BBK12: ತಿಂದಾಕೋ ಅವ್ರ್ಗೆ ಇಷ್ಟಿರ್ಬೇಕಾದ್ರೆ ತಂದಾಕೋ ನಮ್ಗೆಷ್ಟಿರ್ಬೇಡಾ; ಮತ್ತೆ ರಜತ್ ಕೆಣಕಿದ ಗಿಲ್ಲಿ
ಬಿಗ್‌ಬಾಸ್ ಸೀಸನ್ 12ರ ಮನೆ ಈಗ ಹೋಟೆಲ್-ರೆಸಾರ್ಟ್ ಆಗಿ ಬದಲಾಗಿದೆ. ಅಲ್ಲಿಗೆ ಹಿಂದಿನ ಸೀಸನ್‌ನಲ್ಲಿದ್ದ ನಾಲ್ಕು ಮಂದಿ ಸ್ಪರ್ಧಿಗಳು ಅತಿಥಿಗಳಾಗಿ ಬಂದಿದ್ದಾರೆ. ಮನೆ ಮಂದಿ ಈಗ ಹೋಟೆಲ್ ಸಿಬ್ಬಂದಿಯಾಗಿ ಬದಲಾಗಿದ್ದು ಅತಿಥಿಗಳನ್ನು ಉಪಚರಿಸಬೇಕಿದೆ. ಆದರೆ ಗಿಲ್ಲಿ ಮಾತ್ರ ಅವರ ಕಾಲೆಳೆದು ಕ್ವಾಟ್ಲೆ ಕೊಡುತ್ತಿದ್ದಾರೆ.
ರಜತ್, ಉಗ್ರಂ ಮಂಜು, ತ್ರಿವಿಕ್ರಮ್, ಚೈತ್ರಾ ಮತ್ತು ಮೋಕ್ಷಿತಾ ಈಗ ಬಿಗ್‌ಬಾಸ್ ಮನೆಗೆ ರೀ-ಎಂಟ್ರಿ ಕೊಟ್ಟಿದ್ದಾರೆ. ಮೊದಲ ದಿನವೇ ಗಿಲ್ಲಿ ಜೊತೆ ರಜತ್, ಮಂಜು ಜಿದ್ದಿಗೆ ಬಿದ್ದಿದ್ದಾರೆ. ಯಾವಾಗಲೂ ತಮಾಷೆಯಾಗಿ ಮಾತನಾಡುವ ಗಿಲ್ಲಿ ತಮ್ಮ ಚಾಳಿ ಮುಂದುವರೆಸಲು ಹೋಗಿ ತಗ್ಲಾಕಿಕೊಂಡಿದ್ದಾರೆ. ಆದರೆ ಅಷ್ಟೇ ಖಡಕ್ ಆಗಿ ತಿರುಗೇಟು ಕೊಡುತ್ತಿದ್ದಾರೆ.

ಹೋಟೆಲ್ ಸಿಬ್ಬಂದಿ ಅತಿಥಿಗಳನ್ನು ಒಳ್ಳೆ ರೀತಿ ಉಪಚರಿಸಬೇಕು. ಆದರೆ ಸರ್ವರ್ ಆಗಿರುವ ಗಿಲ್ಲಿ ಅತಿಥಿಗಳ ಬಗ್ಗೆ ಕಾಮಿಡಿ ಮಾಡುವ ಸಾಹಸ ಮಾಡುತ್ತಿದ್ದಾರೆ. ಇನ್ನು ರಜತ್ ಹಾಗೂ ಮಂಜು ತಮ್ಮ ರೋಷಾವೇಷದಿಂದಲೇ ಸದ್ದು ಮಾಡಿದವರು. ಕಳೆದ ಸೀಸನ್‌ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆ ಒಳಗೆ ಹೋಗಿದ್ದ ರಜತ್ ತಮ್ಮ ಆರ್ಭಟದ ಮಾತು, ಆಟದಿಂದ ಫಿನಾಲೆವರೆಗೂ ಬಂದುಬಿಟ್ಟಿದ್ದರು. ಅಂತಹ ರಜತ್ ಎದುರು ಗಿಲ್ಲಿ ಆಟ ನಡೆಯುತ್ತಾ ಕಾದು ನೋಡಬೇಕಿದೆ.
ಅತಿಥಿಗಳ ಉಪಚಾರ ವಾರವಿಡೀ ಮುಂದುವರೆಯಲಿದೆ. 2ನೇ ದಿನದ ಪ್ರೋಮೊ ರಿಲೀಸ್ ಆಗಿದೆ. ಮತ್ತೆ ಗಿಲ್ಲಿ ಕ್ವಾಟ್ಲೆ ಮುಂದುವರೆದಿದ್ದು ರಜತ್ ಕೂಗಾಡಿದ್ದಾರೆ. ಇದು ಮನೆಯ ವಾತಾವರಣ ಕಾವೇರಿಸಿದೆ. ಅತಿಥಿಗಳನ್ನು ರಂಜಿಸಲು ಮೊದಲಿಗೆ ಮನೆ ಮಂದಿ ಮನರಂಜನೆ ಕಾರ್ಯಕ್ರಮ ಆಯೋಜಿಸಿದ್ದಾರೆ. ರಘು, ರಾಶಿಕಾ, ಸೂರಜ್ ಡ್ಯಾನ್ಸ್ ಮಾಡಿ ರಂಜಿಸಿದ್ದಾರೆ. ಬಳಿಕ ಮಾತನಾಡಿರುವ ಗಿಲ್ಲಿ "ವಾಹ್ ಎನ್ನುವವರು ಯಾರಾದ್ರೂ ಬರ್ತಾರೆ, ಅನ್ಕೊಂಡೆ.. ಆದ್ರೆ ಇವ್ರು ಬಂದ್ಮೇಲೆ ವ್ಯಾ ಥೂ" ಎಂದುಬಿಟ್ಟಿದ್ದಾರೆ.
ಬಂದ ಅತಿಥಿಗಳು ತಿಂದ್ರು ತಿಂದ್ರು ತಿಂದ್ರು.. ತಿಂದಾಕೋ ಅವ್ರ್ಗೆ ಇಷ್ಟಿರ್ಬೇಕಾದ್ರೆ ತಂದಾಕೋ ನಮ್ಗೆಷ್ಟಿರ್ಬೇಡಾ? ಎಂದು ಗಿಲ್ಲಿ ಕೌಂಟರ್ ಕೊಟ್ಟಿದ್ದಾರೆ. ಕೂಡಲೇ ರಜತ್ ಕೆಂಡಾಮಂಡಲವಾಗಿರುವಂತೆ ಪ್ರೋಮೊ ವೈರಲ್ ಆಗ್ತಿದೆ. "ಎಲ್ಲದಕ್ಕೂ ಒಂದು ತಾಳ್ಮೆ ಇದೆ ಗಿಲ್ಲಿ.. ಇರಿಟೇಟ್ ಮಾಡ್ತಿದ್ದೀಯಾ. ಮನುಷ್ಯರಾದವರು ಅರ್ಥ ಮಾಡ್ಕೊಬೇಕು" ಎಂದು ಕೂಗಾಡಿದ್ದಾರೆ. ಪ್ರೋಮೊ ಸಖತ್ ವೈರಲ್ ಆಗ್ತಿದೆ.
ಹಿಂದಿನ ಸೀಸನ್ ಸ್ಪರ್ಧಿಗಳು ಅತಿಥಿಗಳಾಗಿ ಮನೆ ಪ್ರವೇಶಿಸಿರುವುದು ಕುತೂಹಲ ಮೂಡಿಸಿದೆ. ಒಳ್ಳೆ ಮನರಂಜನೆ ಕೂಡ ಕೊಡ್ತಿದೆ. ಇತ್ತ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆ ನಡೀತಿದೆ. ಗಿಲ್ಲಿ ಅಭಿಮಾನಿಗಳು ಹಾಗೂ ರಜತ್ ಅಭಿಮಾನಿಗಳ ನಡುವೆ ಕೆಸರೆರಚಾಟಕ್ಕೆ ಕಾರಣವಾಗಿದೆ. ಒಟ್ಟಾರೆ ಈ ವಾರ ಶೋ ಜನರನ್ನು ಹೆಚ್ಚು ರಂಜಿಸಲಿದೆ.
ಅತಿಥಿಗಳು ಬಂದ ಮೊದಲ ದಿನವೇ ಗಿಲ್ಲಿ ತಮಾಷೆ ಮಾಡಲು ಆರಂಭಿಸಿದ್ದರು. ಉಗ್ರಂ ಮಂಜು ಅವರಿಗೆ ಮದುವೆ ನಿಶ್ಚಿಯವಾಗಿದೆ. ಈ ಬಗ್ಗೆ ಹೇಳುತ್ತಿದ್ದಂತೆ ಎರಡನೇ ಮದುವೆನಾ? ಮೂರನೆಯದಾ? ಎಂದು ಗಿಲ್ಲಿ ಕಾಲೆಳೆದಿದ್ದರು. ಎಲ್ಲರೂ ಬಿಟ್ಟಿ ಊಟಕ್ಕೆ ಇಲ್ಲಿಗೆ ಬಂದಿದ್ದೀರಾ? ಅಂತ ಗಿಲ್ಲಿ ಹೇಳಿದ್ದು ರಜತ್ ಆಕ್ರೋಶಕ್ಕೆ ಕಾರಣವಾಗಿತ್ತು. ಬಿಟ್ಟಿ ಊಟ ನೀನು ಕೊಡ್ತೀಯಾ ಎಂದು ಗರಂ ಆಗಿದ್ದರು.
ಅತಿಥಿಗಳನ್ನು ಮನೆ ಮಂದಿ ಉಪಚರಿಸಬೇಕಿದೆ. ಗೌರವ ಕೊಡಬೇಕಿದೆ. ಹಾಗಾಗಿ ಗಿಲ್ಲಿ ಹೆಚ್ಚು ಮಾತನಾಡಲು ಸಾಧ್ಯವಾಗ್ತಿಲ್ಲ. ಆದರೂ ಅವಕಾಶ ಸಿಕ್ಕಾಗಲೆಲ್ಲಾ ಮಂಜು, ರಜತ್ ಇಬ್ಬರಿಗೂ ಟಾಂಗ್ ಕೊಡುತ್ತಿದ್ದಾರೆ. ಆಗಾಗ್ಗೆ ಮನೆಗೆ ಬಂದಿರುವ ಅತಿಥಿಗಳನ್ನು ಗಿಲ್ಲಿ ರೋಸ್ಟ್ ಮಾಡುತ್ತಿದ್ದಾರೆ. ಅದು ವೀಕ್ಷಕರಿಗೆ ಸಖತ್ ಮನರಂಜನೆ ನೀಡುತ್ತಿದೆ. ಕೆಲವರಿಗೆ ಅತಿಯಾಯಿತು ಎನಿಸುತ್ತಿದೆ. ಮುಂದೆ ಇದು ಹೇಗೆ ಮುಂದುವರೆಯುತ್ತದೆ ಕಾದು ನೋಡಬೇಕು.


Click it and Unblock the Notifications











