ಸಹೋದರಿಯರ ಅವಾಂತರ: 'ಬಿಗ್ ಬಾಸ್' ಮನೆಯಿಂದ ಹೊರಹೋಗ್ತಾರಾ ಶ್ರೀಶಾಂತ್.?

'ಬಿಗ್ ಬಾಸ್-12' ರಿಯಾಲಿಟಿ ಶೋ ಶುರುವಾಗಿ ಎರಡು ದಿನ ಕಳೆದಿದೆ ಅಷ್ಟೇ. ಅಷ್ಟು 'ಬಿಗ್ ಬಾಸ್' ಮನೆಯಲ್ಲಿ ಬೆಂಕಿ ಹೊತ್ತುಕೊಂಡಿದೆ. ಎಲ್ಲಾ ವಿಚಾರಗಳಲ್ಲೂ ಮೂಗು ತೂರಿಸಿ ಖಾನ್ ಸಹೋದರಿಯರು ಕ್ಯಾತೆ ತೆಗೆಯುತ್ತಿದ್ದಾರೆ.

ಮನೆಯಲ್ಲಿ ಸದ್ದು ಮಾಡಬೇಕು ಎಂಬ ಉದ್ದೇಶದಿಂದಲೇ ನಿನ್ನೆ ಸಭಾ ಖಾನ್ ಹಾಗೂ ಸೋಮಿ ಖಾನ್ (ಖಾನ್ ಸಹೋದರಿಯರು) ಜಗಳ ಆಡುವ ನಾಟಕ ಮಾಡಿದ್ದರು. ಜಗಳದ ಅಸಲಿ ಮುಖವಾಡ ಬಯಲಾಗುತ್ತಿದ್ದಂತೆಯೇ, ಶ್ರೀಶಾಂತ್ ಮುನಿಸಿಕೊಂಡರು.

ಇದೀಗ 'ಬಿಗ್ ಬಾಸ್' ಕೊಟ್ಟಿರುವ ಮೊದಲ ಚಟುವಟಿಕೆ ಶ್ರೀಶಾಂತ್ ರಿಂದಾಗಿ ರದ್ದಾಗಿದೆ. ಸುಖಾಸುಮ್ಮನೆ ಇನ್ನೊಬ್ಬರ ಮೇಲೆ ಬೆರಳು ತೋರಿಸುವುದು ಶ್ರೀಶಾಂತ್ ಗೆ ಇಷ್ಟವಾಗಿಲ್ಲ. ಹೀಗಾಗಿ ಚಟುವಟಿಕೆಯಿಂದ ಹಿಂದೆ ಸರಿದಿದ್ದಾರೆ. ಇದೇ ಕಾರಣಕ್ಕೆ ಸೋಮಿ ಖಾನ್ ಪಿತ್ತ ನೆತ್ತಿಗೇರಿದೆ.

Bigg Boss 12: Will Sreeshanth walk out of the show.?

ಸೋಮಿ ಖಾನ್ ಜೊತೆಗಿನ ವಾಗ್ವಾದದಿಂದ ಬೇಸೆತ್ತ ಶ್ರೀಶಾಂತ್ 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ಮುಂದಾಗಿದ್ದಾರೆ. ಹಾಕೊಂಡಿದ್ದ ಮೈಕ್ ತೆಗೆದು ಗೇಟ್ ತೆಗೆಯುವಂತೆ 'ಬಿಗ್ ಬಾಸ್' ಬಳಿ ಶ್ರೀಶಾಂತ್ ಕೇಳಿಕೊಂಡಿದ್ದಾರೆ.

ಹಾಗಾದ್ರೆ, 'ಬಿಗ್ ಬಾಸ್' ಮನೆಯಿಂದ ಶ್ರೀಶಾಂತ್ ಹೊರಹೋಗ್ತಾರಾ.? ಶ್ರೀಶಾಂತ್ ಕೋಪವನ್ನ ಕಮ್ಮಿ ಮಾಡುವವರು ಯಾರು.? ಎಂಬ ಪ್ರಶ್ನೆಗೆ ಉತ್ತರ ಇಂದು ರಾತ್ರಿ 9 ಗಂಟೆಗೆ ಸಿಗಲಿದೆ. ಶ್ರೀಶಾಂತ್ ನಡವಳಿಕೆ ಹೇಗಿತ್ತು ಅಂತ ತಿಳಿದುಕೊಳ್ಳಬೇಕಾದರೆ, ಇಂದಿನ 'ಬಿಗ್ ಬಾಸ್-12' ಸಂಚಿಕೆ ನೋಡಿರಿ...

More from Filmibeat

English summary
Salman Khan's Bigg Boss 12: Will Sreeshanth walk out of the show.?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X