'ಬಿಗ್ ಬಾಸ್' ಮನೆಗೆ ರೀ-ಎಂಟ್ರಿ ಕೊಡ್ತಾರೆ ಶ್ರೀಶಾಂತ್.!
ಮಿಡ್ ವೀಕ್ (ವಾರದ ಮಧ್ಯೆ) ಎವಿಕ್ಷನ್ ರೂಪದಲ್ಲಿ 'ಬಿಗ್ ಬಾಸ್' ಮನೆಯಿಂದ ಹೊರಬಂದ ಕ್ರಿಕೆಟರ್ ಶ್ರೀಶಾಂತ್ ನೇರವಾಗಿ ಸೀಕ್ರೆಟ್ ರೂಮ್ ಗೆ ತೆರಳಿದ್ದರು. ಸೀಕ್ರೆಟ್ ರೂಮ್ ನಲ್ಲಿ 'ಭಜನೆಗಳ ಸಾಮ್ರಾಟ' ಅನೂಪ್ ಜಲೋಟ ಜೊತೆಗೆ ಕುಳಿತು 'ಬಿಗ್ ಬಾಸ್' ಮನೆಯಲ್ಲಿ ನಡೆಯುವ ಎಲ್ಲಾ ಡ್ರಾಮಾಗಳನ್ನ ಸೂಕ್ಷ್ಮವಾಗಿ ಅವಲೋಕಿಸಿದ್ದರು.
''ನನ್ನನ್ನ ಹೊರಗೆ ಕಳುಹಿಸಿ.. ನಾನು ಮನೆಗೆ ಹೋಗಬೇಕು'' ಎಂದು ಪದೇ ಪದೇ ಹೇಳುತ್ತಿದ್ದ ಶ್ರೀಶಾಂತ್ ಗೆ ಸೀಕ್ರೆಟ್ ರೂಮ್ ನಲ್ಲಿ 'ಬಿಗ್ ಬಾಸ್' ಆಟ ಅರ್ಥವಾಗಿದೆ.
ಯಾರ್ಯಾರು ಹೇಗ್ಹೇಗೆ ಅನ್ನೋದನ್ನ ಸೀಕ್ರೆಟ್ ರೂಮ್ ನಲ್ಲಿ ಶ್ರೀಶಾಂತ್ ಅರ್ಥ ಮಾಡಿಕೊಂಡಿದ್ದಾರೆ. ''ಬಿಗ್ ಬಾಸ್' ಮನೆಗೆ ವಾಪಸ್ ಹೋದ್ಮೇಲೆ ದೀಪಿಕಾ ಮುಖವಾಡ ಕಳಚುವೆ'' ಎಂದಿದ್ದಾರೆ ಶ್ರೀಶಾಂತ್. 'ಬಿಗ್ ಬಾಸ್' ಮನೆಗೆ ಇಂದು ಅನೂಪ್ ಜೊತೆಗೆ ಶ್ರೀಶಾಂತ್ ರೀ-ಎಂಟ್ರಿ ಕೊಡ್ತಾರೆ. ಮುಂದೆ ಓದಿರಿ...

ದೀಪಿಕಾ ಕಣ್ಣಲ್ಲಿ ನೀರು
ಈಗಾಗಲೇ ಪ್ರಸಾರ ಆಗುತ್ತಿರುವ ಪ್ರೋಮೋದಲ್ಲಿ 'ಬಿಗ್ ಬಾಸ್' ಮನೆಗೆ ಶ್ರೀಶಾಂತ್ ಹಾಗೂ ಅನೂಪ್ ರೀ-ಎಂಟ್ರಿಕೊಟ್ಟಿದ್ದಾಗಿದೆ. ಶ್ರೀಶಾಂತ್ ರನ್ನ ನೋಡಿ ದೀಪಿಕಾ ಕಣ್ಣೀರು ಸುರಿಸಿದ್ದಾರೆ.

ಜೋಡಿಗಳ ಬ್ರೇಕಪ್
'ಬಿಗ್ ಬಾಸ್-11' ರಿಯಾಲಿಟಿ ಶೋನಲ್ಲಿ ಇಂದು ದೊಡ್ಡ ತಿರುವು ಸಿಗಲಿದೆ. ಜೋಡಿಗಳನ್ನ 'ಬಿಗ್ ಬಾಸ್' ಒಡೆದಿದ್ದಾರೆ. ಇದರಿಂದ ಇನ್ಮೇಲೆ ಎಲ್ಲರೂ ಪ್ರತ್ಯೇಕವಾಗಿ ಆಟವಾಡಬೇಕಾಗಬಹುದೇನೋ.!?

ನೇಹಾ ಔಟ್
'ಬಿಗ್ ಬಾಸ್-11' ಕಾರ್ಯಕ್ರಮದಿಂದ ನಟಿ ನೇಹಾ ಪೆಂಡ್ಸೆ ಔಟ್ ಆಗಿದ್ದಾರೆ. 'ಬಿಗ್ ಬಾಸ್' ಮನೆಯಲ್ಲಿ ಬಹುತೇಕ ಸೈಲೆಂಟ್ ಆಗಿದ್ದು, ಯಾವುದೇ ಗಲಾಟೆ-ಜಗಳಗಳಿಗೆ ಸಾಕ್ಷಿಯಾಗದ ನೇಹಾ ಪೆಂಡ್ಸೆ ಎಲಿಮಿನೇಟ್ ಆಗಿದ್ದಾರೆ.

ಗೇಮ್ ಪ್ಲಾನ್ ಚೇಂಜ್
ಅತ್ತ ಎಲ್ಲರ ಗೇಮ್ ಪ್ಲಾನ್ ನೋಡಿಕೊಂಡು ಶ್ರೀಶಾಂತ್ ಹಾಗೂ ಅನೂಪ್ 'ಬಿಗ್ ಬಾಸ್' ಮನೆಗೆ ಬಂದಿದ್ದಾರೆ. ಇತ್ತ 'ಬಿಗ್ ಬಾಸ್' ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ. ಇದರಿಂದ ಎಲ್ಲರ ಗೇಮ್ ಪ್ಲಾನ್ ಚೇಂಜ್ ಆಗುವುದು ಪಕ್ಕಾ.


Click it and Unblock the Notifications











