BBK12: ಸೀಕ್ರೆಟ್‌ ರೂಮ್‌ನಲ್ಲಿ ರಕ್ಷಿತಾ ಕಣ್ಣೀರು; ಮತ್ತೆ ಧ್ರುವಂತ್ ಕ್ವಾಟ್ಲೆ ಶುರು

ಬಿಗ್‌ಬಾಸ್ ಮನೆಯಲ್ಲಿ ಈ ವೀಕೆಂಡ್ ಅಚ್ಚರಿ ಕಾದಿತ್ತು. ಧ್ರುವಂತ್ ಹಾಗೂ ರಕ್ಷಿತಾ ಎಲಿಮಿನೇಟ್ ಆಗಿ ಹೊರಬಂದಂತೆ ತೋರಿಸಲಾಗಿತ್ತು. ಆದರೆ ಇಬ್ಬರೂ ಈಗ ಸೀಕ್ರೆಟ್ ರೂಮ್‌ನಲ್ಲಿದ್ದಾರೆ. ಮನೆಮಂದಿಗೆ ಮಾತ್ರ ಆ ವಿಚಾರ ಗೊತ್ತಿಲ್ಲ. ವೀಕ್ಷಕರು ಅಸಲಿ ಆಟ ನೋಡುತ್ತಿದ್ದಾರೆ. ಮನೆ ಮಂದಿ ರಕ್ಷಿತಾ ಎಲಿಮಿನೇಟ್ ಆಗಿದ್ದಕ್ಕೆ ಬೇಸರಗೊಂಡಿದ್ದಾರೆ. ಇದು ಆಕೆಗೂ ಕಣ್ಣೀರು ತಂದಿದೆ.

ಕಳೆದ ವಾರ ವೋಟಿಂಗ್ ಲೈನ್ಸ್ ಓಪನ್ ಆಗಿರಲಿಲ್ಲ. ಹಾಗಾಗಿ ಎಲಿಮಿನೇಷನ್ ಇರಲ್ಲ ಎಂದು ವೀಕ್ಷಕರು ಮೊದಲೇ ಭಾವಿಸಿದ್ದರು. ಅದು ನಿಜವಾಗಿತ್ತು. ಆದರೆ ಮನೆಮಂದಿಗೆ ಮಾತ್ರ ಡಬಲ್ ಎಲಿಮಿನೇಷನ್ ಶಾಕ್ ಎದುರಾಗಿತ್ತು. ನಾಮಿನೇಟ್ ಆಗಿದ್ದವರ ಲಿಸ್ಟ್ ತೆಗೆದು ಒಬ್ಬೊಬ್ಬರನ್ನು ಸೇವ್ ಮಾಡುತ್ತ ಬಂದಿದ್ದ ಕಿಚ್ಚ ಕೊನೆಗೆ ಧ್ರುವಂತ್ ಹಾಗೂ ರಕ್ಷಿತಾ ಎಲಿಮಿನೇಟ್ ಎಂದು ಹೇಳಿ ಅಚ್ಚರಿ ಮೂಡಿಸಿದ್ದರು. ಫಿನಾಲೆಗೆ ಹೋಗುತ್ತಾರೆ ಎಂದುಕೊಂಡಿದ್ದ ಸ್ಪರ್ಧಿಗಳೇ ಹೊರಹೋದ್ರಾ ಎಂದು ಮನೆಯಲ್ಲಿರುವ ಇತರರಿಗೆ ಭಾಸವಾಗಿತ್ತು.

Bigg Boss 12 Twist Dhruvanth and Rakshita in Secret Room Tension and Taunts Begin

ಸೀಕ್ರೆಟ್ ರೂಮ್‌ನಲ್ಲಿ ಧ್ರುವಂತ್ ಹಾಗೂ ರಕ್ಷಿತಾ ಮೊದಲ ದಿನ ಶುರುವಾಗಿದೆ. ಮನೆ ಮಂದಿ ತಮ್ಮ ಬಗ್ಗೆ ಏನೆಲ್ಲಾ ಭಾವಿಸುತ್ತಾರೆ ಎಂದು ಅಲ್ಲೇ ಕೂತು ಕೇಳಿಸಿಕೊಳ್ಳುತ್ತಿದ್ದಾರೆ. "ರಕ್ಷಿತಾ ಮನೆಯಿಂದ ಹೊರಹೋಗಿದ್ದು ನಮಗೆಲ್ಲಾ ಬೇಸರವಾಯಿತು. ಪ್ರತಿಯೊಬ್ಬರ ಕಣ್ಣಲ್ಲಿ ನೀರಿತ್ತು. ಆದರೆ ಅವನ(ಧ್ರುವಂತ್) ಬಗ್ಗೆ ಯಾರು ಮಾತನಾಡಲಿಲ್ಲ" ಎಂದು ರಜತ್ ಹೇಳಿದ್ದಾರೆ. ರಕ್ಷಿತಾ ಕಣ್ಣೀರಾಗಿದ್ದಾರೆ. ಬಳಿಕ "ನನ್ನ ಜನ ನನ್ನನ್ನು ಬಿಟ್ಟುಕೊಡಲಿಲ್ಲ" ಎಂದು ರಕ್ಷಿತಾ ಪ್ರತಿಕ್ರಿಯಿಸಿದ್ದಾರೆ. "ನಿನ್ನಂಥವರೇ ನಿನ್ನ ಜನ" ಎಂದು ಧ್ರುವಂತ್ ವ್ಯಂಗ್ಯವಾಡಿದ್ದಾರೆ.

ನಿನ್ನ ನಾಟಕ ಎಲ್ಲಾ ನೋಡ್ಕೊಂಡೆ ನಾನು ಬಂದಿರೋದು ಎಂದು ರಕ್ಷಿತಾಳನ್ನು ಮತ್ತೆ ಧ್ರುವಂತ್ ಕೆಣಕಿದ್ದಾರೆ. "ಅಯ್ಯೋ ದೇವ.. ಒಂದೇ ರೂಮ್‌ನಲ್ಲಿ ನಿಮ್ಮ ಜೊತೆ ಹೇಗಪ್ಪಾ ಇರೋದು?" ಎಂದು ರಕ್ಷಿತಾ ತಲೆ ಹಿಡಿದುಕೊಂಡಿದ್ದಾರೆ. ಅದಕ್ಕೆ ಧ್ರುವಂತ್ ವ್ಯಂಗ್ಯವಾಗಿ ನಕ್ಕಿದ್ದಾರೆ. ಮೊದಲ ದಿನದಿಂದ ಇಬ್ಬರ ನಡುವೆ ಅಷ್ಟಕ್ಕಷ್ಟೆ. ಅಶ್ವಿನಿ ಬಿಟ್ಟರೆ ಯಾರೊಟ್ಟಿಗೂ ಧ್ರುವಂತ್ ಉತ್ತಮ ಬಾಂಧವ್ಯ ಹೊಂದಿರಲಿಲ್ಲ. ರಕ್ಷಿತಾ ಬಹಳ ನಾಟಕ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡುತ್ತಾ ಬಂದಿದ್ದರು.

ರಕ್ಷಿತಾ ಶೆಟ್ಟಿ ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ. ಹಾಗಾಗಿ ಕನ್ನಡ ಸ್ಪಷ್ಟವಾಗಿ ಮಾತನಾಡಲು ಕಷ್ಟಪಡುತ್ತಾರೆ. ಈ ಬಗ್ಗೆ ಧ್ರುವಂತ್ ಟೀಕೆ ಮಾಡಿದ್ದರು. ಆರಂಭದಲ್ಲಿ ರಕ್ಷಿತಾ ಜೊತೆ ಚೆನ್ನಾಗಿಯೇ ಇದ್ದ ಧ್ರುವಂತ್ ಬಳಿಕ ತಿರುಗಿಬಿದ್ದಿದ್ದರು. "ನಾನು ಕೂಡ ಮಂಗಳೂರಿನವನು. ಮಂಗಳೂರಿನಲ್ಲಿ ಯಾರೊಬ್ಬರೂ ರಕ್ಷಿತಾ ರೀತಿ ಮಾತನಾಡುವುದು ನೋಡಿಲ್ಲ. ಅಶ್ವಿನಿ ವಿರುದ್ಧ ಮಾತನಾಡುವ ರಕ್ಷಿತಾ, ಸುದೀಪ್ ಸರ್ ಮುಂದೆ ಸೈಲೆಂಟ್ ಆಗಿಬಿಡುತ್ತಾರೆ. 'ಎಂಥ ಗೊತ್ತುಂಟಾ ಗಾಯ್ಸ್' ಎಂದು ರಕ್ಷಿತಾ ಮಾತನಾಡುವ ಶೈಲಿಯನ್ನು ಅಣಕವಾಡಿದ್ದರು.

"ಗಿಲ್ಲಿ ಮನೆಯಲ್ಲಿ ಸದಾ ಬನಿಯನ್ ಹಾಕಿಕೊಂಡು ಒಡಾಡುತ್ತಾನೆ. ಬಡವ ಎಂದು ಬಿಂಬಿಸಿಕೊಳ್ಳುತ್ತಾನೆ. 100 ಕುರಿ ಇದೆ ಅಂತಾನೆ. ಬಟ್ಟೆ ಹಾಕದೇ ವಾಶ್ ಮಾಡದೇ ಕೆರೆದುಕೊಳ್ಳುತ್ತಾನೆ. ನೀವು ಸಿರಿವಂತರು ಎಂದು ಹೇಳಿ ಬಿಂಬಿಸಲು ಹೊರಟ್ಟಿದ್ದಾನೆ" ಎಂದು ಕೂಡ ಧ್ರುವಂತ್ ಕಾಮೆಂಟ್ ಮಾಡಿದ್ದರು.

ಭಾಷೆ ವಿಚಾರದಲ್ಲಿ ಧ್ರುವಂತ್ ಮಾತುಗಳನ್ನು ವೀಕ್ಷಕರು ಖಂಡಿಸಿದ್ದರು. ಪ್ರತಿಯೊಬ್ಬರಿಗೂ ಅವರದ್ದೇ ಆದ ಸಮಸ್ಯೆಗಳು ಇರಬಹುದು. ಅದನ್ನು ನಾಟಕ ಎಂದು ಗೇಲಿ ಮಾಡಬಾರದು ಎಂದು ಬೇಸರ ವ್ಯಕ್ತಪಡಿಸಿದ್ದರು. ಇನ್ನು ಧ್ರುವಂತ್ ಪದೇ ಪದೆ ಮನೆ ಬಿಟ್ಟು ಹೊರಗಡೆ ಬರುವುದಾಗಿ ಹೇಳುತ್ತಿದ್ದರು. ಜನ ಸೇವ್ ಮಾಡಿದರೂ ಕ್ಯಾಮರಾ ಮುಂದೆ ಹೋಗಿ ನನ್ನನ್ನು ಮನೆಯಿಂದ ಹೊರಗೆ ಕಳಿಸಿ ಬಿಗ್‌ಬಾಸ್ ಎಂದು ಕೇಳುತ್ತಿದ್ದರು. ಕಳೆದ ವೀಕೆಂಡ್ ಈ ಬಗ್ಗೆ ಸುದೀಪ್ ತಿಳಿ ಹೇಳಿದ್ದರು.

More from Filmibeat

Read more about: bigg boss 12 bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X