For Quick Alerts
  ALLOW NOTIFICATIONS  
  For Daily Alerts

  ಕೊರೊನಾ ವೈರಸ್ ವಿರುದ್ಧದ ಹೋರಾಟ ನೆನೆದು ವಿಡಿಯೋ ಮೂಲಕ ಕಣ್ಣೀರು ಹಾಕಿದ ನಟಿ

  |

  ಕೊರೊನಾ ವೈರಸ್ ಹಾವಳಿಯಿಂದ ಇಡೀ ದೇಶ ತತ್ತರಿಸಿ ಹೋಗಿದೆ. ಸಾವಿರಾರು ಮಂದಿ ಕೊರೊನಾಗೆ ಬಲಿಯಾಗುತ್ತಿದ್ದಾರೆ. ಅನೇಕ ಸಿನಿ ಸಲೆಬ್ರಿಟಿಗಳು ಸಹ ಕೊರೊನಾಗೆ ಬಲಿಯಾಗಿದ್ದಾರೆ. ಕೊರೊನಾ ವೈರಸ್ ಎಂಥವರನ್ನಾದರು ಭಯ ಬೀಳಿಸುತ್ತೆ.

  ಹಿಂದಿ ಬಿಗ್ ಬಾಸ್ 14 ವಿನ್ನರ್, ನಟಿ ರುಬೀನಾ ದಿಲೈಕ್ ಕೊರೊನಾಗೆ ವೈರಸ್ ಗೆ ತುತ್ತಾಗಿದ್ದರು. ಸದ್ಯ ಚೇತರಸಿಕೊಳ್ಳುತ್ತಿದ್ದು, ಕ್ವಾರಂಟೈನ್‌ನಲ್ಲಿದ್ದಾರೆ. ಕೊರೊನಾ ವೈರಸ್‌ನಿಂದ ಅನುಭವಿಸಿದ ಯಾತನೆ ಬಗ್ಗೆ ರುಬಿನಾ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.

  ಹಿಂದಿ ಕಿರುತೆರೆ ಲೋಕದ ಜನಪ್ರಿಯ ನಟಿ ರುಬೀನಾ, ಬಿಗ್ ಬಾಸ್ 14ರ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು. ಅದ್ಭುತ ಪ್ರದರ್ಶನ ತೋರಿದ ರುಬೀನಾ ಕೊನೆಗೆ ಬಿಗ್ ಬಾಸ್ ಟ್ರೋಫಿ ಗೆದ್ದು ಬೀಗಿದ್ದರು. ಇತ್ತೀಚಿಗೆ ರುಬೀನಾಗೆ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿತ್ತು. ತಕ್ಷಣ ಕ್ವಾರಂಟೈನ್ ಆದ ನಟಿ ಸದ್ಯ ಗುಣಮುಖರಾಗುತ್ತಿದ್ದಾರೆ. 17 ದಿನಗಳ ಕ್ವಾರಂಟೈನ್ ನಲ್ಲಿರುವ ರುಬೀನಾ ವಿಡಿಯೋ ಮೂಲಕ ಕೊರೊನಾ ಜರ್ನಿ ಬಿಚ್ಚಿಟ್ಟಿದ್ದಾರೆ.

  'ತುಂಬಾ ದಿನಗಳಿಂದ ಹೇಳಬೇಕು ಎಂದುಕೊಂಡಿದ್ದೆ. ಇಂಥ ಕುಟುಂಬದ ಸದಸ್ಯರನ್ನು ಪಡೆದಿರುವುದಕ್ಕೆ ನಾನು ನಾನು ಅದೃಷ್ಟ ಮಾಡಿದ್ದೀನಿ. ಪ್ರೀತಿ, ಕಾಳಜಿ ತೋರಿಸುವ ಪತಿ, ಸದಾ ಬೆಂಬಲಕ್ಕೆ ನಿಲ್ಲುವ ತಂದೆ-ತಾಯಿ ಮತ್ತು ಸಹೋದರಿಯರಿಗೆ ನಾನು ಖುಣಿಯಾಗಿದ್ದೇನೆ. ಅಭಿಮಾನಿಗಳ ಪ್ರೀತಿಯ ಹಾರೈಕೆಗಳನ್ನು ನೋಡಿದ್ದೇನೆ' ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ.

  'ಕೊರೊನಾದಿಂದ ಕಷ್ಟ ಅನುಭವಿಸುತ್ತಿರುವ ಎಲ್ಲರಿಗೂ ನಿಮ್ಮ ಪ್ರಾರ್ಥನೆ ಇರಲಿ. ಸಾಧ್ಯವಾದಷ್ಟು ಸಹಾಯ ಮಾಡಿ. ನಾನು ಸಹಾಯ ಮಾಡುತ್ತೇನೆ' ಎಂದಿದ್ದಾರೆ. ಸದ್ಯ ಚೇತರಿಸಿಕೊಳ್ಳುತ್ತಿರುವ ರುಬೀನಾ ಕೆಲವು ದಿನಗಳ ಬಳಿಕ ಪ್ಲಾಸ್ಮ ದಾನ ಮಾಡುವುದಾಗಿ ಹೇಳಿದ್ದಾರೆ.

  English summary
  Bigg Boss 14 winner Rubina Dilaik gets teary eyed sharing her battle with Coronavirus.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X