ಮದುವೆ ಆದ್ಮೇಲು 4 ಜನರ ಜೊತೆ ಡೇಟಿಂಗ್: ಬಿಗ್ ಬಾಸ್ ಸ್ಪರ್ಧಿಯ ವಿರುದ್ಧ ಪತಿಯ ಆರೋಪ
ಹಿಂದಿ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಪ್ರಸಿದ್ಧ ರಿಯಾಲಿಟಿ ಶೋಗಳಲ್ಲಿ 'ಬಿಗ್ ಬಾಸ್' ಕೂಡ ಒಂದು. 13 ಸೀಸನ್ ಗಳನ್ನು ಮುಗಿಸಿ ಇದೀಗ 14ನೇ ಸೀಸನ್ ಯಶಸ್ವಿಯಾಗಿ ನಡೆಯುತ್ತಿದೆ. ಇತ್ತೀಚಿಗಷ್ಟೆ ನಟಿ ಪವಿತ್ರ ಪೂನಿಯಾ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ.
ಪವಿತ್ರ ಮನೆಯಿಂದ ಔಟ್ ಆದ ಬೆನ್ನಲ್ಲೇ ಅವರ ವಿರುದ್ಧ ಸರಣಿ ಆರೋಪ ಕೇಳಿಬರುತ್ತಿದೆ. ಪವಿತ್ರ ಮದುವೆ ಆಗಿರುವ ವಿಚಾರವನ್ನು ಮುಚ್ಚಿಟ್ಟು, ನಾಲ್ವರ ಜೊತೆ ಡೇಟಿಂಗ್ ಮಾಡಿದ್ದಾರೆ ಎಂದು ಸ್ವತಹ ಅವರ ಪತಿಯೇ ಆರೋಪಿಸಿದ್ದಾರೆ.
ಪವಿತ್ರ ಪೂನಿಯಾ ಪತಿ ಸುಮಿತ್ ಮಹೇಶ್ವರಿ ಹೋಟೆಲ್ ಉದ್ಯಮಿಯಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚಿಗೆ ಯೂಟ್ಯೂಬ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಸುಮಿತ್ ಪತ್ನಿ ಪವಿತ್ರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 'ಬಹಳ ಹಿಂದೆಯೇ ಪವಿತ್ರ ಜೊತೆ ನನ್ನ ಮದುವೆಯಾಗಿದೆ. ಆದರೆ ಅದನ್ನು ಬಹಿರಂಗ ಪಡಿಸಬಾರದು ಎಂದು ಪವಿತ್ರ ಹೇಳಿದ್ದರು. ಆದರೆ ನಾಲ್ಕು ಬಾರಿ ಮೋಸ ಮಾಡಿದ್ದಾರೆ'ಎಂದು ಎಂದು ಸುಮಿತ್ ಹೇಳಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ನಾವಿಬ್ಬರು ಗಂಡ ಹೆಂಡತಿ ಎನ್ನುವ ವಿಚಾರವನ್ನು ಮುಚ್ಚಿಟ್ಟಿದ್ದಾರೆ. ಬಿಗ್ ಬಾಸ್ ಸ್ಪರ್ಧಿ ಪಾರಸ್ ಛಾಬ್ರಾ ಜೊತೆ ಅವರು ಡೇಟಿಂಗ್ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿತ್ತು. ಬಳಿಕ ನಾನು ಅವರಿಗೆ ನೀವು ಪವಿತ್ರ ಜೊತೆ ಸಂಬಂಧ ಹೊಂದಿರಬಹುದು ಆದರೆ ವಿಚ್ಛೇದನ ನೀಡುವ ವರೆಗೂ ಕಾಯಿರಿ ಎಂದು ಹೇಳಿದೆ. ನನ್ನ ಕೈ ಮೇಲೆ ಆಕೆಯ ಟ್ಯಾಟೂ ಇದೆ. ನಾನು ಇನ್ನೂ ಆಕೆಯನ್ನು ಪ್ರೀತಿಸುತ್ತಿದ್ದೀನಿ. ಅವಳಿಂದ ನನ್ನ ಕುಟುಂಬಕ್ಕೆ ತುಂಬಾ ಅವಮಾನವಾಗಿದೆ' ಎಂದು ಹೇಳಿದ್ದಾರೆ.
ಮದುವೆ ಬಳಿಕ ಪವಿತ್ರ, ಪಾರಸ್ ಛಾಬ್ರಾ, ಪ್ರತೀಕ್ ಸೆಹಜ್ವಾಲ ಮತ್ತು ಇನ್ನೊಬ್ಬರ ಜೊತೆ ಡೇಟಿಂಗ್ ಮಾಡಿದ್ದಾರೆ. ಇದೀಗ ಬಿಗ್ ಬಾಸ್ ಸ್ಪರ್ಧಿ ಇಜಾಜ್ ಖಾನ್ ಜೊತೆ ಸಂಬಂಧ ಬೆಳೆಸಲು ಸಿದ್ಧರಾಗಿದ್ದಾರೆ. ಇದೀಗ ಪತ್ನಿಯ ವಿರುದ್ಧ ಸಿಟ್ಟಿಗೆದ್ದಿರುವ ಸುಮಿತ್, ಇಲ್ಲಿಯವರೆಗೂ ನಾನು ಆಕೆಯನ್ನು ಕ್ಷಮಿಸಿದ್ದೀನಿ, ಆದರೆ ಇನ್ಮುಂದೆ ಸಾಧ್ಯವಿಲ್ಲ. ಮತ್ತೆ ಸರಿಪಡಿಸಲಾಗದ ಮಟ್ಟಿಗೆ ನಮ್ಮ ಸಂಬಂಧ ಹಾಳಾಗಿದೆ' ಎಂದು ಹೇಳಿದ್ದಾರೆ.


Click it and Unblock the Notifications











