Don't Miss!
- Finance Tumakuru namma metro: ಮಾದಾವರದಿಂದ ತುಮಕೂರು ಮೆಟ್ರೋ ಕಾರಿಡಾರ್ ಅಪಡೇಟ್
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- News Srivari Seva: ತಿರುಮಲ ಶ್ರೀವಾರಿಯ ಸೇವಕರಾಗಲು ಒಂದು ಅದ್ಭುತ ಅವಕಾಶ.. ಕೂಡಲೇ ಬುಕ್ ಮಾಡಿ
- Automobiles XUV300: ಮಹೀಂದ್ರಾ ಎಕ್ಸ್ಯುವಿ300 ಕಾರನ್ನು ನಿಮ್ಮ ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Technology OnePlus: ಒನ್ಪ್ಲಸ್ ವಾಚ್ 2 ನಾರ್ಡಿಕ್ ಬ್ಲೂ ಆವೃತ್ತಿ ಲಾಂಚ್! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಖಿ ಸಾವಂತ್ ಗೆ ಸೀರೆ ಉಡಿಸಿದ ಅಭಿನವ್: ಪತ್ನಿಯ ಪ್ರತಿಕ್ರಿಯೆ ಹೀಗಿತ್ತು
ಬಿಗ್ ಬಾಸ್ ಸೀಸನ್ -14 ಹಿಂದಿ ರಿಯಾಲಿಟಿ ಶೋ ನಾನಾ ಕಾರಣಗಳಿಗೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ವಿವಿಧ ರೀತಿಯಲ್ಲಿ ಮನರಂಜನೆ ನೀಡುತ್ತಿರುವ ಬಿಗ್ ಬಾಸ್-14ಗೆ ನಟಿ ರಾಖಿ ಸಾವಂತ್ ಎಂಟ್ರಿ ಕೊಟ್ಟ ಮೇಲೆ ಬಿಗ್ ಮನೆ ಮತ್ತಷ್ಟು ರಂಗೇರಿದೆ.
ಇತ್ತೀಚಿಗೆ ರಾಖಿ ಸಾವಂತ್ ಸೀರೆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಬಿಗ್ ಬಾಸ್ ಸ್ಪರ್ಧಿಗಳನ್ನು ನೋಡಲು ಅವರವರ ಮನೆಯವರು ಬರ್ತಾರೆ ಎಂದು ಅವರನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ. ರಾಖಿ ಸಾವಂತ್ ಸಹ ಸಜ್ಜಾಗಿದ್ದು, ಮನೆಯವರಿಗಾಗಿ ರಾಖಿ ಸೀರೆ ಧರಿಸಿದ್ದಾರೆ. ಆದರೆ ಅವರೇ ಸೀರೆ ಉಟ್ಟುಕೊಳ್ಳುವ ಬದಲು ಸಹ ಸ್ಪರ್ಧಿ ಅಭಿನವ್ ಶುಕ್ಲಾಗೆ ಸೀರೆ ಉಡಿಸುವಂತೆ ಮನವಿ ಮಾಡಿದ್ದಾರೆ.
ಬಿಗ್ ಬಾಸ್ ಸ್ಪರ್ಧಿಯ ಕಾರು ಅಪಘಾತ; ರಸ್ತೆ ಪಕ್ಕದ ಪ್ರಪಾತಕ್ಕೆ ಉರುಳಿ ಬಿದ್ದ ನಿಶಾಂತ್
ರಾಖಿ ಸಾವಂತ್ ಗೆ ಸೀರೆ ಉಡಿಸಿದ ಅಭಿನವ್
ರಾಖಿ ಅಭಿನವ್ ಬಳಿ ಸೀರೆಯುಡಿಸುವಂತೆ ಮನವಿ ಮಾಡಿಕೊಂಡಿರುವುದು ಮನೆಯಲ್ಲಿದ್ದ ಉಳಿದ ಸ್ಪರ್ಧಿಗಳಿಗೆ ಅಚ್ಚರಿಗೆ ಮೂಡಿಸಿತು. ರಾಖಿಯ ಬೇಡಿಕೆಯಂತೆ ಅಭಿನವ್ ಸೀರೆ ಉಡಿಸಲು ಪ್ರಾರಂಭಿಸುತ್ತಾರೆ. ಅಭಿನವ್ ಆಗಲೇ ಮದುವೆಯಾಗಿದೆ. ಅಲ್ಲದೇ ಪತ್ನಿ ರುಬೀನಾ ದಿಲೈಕ್ ಸಹ ಬಿಗ್ ಮನೆಯಲ್ಲಿ ಸ್ಪರ್ಧಿಯಾಗಿ ಇದ್ದಾರೆ.
ಅಭಿನವ್ ನೋಡಿ ಪತ್ನಿ ರುಬೀನಾ ಪ್ರತಿಕ್ರಿಯೆ ಏನಾಗಿತ್ತು?
ತನ್ನ ಪತಿ ರಾಖಿಗೆ ಸೀರೆ ಉಡಿಸುತ್ತಿರುವುದನ್ನು ನೋಡಿ ಓಡೋಡಿ ಲಿವಿಂಗ್ ಎರಿಯಾಗೆ ಬಂದಿದ್ದಾರೆ. ಪತಿಯ ಮೇಲೆ ಸಿಟ್ಟು ಮಾಡಿಕೊಂಡು ಕೂಗಾಡುತ್ತಾರೆ ಅಂತ ಎಲ್ಲರೂ ಅಂದುಕೊಂಡಿದ್ದರು. ಆದರೆ 'ರುಬೀನಾಗೆ ತನ್ನ ಪತಿಯ ಮೇಲೆ ಸಂಪೂರ್ಣ ನಂಬಿಕೆ ಇದೆ. ಅಭಿನವ್ ಹೇಗೆ ಎನ್ನುವುದು ಚೆನ್ನಾಗಿ ತಿಳಿದಿದೆ' ಎಂದು ಅಲ್ಲಿದ್ದ ಸಹ ಸ್ಪರ್ಧಿಗಳು ಮಾತನಾಡಿಕೊಂಡರು. ಅವರ ಮಾತಿನಂತೆ ರುಬೀನಾ ಪತಿಯ ಬಗ್ಗೆ ತಪ್ಪು ತಿಳಿದುಕೊಳ್ಳದೆ ಸಮಾಧಾನವಾಗಿಯೆ ನಡೆದುಕೊಳ್ಳುತ್ತಾರೆ.
ಅಭಿನವ್ ಗೆ ಲಗೇಜು ಎಂದಿದ್ದ ಸಲ್ಮಾನ್
ಈ ಹಿಂದೆ ಬಿಗ್ ಬಾಸ್ ಪ್ರಾರಂಭದಲ್ಲಿ ಸಲ್ಮಾನ್ ಖಾನ್ ರುಬೀನಾ ಪತಿ ಅಭಿನವ್ ಗೆ ಲಗೇಜು ಎಂದು ಅವಹೇಳನ ಮಾಡಿದ್ದರು. ನಿಮ್ಮ ಜೊತೆ ನಿಮ್ಮ ಲಗೇಜ್ ಅನ್ನು ಕರೆದುಕೊಂಡು ಬಂದಿದ್ದೀರಿ ಎಂದು ಹೇಳಿದ್ದರು. ಸಲ್ಮಾನ್ ಖಾನ್ ಹೇಳಿಯನ್ನು ಖಂಡಿಸಿ, ಸಲ್ಲು ವಿರುದ್ಧವೇ ಗುಡುಗಿದ್ದರು. ಗಂಡನ ಪರವಾಗಿ ವಾದಿಸಿ, ಸಲ್ಮಾನ್ ಖಾನ್ ಅವರನ್ನು ವಿರೋಧಿಸಿದ್ದ ರುಬೀನಾಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.
ಫಿನಾಲೆಗೆ ದಿನಗಣನೆ ಪ್ರಾರಂಭ
ಬಿಗ್ ಬಾಸ್ ಸೀಸನ್ 14 ಪ್ರಾರಂಭವಾಗಿ ಅನೇಕ ದಿನಗಳಾಗಿದೆ. ಇದೀಗ ಫಿನಾಲೆ ಹಂಚಕ್ಕೆ ಬಂದಿದೆ. ಕೆಲವೇ ದಿನಗಳಲ್ಲಿ ಫಿನಾಲೆ ಪ್ರಾರಂಭವಾಗಲಿದೆ. ಈ ಬಾರಿ ಯಾರು ಬಿಗ್ ಬಾಸ್ ಟ್ರೋಫಿ ಮುಡಿಗೇರಿಸಿಕೊಳ್ಳುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.