BBK12: ಈ ವಾರ ಎಲಿಮಿನೇಷನ್ ಟ್ವಿಸ್ಟ್? ಹೊರ ಬರುವ ಇಬ್ಬರು ಯಾರ್ಯಾರು, ಕಾರಣ ಏನು?
ಬಿಗ್‌ಬಾಸ್ ಮನೆಯಲ್ಲಿ ಈಗ 'ವಿಲನ್' ಆಟ ಜೋರಾಗಿ ನಡೀತಿದೆ. ಮನೆಮಂದಿಗೆ ಚಿತ್ರವಿಚಿತ್ರ ಟಾಸ್ಕ್ ಕೊಟ್ಟು ಆಟ ಆಡಿಸಲಾಗ್ತಿದೆ. ಟಾಸ್ಕ್‌ಗಳ ಜೊತೆಗೆ ಸೀಕ್ರೆಟ್ ಟಾಸ್ಕ್ ಕೊಟ್ಟು ತಾಳ್ಮೆ ಹಾಗೂ ಸತ್ವ ಪರೀಕ್ಷೆಯ ಮಾಡಲಾಗ್ತಿದೆ. ಕಾವ್ಯಾ ಅಳುವಂತೆ ಮಾಡಬೇಕು ಎಂದು ಗಿಲ್ಲಿಗೆ ಟಾಸ್ಕ್ ಕೊಟ್ಟಿದ್ದು ಗೊತ್ತೇಯಿದೆ. ಇದೆಲ್ಲದರ ನಡುವೆ ವೀಕೆಂಡ್ ಎಲಿಮಿನೇಷ್ ಭೀತಿ ಶುರುವಾಗಿದೆ.
ಸೀಸನ್ 12 ಈಗಾಗಲೇ 70 ದಿನ ಪೂರೈಸಿದೆ. ಇಬ್ಬರು ಅತಿಥಿಗಳು ಸೇರಿ ಒಟ್ಟು 13 ಜನ ಬಿಗ್‌ಬಾಸ್ ಮನೆಯಲ್ಲಿದ್ದಾರೆ. ರಘು ಹಾಗೂ ಸೂರಜ್ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆ ಒಳಗೆ ಹೋಗಿದ್ದರು. ಕಳೆದ ಸೀಸನ್ ಸ್ಪರ್ಧಿಗಳಾದ ರಜತ್, ಚೈತ್ರಾ ಕುಂದಾಪುರ 2 ವಾರಗಳಿಂದ ಅತಿಥಿಗಳಾಗಿ ಮನೆ ಒಳಗೆ ಇದ್ದಾರೆ.

ಕೊನೆ ವಾರ ಅಭಿಷೇಕ್ ಬಿಗ್‌ಬಾಸ್ ಜರ್ನಿ ಮುಗಿಸಿ ಹೊರಗಡೆ ಬಂದಿದ್ದರು. ಕೆಲವರು ಅದೃಷ್ಟದಿಂದ ಇನ್ನು ಮನೆಯೊಳಗೆ ಉಳಿದುಕೊಂಡಿದ್ದಾರೆ. ಪ್ರಬಲ ಸ್ಪರ್ಧಿಗಳು ಎನಿಸಿಕೊಂಡಿದ್ದ ಕಾಕ್ರೋಚ್ ಸುಧಿ ಹಾಗೂ ಜಾಹ್ನವಿ ಬಹಳ ಬೇಗ ಎಲಿಮಿನೇಟ್ ಆಗಿ ಹೊರಗೆ ಬಂದುಬಿಟ್ಟರು. ಫಿನಾಲೆ ಹತ್ತಿರವಾಗುತ್ತಿದ್ದಂತೆ ಆಟ ಕುತೂಹಲ ಮೂಡಿಸುತ್ತಿದೆ. ಗಿಲ್ಲಿಗೆ ಅಶ್ವಿನಿ ಗೌಡ, ರಘು ಪೈಪೋಟಿ ಕೊಡುತ್ತಿದ್ದಾರೆ.
ಈ ವಾರ ಮನೆಯಿಂದ ಹೊರಬರಲು ನಾಮಿನೇಟ್ ಪ್ರಕ್ರಿಯೆ ಕೂಡ ನಡೆದಿತ್ತು. ಗಿಲ್ಲಿಯನ್ನು ಕಾವ್ಯಾ ನಾಮಿನೇಟ್ ಮಾಡಿದ್ದು ಮನೆ ಒಳಗೆ ಹಾಗೂ ಹೊರಗೆ ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಆದರೆ ಈವರೆಗೆ ವೋಟಿಂಗ್ ಲೈನ್ಸ್ ಓಪನ್ ಆಗಿಲ್ಲ. ಹಾಗಾಗಿ ಈ ವಾರ ಎಲಿಮಿನೇಷನ್ ಇರುವುದಿಲ್ಲ ಎನ್ನುವ ಊಹಾಪೋಹ ಶುರುವಾಗಿದೆ. ಮತ್ತೊಂದು ಕಡೆ ಟ್ವಿಸ್ಟ್ ಏನಂದ್ರೆ ಅತಿಥಿಗಳಾಗಿ ಬಂದಿರುವ ರಜತ್ ಹಾಗೂ ಚೈತ್ರಾ ಈ ವೀಕೆಂಡ್ ಮನೆಯಿಂದ ಹೊರ ಬರುವ ಸಾಧ್ಯತೆಯಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. ಈ ಬಗ್ಗೆ ಖಚಿತ ಮಾಹಿತಿ ಸಿಕ್ಕಿದೆ. ಭಾನುವಾರದ ಎಪಿಸೋಡ್ ಮುಗಿದ ಮೇಲೆ ಅಸಲಿ ಸಂಗತಿ ಗೊತ್ತಾಗಲಿದೆ.
ಈ ವಾರ ಎಲಿಮಿನೇಷನ್ ನಡೆಯದಿದ್ದರೆ ಮುಂದಿನ ವಾರ ಡಬಲ್ ಎಲಿಮಿನೇಷನ್ ಸಾಧ್ಯತೆ ದಟ್ಟವಾಗಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಒಟ್ಟಾರೆ ವೀಕೆಂಡ್‌ನಲ್ಲಿ ಬಿಗ್‌ಬಾಸ್ ಸ್ಪರ್ಧಿಗಳು ಹಾಗೂ ವೀಕ್ಷಕರಿಗೆ ಭಾರೀ ಸರ್‌ಪ್ರೈಸ್ ಕಾದಿದೆ. ನೋ ಎಲಿಮಿನೇಷನ್ ವೀಕ್, ಡಬಲ್ ಎಲಿಮಿನೇಷನ್ ಬಿಗ್‌ಬಾಸ್ ಶೋನಲ್ಲಿ ಹೊಸದೇನು ಅಲ್ಲ.
ಸ್ಪರ್ಧಿಗಳ ಲುಕ್ ಈ ವಾರ ಬದಲಾಗಿದೆ. 'ವಿಲನ್' ಆಣತಿಯಂತೆ ಕಾವ್ಯಾ ತಲೆ ಕೂದಲಿಗೆ ಬಣ್ಣ ಹಾಕಿಕೊಂಡಿರೋದು ಗೊತ್ತೇಯಿದೆ. ಇದೀಗ ಮಾಳು ಹೇರ್‌ಸ್ಟೈಲ್ ಕೂಡ ಬದಲಾಗಿದೆ. ಅದಕ್ಕೆ ಸಂಬಂಧಿಸಿದ ಪ್ರೋಮೊ ರಿಲೀಸ್ ಆಗಿದೆ. ಮನೆಯ ಟಿವಿಯಲ್ಲಿ ಎರಡು ಫೋಟೊ ಹಾಕಿ ಈ ರೀತಿ ಯಾರಾದರೂ ಒಬ್ಬರು ಹೇರ್‌ಸ್ಟೈಲ್ ಬದಲಿಸಿಕೊಳ್ಳಬೇಕು ಎಂದು ಟಾಸ್ಕ್ ಕೊಡಲಾಗಿದೆ. ಕೂಡಲೇ ಅಶ್ವಿನಿ ತಮ್ಮ ತಂಡದ ಮಾಳು ಹೆಸರು ಹೇಳಿದ್ದಾರೆ. ಅದರಂತೆ ಮಾಳು ಹೇರ್ ಸ್ಟೈಲ್ ಬದಲಿಸಿಕೊಂಡಿದ್ದಾರೆ. ಟಾಸ್ಕ್ ಭಾಗವಾಗಿಯೇ ರಜತ್ ತಮ್ಮ ಕೈಮೇಲೆ ಬಿಗ್‌ಬಾಸ್ ಲೋಗೊ ಟ್ಯಾಟೂ ಹಾಕಿಸಿಕೊಂಡಿದ್ದಾರೆ.
ಟ್ಯಾಟೂ ಹಾಕಿಸಿಕೊಳ್ಳಲು ನನ್ನ ಸಂಪೂರ್ಣ ಒಪ್ಪಿಗೆ ಇದೆ ಎಂದು ಹೇಳಿ ರಜತ್ ಟ್ಯಾಟು ಹಾಕಿಸಿಕೊಂಡಿದ್ದಾರೆ. ಕ್ಯಾಪ್ಟೆನ್ಸಿ ಟಾಸ್ಕ್ ಆಡಲು ಅಶ್ವಿನಿ ಹಾಗೂ ರಜತ್ ನಡುವೆ ಭಾರೀ ಪೈಪೋಟಿ ಇದೆ. ಅದೇ ಕಾರಣಕ್ಕೆ ಟ್ಯಾಟೂ ಕೂಡ ಹಾಕಿಸಿಕೊಂಡಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ವಿಲನ್ ಥೀಮ್ ಆಟ ಈ ವಾರಕ್ಕೆ ಮುಕ್ತಾಯವಾಗುವ ನಿರೀಕ್ಷೆಯಿದೆ. ಮುಂದೆ ಬೇರೆ ಬೇರೆ ಥೀಮ್ ಎದುರಾಗುವ ನಿರೀಕ್ಷೆಯಿದೆ. ಜೊತೆಗೆ ಫ್ಯಾಮಿಲಿ ರೌಂಡ್ ಕೂಡ ನಡೆಯಬೇಕಿದೆ.


Click it and Unblock the Notifications











