಿ...

ಸೌರಭ್ ಪಟೇಲ್ ರೈತ ಅಲ್ಲ.!

ಸೌರಭ್ ಪಟೇಲ್ ರೈತ ಅಲ್ಲ.!

ತಾವು ರೈತ ಅಂತ ಹೇಳಿಕೊಂಡು ಸೌರಭ್ ಪಟೇಲ್ 'ಬಿಗ್ ಬಾಸ್'ಗೆ ಬಂದರು. ಆದ್ರೀಗ, ಸೌರಭ್ ಪಟೇಲ್ ರೈತ ಅಲ್ಲ. ರಶ್ಮಿ ಶರ್ಮಾ ಹಾಗೂ BAG ಫಿಲ್ಮ್ಸ್ ಎಂಬ ಪ್ರೊಡಕ್ಷನ್ ಹೌಸ್ ನಲ್ಲಿ ಸೌರಭ್ ಅಸಿಸ್ಟೆಂಟ್ ಕಾಸ್ಟಿಂಗ್ ಡೈರೆಕ್ಟರ್ ಆಗಿದ್ದರು ಎಂದು ಬಾಲಿವುಡ್ ಲೈಫ್ ವರದಿ ಮಾಡಿದೆ.

ನಿಜ ನಾಮ ಬೇರೆ ಇದೆ.!

ನಿಜ ನಾಮ ಬೇರೆ ಇದೆ.!

ಈತನ ನಿಜ ನಾಮ ಸಾಹಿಲ್ ರಾಮೇಶ್ವರ್ ಪಟೇಲ್ ಎಂದೂ ವರದಿಯಾಗಿದೆ. ತಮ್ಮ ನಿಜ ನಾಮವನ್ನ ಮುಚ್ಚಿಟ್ಟು, ವೃತ್ತಿಯ ಬಗ್ಗೆ ಸುಳ್ಳು ಹೇಳಿ ಸೌರಭ್ ಪಟೇಲ್ 'ಬಿಗ್ ಬಾಸ್' ಗೃಹಪ್ರವೇಶ ಮಾಡಿದ್ದಾರೆ ಎನ್ನಲಾಗಿದೆ.

ಹಳೇ ಫೋಟೋಗಳು ಲೀಕ್

ಹಳೇ ಫೋಟೋಗಳು ಲೀಕ್

ಸೌರಭ್ ಪಟೇಲ್ ನಿಜನಾಮ ಹಾಗೂ ವೃತ್ತಿ ಬಗ್ಗೆ ವರದಿ ಆಗುತ್ತಿದ್ದಂತೆಯೇ, ಆತನ ಹಳೇ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಗಿರಕಿ ಹೊಡೆಯುತ್ತಿವೆ. ಸೌರಭ್ ಹಳೇ ಚಿತ್ರಗಳನ್ನು ನೋಡಿದ್ರೆ, ಯಾರೇ ಆಗಲಿ ಒಂದು ಕ್ಷಣ ಕಕ್ಕಾಬಿಕ್ಕಿ ಆಗುವುದು ಗ್ಯಾರೆಂಟಿ. ಯಾಕಂದ್ರೆ, ಅಷ್ಟೊಂದು ವಿಭಿನ್ನವಾಗಿ ಸೌರಭ್ ಈಗ ಕಾಣ್ತಿದ್ದಾರೆ.

ಹೆಚ್ಚು ಕಾಮೆಂಟ್ ಮಾಡಲ್ಲ

ಹೆಚ್ಚು ಕಾಮೆಂಟ್ ಮಾಡಲ್ಲ

''ನಿಜವಾಗಲೂ, ನನಗೆ ಇದರ ಬಗ್ಗೆ ಕಾಮೆಂಟ್ ಮಾಡಲು ಇಷ್ಟ ಇಲ್ಲ. ಆತ ನನ್ನ ಜೊತೆಗೆ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದು ನಿಜ. ಆತನ ಹೆಸರು ಆಗ ಸೌರಭ್ ಆಗಿರಲಿಲ್ಲ. ಶೋನಲ್ಲಿ ಆತನಿಗೆ ಒಳ್ಳೆಯದು ಆಗಲಿ'' ಎಂದು ಪ್ರೊಡಕ್ಷನ್ ಹೌಸ್ ವೊಂದರ ಕಾಸ್ಟಿಂಗ್ ಡೈರೆಕ್ಟರ್ ಹೇಳಿಕೆ ನೀಡಿದ್ದಾರೆ.

ಎಷ್ಟು ದಿನ ಮುಚ್ಚಿಡಲು ಸಾಧ್ಯ.?

ಎಷ್ಟು ದಿನ ಮುಚ್ಚಿಡಲು ಸಾಧ್ಯ.?

ಸೌರಭ್ ಪಟೇಲ್ ಸುಳ್ಳು ಹೇಳಿ 'ಬಿಗ್ ಬಾಸ್' ಮನೆಗೆ ಬಂದಿದ್ದಾರಾ.? ಒಂದು ವೇಳೆ ಸುಳ್ಳು ಹೇಳಿದ್ದರೆ, ಎಷ್ಟು ದಿನ ಆ ಸುಳ್ಳನ್ನು ಬಚ್ಚಿಡಲು ಸಾಧ್ಯ.? ಶಿವಾಶೀಶ್ ಹಾಗೂ ಸೌರಭ್ ಈ ವಾರ ಎಲಿಮಿನೇಷನ್ ಗೆ ನಾಮಿನೇಟ್ ಆಗಿದ್ದಾರೆ. ಈ ವಾರ ಈ ಜೋಡಿ ಬಚಾವ್ ಆಗುತ್ತಾ, ನೋಡಬೇಕು.

More from Filmibeat

English summary
Salman Khan's Bigg Boss 12: According to the latest reports, Contestant Saurabh Patel has lied about his name and Profession.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X