For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್ 14' ಗೆದ್ದು ಬೀಗಿದ ನಟಿ ರುಬೀನಾ ದಿಲೈಕ್

  |

  ಬಿಗ್ ಬಾಸ್ ಹಿಂದಿ 14ಕ್ಕೆ ಗ್ರ್ಯಾಂಡ್ ತೆರೆ ಬಿದ್ದಿದೆ. ನಿನ್ನೆ (ಫೆಬ್ರವರಿ 22) ಬಿಗ್ ಬಾಸ್ 14 ಫಿನಾಲೆ ನಡೆದಿದ್ದು, ಈ ಬಾರಿಯ ವಿನ್ನರ್ ಪಟ್ಟ ಯಾರಿಗೆ ಸಿಗಲಿದೆ ಎನ್ನುವ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಕೊನೆಗೆ ಕಿರುತೆರೆ ನಟಿ ರುಬೀನಾ ದಿಲೈಕ್ ವಿನ್ನರ್ ಆಗಿ ಹೊರಹೊಮ್ಮುವ ಮೂಲಕ ಕುತೂಹಲಕ್ಕೆ ತೆರೆ ಬಿದ್ದಿದೆ.

  ಈ ಮೂಲಕ ಸುಮಾರು 3 ತಿಂಗಳಿಂದ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದ್ದ ಬಿಗ್ ಬಾಸ್ ಮುಕ್ತಾಯವಾಗಿದೆ. ಕೊರೊನಾ ನಡುವೆಯೂ ಬಿಗ್ ಬಾಸ್ ಪ್ರಾರಂಭ ಮಾಡಿದ್ದ ಆಯೋಜಕರಿಗೆ ಈ ಬಾರಿ ಒಂದು ಚಾಲೆಂಜ್ ಆಗಿದ್ದು. ಇದೀಗ ಯಶಸ್ವಿಯಾಗಿ ಮುಗಿಸಿದ್ದಾರೆ. ಎಂದಿನಂತೆ ಸಲ್ಮಾನ್ ಖಾನ್ ಈ ಬಾರಿಯೂ ಅದ್ಭುತವಾಗಿ ಬಿಗ್ ಬಾಸ್ ನಡೆಸಿಕೊಟ್ಟಿದ್ದಾರೆ.

  'ಬಿಗ್ ಬಾಸ್' ಟ್ರೋಫಿ ಅನಾವರಣ: ಯಾರ ಪಾಲಾಗಲಿದೆ ಈ ಆಕರ್ಷಕ ಟ್ರೋಫಿ

  ಕಿರುತೆರೆ ನಟಿ ರಬೀನಾ ವಿನ್ನರ್ ಆಗಿರುವ ಮೂಲಕ ಬಿಗ್ ಬಾಸ್ 14 ಟ್ರೂಫಿಯನ್ನು ಮನೆಗೆ ಕಂಡೊಯ್ದಿದ್ದಾರೆ. ಗೆದ್ದು ಬೀಗಿರುವ ರುಬೀನಾಗೆ ಅಭಿಮಾನಿಗಳು, ಸ್ನೇಹಿತರು ಅಭಿನಂದನೆ ಸಲ್ಲಿಸುತ್ತಿದ್ದಾರೆ. ರುಬೀನಾ ಆಕರ್ಷಕ ಟ್ರೋಫಿ ಜೊತೆಗೆ 36 ಲಕ್ಷ ರೂ. ನಗದನ್ನು ಗೆದ್ದಿದ್ದಾರೆ. ಫಿನಾಲೆಯಲ್ಲಿ ರುಬೀನಾ ಜೊತೆಗೆ ರಾಖಿ ಸಾವಂತ್, ನಿಕ್ಕಿ ತಂಬೋಲಿ, ಅಲಿ ಗೋನಿ, ರಾಹುಲ್ ವೈದ್ಯ ತೀವ್ರ ಪೈಪೂಟಿ ನೀಡಿದರು.

  ನಟಿ ರುಬೀನಾ ಜೊತೆ ಪತಿ ಅಭಿನವ್ ಶುಕ್ಲಾ ಕೂಡ ಈ ಬಾರಿ ಬಾರಿಯ ಬಿಗ್ ಮನೆ ಪ್ರವೇಶ ಮಾಡಿದ್ದರು. ರುಬೀನಾ ಪ್ರಾರಂಭದಲ್ಲೇ ನಿರೂಪಕ ಸಲ್ಮಾನ್ ಖಾನ್ ಅವರನ್ನು ಎದುರು ಹಾಕಿಕೊಂಡಿದ್ದರು. ಪತಿಗೆ ಅವಮಾನ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಸಲ್ಮಾನ್ ವಿರುದ್ಧ ರುಬೀನಾ ಅಸಮಾಧಾನ ಹೊರಹಾಕಿದ್ದರು. ರುಬೀನಾಗೆ ಅಭಿಮಾನಿಗಳಿಂದ ಬೆಂಬಲ ಸಹ ವ್ಯಕ್ತವಾಗಿತ್ತು.

  ಬಿಗ್ ಮನೆಯಲ್ಲಿದ್ದು ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಿರುವ ರುಬೀನಾ ಅನೇಕರ ಮನಗೆದ್ದಿದ್ದಾರೆ. ಇದೀಗ ವಿನ್ನರ್ ಆಗಿ ಹೊರಹೊಮ್ಮಿರುವ ರುಬೀನಾ ತನ್ನನ್ನು ಬೆಂಬಲಿಸಿದ, ಶುಭಕೋರಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ. 'ನಿಮ್ಮೆಲ್ಲರ ಪ್ರೀತಿಯ ಕಾರಣದಿಂದ ನಾನು ಇಂದು ಬಿಗ್‌ ಬಾಸ್‌ 14 ವಿನ್ನರ್ ಆಗಿದ್ದೇನೆ. ನನಗೆ ಎಷ್ಟು ಸಂತಸವಾಗಿದೆ ಎಂಬುದನ್ನು ಹೇಳಲು ನನ್ನ ಬಳಿ ಪದಗಳಿಲ್ಲ. ಶೀಘ್ರದಲ್ಲೇ ಲೈವ್‌ ಬಂದು ನಿಮ್ಮೆಲ್ಲರ ಜೊತೆ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತೇನೆ' ಎಂದಿದ್ದಾರೆ.

  English summary
  Bigg Boss 14; Rubina Dilaik wins Bigg Boss 14 trophy and takes home prize money of Rs 36 Lakh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X