ಕ್ಯಾತೆ ತೆಗೆದು ಮೊದಲ ವಾರವೇ ನಾಮಿನೇಟ್ ಆದ ಖಾನ್ ಸಹೋದರಿಯರು.!

'ಬಿಗ್ ಬಾಸ್-12' ರಿಯಾಲಿಟಿ ಶೋಗೆ ಕಾಲಿಟ್ಟ ಎರಡನೇ ದಿನವೇ ದೊಡ್ಡ ಯುದ್ಧಕ್ಕೆ ನಾಂದಿ ಹಾಡಿದವರು ಸಹೋದರಿಯರಾದ ಸಭಾ ಖಾನ್ ಹಾಗೂ ಸೋಮಿ ಖಾನ್.

ಸುಮ್ಮನೆ ಇರಲಾರದೆ, 'ಮಸ್ತಿ' ಮಾಡಲು ಒಮ್ಮೆ ಖಾನ್ ಸಹೋದರಿಯರು ಜಗಳದ ನಾಟಕವಾಡಿದರು. ಅದು ನಾಟಕ ಅಂತ ಗೊತ್ತಾದ್ಮೇಲೆ, ಶ್ರೀಶಾಂತ್ ಪಿತ್ತ ನೆತ್ತಿಗೇರ್ತು.

ಮೊದಲನೇ ಚಟುವಟಿಕೆ ಶ್ರೀಶಾಂತ್ ರಿಂದ ರದ್ದಾದ್ಮೇಲೆ, ಶ್ರೀಶಾಂತ್ ವಿರುದ್ಧ ಖಾನ್ ಸಹೋದರಿಯರು ಗುಡುಗಿದರು. ಸಾಲದಕ್ಕೆ, 'ಮನೆಯಲ್ಲಿ ಯಾರೂ ಕೆಲಸ ಮಾಡುತ್ತಿಲ್ಲ' ಅಂತ ಹೊಸ ಕ್ಯಾತೆ ಶುರು ಮಾಡಿದರು. ಅನವಶ್ಯಕವಾಗಿ ನೆಮ್ಮದಿ ಹಾಳು ಮಾಡುತ್ತಿರುವ ಖಾನ್ ಸಹೋದರಿಯರನ್ನು 'ಬಿಗ್ ಬಾಸ್' ಮನೆಯಿಂದ ಹೊರ ಹಾಕಲು ಸ್ಪರ್ಧಿಗಳು ನಿರ್ಧಾರ ಮಾಡಿದ್ದಾರೆ.

ಅರ್ಥಾತ್, ಮೊದಲ ವಾರವೇ ನಾಮಿನೇಷನ್ ಎಂಬ ಡೇಂಜರ್ ಝೋನ್ ಗೆ ಸಭಾ ಖಾನ್ ಹಾಗೂ ಸೋಮಿ ಖಾನ್ ಬಂದಿದ್ದಾರೆ. ಈ ಜೋಡಿ ಜೊತೆಗೆ ನಾಮಿನೇಟ್ ಆಗಿರುವವರು ಯಾರ್ಯಾರು.? ಮುಂದೆ ಓದಿರಿ...

ಸಭಾ ಖಾನ್ ಹಾಗೂ ಸೋಮಿ ಖಾನ್

ಸಭಾ ಖಾನ್ ಹಾಗೂ ಸೋಮಿ ಖಾನ್

ಮೊದಲ ವಾರವೇ ಖಾನ್ ಸಹೋದರಿಯರು 'ಬಿಗ್ ಬಾಸ್' ಮನೆಯಲ್ಲಿ ಟಾರ್ಗೆಟ್ ಆಗಿದ್ದಾರೆ. ಸೆಲೆಬ್ರಿಟಿ ಸ್ಪರ್ಧಿಗಳೆಲ್ಲಾ ಸೇರಿ ಒಕ್ಕೊರಲಿನಿಂದ ಸಭಾ ಹಾಗೂ ಸೋಮಿ ಖಾನ್ ರನ್ನ ನಾಮಿನೇಟ್ ಮಾಡಿದ್ದಾರೆ.

ಶಿವಾಶೀಶ್ ಹಾಗೂ ಸೌರವ್

ಶಿವಾಶೀಶ್ ಹಾಗೂ ಸೌರವ್

'ಬಿಗ್ ಬಾಸ್' ಮನೆಯ ಯಾವುದೇ ಕೆಲಸಗಳಲ್ಲಿ ಶಿವಾಶೀಶ್ ಪಾಲ್ಗೊಳ್ಳುತ್ತಿಲ್ಲ. ಎಲ್ಲರೊಂದಿಗೆ ಸೌರವ್ ಚೆನ್ನಾಗಿ ಅಡ್ಜಸ್ಟ್ ಆಗಿದ್ದಾರೆ. ಆದ್ರೆ, ಶಿವಾಶೀಶ್ ಕೊಂಚ ಕಿರಿಕಿರಿ ತರುವ ಕಾರಣ, ಈ ಜೋಡಿಯನ್ನ ಸೆಲೆಬ್ರಿಟಿ ಸ್ಪರ್ಧಿಗಳು ನಾಮಿನೇಟ್ ಮಾಡಿದರು.

ರೋಶ್ಮಿ ಹಾಗೂ ಕ್ರಿತಿ

ರೋಶ್ಮಿ ಹಾಗೂ ಕ್ರಿತಿ

ಎಲ್ಲರೊಂದಿಗೆ ಕ್ರಿತಿ ಹಾಗೂ ರೋಶ್ಮಿ ಫ್ರೆಂಡ್ಲಿ ಆಗಿದ್ದರೂ, 'ಕಾಂಪಿಟೇಶನ್' ಎಂಬ ಕಾರಣ ಕೊಟ್ಟು ಈ ಜೋಡಿಯನ್ನ ನಾಮಿನೇಟ್ ಮಾಡಲಾಗಿದೆ. ರೋಡೀಸ್ ನಲ್ಲಿ ವೋಟ್ ಔಟ್ ನಿಂದ ಬಚಾವ್ ಆಗುತ್ತಿದ್ದ ಕ್ರಿತಿ, 'ಬಿಗ್ ಬಾಸ್' ಮನೆಯಲ್ಲಿ ಮೊದಲ ವಾರ ಸೇಫ್ ಆಗುತ್ತಾರಾ.?

ದೀಪಿಕಾ

ದೀಪಿಕಾ

ಕ್ಯಾಪ್ಟನ್ ಆಗದೆ, 'ಬಿಗ್ ಬಾಸ್' ಮನೆಯ ಕಿಚನ್ ಜವಾಬ್ದಾರಿ ವಹಿಸಿಕೊಂಡಿರುವ ಕಾರಣಕ್ಕೆ ದೀಪಿಕಾ ವಿರುದ್ಧ 'ವಿಚಿತ್ರ ಜೋಡಿ'ಗಳು ತಿರುಗಿ ಬಿದ್ದಿದ್ದಾರೆ. ಖಾನ್ ಸಹೋದರಿಯರ ಸಿಟ್ಟು ಇದ್ದ ಪರಿಣಾಮ, ಮೊದಲ ವಾರ ದೀಪಿಕಾ ಕೂಡ ನಾಮಿನೇಟ್ ಆಗಿದ್ದಾರೆ.

ಸೃಷ್ಟಿ ರೋಡ್

ಸೃಷ್ಟಿ ರೋಡ್

ಕನ್ನಡಿ ಕ್ಲೀನ್ ಮಾಡುವ ವಿಷಯಕ್ಕೆ ಸೃಷ್ಟಿ ರೋಡ್ ಹಾಗೂ ಸಭಾ ಖಾನ್ ನಡುವೆ ಜಗಳ ಆಗಿತ್ತು. ಇದನ್ನೇ ಕಾರಣವಾಗಿ ಇಟ್ಟುಕೊಂಡು ಖಾನ್ ಸಹೋದರಿಯರು ಸೃಷ್ಟಿಯನ್ನ ನಾಮಿನೇಟ್ ಮಾಡಿದರು. ಮಿಕ್ಕ ಜೋಡಿಗಳು ಅದಕ್ಕೆ ಒಪ್ಪಿಗೆ ಕೊಟ್ಟರು. ಮೂರು ಜೋಡಿ ಹಾಗೂ ಇಬ್ಬರು ಸೆಲೆಬ್ರಿಟಿಗಳ ಪೈಕಿ ಮೊದಲ ವಾರ ಔಟ್ ಆಗುವವರು ಯಾರು ಅಂತ ಕಾದು ನೋಡಬೇಕು.

More from Filmibeat

English summary
Salman Khan's Bigg Boss 12: Sabha-Somi Khan, Shivashish-Sourav, Roshmi-Krithi, Deepika Kakar and Srishti are nominated for Week 1 Eviction.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X