BBK12: ಸೂರಜ್ ಜೊತೆ ಕಾವ್ಯ ಕೆಮೆಸ್ಟ್ರಿ ಬಿಟ್ಹಾಕಿ, ಅಶ್ವಿನಿ ಜೊತೆ ಗಿಲ್ಲಿ ಡ್ಯಾನ್ಸ್ ನೋಡ್ರಪ್ಪ

ಬಿಗ್‌ಬಾಸ್ ಮನೆಯೇ ವಿಚಿತ್ರ. ಅಲ್ಲಿ ಸ್ನೇಹಿತರಾಗಿದ್ದರೂ ದೂರಾಗುವುದು, ಅದೇ ರೀತಿ ದೂರ ಇದ್ದವರು ದಿಡೀರನೆ ಹತ್ತಿರವಾಗುವುದು ನಡೆಯುತ್ತಿರುತ್ತದೆ. ಬಿಗ್‌ಬಾಸ್ ಸೀಸನ್ 12ರ ಮನೆ ಈ ವಾರ ಬಿಬಿ ಕಾಲೇಜ್ ಆಗಿ ಬದಲಾಗಿದೆ. ಎಲ್ಲರೂ ಕಾಲೇಜ್ ಸ್ಟೂಡೆಂಟ್ಸ್ ಅವತಾರದಲ್ಲಿ ಫನ್, ಕಾಮಿಡಿ ಮಾಡ್ತಾ ಎಂಜಾಯ್ ಮಾಡ್ತಿದ್ದಾರೆ.

ಮನೆಯ ಕ್ಯಾಪ್ಟನ್ ರಘು ಈಗ ಬಿಬಿ ಕಾಲೇಜ್ ಪ್ರಿನ್ಸಿಪಾಲ್ ಆಗಿದ್ದು ಅವರನ್ನು ಕೆಲವರು ಗೋಳು ಹುಯ್ದುಕೊಳ್ಳುತ್ತಿದ್ದಾರೆ. ಇದೀಗ ಬಿಬಿ ಕಾಲೇಜ್ ಫೆಸ್ಟ್ ನಡೀತಿದೆ. ಸ್ಟೂಡೆಂಟ್ಸ್ ಎಲ್ಲಾ ಡ್ಯಾನ್ಸ್, ಕಾಮಿಡಿ ಮಾಡಿ ಎಂಜಾಯ್ ಮಾಡಿದ್ದಾರೆ. ಅಚ್ಚರಿ ಅಂದರೆ ಅಶ್ವಿನಿ ಗೌಡ ಜೊತೆ ಗಿಲ್ಲಿ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ. ಕಿರುತೆರೆ ನಟಿಯರಾದ ಪ್ರಿಯಾ ಆಚಾರ್, ಸುಷ್ಮಾ ರಾವ್ ಕಾಲೇಜ್‌ ಫೆಸ್ಟ್‌ಗೆ ಅತಿಥಿಗಳಾಗಿ ತೀರ್ಪುಗಾರರಾಗಿ ಬಂದಿದ್ದಾರೆ.

Bigg Boss 12 Turns Into BB College Ghilli and Ashwini s Dance Steals the Show

ಗಿಲ್ಲಿ ಹಾಗೂ ಕಾವ್ಯ ಜಂಟಿಯಾಗಿ ದೊಡ್ಮನೆ ಒಳಗೆ ಹೋಗಿದ್ದರು. ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವಂತೆ ಇಬ್ಬರೂ ಕಾಣಿಸಿಕೊಳ್ಳುತ್ತಿದ್ದಾರೆ. ಕಾವ್ಯ ನನ್ನ ಲವ್ವರ್ ಎನ್ನುವಂತೆ ಗಿಲ್ಲಿ ಆಡುತ್ತಿದ್ದಾರೆ. ಆಕೆ ರಾಖಿ ಕಟ್ಟಿದರೂ ಅದನ್ನು ನಾನು ಒಪ್ಪಲ್ಲ ಎಂದು ಗಿಲ್ಲಿ ಹೇಳಿದ್ದು ಗೊತ್ತೇಯಿದೆ. ಕಾಲೇಜ್‌ ಫೆಸ್ಟ್‌ನಲ್ಲಿ ಸೂರಜ್ ಜೊತೆ ಕಾವ್ಯ ಡ್ಯಾನ್ಸ್ ಮಾಡಿದ್ದಾರೆ. ಇದನ್ನು ನೋಡಿ ಗಿಲ್ಲಿ ಪಾಡು ಕೇಳೋದೇ ಬೇಡ. ಅದಕ್ಕೆ ಸಂಬಂಧಿಸಿದ ಪ್ರೋಮೊ ಬಂದಿದೆ.

'ಅಂಜದ ಗಂಡು' ಚಿತ್ರದ 'ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ' ಹಾಡಿಗೆ ಸೂರಜ್ ಹಾಗೂ ಕಾವ್ಯ ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದಾರೆ. ನಿಮ್ಮಿಬ್ಬರ ಕೆಮೆಸ್ಟ್ರಿ ಚೆನ್ನಾಗಿತ್ತು ಎಂದು ಸುಷ್ಮಾರಾವ್ ಹೇಳಿದ್ದು "ಮೇಡಂ ನೀವು ಕನ್ನಡಕ ಹಾಕಿಲ್ಲ ಅನ್ಸತ್ತೆ ನೋಡಿ" ಎಂದು ಗಿಲ್ಲಿ ಕಾಮಿಡಿ ಮಾಡಿದ್ದಾರೆ.

ಇನ್ನು ಅಭಿ ಚಿತ್ರದ 'ಸುಮ್ ಸುಮ್ನೆ' ಹಾಡಿಗೆ ಅಶ್ವಿನಿ ಗೌಡ ಜೊತೆ ಗಿಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಅದಕ್ಕೂ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಅಶ್ವಿನಿ ಅವರನ್ನು ಲಿಫ್ಟ್ ಮಾಡಲು ಗಿಲ್ಲಿ ಕರಸತ್ತು ಮಾಡಿದ್ದಾರೆ. ಇನ್ನು ಅಭಿ, ದೃವಂತ್ ಹಾಗೂ ಚಂದ್ರಪ್ರಭ ಸೇರಿ 'ಎ' ಚಿತ್ರದ 'ಮಾರಿಕಣ್ಣು ಹೋರಿಮ್ಯಾಗೆ' ಹಾಡಿಗೆ ಕುಣಿದಿದ್ದಾರೆ. ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿ ಹುರಿದುಂಬಿಸಿದ್ದಾರೆ.

ರಿಹರ್ಸಲ್ ವೇಳೆ ಇಬ್ಬರೂ ಡಿಸ್ಟೆನ್ಸ್ ಮೇಟೆಂನ್ ಮಾಡಿ ಎಂದು ಗಿಲ್ಲಿ ಬಂದು ಸೂರಜ್ ಹಾಗೂ ಕಾವ್ಯಗೆ ಹೇಳಿದ್ದಾರೆ. ಇನ್ನು ಡ್ಯಾನ್ಸ್ ಮಾಡುವಾಗ ಇಬ್ಬರೂ ರೊಮ್ಯಾಂಟಿಕ್ ಆಗಿ ಇರುವುದು ನೋಡಿ ಗಿಲ್ಲಿ ದೂರ ಹೋಗಿ ಎಂದು ಪೇಚಾಡಿದ್ದಾರೆ. ಆದರೆ ಸೂರಜ್, ಕಾವ್ಯ ಡ್ಯಾನ್ಸ್‌ಗಿಂತ ಅಶ್ವಿನಿ, ಗಿಲ್ಲಿ ಡ್ಯಾನ್ಸ್ ಸೂಪರ್ ಎಂದು ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ. ಕಂಪ್ಲೀಟ್ ಎಪಿಸೋಡ್ ನೋಡಲು ಕಾಯುತ್ತಿದ್ದಾರೆ.

ಗಿಲ್ಲಿ ಹಾಗೂ ಕಾವ್ಯ ಮಾತ್ರವಲ್ಲ ಸೂರಜ್ ಹಾಗೂ ರಾಶಿಕಾ ನಡುವೆ ಕೂಡ ಆತ್ಮೀಯ ಒಡನಾಟ ಶುರುವಾಗಿತ್ತು. ಸೂರಜ್ ಮನೆಗೆ ಬಂದ ಒಂದೇ ವಾರದಲ್ಲಿ ಇಬ್ಬರೂ ಬಹಳ ಆತ್ಮೀಯರಾಗಿದ್ದರು. ಇಬ್ಬರೂ ಕೈ ಕೈ ಹಿಡಿದು ಮನೆಯಲ್ಲಿ ಸುತ್ತಾಡಿದ್ದರು. ಇಬ್ಬರ ಬಂಧ ಗಟ್ಟಿಯಾಗುತ್ತಿದೆ ಎಂದುಕೊಳ್ಳುವ ಸಮಯದಲ್ಲೇ ಸಣ್ಣ ಕಿರಿಕ್ ಆಗಿತ್ತು. ರಾಶಿಕಾ ನಾಮಿನೇಟ್ ಆಗಿ ಕಣ್ಣೀರು ಹಾಕಿದ್ದರು. ಈ ವೇಳೆ ನನ್ನ ಬೆಂಬಲಕ್ಕೆ ಬರಲಿಲ್ಲ ಎಂದು ರಾಶಿಕಾ ಬೇಸರಗೊಂಡು ಅಸಮಾಧಾನ ಹೊರಹಾಕಿದ್ದರು. ರಾಶಿಕಾ ಮಾತಿಗೆ ಸೂರಜ್ ಕೂಡ ಗರಂ ಆಗಿದ್ದರು.

ಸದ್ಯ ಸೂರಜ್ ಹಾಗೂ ಕಾವ್ಯಾ ಡ್ಯಾನ್ಸ್ ನೋಡಿ ಇಬ್ಬರ ಕೆಮೆಸ್ಟ್ರಿ ನೋಡಿ ರಾಶಿಕಾ ಕಥೆ ಏನಾಗಿರಬೇಡ? ಎಂದು ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ. ಒಟ್ಟಾರೆ ಬಿಬಿ ಫೆಸ್ಟ್ ಎಪಿಸೋಡ್ ಸಖತ್ ಮಜವಾಗಿದೆ.

More from Filmibeat

Read more about: bigg boss 12 bigg boss kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X