BBK 12: ಕಾವ್ಯಾನ ಎತ್ತಾಕ್ಕೊಂಡ್ ಹೋದ ಧನುಷ್; ಅಯ್ಯೋ ಪಾಪ ಗಿಲ್ಲಿ- ವೀಡಿಯೋ

ಬಿಗ್‌ಬಾಸ್ ಕನ್ನಡ ಸೀಸನ್ 12 ಇದೀಗ 28ನೇ ದಿನಕ್ಕೆ ಕಾಲಿಟ್ಟಿದೆ. ಹಳೇ ಸ್ಪರ್ಧಿಗಳ ಜೊತೆ ವೈಲ್ಡ್ ಎಂಟ್ರಿ ಸ್ಪರ್ಧಿಗಳು ಸೇರಿ ಕಾಮಿಡಿ, ಕಿರಿಕ್ ಜೊತೆಗೆ ಭಾವನಾತ್ಮಕ ಸನ್ನಿವೇಶಗಳ ಎದುರಾಗುತ್ತಿದೆ. ಇದೆಲ್ಲರ ನಡುವೆ ಬಿಗ್‌ಬಾಸ್ ಮನೆ ಬಿಬಿ ಕಾಲೇಜ್ ಆಗಿ ಬದಲಾಗಿದೆ. ಅಂದರೆ ಸ್ಪರ್ಧಿಗಳೆಲ್ಲಾ ಕಾಲೇಜ್ ಸ್ಟೂಡೆಂಟ್ಸ್ ಅವತಾರ ತಾಳಿದ್ದಾರೆ.

ಈಗಾಗಲೇ ಪ್ರೋಮೊ ಕೂಡ ಬಂದಿದ್ದು ರೆಟ್ರೋ ಲುಕ್‌ನಲ್ಲಿ ಸ್ಪರ್ಧಿಗಳೆಲ್ಲಾ ಮಿಂಚಿದ್ದಾರೆ. ಕಾಲೇಜ್ ಕ್ಯಾಂಪಸ್, ಹಾಸ್ಟೆಲ್, ಕ್ಯಾಟೀನ್ ಎಲ್ಲವೂ ಇದೆ. ಕಾಲೇಜು ಹುಡುಗ, ಹುಡುಗಿಯರ ರೀತಿ ಎಲ್ಲರೂ ಮಿಂಚುತ್ತಿದ್ದಾರೆ. ಕಾಲೇಜು ಅಂದಮೇಲೆ ಫ್ರೆಂಡ್‌ಶಿಪ್, ಲವ್ ಎಲ್ಲಾ ಕಾಮನ್. ಆದರೆ ಬಿಗ್‌ಬಾಸ್ ಮನೆಯಲ್ಲಿ ರೊಮ್ಯಾನ್ಸ್ ಕೂಡ ಶುರುವಾಗಿಬಿಟ್ಟಿದೆ. ಕ್ಯಾಪ್ಟನ್ ರಘು ಬಿಬಿ ಕಾಲೇಜ್ ಪ್ರಿನ್ಸಿಪಲ್ ಆಗಿದ್ದಾರೆ.

Bigg Boss 12 Turns into BB College Dhanush Lifts Kavya as Ghilli Gets Jealous in Viral video

ರಾಶಿಕಾ-ಸೂರಜ್ ಇಬ್ಬರೂ ಜೋರಾಗಿಯೇ ಪ್ರೇಮಗೀತೆ ಹಾಡುತ್ತಿದ್ದಾರೆ. ಇನ್ನು ಗಲ್ಲಿ ಹಾಗೂ ಕಾವ್ಯ ಜಂಟಿಯಾಗಿ ಮನೆಯೊಳಗೆ ಎಂಟ್ರಿ ಕೊಟ್ಟಿದ್ದರು. ಮೊದಲಿಗೆ ಇಬ್ಬರೂ ಆತ್ಮೀಯ ಸ್ನೇಹಿತರಾಗಿದ್ದರು. ಕಾವ್ಯ ಹಿಂದೆ ಗಿಲ್ಲಿ ಓಡಾಡುತ್ತಿರುವುದು ಗೊತ್ತೇಯಿದೆ. ಆಕೆ ರಾಖಿ ಕಟ್ಟಿದ್ರು ಗಿಲ್ಲಿ ಮಾತ್ರ ಸುಮ್ಮನಾಗುತ್ತಿಲ್ಲ. ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ಇದೆ ಎನ್ನುವಂತೆ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು ಕಾಲೇಜ್ ಟಾಸ್ಕ್‌ನಲ್ಲಿ ಹುಡುಗಿಯರನ್ನು ಚುಡಾಯಿಸುವುದು, ರ್ಯಾಗಿಂಗ್, ಪಟಾಯಿಸುವುದು ಕೂಡ ಮಾಡ್ತಿದ್ದಾರೆ. ಧನುಷ್ ಏಕಾಏಕಿ ಕಾವ್ಯಾ ಅವರನ್ನು ಭುಜದ ಮೇಲೆ ಎತ್ತಿಕೊಂಡು ಹೋಗಿದ್ದಾರೆ. ಇದನ್ನು ನೋಡಿ ಗಲ್ಲಿ ಅವಕ್ಕಾಗಿದ್ದಾರೆ. ಕಾವ್ಯಾ ಲಂಗಾ ದಾವಣಿ ತೊಟ್ಟು ಮಿಂಚಿದ್ದಾರೆ. ಪುಲ್ಕಾ ಡಾಟ್ ಶರ್ಟ್ ಹಾಗೂ ಬೆಲ್‌ಬಾಟಂ ಪ್ಯಾಂಟ್‌ನಲ್ಲಿ ಧನುಷ್ ಕಾಣಿಸಿಕೊಂಡಿದ್ದಾರೆ.

ಗಿಲ್ಲಿ ಮುಂದೆಯೇ ಕಾವ್ಯರನ್ನು ಧನುಷ್ ಭುಜದ ಮೇಲೆ ಹೊತ್ತುಕೊಂಡು ಹೋಗಿರುವ ವೀಡಿಯೋ ವೈರಲ್ ಆಗ್ತಿದೆ. ಇನ್ನು ಕಾಲೇಜ್ ಟಾಸ್ಕ್ ನಡುವೆ ಅಶ್ವಿನಿ ಗೌಡ ಹಾಗೂ ಜಾಹ್ನವಿ ನಡುವೆ ಬಿರುಕು ಮೂಡಿದೆ. ಮೊದಲ ದಿನದಿಂದಲೂ ಆತ್ಮೀಯ ಸ್ನೇಹಿತರಾಗಿದ್ದವರು ಈಗ ದೂರ ದೂರ ಆಗಿದ್ದಾರೆ. ಒಬ್ಬರ ಮೇಲೆ ಒಬ್ಬರು ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ.

ಜಾಹ್ನವಿ ಗೆಳೆತನದಿಂದ ನನ್ನ ಹೆಸರಿಗೆ ಕಳಂಕ ಬರುತ್ತಿದೆ ಎಂದು ಅಶ್ವಿನಿ ಗೌಡ ಹೇಳಿರುವುದು ವೈರಲ್ ಆಗ್ತಿದೆ. ವಾರದಿಂದ ಹಿಂದೆ ಇಬ್ಬರೂ ಬಹಳ ಆತ್ಮೀಯವಾಗಿದ್ದರು. ಇಬ್ಬರೂ ಸೇರಿ ರಕ್ಷಿತಾ ಶೆಟ್ಟಿ ಅವರನ್ನು ಟಾರ್ಗೆಟ್ ಮಾಡಿದ್ದರು. ಇದೇ ಕಾರಣಕ್ಕೆ ವೀಕ್ಷಕರು ಕೂಡ ಗರಂ ಆಗಿದ್ದರು. ಕೊನೆಗೆ ಸುದೀಪ್ ವೀಕೆಂಡ್ ಪಂಚಾಯ್ತಿಯಲ್ಲಿ ಇಬ್ಬರಿಗೂ ಸರಿಯಾಗಿ ಕ್ಲಾಸ್ ತಗೊಂಡಿದ್ದರು. ಒಬ್ಬರನ್ನೊಬ್ಬರು ಅವಲಂಬಿಸುವುದು ಬಿಟ್ಟು ಒಬ್ಬೊಂಟಿಯಾಗಿ ಆಟ ಆಡಿ ಎಂದು ಕಿವಿಮಾತು ಹೇಳಿದ್ದರು.

ಎದುರಾಳಿ ಸ್ಪರ್ಧಿ ಯಾಕೆ ಮನೆಯಲ್ಲಿ ಇರಲು ಯೋಗ್ಯರಲ್ಲ ಎಂದು ಕಾರಣ ಕೊಡವಂತೆ ಬಿಗ್‌ಬಾಸ್ ಹೊಸ ಟಾಸ್ಕ್ ಕೊಟ್ಟಿದ್ದಾರೆ. ಅಶ್ವಿನಿ ಮಾತನಾಡಿ "ಜಾಹ್ನವಿ ಸ್ನೇಹದಿಂದ ನನಗೆ ಕಳಂಕ ಬಂದಿದೆ. ನನ್ನನ್ನು ಮುಂದೆ ಬಿಟ್ಟು, ನೀವು ಹಿಂದೆ ಇದ್ದು ತಮಾಷೆ ನೋಡುತ್ತಿದ್ದೀರಾ? ನನ್ನನ್ನು ಬಿಗ್‌ಬಾಸ್ ಮನೆಯಿಂದ ಹೊರಗಡೆ ಕಳಿಸಬೇಕು ಎಂದು ನೋಡ್ತಿದ್ದೀರಾ? ಸ್ನೇಹ ಅಂತ ನನಗೆ ಬಾವಿ ತೋಡ್ತಿರಾ ಅಂತ ಗೊತ್ತಿರಲಿಲ್ಲ. ಇಂತಹ ಸ್ನೇಹ ಬೇಡ" ಎಂದಿದ್ದಾರೆ.

ಜಾಹ್ನವಿ ಪ್ರತಿಕ್ರಿಯಿಸಿ "ನಿಮ್ಮ ಆಟವನ್ನು ನೀವು ಆಡ್ತಿದ್ದೀರಾ. ನನ್ನ ಆಟ ನಾನು ಆಡ್ತಿದ್ದೀನಿ. ಕೆಲವರ ಆಟ ವೇಗವಾಗಿ ಕಾಣಬಹುದು. ಇನ್ನು ಕೆಲವರದ್ದು ನಿಧಾನವಾಗಿ ಇರಬಹುದು. ನನ್ನ ಜೊತೆ ನೀವು ಇರುವುದು ಕೂಡ ತಂತ್ರ ಆಗಿರಬಹುದು" ಎಂದಿದ್ದಾರೆ. ಇನ್ನು ಮುಂದೆ ಅಶ್ವಿನಿ ಹಾಗೂ ಜಾಹ್ನವಿ ಎದುರಾಳಿಗಾಗಿಯೇ ಇರ್ತಾರಾ? ಮತ್ತೆ ಇಬ್ಬರ ಸ್ನೇಹ ಮುಂದುವರೆಯುತ್ತಾ ಕಾದು ನೋಡಬೇಕಿದೆ.

More from Filmibeat

Read more about: bigg boss 12 sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X