BBK 12: ಈ ವಾರ ಪಂಚಾಯ್ತಿಯಲ್ಲಿ ಯಾವೆಲ್ಲಾ ವಿಷಯಗಳ ಬಗ್ಗೆ ಕಿಚ್ಚ ಮಾತನಾಡಬೇಕು?

ಬಿಗ್‌ಬಾಸ್ ಕನ್ನಡ ಸೀಸನ್ 12 ವೀಕ್ಷಕರಿಗೆ ಭರ್ಜರಿ ಮನರಂಜನೆ ಕೊಡ್ತಿದೆ. ಈಗಾಗಲೇ ಶೋ 30 ದಿನ ಪೂರೈಸಿದೆ. ಆಟ ಒಂದು ಹಂತಕ್ಕೆ ಬಂದಿದೆ. ಈ ವಾರ ಬಿಗ್‌ಬಾಸ್ ಮನೆ ಬಿಬಿ ಕಾಲೇಜ್ ಆಗಿ ಬದಲಾಗಿದೆ. ಸ್ಪರ್ಧಿಗಳೆಲ್ಲಾ ಕಾಲೇಜ್ ಸ್ಟೂಡೆಂಟ್ಸ್ ಅವತಾರದಲ್ಲಿ ಆಟ ಆಡುತ್ತಿದ್ದಾರೆ. ಸಖತ್ ಎಂಜಾಯ್ ಮಾಡ್ತಿದ್ದಾರೆ.

ಕಾಲೇಜು ಹುಡುಗರಂತೆ ಬದಲಾಗಿರುವ ಸ್ಪರ್ಧಿಗಳ ಕಾಸ್ಟ್ಯೂಮ್ ಕೂಡ ಬದಲಾಗಿದೆ. ಬಹುತೇಕ ರೆಟ್ರೋ ಲುಕ್‌ನಲ್ಲಿ ಎಲ್ಲರೂ ಮಿಂಚುತ್ತಿದ್ದಾರೆ. ಇತ್ತೀಚೆಗೆ ನಡೆದ ಬಿಬಿ ಕಾಲೇಜ್ ಫೆಸ್ಟ್‌ನಲ್ಲಿ ಡ್ಯಾನ್ಸ್, ಸ್ಕಿಟ್ ಮಾಡಿ ಸ್ಪರ್ಧಿಗಳು ರಂಜಿಸಿದ್ದಾರೆ. ಗಿಲ್ಲಿ ಹಾಗೂ ಅಶ್ವಿನಿ ಗೌಡ ಡ್ಯಾನ್ಸ್ ಮಜವಾಗಿತ್ತು. ಇನ್ನು ಸೂರಜ್ ಜೊತೆ ಕಾವ್ಯ ಬಿಂದಾಸ್ ಸ್ಟೆಪ್ಸ್ ಹಾಕಿ ಮೋಡಿ ಮಾಡಿದ್ದರು. ಇದೆಲ್ಲದರ ನಡುವೆ ಎಲಿಮಿನೇಷನ್ ಭೂತ ಕೂಡ ಹತ್ತಿರವಾಗಿದೆ.

Bigg Boss 12 Viewers await Kichcha Sudeep s weekend panchayat and the next elimination twist

ಕಳೆದ ವಾರ ದೀಪಾವಳಿ ಸಂಭ್ರಮದಲ್ಲಿ ಎಲಿಮಿನೇಷನ್ ನಡೆದಿರಲಿಲ್ಲ. ಆದರೂ ಎಲಿಮಿನೇಷನ್ ಶಾಕ್ ಕೆಲವರಿಗೆ ಸಿಕ್ಕಿತ್ತು. ಈ ವಾರ ಖಂಡಿತ ಒಬ್ಬರು ಮನೆಯಿಂದ ಹೊರ ಬರುತ್ತಾರೆ. ಈಗಾಗಲೇ ನಾಮಿನೇಷನ್ ಪ್ರಕ್ರಿಯೆ ಕೂಡ ಮುಗಿದಿದೆ. ರಾಶಿಕಾ, ದೃವಂತ್, ಮಲ್ಲಮ್ಮ, ಮಾಳು, ಅಶ್ವಿನಿ ಗೌಡ, ಗಿಲ್ಲಿ, ರಿಷಾ, ಧನುಷ್ ನಾಮಿನೇಟ್ ಆಗಿದ್ದಾರೆ. ಇನ್ನು ವಾರಾಂತ್ಯದ ಕಿಚ್ಚನ ಪಂಚಾಯ್ತಿ ಕೂಡ ನಡೆಯಬೇಕಿದೆ.

ಈ ವಾರ ಪಂಚಾಯ್ತಿಯಲ್ಲಿ ಕಿಚ್ಚ ಮಾತನಾಡಬೇಕಾದ ಬಿಸಿ-ಬಿಸಿ ಸಮಾಚಾರ ಯಾವುದು? ಎಂದು ಕಲರ್ಸ್ ಕನ್ನಡ ವೀಕ್ಷಕರನ್ನು ಕೇಳಿದೆ. ಸೋಶಿಯಲ್ ಮೀಡಿಯಾದಲ್ಲಿ ಹಾಕಿರುವ ಪೋಸ್ಟ್ ವೈರಲ್ ಆಗ್ತಿದೆ. ಅದಕ್ಕೆ ನೆಟ್ಟಿಗರು ತಮ್ಮದೇ ವಿಚಾರಗಳನ್ನು ಮುಂದಿಟ್ಟಿದ್ದಾರೆ. ಲವ್ ಸ್ಟೋರಿಗೆ ಬ್ರೇಕ್ ಹಾಕಿ ಬಿಗ್‌ಬಾಸ್ ಮನೆಗೆ ಬಂದಿರುವುದು ಯಾಕೆ ಎನ್ನುವುದನ್ನು ಸ್ಪರ್ಧಿಗಳಿಗೆ ಸುದೀಪ್ ತಿಳಿಸಬೇಕು ಎಂದು ವೀಕ್ಷಕರೊಬ್ಬರು ಕಾಮೆಂಟ್ ಮಾಡಿದ್ದಾರೆ.

Bigg Boss 12 Viewers await Kichcha Sudeep s weekend panchayat and the next elimination twist

ಕೈ ನೋವು ಇದ್ದರೂ ರಾಶಿಕಾ ಕಬ್ಬಡಿ ಆಟ ಅಷ್ಟು ಚೆನ್ನಾಗಿ ಆಡಲು ಹೇಗೆ ಸಾಧ್ಯವಾಯಿತು? ಎಂದು ಕೇಳಬೇಕು ಎಂದು ಮತ್ತೊಬ್ಬರು ತಿಳಿಸಿದ್ದಾರೆ. ರಾಶಿಕಾ, ಅಶ್ವಿನಿಗೆ ಸುದೀಪ್ ಮಾಡಿರುವ ಪಾಠ ಸಾಲದು, ಈ ವಾರ ಕೂಡ ತಿಳಿ ಹೇಳಬೇಕು. ಸೂರಜ್‌ಗೂ ಸೇರಿಸಿ ಪಾಠ ಮಾಡಲು ಸುದೀಪ್ ಅವರಿಗೆ ಹೇಳಿ ಎಂದು ಮಗದೊಬ್ಬರು ಕಾಮೆಂಟ್ ಮಾಡಿ ಹೇಳಿದ್ದಾರೆ.

ಆಟದಲ್ಲಿ ಡಬಲ್ ಗೇಮ್ ಆಡಿದ ಸೂರಜ್‌ಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಬೇಕು ಎನ್ನುವುದು ಮತ್ತೊಬ್ಬರ ಸಲಹೆ. ಅಶ್ವಿನಿ ದುರಹಂಕಾರ ಕಮ್ಮಿ ಆಗಿಲ್ಲ. ಮತ್ತೆ ಸುದೀಪ್ ಕ್ಲಾಸ್ ತೆಗೆದುಕೊಳ್ಳಬೇಕು ಎಂದು ಇನ್ನೊಬ್ಬರು ತಿಳಿಸಿದ್ದಾರೆ. ರಾಶಿಕಾ ಹಾಗೂ ಸೂರಜ್ ನಡೆ ಮುಜುಗರ ತರುವಂತಿದೆ. ಫ್ಯಾಮಿಲಿ ಸಮೇತ ಕೂತು ಶೋ ನೋಡಲು ಆಗಲ್ಲ, ಅದಕ್ಕೆ ಬ್ರೇಕ್ ಹಾಕಬೇಕು ಎನ್ನುವುದು ಇನ್ನೊಬ್ಬರ ಅಭಿಪ್ರಾಯ. ರಘು ಅವರಿಗೆ ಕಿಚ್ಚನ ಚಪ್ಪಾಳೆ ಸಿಗಬೇಕು ಎಂದು ಕೆಲವರು ಹೇಳುತ್ತಿದ್ದಾರೆ.

ಬಿಗ್‌ಬಾಸ್ ರೂಲ್ಸ್ ಫಾಲೋ ಮಾಡದವರನ್ನು ಹೊರಗಡೆ ಕಳಿಸಬೇಕು, ಕ್ಯಾಪ್ಟನ್ ಮಾತು ಕೇಳದವರಿಗೆ ಶಿಕ್ಷೆ ಆಗಬೇಕು. 'ಗೌರವ' ಅನ್ನುವ ಪದ ಹಾಸ್ಯಾಸ್ಪದ ಆಗದಂತೆ ನೋಡಿಕೊಳ್ಳಬೇಕು ಎಂದು ಮತ್ತೊಬ್ಬರು ದೊಡ್ಡ ಪಟ್ಟಿ ಕೊಟ್ಟಿದ್ದಾರೆ. ಈಗಾಗಲೇ ಬಿಗ್‌ಬಾಸ್ ಮನೆಯಲ್ಲಿ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಸೇರಿ 18 ಮಂದಿ ಮನೆಯೊಳಗೆ ಇದ್ದಾರೆ. ಶೀಘ್ರದಲ್ಲೇ ಕೆಲವರು ಎಲಿಮಿನೇಟ್ ಆಗಿ ಮತ್ತಿಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ಪಡೆಯುವ ಸಾಧ್ಯತೆ ಕೂಡ ಇದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ.

ಈ ಬಾರಿ ಸಾಕಷ್ಟು ಸರ್‌ಪ್ರೈಸ್‌ಗಳು ಇರುತ್ತದೆ ಎಂದು ಸುದೀಪ್ ಹೇಳ್ತಾ ಬರ್ತಿದ್ದಾರೆ. ಹಾಗಾಗಿ ಮತ್ತೆ ಯಾರಾದರೂ ವೈಲ್ಡ್‌ ಕಾರ್ಡ್ ಎಂಟ್ರಿ ಪಡೆಯುತ್ತಾರಾ? ಎನ್ನುವ ಕುತೂಹಲ ಮೂಡಿದೆ. ಕಿರುತೆರೆ ನಟಿ ಶ್ವೇತಾ ಪ್ರಸಾದ್ ದೊಡ್ಮನೆ ಒಳಗೆ ಹೋಗುತ್ತಾರೆ ಎಂದು ಬಹಳ ದಿನಗಳಿಂದ ಚರ್ಚೆ ಆಗ್ತಿದೆ.

More from Filmibeat

Read more about: sudeep bigg boss 12 bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X